ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವಿದೇಶ
ಪಾಕ್ ಚುನಾವಣೆ: ಮುಂದೂಡಲು ಚುನಾವಣಾ ಆಯೋಗ ಚಿಂತನೆ
ಇಸ್ಲಾಮಾಬಾದ್ (ಏಜೆನ್ಸಿ), ಭಾನುವಾರ, 30 ಡಿಸೆಂಬರ್ 2007   ( 14:54 IST )
ಪಾಕ್ ಮಾಜಿ ಪ್ರಧಾನಮಂತ್ರಿ ಬೆನಜೀರ್ ಭುಟ್ಟೋ ಅವರ ಹತ್ಯೆಯಿಂದಾಗಿ ದೇಶದಲ್ಲಿ ಉಲ್ಭಣಿಸಿರುವ ಹಿಂಸೆಯಿಂದಾಗಿ, ಮುಂದಿನ ವರ್ಷ ಜನವರಿ 8 ರಂದು ದೇಶದಲ್ಲಿ ನಡೆಯಲಿರುವ ಚುನಾವಣೆಯನ್ನು ಅನಿರ್ಧಿಷ್ಟಾವಧಿಯ ಕಾಲದವರೆಗೆ ಮುಂದೂಡಲು ಅಲ್ಲಿನ ಚುನಾವಣಾ ಆಯೋಗವು ಚಿಂತನೆ ನಡೆಸಿದೆ.

ಪೂರ್ವ ನಿಗದಿಯಂತೆ ಜನವರಿ 8 ರಂದು ಚುನಾವಣೆಯನ್ನು ನಡೆಸಬೇಕೆ ಅಥವಾ ಮುಂದೂಡಬೇಕೆ ಎಂಬುವುದರ ಕುರಿತು ನಿರ್ಧಾರ ಕೈಗೊಳ್ಳಲು ಸೋಮವಾರ ಪಾಕಿಸ್ತಾನ ಚುನಾವಣಾ ಆಯೋಗವು ಸಭೆ ಸೇರಲಿದೆ.

ಡಿಸೆಂಬರ್ 27 ರಂದು ಬೆನಜೀರ್ ಭುಟ್ಟೋ ಹತ್ಯೆಯ ನಂತರದಲ್ಲಿ ಉಂಟಾಗಿರುವ ವಾಸ್ತವ ಪರಿಸ್ಥಿತಿಯನ್ನು ತಿಳಿದುಕೊಳ್ಳಬೇಕಿದ್ದು, ದೇಶದಲ್ಲಿ ಕಾನೂನು ಹಾಗೂ ಸುವ್ಯವಸ್ಥೆಯ ಆಧಾರದ ಮೇಲಿಂದ ಇದರ ಅಂತಿಮ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಚುನಾವಣಾ ಆಯೋಗವು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಸಿಂಧ್ ಪ್ರಾಂತ್ಯದ ಸುಮಾರು ಒಂಬತ್ತು ಜಿಲ್ಲೆಗಳಲ್ಲಿ ಪರಿಸ್ಥಿತಿಯು ತೀವ್ರ ಹದಗೆಟ್ಟಿದ್ದು ತಮ್ಮ ಗಮನಕ್ಕೆ ಬಂದಿದೆ ಎಂದು ಆಯೋಗವು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಪಾಕ್: ಸಿಂಧ್‌ನಲ್ಲಿ ಭುಗಿಲೆದ್ದ ಹಿಂಸಾಚಾರಕ್ಕೆ 44 ಬಲಿ
ಪಿಪಿಪಿ ಭವಿಷ್ಯದ ಕುರಿತು ಭುಟ್ಟೋ ಉಯಿಲು: ಜರ್ದಾರಿ
ಪಾಕ್ ಚುನಾವಣೆ ಮುಂದೂಡಿಕೆ
ಹಾಂಗ್‌ಕಾಂಗ್: 2017ರಲ್ಲಿ ನಾಯಕನ ಚುನಾವಣೆ
ಮಾಯನ್ಮಾರ್: ಹಕ್ಕಿ ಜ್ವರ ಸೋಂಕು ಪತ್ತೆ
ಭುಟ್ಟೋ ಹತ್ಯೆ: ಅಂತಾರಾಷ್ಟ್ರೀಯ ತನಿಖೆಗೆ ಹಿಲರಿ ಕರೆ
ಮನರಂಜನೆ
ಚಿತ್ರ ಸಮೀಕ್ಷೆ - ನಾಟಕವನ್ನು ಷೂಟ್ ಮಾಡಬೇಕೆಂದರೆ ಏನು ಮಾಡಬೇಕು? ಸ್ಟೇಜ್ ಎದುರಿಗೆ ಒಂದು ಕೆಮೆರಾ ಫಿಕ್ಸ್ ಮಾಡಿ ಆನ್‌ ಮಾಡಿದರೆ ಆಯಿತು ಎನ್ನುವುದು ಉತ್ತರ. ಅದೇ ಟೆಕ್ನಿಕ್ ಬಳಸಿರುವುದು "ಆಪರೇಷನ್ ಅಂಕುಶ" ಚಿತ್ರದ ವಿಶೇಷ.
ಮುಂದೆ ಓದಿ|ಮತ್ತಷ್ಟು...
ಗ್ರಹ ಗತಿ
PTI
 
ಅನಿಲ್ ಕುಂಬ್ಳೆ
ಇತ್ತೀಚೆಗೆ ನಡೆದ ಕ್ರಿಕೆಟ್ ಟೆಸ್ಟ್ ಸರಣಿಯಲ್ಲಿ, ಇಪ್ಪತ್ತೇಳು ವರ್ಷಗಳ ಬಳಿಕ ಸಾಂಪ್ರದಾಯಿಕ ವೈರಿ ಪಾಕಿಸ್ತಾನದ...
ರಾಬಿನ್ ಉತ್ತಪ್ಪ
ಲಗ್ನೇಶ ಬುಧ ಇದ್ದರೂ ವಿಶ್ವಕಪ್ ತಂದ ಧೋನಿ
ಸಾಹಿತ್ಯ
ಆತ್ಮಚರಿತ್ರೆ - ಈ ಮಣ್ಣಿನ ಸೊಗಡಿನ ಸಾಹಿತ್ಯ ರಚಿಸಿದ ನಮ್ಮೆಲ್ಲರ ಅಚ್ಚುಮೆಚ್ಚಿನ ಕು.ವೀರಭದ್ರಪ್ಪನರ 'ಅರಮನೆ' ಕಾದಂಬರಿಗೆ ಈಗ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗರಿ.
ಮುಂದೆ ಓದಿ|ಮತ್ತಷ್ಟು...
Marketplace