ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವಿದೇಶ
ಪಾಕ್ ಚುನಾವಣೆ: ನಾಳೆ ನಿರ್ಧಾರ
ಇಸ್ಲಾಮಾಬಾದ್ (ಏಜೆನ್ಸಿ), ಸೋಮವಾರ, 31 ಡಿಸೆಂಬರ್ 2007   ( 17:00 IST )
ಬೆನಜೀರ್ ಭುಟ್ಟೋ ಹತ್ಯೆ ಬಳಿಕ ಉದ್ಭವಿಸಿದ ಹಿಂಸಾಚಾರದ ಪರಿಣಾಮದ ಪರಾಮರ್ಶೆಯ ನಂತರ ಸಾವ್ರತ್ರಿಕ ಚುನಾವಣೆಯನ್ನು ನಿಗದಿಯಂತೆ ಜನವರಿ 8ರಂದೇ ನಡೆಸುವುದೋ ಅಥವಾ ಮುಂದೂಡುವುದೋ ಎಂಬುದನ್ನು ಪಾಕ್ ಚುನಾವಣಾ ಆಯೋಗ ನಾಳೆ ನಿರ್ಧರಿಸಲಿದೆ.

ಚುನಾವಣಾ ಸಮಿತಿಯ ತುರ್ತು ಸಭೆಯನ್ನು ಇಂದು ನಡೆಸಲಾಗಿದ್ದು, ಇದರ ಅಧ್ಯಕ್ಷತೆವಹಿಸಿದ್ದ ಮುಖ್ಯ ಚುನಾವಣಾ ಆಯುಕ್ತ ಕ್ವಾಜಿ ಮುಹಮ್ಮದ್ ಪಾರುಕ್, ಚುನಾವಣಾ ಸಿದ್ಧತೆಗಳ ಮೇಲೆ ಹಿಂಸಾಚಾರ ಪ್ರತಿಭಟನೆಯ ಪರಿಣಾಮಾದ ಕುರಿತು ವರದಿ ಸಲ್ಲಿಸುವಂತೆ ನಾಲ್ಕು ಪ್ರಾಂತ್ಯಗಳಲ್ಲಿನ ಚುನಾವಣಾ ಅಧಿಕಾರಿಗಳನ್ನು ಕೋರಿದ್ದಾರೆ.

ಪ್ರಾಂತ್ಯದ ಅಧಿಕಾರಿಗಳಲ್ಲಿ ತಮ್ಮ ವರದಿಗಳನ್ನು ಇಂದು ಸಂಜೆ ಸಲ್ಲಿಸುವಂತೆ ನಿರ್ದೇಶಿಸಲಾಗಿದೆ ಮತ್ತು ನಾಳೆ ಮತ್ತೊಂದು ಚುನಾವಣಾ ಆಯೋಗದ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಸಂಸತ್ ಚುನಾವಣೆ ನಿಗದಿಯಂತೆ ನಡೆಯುವುದೋ ಎಂಬುದರ ಬಗ್ಗೆ ನಿರ್ಧರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಂದು ಬಾರಿ ಚುನಾವಣಾ ಆಯೋಗ ತನ್ನ ನಿರ್ಧಾರವನ್ನು ಘೋಷಿಸಿದ ಬಳಿಕ, ರಾಜಕೀಯ ಪಕ್ಷಗಳು ತಮ್ಮ ಭವಿಷ್ಯದ ಕಾರ್ಯತಂತ್ರವನ್ನು ನಿರ್ಧರಿಸುವ ನಿರೀಕ್ಷೆ ಇದೆ.

ಭುಟ್ಟೋರ ಪಿಪಿಪಿ ಜನವರಿ 8ರಂದು ಚುನಾವಣೆ ನಡೆಸುವ ಬಗ್ಗೆ ಒಲವು ತೋರಿದ್ದರೆ, ಅಧ್ಯಕ್ಷ ಮುಷರಫ್‌ರನ್ನು ಬೆಂಬಲಿಸುವ ಪಿಎಂಎಲ್-ಕ್ಯು ಇದನ್ನು ಮುಂದೂಡುವ ಇಚ್ಚೆಯನ್ನು ಹೊಂದಿದೆ.

