ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವಿದೇಶ
ಪಾಕ್: ಸಿಂಧ್‌ನಲ್ಲಿ ಭುಗಿಲೆದ್ದ ಹಿಂಸಾಚಾರಕ್ಕೆ 44 ಬಲಿ
ಕರಾಚಿ (ಏಜೆನ್ಸಿ), ಭಾನುವಾರ, 30 ಡಿಸೆಂಬರ್ 2007   ( 11:22 IST )
ಕಳೆದ ನಾಲ್ಕು ದಿನಗಳ ಹಿಂದೆ ಪಾಕ್ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಉಗ್ರರ ಗುಂಡೇಟಿಗೆ ರಾವಲ್ಪಿಂಡಿಯಲ್ಲಿ ಬಲಿಯಾದ ನಂತರ, ಅವರ ಬೆಂಬಲಿಗರು ಸಿಂಧ್ ಪ್ರಾಂತ್ಯದಲ್ಲಿ ನಡೆಸುತ್ತಿರುವ ಪ್ರತಿಭಟನೆಯು ಹಿಂಸಾರೂಪಕ್ಕೆ ತಿರುಗಿದ್ದು, ಶನಿವಾರ ಭುಗಿಲೆದ್ದ ಹಿಂಸಾಚಾರಕ್ಕೆ ಸುಮಾರು 44 ಮಂದಿ ಬಲಿಯಾಗಿದ್ದಾರೆ.

ಕರಾಚಿ ಹಾಗೂ ಖೈರ್‌ಪುರದಲ್ಲಿ ಪ್ರತಿಭಟನಾಕಾರರು ಕಾರ್ಖಾನೆ ಹಾಗೂ ಬ್ಯಾಂಕ್‌ಗೆ ಬೆಂಕಿ ಹಚ್ಚಿದ ನಂತರ ನಡೆದ ಹಿಂಸಾಚಾರದಲ್ಲಿ ಸುಮಾರು 13 ಮಂದಿ ಮೃತಪಟ್ಟಿರುವುದು ಒಳಗೊಂಡಂತೆ, ಸಿಂಧ್ ಪ್ರಾಂತ್ಯದ ವಿವಿಧ ಭಾಗಗಳಲ್ಲಿ ನಡೆದ ಹಿಂಸಾಚಾರಕ್ಕೆ ಸುಮಾರು 44 ಮಂದಿ ಮೃತಪಟ್ಟಿದ್ದಾರೆ ಎಂದು ಬ್ರಿಗೇಡರ್‌ (ನಿವೃತ್ತಿ) ಗೋಲಮ್ ಮೊಹ್ತಾರಾಮ್ ಅವರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಸಿಂಧ್ ಪ್ರಾಂತ್ಯದ ಹಲವಾರು ಭಾಗಗಳಲ್ಲಿ ಸೇನೆಯನ್ನು ನಿಯೋಜನೆಗೊಳಿಸಿದ ನಂತರ ಪರಿಸ್ಥಿತಿ ಸಾಕಷ್ಟು ಪ್ರಮಾಣದಲ್ಲಿ ತಹಬಂದಿಗೆ ಬಂದಿದೆ. ಜೊತೆಗೆ ಇಲ್ಲಿ ಅರೆಸೇನಾ ಪಡೆಯನ್ನು ನಿಯೋಜಿಸಲಾಗಿದೆ ಎಂದು ಅವರು ವಿವರಿಸಿದರು.

ಪ್ರಾಂತ್ಯದಲ್ಲಿ ಗುರುವಾರ ರಾತ್ರಿಯಿಂದ ನಡೆಯುತ್ತಿರುವ ಹಿಂಸಾಚಾರಕ್ಕೆ ಪ್ರತಿಭಟನೆಕಾರರು ಸುಮಾರು 500 ವಾಹನಗಳು ಹಾಗೂ ಕನಿಷ್ಠ 100 ಬ್ಯಾಂಕ್‌ಗಳನ್ನು ಸಂಪೂರ್ಣವಾಗಿ ನಾಶಗೊಳಿಸಿದ್ದಾರೆ ಎಂದು ಗೋಲಮ್ ಮಾಹಿತಿ ಒದಗಿಸಿದರು.

