|
| ಪಿಪಿಪಿ ಭವಿಷ್ಯದ ಕುರಿತು ಭುಟ್ಟೋ ಉಯಿಲು: ಜರ್ದಾರಿ |
| ಲಂಡನ್ (ಏಜೆನ್ಸಿ), ಶನಿವಾರ, 29 ಡಿಸೆಂಬರ್ 2007 ( 20:08 IST ) | |
ಹತ್ಯೆಗೀಡಾದ ಬೆನಜೀರ್ ಭುಟ್ಟೋ ತಮ್ಮ ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಭವಿಷ್ಯದ ಕುರಿತು ಸೂಚನೆ ನೀಡುವ ಉಯಿಲನ್ನು ಬಿಟ್ಟು ಹೋಗಿದ್ದು, ನಾಳೆ ಇದನ್ನು ಬಹಿರಂಗ ಪಡಿಸಲಾಗುವುದು ಎಂದು ಅವರ ಪತಿ ಆಸಿಫ್ ಜರ್ದಾರಿ ತಿಳಿಸಿದ್ದಾರೆ.
"ಅವರು ಪಕ್ಷಕ್ಕಾಗಿ ಸಂದೇಶವನ್ನು ನೀಡಿದ್ದಾರೆ ಮತ್ತು ಉಯಿಲನ್ನು ಮಾಡಿದ್ದಾರೆ. ನಾವು ಇದನ್ನು ನಾಳೆ ಬಹಿರಂಗ ಗೊಳಿಸುತ್ತೇವೆ," ಎಂದು ಜರ್ದಾರಿ ಬಿಬಿಸಿ ರೆಡಿಯೋಗೆ ಹೇಳಿದ್ದಾರೆ.
ನಾಳೆ ಸಭೆಯನ್ನು ಕರೆಯಲಾಗಿದ್ದು, ಅವರ ಉಯಿಲನ್ನು ಅಲ್ಲಿ ಬಹಿರಂಗ ಗೊಳಿಸಲಾಗುವುದು ಮತ್ತು ಅವರ ಸಂದೇಶವನ್ನು ನಾಳಿನ ಸಭೆಯಲ್ಲಿ ಓದಲಾಗುವುದು ಎಂದು ಅವರು ಹೇಳಿದರು.
ಪಿಪಿಪಿ ಮುಖ್ಯಸ್ಥೆಯ ಆ ಸಂದೇಶವನ್ನು ತಮ್ಮ ಪುತ್ರ ಬಿಲ್ವಾಲ್ ಓದಲಿದ್ದಾರೆ ಎಂದು ಜರ್ದಾರಿ ಹೇಳಿದ್ದಾರೆ.
ಪಕ್ಷದ ಮುಖ್ಯಸ್ಥರಾಗಿ ನೀವು ಅಧಿಕಾರ ವಹಿಸುತ್ತಿರೋ ಎಂದು ಕೇಳಿದ ಪ್ರಶ್ನೆಗೆ ಜರ್ದಾರಿ, ಇದು ಪಕ್ಷದ ಮತ್ತು ಉಯಿಲಿನ ಮೇಲೆ ಅವಲಂಭಿತವಾಗಿದೆ ಎಂದು ಉತ್ತರ ನೀಡಿದರು.
ತಮ್ಮ ಪತ್ನಿ ಭುಟ್ಟೋರ ಸಾವಿಗೆ ಸಂಬಂಧಿಸಿದಂತೆ ಮಾತನಾಡಿದ ಜರ್ದಾರಿ, ತಾನು ತನ್ನ ಜೀವನದಲ್ಲಿ ಹಲವು ದುರಂತವನ್ನು ಕಂಡಿದ್ದೇನೆ ಆದರೆ ಇದಕ್ಕಿಂತ ಹೆಚ್ಚಿಗೆ ಯಾವುದೇ ದುರಂತ ತನ್ನನ್ನು ಆಘಾತಗೊಳಿಸಲಿಲ್ಲ ಎಂದು ದುಖಃ ವ್ಯಕ್ತಪಡಿಸಿದರು.
ಭುಟ್ಟೋ ಎದುರಿಸುತ್ತಿದ್ದ ಅಪಾಯದ ಬಗ್ಗೆ ತಮಗೆ ಅರಿವಿತ್ತು ಆದರೆ ತಾವು ಸಫಲರಾಗುತ್ತೇವೆ ಮತ್ತು ಭಯೋತ್ಪಾದಕರು ಹಾಗೂ ಭಯೋತ್ಪದಕರನ್ನು ಬೆಂಬಲಿಸುವ ಜನರು ಯಶಸ್ವಿಯಾಗುವುದಿಲ್ಲ ಎಂದು ನಿರೀಕ್ಷಿಸಿದ್ದೆವು ಎಂದು ಜರ್ದಾರಿ ಹೇಳಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ಚಿತ್ರ ಸಮೀಕ್ಷೆ - ನಾಟಕವನ್ನು ಷೂಟ್ ಮಾಡಬೇಕೆಂದರೆ ಏನು ಮಾಡಬೇಕು? ಸ್ಟೇಜ್ ಎದುರಿಗೆ ಒಂದು ಕೆಮೆರಾ ಫಿಕ್ಸ್ ಮಾಡಿ ಆನ್ ಮಾಡಿದರೆ ಆಯಿತು ಎನ್ನುವುದು ಉತ್ತರ. ಅದೇ ಟೆಕ್ನಿಕ್ ಬಳಸಿರುವುದು "ಆಪರೇಷನ್ ಅಂಕುಶ" ಚಿತ್ರದ ವಿಶೇಷ. |
| |
|
|
|
|
 | | PTI |
| | | ಅನಿಲ್ ಕುಂಬ್ಳೆ | | ಇತ್ತೀಚೆಗೆ ನಡೆದ ಕ್ರಿಕೆಟ್ ಟೆಸ್ಟ್ ಸರಣಿಯಲ್ಲಿ, ಇಪ್ಪತ್ತೇಳು ವರ್ಷಗಳ ಬಳಿಕ ಸಾಂಪ್ರದಾಯಿಕ ವೈರಿ ಪಾಕಿಸ್ತಾನದ... |
|
| |
|
|
|
|
|
| ಆತ್ಮಚರಿತ್ರೆ - ಈ ಮಣ್ಣಿನ ಸೊಗಡಿನ ಸಾಹಿತ್ಯ ರಚಿಸಿದ ನಮ್ಮೆಲ್ಲರ ಅಚ್ಚುಮೆಚ್ಚಿನ ಕು.ವೀರಭದ್ರಪ್ಪನರ 'ಅರಮನೆ' ಕಾದಂಬರಿಗೆ ಈಗ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗರಿ. |
| |
|
|
|
|
|
|
|