|
| ಎಲ್ಟಿಟಿಇ ಮುಖ್ಯಸ್ಥ ಪ್ರಭಾಕರನ್ ಸಾವು? |
| ಕೊಲಂಬೊ (ಏಜೆನ್ಸಿ), ಸೋಮವಾರ, 31 ಡಿಸೆಂಬರ್ 2007 ( 15:04 IST ) | |
ನವೆಂಬರ್ 26ರಂದು ಲಂಕಾ ಸೇನೆಯು ನಡೆಸಿರುವ ವಾಯುದಾಳಿಯಲ್ಲಿ ಎಲ್‌ಟಿಟಿಇ ಮುಖ್ಯಸ್ಥ ವೇಲುಪಿಳ್ಳೈ ಪ್ರಭಾಕರನ್ ಸಾವನ್ನಪ್ಪಿರಬಹುದು ಎಂಬ ಸುಳಿವವನ್ನು ಶ್ರೀಲಂಕಾದ ರಕ್ಷಣಾ ಕಾರ್ಯದರ್ಶಿ ಗೋಟಭಯ ರಾಜಪಕ್ಷೆ ನೀಡಿದ್ದಾರೆ.
"ಪ್ರಭಾಕರನ್ ಗಂಭೀರವಾಗಿ ಗಾಯಗೊಂಡಿರಬಹುದು ಇಲ್ಲಾ ಸತ್ತಿರಬಹುದು ಎಂಬುದಾಗಿ ನಮ್ಮ ಗುಪ್ತಚರ ಮೂಲಗಳು ನಂಬಿವೆ. ಎಲ್‌ಟಿಟಿಇ ಈ ಗುಟ್ಟನ್ನು ತುಂಬ ದಿನ ಮುಚ್ಚಿಡಲಾರದು" ಎಂದು ಸರಕಾರಿ ಪತ್ರಿಕೆ 'ಸಂಡೆ ಅಬ್ಸರ್‌ವರ್'ಗೆ ರಾಜಪಕ್ಷೆ ತಿಳಿಸಿದ್ದಾರೆ.
ಪರಾಕ್ರಮಿಗಳ ದಿನಾಚರಣೆಯಂದು ಪ್ರಭಾರಕರನ್ ಟಿವಿ ಮತ್ತು ರೇಡಿಯೋಗಳಲ್ಲಿ ಭಾಷಣಮಾಡಿರುವ ಚಿತ್ರಗಳ ಸಿಂಧುತ್ವವನ್ನು ಅವರು ಅಲ್ಲಗಳೆದಿದ್ದಾರೆ. ಪ್ರಭಾಕರನ್ ಭಾಷಣ ನ.27ರಂದು ಬಿತ್ತರವಾಗಿತ್ತು. ರಾಜಪಕ್ಷೆ ಪ್ರಕಾರ ಪ್ರಭಾಕರನ್ ನ.26ರ ದಾಳಿಯಲ್ಲಿ ಹತರಾಗಿದ್ದಾರೆ, ಇಲ್ಲವೇ ಗಂಭೀರ ತೀವ್ರ ಗಾಯಗೊಂಡಿದ್ದಾರೆ.
ಎಲ್‌ಟಿಟಿಇ ಚಿತ್ರಗಳನ್ನು ಪ್ರಕಟಿಸಬಹುದು. ಆದರೆ ಪ್ರಭಾಕರನ್ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ತನಕ ಅವರು ಜೀವಂತವಾಗಿದ್ದಾರೆ ಎಂದು ನಂಬಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಎಲ್‍ಟಿಟಿಇ ಕೇಂದ್ರಗಳ ಮೇಲೆ ಲಂಕಾದ ವಾಯುಸೇನೆ ದಾಳಿ ಮಾಡುತ್ತಿದೆ. ಪ್ರಸ್ತುತ ಎಲ್‌ಟಿಟಿಇ ಬರಿಯ 3 ಸಾವಿರದಷ್ಟು ಸೈನಿಕ ಪಡೆಯನ್ನು ಮಾತ್ರ ಹೊಂದಿದೆ. 500ಕ್ಕೂ ಅಧಿಕ ಎಲ್‌ಟಿಟಿಇ ಪಡೆಯನ್ನು ಭೂಸೈನ್ಯ ನಿರ್ನಾಮ ಮಾಡಿದೆ ಎಂದು ಶ್ರೀಲಂಕಾದ ಭೂಸೇನೆಯ ಮುಖ್ಯಸ್ಥ ಸರತ್ ಫೊನ್‌ಸೇಕ ತಿಳಿಸಿದ್ದಾರೆ.
ಫೊನ್‌ಸೇಕ ವಿರುದ್ಧ 2006ರಲ್ಲಿ ಎಲ್‌ಟಿಟಿಇ ಮಾನವ ಬಾಂಬ್ ಆತ್ಮಾಹುತಿ ದಳ ಇವರ ಮೇಲೆ ದಾಳಿ ಮಾಡಿದ್ದು, ಅದೃಷ್ವವಶಾತ್ ಅವರು ದಾಳಿಯಿಂದ ಪಾರಾಗಿದ್ದದರು. ಪ್ರತೀ ದಿನ 10 ಎಲ್‌ಟಿಟಿಇ ಉಗ್ರರನ್ನು ಕೊಲ್ಲುವುದು ಸರ್ಕಾರದ ಉದ್ದೇಶ ಎಂಬ ಫೊನ್‌ಸೇಕ ಅವರ ಹೇಳಿಕೆಯೂ ಸಂಡೆ ಅಬ್ಸರ್‌ವರ್‌ನ ಇನ್ನೊಂದು ಪುಟದಲ್ಲಿ ಪ್ರಕಟವಾಗಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ಚಿತ್ರ ಸಮೀಕ್ಷೆ - ನಾಟಕವನ್ನು ಷೂಟ್ ಮಾಡಬೇಕೆಂದರೆ ಏನು ಮಾಡಬೇಕು? ಸ್ಟೇಜ್ ಎದುರಿಗೆ ಒಂದು ಕೆಮೆರಾ ಫಿಕ್ಸ್ ಮಾಡಿ ಆನ್ ಮಾಡಿದರೆ ಆಯಿತು ಎನ್ನುವುದು ಉತ್ತರ. ಅದೇ ಟೆಕ್ನಿಕ್ ಬಳಸಿರುವುದು "ಆಪರೇಷನ್ ಅಂಕುಶ" ಚಿತ್ರದ ವಿಶೇಷ. |
| |
|
|
|
|
 | | PTI |
| | | ಅನಿಲ್ ಕುಂಬ್ಳೆ | | ಇತ್ತೀಚೆಗೆ ನಡೆದ ಕ್ರಿಕೆಟ್ ಟೆಸ್ಟ್ ಸರಣಿಯಲ್ಲಿ, ಇಪ್ಪತ್ತೇಳು ವರ್ಷಗಳ ಬಳಿಕ ಸಾಂಪ್ರದಾಯಿಕ ವೈರಿ ಪಾಕಿಸ್ತಾನದ... |
|
| |
|
|
|
|
|
| ಆತ್ಮಚರಿತ್ರೆ - ಈ ಮಣ್ಣಿನ ಸೊಗಡಿನ ಸಾಹಿತ್ಯ ರಚಿಸಿದ ನಮ್ಮೆಲ್ಲರ ಅಚ್ಚುಮೆಚ್ಚಿನ ಕು.ವೀರಭದ್ರಪ್ಪನರ 'ಅರಮನೆ' ಕಾದಂಬರಿಗೆ ಈಗ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗರಿ. |
| |
|
|
|
|
|
|
|