|
| ಮಾರುತಿ-800 ಅತ್ಯಾಧುನೀಕರಣ: ಮಾರುತಿ ಸುಜುಕಿ |
| ಮುಂಬೈ, ಬುಧವಾರ, 20 ಮೇ 2009 ( 13:08 IST ) | |
2010ರ ಏಪ್ರಿಲ್‌ನಿಂದ ಜಾರಿಯಾಗಲಿರುವ ಭಾರತ್ ಸ್ಟೇಜ್ 4ಎಮಿಷನ್ಸ್(ಮಾಲಿನ್ಯ ಹೊರಸೂಸುವಿಕೆ) ನೀತಿಯನ್ನು ಪಾಲಿಸುವ ನಿಟ್ಟಿನಲ್ಲಿ ಮಾರುತಿ-800 ಎಂಜಿನ್ ಅನ್ನು ಅತ್ಯಾಧುನೀಕರಿಸಲಾಗುವುದು ಎಂದು ದೇಶದ ಪ್ರತಿಷ್ಠಿತ ಕಾರು ತಯಾರಿಕಾ ಸಂಸ್ಥೆಯಾದ ಮಾರುತಿ ಸುಜುಕಿ ಮಂಗಳವಾರ ಅಧಿಕೃತವಾಗಿ ಘೋಷಿಸಿದೆ.
ಭಾರತದ ಪ್ರಮುಖ ನಗರಗಳಾದ ನವದೆಹಲಿ, ಮುಂಬೈ, ಕೋಲ್ಕತಾ ಹಾಗೂ ಬೆಂಗಳೂರುಗಳಲ್ಲಿ ಯುರೋIVಎಮಿಷನ್ಸ್(ಮಾಲಿನ್ಯ ಹೊರಸೂಸುವಿಕೆ)ನಿಯಮ ಜಾರಿಗೆ ಬರಲಿದೆ. ಆ ನಿಟ್ಟಿನಲ್ಲಿ ಮಾರುತಿ-800 ಹಾಗೂ ಓಮ್ನಿ ಮಿನಿ ವ್ಯಾನ್ ಈ ನಗರಗಳಲ್ಲಿ ಮಾನದಂಡದನ್ವಯ ಸಂಚರಿಸಲು ಸಾಧ್ಯವಿಲ್ಲ.
ಆ ಕಾರಣಕ್ಕಾಗಿ ನಾವು ಮಾರುತಿ-800 ಎಂಜಿನ್ ಸಾಮರ್ಥ್ಯವನ್ನು ಮಾಲಿನ್ಯ ಹೊರಸೂಸುವಿಕೆಗೆ ಅನುಗುಣವಾಗಿ ಅಪ್‌ಗ್ರೇಡ್ ಮಾಡಿ, ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ಕಂಪೆನಿಯ ಮಾರ್ಕೆಟಿಂಗ್ ಡೈರೆಕ್ಟರ್ ಶುಜಿ ಓಯಿಶಿ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.
ಅಲ್ಲದೇ ಇದಕ್ಕೂ ಮುನ್ನ ಅತ್ಯಂತ ಜನಪ್ರಿಯ ಕಾರುಗಳಾದ ಮಾರುತಿ 800 ಮತ್ತು ಆಮ್ನಿ ತಯಾರಿಕೆಯನ್ನು ಸ್ಥಗಿತಗೊಳಿಸುವ ಬಗ್ಗೆ ಕಂಪೆನಿ ಘೋಷಿಸಿಸತ್ತು. ಬಳಿಕ ಮಾರುತಿ-800 ಹಾಗೂ ಓಮ್ನಿಯನ್ನು ಸ್ಥಗಿತಗೊಳಿಸುವುದಿಲ್ಲ ಎಂದು ಮಾರುತಿ ಸುಜುಕಿ ಕಂಪೆನಿ ಸ್ಪಷ್ಟಪಡಿಸಿತ್ತು.
2010ರಿಂದ ಜಾರಿಯಾಗಲಿರುವ ಭಾರತ್ ಸ್ಟೇಜ್ 4ಎಮಿಷನ್ಸ್(ಮಾಲಿನ್ಯ ಹೊರಸೂಸುವಿಕೆ) ನೀತಿಯನ್ನು ಪಾಲಿಸುವ ನಿಟ್ಟಿನಲ್ಲಿ ಮಾರುತಿ ಹಾಗೂ ಆಮ್ನಿಗಳನ್ನು ಅತ್ಯಾಧುನೀಕರಿಸಲಾಗುತ್ತಿದೆ.
2015ರೊಳಗೆ ಮಾರುತಿ 800 ಹಾಗೂ ಆಮ್ನಿಯನ್ನು ಹಿಂತೆಗೆದುಕೊಳ್ಳಲಾಗುವುದು ಎಂದು ಈ ಹಿಂದೆ ಸಂಸ್ಥೆ ಘೋಷಿಸಿತ್ತು. ಈ ಕಾರುಗಳನ್ನು ಆಧುನೀಕರಣ ಮಾಡಬೇಕೆಂದು ಮಾರುಕಟ್ಟೆ ವಿಭಾಗದವರು ಸಲಹೆ ಮಾಡಿದ್ದು, ಇದನ್ನು ಪರಿಗಣಿಸಿರುವ ಹಿನ್ನೆಲೆಯಲ್ಲಿ ಮಾರುತಿ-800ಎಂಜಿನ್ ಅಪ್‌ಗ್ರೇಡ್ ಮಾಡಲಾಗುತ್ತಿದೆ ಎಂದು ಹೇಳಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ವಿವಾದಗಳಿಗೆ ಚಾಲನೆ, ಪಿತೃ ನೆರವಿನಿಂದ ಆರ್ಥಿಕ ಸಂಕಷ್ಟ ನಿವಾರಣೆಗೊಂಡು ನೂತನ ಯೋಜನೆಗಳನ್ನು ಹಾಕಿಕೊಳ್ಳುವಿರಿ. ಕುಟುಂಬ ಮತ್ತು ಕಚೇರಿ ಎರಡನ್ನೂ ಚೆನ್ನಾಗಿಯೇ ನಿಭಾಯಿಸುತ್ತಿದ್ದೀರಿ. ಆದರೂ ಈಗ ಏನು ಬೇಕಾದರೂ ಮಾಡು ಎಂದು ಸ್ವತಂತ್ರವಾಗಿ ನಿಮ್ಮನ್ನು ಬಿಟ್ಟದ್ದು ನಿಮಗೆ ಖುಷಿಯಾಗುತ್ತದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಖೇಣಿ ಅವರಿಗೂ ಚಿತ್ರರಂಗಕ್ಕೂ ಒಂದು ಸಂಬಂಧ ಇದ್ದೇ ಇರುತ್ತದೆ. ಉದ್ಯಮಿಯಾದರೂ ಅವರಿಗೆ ಬಣ್ಣದ ಲೋಕದ ಬಗ್ಗೆ ಸ್ವಲ್ಪ ಕ್ರೇಜ್ ಹೆಚ್ಚೇ ಎನ್ನಬಹುದು. ಅವರು ಎರಡು ಮೂರು ಚಿತ್ರಗಳಲ್ಲಿ ಕೆಲವು ಪಾತ್ರಗಳನ್ನು |
| |
|
|
|
|
|
|