|
| ಸತ್ಯಂ ಪರಿಹಾರ ಪ್ರಕರಣ-ಸುಪ್ರೀಂಗೆ ಮೊರೆ: ಮೈತಾಸ್ |
| ನವದೆಹಲಿ, ಬುಧವಾರ, 20 ಮೇ 2009 ( 18:13 IST ) | |
ಮಹಾ ವಂಚನೆ ಎಸಗಿದ ಸತ್ಯಂ ಕಂಪೆನಿಯಿಂದ 4,975ಕೋಟಿ ರೂಪಾಯಿ ಪರಿಹಾರ ಹಣ ದೊರಕಿಸಿಕೊಡುವಂತೆ ಮೈತಾಸ್ ಟಚ್ ಇನ್ವೆಸ್ಟರ್ಸ್ ಅಸೋಸಿಯೇಶನ್(ಎಂಟಿಐಎ)ಸಲ್ಲಿಸಿದ್ದ ಮನವಿಯನ್ನು ರಾಷ್ಟ್ರೀಯ ಗ್ರಾಹಕ ಆಯೋಗ ತಿರಸ್ಕರಿಸಿರುವ ಹಿನ್ನೆಲೆಯಲ್ಲಿ, ಈ ನಿರ್ಧಾರವನ್ನು ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ಎಂಟಿಐಎ ತಿಳಿಸಿದೆ.
ಪರಿಹಾರ ಹಣ ದೊರಕಿಸಿರುವ ನಿಟ್ಟಿನಲ್ಲಿ ಸಲ್ಲಿಸಿದ್ದ ಮನವಿಯ ತಿರಸ್ಕರಿಸಿರುವ ಆಯೋಗದ ನಿರ್ಧಾರದ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಲು ತಾವು ನಿರ್ಧರಿಸಿರುವುದಾಗಿ ಎಂಟಿಐಎನ ನಿರ್ದೇಶಕ ವೀರೇಂದ್ರ ಜೈನ್ ಹೇಳಿದರು.
ಸತ್ಯಂ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಹಾರ ಧನ ಒದಗಿಸುವ ಕೊಡುವ ಸಾಮರ್ಥ್ಯ ಆಯೋಗಕ್ಕೆ ಇಲ್ಲ ಎಂದು ಈ ಮೊದಲು ಅಭಿಪ್ರಾಯ ವ್ಯಕ್ತಪಡಿಸಿ, ಈ ಪ್ರಕರಣ ಇದೀಗ ಸಿಬಿಐ ಸುಪರ್ದಿಯಲ್ಲಿದೆ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸತ್ಯಂ ಸಂಸ್ಥಾಪಕ ಬಿ.ರಾಮಲಿಂಗಾ ರೆಡ್ಡಿ, ಸಹೋದರ ಬಿ.ರಾಮರಾಜು ಸೇರಿದಂತೆ ಒಂಬತ್ತು ಮಂದಿ ವಿರುದ್ಧ ಆರೋಪಪಟ್ಟಿ ದಾಖಲಿಸಲಾಗಿದೆ.
ಮೈತಾಸ್ ಪರಿಹಾರಕ್ಕಾಗಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕೂಲಂಕಷವಾಗಿ ಪರಿಶೀಲಿಸಲಾಗಿದೆ. ಅದು ಗ್ರಾಹಕ ರಕ್ಷಣಾ ಕಾಯ್ದೆ,1986ರಕ್ಕೂ ಅನ್ವಯ ಆಗುತ್ತಿಲ್ಲ. ಆ ಕಾರಣದಿಂದಾಗಿ ಅರ್ಜಿಯನ್ನು ವಜಾಗೊಳಿಸಿರುವುದಾಗಿ ಆಯೋಗದ ಜಸ್ಟೀಸ್ ಕೆ.ಎಸ್.ಗುಪ್ತಾ ಹಾಗೂ ರಾಜ್ಯಲಕ್ಷ್ಮಿರಾವ್ ಅಭಿಪ್ರಾಯ ವ್ಯಕ್ತಪಡಿಸಿದ್ದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಕೆಲವು ಅಡೆತಡೆಗಳ ಬಳಿಕ ಯಶಸ್ಸು ನಿಮ್ಮದಾಗಲಿದೆ. ನಿಮ್ಮ ವ್ಯವಹಾರ ಚಟುವಟಿಕೆಗಳು ಕೂಡ ಸರಾಸರಿ ವೇಗದಲ್ಲಿ ಕಾರ್ಯನಿರ್ವಹಿಸಲಿವೆ. ವೈವಾಹಿಕ ವಿಷಯಗಳಿಂದ ಸಂತಸ ಲಭಿಸಲಿದೆ. ಆರೋಗ್ಯ ಯಾವುದೇ ಚಿಂತೆಯ ವಿಷಯವಾಗದು. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಕನ್ನಡದಲ್ಲಿ ಈ ವಾರ ಸ್ಟಾರ್ ವಾರ್. ದೊಡ್ಡ ನಟರ ಎರಡು ಚಿತ್ರಗಳು ಒಟ್ಟೊಟ್ಟಿಗೆ ಬಿಡುಗಡೆಯಾಗುತ್ತಿದೆ. ಇದರಿಂದ ಸಹಜವಾಗಿಯೇ ಪ್ರೇಕ್ಷಕರ ಪ್ರತಿಕ್ರಿಯೆ ಯಾವ ಚಿತ್ರಕ್ಕೆ ಹೇಗಿರುತ್ತದೆ ಎಂಬುದು |
| |
|
|
|
|
|
|