ಪ್ರತಿಭಟನೆಯ ವೇಳೆ ಸುಮಾರು 38 ಮಂದಿ ಮೃತಪಟ್ಟಿದ್ದಾರೆ ಎಂದು ಆಂತರಿಕ ಸಚಿವಾಲಯದ ವಕ್ತಾರ ಜಾವೇದ್ ಚೀಮಾ ಅವರು ಇಸ್ಲಾಮಾಬಾದ್‌ನಲ್ಲಿ ತಿಳಿಸಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಪಿಪಿಪಿ ಭವಿಷ್ಯದ ಕುರಿತು ಭುಟ್ಟೋ ಉಯಿಲು: ಜರ್ದಾರಿ
ಪಾಕ್ ಚುನಾವಣೆ ಮುಂದೂಡಿಕೆ
ಹಾಂಗ್‌ಕಾಂಗ್: 2017ರಲ್ಲಿ ನಾಯಕನ ಚುನಾವಣೆ
ಮಾಯನ್ಮಾರ್: ಹಕ್ಕಿ ಜ್ವರ ಸೋಂಕು ಪತ್ತೆ
ಭುಟ್ಟೋ ಹತ್ಯೆ: ಅಂತಾರಾಷ್ಟ್ರೀಯ ತನಿಖೆಗೆ ಹಿಲರಿ ಕರೆ
ಗುಂಡೇಟು ಕಂಡಿದ್ದ ಭುಟ್ಟೋ ನಿಕಟವರ್ತಿ
ಮನರಂಜನೆ
ಚಿತ್ರ ಸಮೀಕ್ಷೆ - ನಾಟಕವನ್ನು ಷೂಟ್ ಮಾಡಬೇಕೆಂದರೆ ಏನು ಮಾಡಬೇಕು? ಸ್ಟೇಜ್ ಎದುರಿಗೆ ಒಂದು ಕೆಮೆರಾ ಫಿಕ್ಸ್ ಮಾಡಿ ಆನ್‌ ಮಾಡಿದರೆ ಆಯಿತು ಎನ್ನುವುದು ಉತ್ತರ. ಅದೇ ಟೆಕ್ನಿಕ್ ಬಳಸಿರುವುದು "ಆಪರೇಷನ್ ಅಂಕುಶ" ಚಿತ್ರದ ವಿಶೇಷ.
ಮುಂದೆ ಓದಿ|ಮತ್ತಷ್ಟು...
ಗ್ರಹ ಗತಿ
PTI
 
ಅನಿಲ್ ಕುಂಬ್ಳೆ
ಇತ್ತೀಚೆಗೆ ನಡೆದ ಕ್ರಿಕೆಟ್ ಟೆಸ್ಟ್ ಸರಣಿಯಲ್ಲಿ, ಇಪ್ಪತ್ತೇಳು ವರ್ಷಗಳ ಬಳಿಕ ಸಾಂಪ್ರದಾಯಿಕ ವೈರಿ ಪಾಕಿಸ್ತಾನದ...
ರಾಬಿನ್ ಉತ್ತಪ್ಪ
ಲಗ್ನೇಶ ಬುಧ ಇದ್ದರೂ ವಿಶ್ವಕಪ್ ತಂದ ಧೋನಿ
ಸಾಹಿತ್ಯ
ಆತ್ಮಚರಿತ್ರೆ - ಈ ಮಣ್ಣಿನ ಸೊಗಡಿನ ಸಾಹಿತ್ಯ ರಚಿಸಿದ ನಮ್ಮೆಲ್ಲರ ಅಚ್ಚುಮೆಚ್ಚಿನ ಕು.ವೀರಭದ್ರಪ್ಪನರ 'ಅರಮನೆ' ಕಾದಂಬರಿಗೆ ಈಗ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗರಿ.
ಮುಂದೆ ಓದಿ|ಮತ್ತಷ್ಟು...
Marketplace