ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವಿದೇಶ
ನೇಪಾಳ: ಮಾವೋವಾದಿ ಸಚಿವರ ಪ್ರಮಾಣವಚನ
ಕಠ್ಮಂಡು (ಏಜೆನ್ಸಿ), ಸೋಮವಾರ, 31 ಡಿಸೆಂಬರ್ 2007   ( 17:27 IST )
ನೇಪಾಳದಲ್ಲಿ ಇಂದು ನಾಲ್ಕು ಮಂದಿ ಮಾವೋವಾದಿ ಸಚಿವರು ಪ್ರಮಾಣವಚನ ಸ್ವೀಕರಿಸುವುದರ ಮೂಲಕ, ಸೆಪ್ಟೆಂಬರ್ 18 ರಂದು ಪ್ರಾರಂಭವಾದ ರಾಜಕೀಯ ಬಿಕ್ಕಟ್ಟಿಗೆ ತೆರೆ ಬಿದ್ದಂತಾಗಿದೆ.

ಮಾವೋವಾದಿ ಸಚಿವರಿಗಾಗಿನ ಅಧಿಕಾರ ಪ್ರಮಾಣವಚನ ಮತ್ತು ಗೋಪ್ಯತೆ ಪ್ರಮಾಣವನ್ನು ಪ್ರಧಾನ ಮಂತ್ರಿ ಗಿರಿಜ ಪ್ರಸಾದ್ ಕೊಯಿರಾಲಾ ರಾಜಧಾನಿಯಲ್ಲಿನ ಸಿಂಗ್ಹ ದುರ್ಬಾರ್‌ನಲ್ಲಿ ನಿರ್ವಹಿಸಿದರು.

ಸುಂಪುಟಕ್ಕೆ ಮರುಸೇರ್ಪಡೆಗೊಂಡ ನಾಲ್ಕು ಮಂದಿ ಮಾವೋವಾದಿ ಸಚಿವರು ಪ್ರಮಾಣವಚನ ಸ್ವೀಕರಿಸಿದ್ದರೆ, ಅರಣ್ಯ ಮತ್ತು ಭೂಸಾರ ಸಂರಕ್ಷಣಾ ಸಚಿವರಾದ ಮತ್ರಿಕ ಯಾದವ್ ದೇಶದಿಂದ ಹೊರಗಿರುವ ಕಾರಣ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಾಗಿಲ್ಲ.

ಮಾಹಿತಿ ಮತ್ತು ಸಂವಹನ ಸಚಿವರಾಗಿ ಕೃಷ್ಣ ಬಹದ್ದೂರ್ ಮಹರ, ಸ್ಥಳೀಯ ಅಭಿವೃದ್ಧಿ ಸಚಿವರಾಗಿ ದೇವ್ ಗುರುಂಗ್, ಭೌತಿಕ ಯೋಜನೆ ಮತ್ತು ಕಾಮಗಾರಿ ಹಾಗೂ ಭೂಸಾರ ಸಂರಕ್ಷಣೆ ಸಚಿವರಾಗಿ ಹಿಸಿಲ ಯಾಮಿ, ಮಹಿಳೆ ಮತ್ತು ಮಕ್ಕಳ ಹಾಗೂ ಸಾಮಾಜಿಕ ಕಲ್ಯಾಣ ಸಚಿವರಾಗಿ ಪಂಪ ಬುಸಲ್ ಪ್ರಮಾಣವಚನ ಸ್ವೀಕರಿಸಿದರು. ಇದರ ಜತೆಗೆ ಸಂಪುಟ ಸಚಿವರಾಗಿ ಗ್ಯಾನೇಂದ್ರ ಬಹದೂರ್ ಕರ್ಕಿ ಕೂಡ ಪ್ರಮಾಣವಚನ ಸ್ವೀಕರಿಸಿದರು.

ಎಫ್ರಿಲ್ 2008ರ ಸಂಸತ್ ವಿಧಾನಸಭೆ ಚುನಾವಣೆ ಬಳಿಕ ರಾಜಾಡಳಿತವನ್ನು ರದ್ಧು ಪಡಿಸುವಾಗಿನ ಸಂಸದೀಯ ನಿರ್ಣಯಕ್ಕೆ ಕಳೆದ ವಾರ ನೇಪಾಳ ಕಮ್ಯುನಿಸ್ಟ್ ಪಕ್ಷ-ಮಾವೋವಾದಿ ಮತ್ತು ಪ್ರಮುಖ ಪಕ್ಷಗಳು ಒಪ್ಪಿಕೊಂಡಿದ್ದರು.