ವರದಿಗಳ ಪ್ರಕಾರ, ಪಿಪಿಪಿಯಿಂದ ಘೋಷಿಸಲ್ಪಟ್ಟ ಭುಟ್ಟೋಗಾಗಿನ 40 ದಿನಗಳ ಶೋಕಾಚರಣೆ ಮತ್ತು ಮೊಹರ್ರಂ ತಿಂಗಳನ್ನು ಗಮನದಲ್ಲಿಟ್ಟುಕೊಂಡು ಚುನಾವಣಾ ಸಮಿತಿ ಚುನಾವಣೆಯನ್ನು ಫೆಬ್ರವರಿ ಅಂತ್ಯಕ್ಕೆ ಅಥವಾ ಮಾರ್ಚ್ ಮೊದಲ ವಾರದವರೆಗೆ ಮುಂದೂಡುವ ಸಾಧ್ಯತೆ ಇದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಎಲ್‌ಟಿಟಿಇ ಮುಖ್ಯಸ್ಥ ಪ್ರಭಾಕರನ್ ಸಾವು?
ಪಾಕಿಸ್ತಾನ: ಸ್ಫರ್ಧೆಗೆ ಪಿಎಂಎಲ್-ಎನ್ ಸಿದ್ಧ
ಇನ್ನಾರು ತಿಂಗಳಲ್ಲಿ ಎಲ್‌ಟಿಟಿಇ ನಿರ್ಣಾಮ
ಭುಟ್ಟೊ ಉತ್ತರಾಧಿಕಾರಿಯಾಗಿ ಬಿಲಾವಲ್ ಆಯ್ಕೆ
ಪಾಕ್ ಚುನಾವಣೆ: ಮುಂದೂಡಲು ಚುನಾವಣಾ ಆಯೋಗ ಚಿಂತನೆ
ಪಾಕ್: ಸಿಂಧ್‌ನಲ್ಲಿ ಭುಗಿಲೆದ್ದ ಹಿಂಸಾಚಾರಕ್ಕೆ 44 ಬಲಿ
ಮನರಂಜನೆ
ಚಿತ್ರ ಸಮೀಕ್ಷೆ - ನಾಟಕವನ್ನು ಷೂಟ್ ಮಾಡಬೇಕೆಂದರೆ ಏನು ಮಾಡಬೇಕು? ಸ್ಟೇಜ್ ಎದುರಿಗೆ ಒಂದು ಕೆಮೆರಾ ಫಿಕ್ಸ್ ಮಾಡಿ ಆನ್‌ ಮಾಡಿದರೆ ಆಯಿತು ಎನ್ನುವುದು ಉತ್ತರ. ಅದೇ ಟೆಕ್ನಿಕ್ ಬಳಸಿರುವುದು "ಆಪರೇಷನ್ ಅಂಕುಶ" ಚಿತ್ರದ ವಿಶೇಷ.
ಮುಂದೆ ಓದಿ|ಮತ್ತಷ್ಟು...
ಗ್ರಹ ಗತಿ
PTI
 
ಅನಿಲ್ ಕುಂಬ್ಳೆ
ಇತ್ತೀಚೆಗೆ ನಡೆದ ಕ್ರಿಕೆಟ್ ಟೆಸ್ಟ್ ಸರಣಿಯಲ್ಲಿ, ಇಪ್ಪತ್ತೇಳು ವರ್ಷಗಳ ಬಳಿಕ ಸಾಂಪ್ರದಾಯಿಕ ವೈರಿ ಪಾಕಿಸ್ತಾನದ...
ರಾಬಿನ್ ಉತ್ತಪ್ಪ
ಲಗ್ನೇಶ ಬುಧ ಇದ್ದರೂ ವಿಶ್ವಕಪ್ ತಂದ ಧೋನಿ
ಸಾಹಿತ್ಯ
ಆತ್ಮಚರಿತ್ರೆ - ಈ ಮಣ್ಣಿನ ಸೊಗಡಿನ ಸಾಹಿತ್ಯ ರಚಿಸಿದ ನಮ್ಮೆಲ್ಲರ ಅಚ್ಚುಮೆಚ್ಚಿನ ಕು.ವೀರಭದ್ರಪ್ಪನರ 'ಅರಮನೆ' ಕಾದಂಬರಿಗೆ ಈಗ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗರಿ.
ಮುಂದೆ ಓದಿ|ಮತ್ತಷ್ಟು...
Marketplace