|
| ಆರಂಭಿಕ ವಹಿವಾಟು: 220 ಅಂಕ ಕುಸಿದ ಸೂಚ್ಯಂಕ |
| ಮುಂಬೈ, ಬುಧವಾರ, 20 ಮೇ 2009 ( 13:05 IST ) | |
ಕಳೆದ ಎರಡು ವಹಿವಾಟುಗಳ ಅವಧಿಯಲ್ಲಿ ದಾಖಲೆಯ ಏರಿಕೆ ಕಂಡಿದ್ದ ಶೇರುಪೇಟೆ ಇಂದಿನ ಆರಂಭಿಕ ವಹಿವಾಟಿನಲ್ಲಿ ಲಾಂಭಾಂಶ ನಗದೀಕರಣ ಹೆಚ್ಚಳ ಕಂಡಿದ್ದರ ಹಿನ್ನಲೆಯಲ್ಲಿ 220 ಪಾಯಿಂಟ್‌ಗಳ ಕುಸಿತವನ್ನು ಕಂಡಿದೆ.
ಮುಂಬೈನ ಬಿಎಸ್‌ಇ 30 ಸೂಚ್ಯಂಕ ದಿನದ ಆರಂಭಿಕ ವಹಿವಾಟಿನಲ್ಲಿ 219.76 ಪಾಯಿಂಟ್ ಕುಸಿತ ಕಂಡು 14,082.27 ಅಂಕಗಳಿಗೆ ತಲುಪಿದೆ. ಸೂಚ್ಯಂಕ ಹಿಂದಿನ ಎರಡು ಅವಧಿಗಳಲ್ಲಿ ದಾಖಲೆಯ ಶೇಕಡಾ 18ರಷ್ಟು ಏರಿಕೆ ಕಂಡಿತ್ತು.
ಅದೇ ರೀತಿ ರಾಷ್ಟ್ರೀಯ ಶೇರುಪೇಟೆ ನಿಫ್ಟಿ ಸಹ 65.15 ಪಾಯಿಂಟ್ ಕುಸಿತ ಕಂಡು 4,253.30 ಅಂಕಗಳಿಗೆ ತಲುಪಿದೆ. ನಿಫ್ಟಿ ಹಿಂದಿನ ದಿನದ ವಹಿವಾಟಿನ ಅಂತ್ಯಕ್ಕೆ 4.70 ಪಾಂಯಿಟ್ ಕುಸಿತ ಕಂಡು 4,318.45 ಅಂಕಗಳಿಗೆ ತಲುಪಿತ್ತು.
ಅಂತಾರಾಷ್ಟ್ರೀಯ ಮಾರುಕಟ್ಟೆ ವಹಿವಾಟಿನಲ್ಲಿನ ಮಿಶ್ರ ಪ್ರತಿಕ್ರಿಯೆಯೂ ಸಹ ಶೇರುಪೇಟೆ ಕುಸಿತಕ್ಕೆ ಕಾರಣವಾಗಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕುಸಿತ ಕಂಡ ಶೇರುಗಳು: ಇಂದಿನ ದಿನದ ಆರಂಭಿಕ ವಹಿವಾಟಿನಲ್ಲಿ ಆರ್‌ಐಎಲ್ ಶೇರುಗಳು ಶೇಕಡಾ 0.20, ಆರ್ ಕಾಮ್ ಶೇಕಡಾ 6.30, ಐಸಿಐಸಿಐ ಬ್ಯಾಂಕ್ ಶೇಕಡಾ 4, ಭಾರ್ತಿ ಏರ್‌ಟೆಲ್ ಶೇಕಡಾ 5.32, ಡಿಎಲ್‌ಎಫ್ ಶೇಕಡಾ 2.90, ಗ್ರಾಸಿಂ ಇಂಡಸ್ಟ್ರೀಸ್ ಶೇಕಡಾ 4.06 ಹಾಗೂ ಮಾರುತಿ ಸುಜುಕಿ ಶೇರುಗಳು ಶೇಕಡಾ 0.80ರಷ್ಟು ಕುಸಿತವನ್ನು ಕಂಡಿವೆ.
ಅಂತಾರಾಷ್ಟ್ರೀಯ ಮಾರುಕಟ್ಟೆಗಳಾದ ಅಮೆರಿಕದ ಡೊ ಜೋನ್ಸ್ ಶೇರುಪೇಟೆ ಹಿಂದಿನ ದಿನದ ವಹಿವಾಟಿನ ಅಂತ್ಯಕ್ಕೆ ಶೇಕಡಾ 0.34ರಷ್ಟು ಕುಸಿತ ಕಂಡಿದೆ. ಹಾಂಗ್ ಕಾಂಗ್‌ನ ಹಾಂಗ್ ಶೆಂಗ್ ಶೇರುಪೇಟೆ ಸಹ ದಿನದ ಆರಂಭಿಕ ವಹಿವಾಟಿನಲ್ಲಿ ಶೇಕಡಾ 0.50ರಷ್ಟು ಕುಸಿತ ಕಂಡಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ವಿವಾದಗಳಿಗೆ ಚಾಲನೆ, ಪಿತೃ ನೆರವಿನಿಂದ ಆರ್ಥಿಕ ಸಂಕಷ್ಟ ನಿವಾರಣೆಗೊಂಡು ನೂತನ ಯೋಜನೆಗಳನ್ನು ಹಾಕಿಕೊಳ್ಳುವಿರಿ. ಕುಟುಂಬ ಮತ್ತು ಕಚೇರಿ ಎರಡನ್ನೂ ಚೆನ್ನಾಗಿಯೇ ನಿಭಾಯಿಸುತ್ತಿದ್ದೀರಿ. ಆದರೂ ಈಗ ಏನು ಬೇಕಾದರೂ ಮಾಡು ಎಂದು ಸ್ವತಂತ್ರವಾಗಿ ನಿಮ್ಮನ್ನು ಬಿಟ್ಟದ್ದು ನಿಮಗೆ ಖುಷಿಯಾಗುತ್ತದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಖೇಣಿ ಅವರಿಗೂ ಚಿತ್ರರಂಗಕ್ಕೂ ಒಂದು ಸಂಬಂಧ ಇದ್ದೇ ಇರುತ್ತದೆ. ಉದ್ಯಮಿಯಾದರೂ ಅವರಿಗೆ ಬಣ್ಣದ ಲೋಕದ ಬಗ್ಗೆ ಸ್ವಲ್ಪ ಕ್ರೇಜ್ ಹೆಚ್ಚೇ ಎನ್ನಬಹುದು. ಅವರು ಎರಡು ಮೂರು ಚಿತ್ರಗಳಲ್ಲಿ ಕೆಲವು ಪಾತ್ರಗಳನ್ನು |
| |
|
|
|
|
|
|