ಸಮಾರಂಭದ ಬಳಿಕ ಮಾತನಾಡಿದ ಪ್ರಧಾನ ಮಂತ್ರಿ, ಇನ್ನು ತಾವು ಚುನಾವಣೆ ಮೇಲೆ ಗಮನ ಹರಿಸಬಹುದು ಎಂದು ತಿಳಿಸಿದ್ದಾರೆ.

ಇದೇ ವೇಳೆ ಮಾತನಾಡಿದ ಮಾವೋವಾದಿಗಳ ಉಪನಾಯಕ ಬಾಬುರಾಂ ಬಟ್ಟರೈ, ಸರಿಯಾದ ಸಮಯದಲ್ಲೇ ಚುನಾವಣೆ ನಡೆಸುಯುವಂತೆ ಮಾಡುವುದು ತಮ್ಮ ಪ್ರಮುಖ ಕಾರ್ಯಸೂಚಿಯಾಗಿದೆ ಎಂದು ಹೇಳಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಪಾಕ್ ಚುನಾವಣೆ: ನಾಳೆ ನಿರ್ಧಾರ
ಎಲ್‌ಟಿಟಿಇ ಮುಖ್ಯಸ್ಥ ಪ್ರಭಾಕರನ್ ಸಾವು?
ಪಾಕಿಸ್ತಾನ: ಸ್ಫರ್ಧೆಗೆ ಪಿಎಂಎಲ್-ಎನ್ ಸಿದ್ಧ
ಇನ್ನಾರು ತಿಂಗಳಲ್ಲಿ ಎಲ್‌ಟಿಟಿಇ ನಿರ್ಣಾಮ
ಭುಟ್ಟೊ ಉತ್ತರಾಧಿಕಾರಿಯಾಗಿ ಬಿಲಾವಲ್ ಆಯ್ಕೆ
ಪಾಕ್ ಚುನಾವಣೆ: ಮುಂದೂಡಲು ಚುನಾವಣಾ ಆಯೋಗ ಚಿಂತನೆ
ಮನರಂಜನೆ
ಚಿತ್ರ ಸಮೀಕ್ಷೆ - ನಾಟಕವನ್ನು ಷೂಟ್ ಮಾಡಬೇಕೆಂದರೆ ಏನು ಮಾಡಬೇಕು? ಸ್ಟೇಜ್ ಎದುರಿಗೆ ಒಂದು ಕೆಮೆರಾ ಫಿಕ್ಸ್ ಮಾಡಿ ಆನ್‌ ಮಾಡಿದರೆ ಆಯಿತು ಎನ್ನುವುದು ಉತ್ತರ. ಅದೇ ಟೆಕ್ನಿಕ್ ಬಳಸಿರುವುದು "ಆಪರೇಷನ್ ಅಂಕುಶ" ಚಿತ್ರದ ವಿಶೇಷ.
ಮುಂದೆ ಓದಿ|ಮತ್ತಷ್ಟು...
ಗ್ರಹ ಗತಿ
PTI
 
ಅನಿಲ್ ಕುಂಬ್ಳೆ
ಇತ್ತೀಚೆಗೆ ನಡೆದ ಕ್ರಿಕೆಟ್ ಟೆಸ್ಟ್ ಸರಣಿಯಲ್ಲಿ, ಇಪ್ಪತ್ತೇಳು ವರ್ಷಗಳ ಬಳಿಕ ಸಾಂಪ್ರದಾಯಿಕ ವೈರಿ ಪಾಕಿಸ್ತಾನದ...
ರಾಬಿನ್ ಉತ್ತಪ್ಪ
ಲಗ್ನೇಶ ಬುಧ ಇದ್ದರೂ ವಿಶ್ವಕಪ್ ತಂದ ಧೋನಿ
ಸಾಹಿತ್ಯ
ಆತ್ಮಚರಿತ್ರೆ - ಈ ಮಣ್ಣಿನ ಸೊಗಡಿನ ಸಾಹಿತ್ಯ ರಚಿಸಿದ ನಮ್ಮೆಲ್ಲರ ಅಚ್ಚುಮೆಚ್ಚಿನ ಕು.ವೀರಭದ್ರಪ್ಪನರ 'ಅರಮನೆ' ಕಾದಂಬರಿಗೆ ಈಗ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗರಿ.
ಮುಂದೆ ಓದಿ|ಮತ್ತಷ್ಟು...
Marketplace