|
| ಎಸ್ಸಾರ್ ತೈಲ ಕಂಪೆನಿಗೆ 455ಕೋಟಿ ರೂ.ನಷ್ಟ |
| ಮುಂಬೈ, ಮಂಗಳವಾರ, 19 ಮೇ 2009 ( 17:52 IST ) | |
ವಾಣಿಜ್ಯ ನಗರಿಯಲ್ಲಿ ಕಾರ್ಯಾಚರಿಸುತ್ತಿರುವ ಪ್ರತಿಷ್ಠಿತ ತೈಲ ಉತ್ಪನ್ನ ಕಂಪೆನಿಯಾದ ಎಸ್ಸಾರ್ ತೈಲ ಕಂಪೆನಿ 2009ರ ಮಾರ್ಚ್ 31ರ ಅಂತ್ಯದ ಲೆಕ್ಕಚಾರದಲ್ಲಿ 455ಕೋಟಿ ರೂ.ನಷ್ಟ ಅನುಭವಿಸಿರುವುದಾಗಿ ತಿಳಿಸಿದೆ.
ಕಳೆದ ಸಾಲಿನಲ್ಲಿಯೂ ಕಂಪೆನಿಯು 41ಕೋಟಿ ರೂ.ನಷ್ಟ ಅನುಭವಿಸಿರುವುದಾಗಿ ಹೇಳಿದೆ. ಕಂಪೆನಿಯ ವಾರ್ಷಿಕ ಆದಾಯ 37,652ಕೋಟಿ ರೂಪಾಯಿ ಆಗಿದ್ದು, ಕಳೆದ ವರ್ಷವೂ ಕೂಡ ನಷ್ಟವಾಗಿರುವುದಾಗಿ ಎಸ್ಸಾರ್ ಗ್ರೂಪ್ ಕಂಪೆನಿ ವಿವರಿಸಿದೆ.
ನಷ್ಟವನ್ನು ಸರಿದೂಗಿರುವ ನಿಟ್ಟಿನಲ್ಲಿ ಮುಂದಿನ ಕ್ರಮದ ಅಂಗವಾಗಿ ಈಕ್ವಿಟಿ ಶೇರು ಹಾಗೂ ಡಿಬೆಂಚರ್ಸ್‌ಗಳನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೂಡಲು ಅನುಮತಿ ನೀಡುವಂತೆ ಬೋರ್ಡ್ ಮೀಟಿಂಗ್‌ನಲ್ಲಿ ಮನವಿ ಮಾಡಿಕೊಂಡು, ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕಂಪೆನಿ ತಿಳಿಸಿದೆ.
ಪ್ರಸಕ್ತ ಸಾಲಿನಲ್ಲಿ ಕಂಪೆನಿ 455ಕೋಟಿ ರೂಪಾಯಿ ಹಾಗೂ ಕಳೆದ ಸಾಲಿನಲ್ಲಿ ಕಂಪೆನಿ 41ಕೋಟಿ ರೂಪಾಯಿ ನಷ್ಟದಿಂದಾಗಿ ಕಂಪೆನಿಗೆ ಸಾಕಷ್ಟು ಹೊಡೆತ ಬಿದ್ದಿದ್ದು, ಶೀಘ್ರವಾಗಿ ನಷ್ಟ ತುಂಬಿಸಿಕೊಳ್ಳುವುದರೊಂದಿಗೆ ಆರ್ಥಿಕ ಚೇತರಿಕೆಗಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಸಾರ್ ಹೇಳಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ವಿವಾದಗಳಿಗೆ ಚಾಲನೆ, ಪಿತೃ ನೆರವಿನಿಂದ ಆರ್ಥಿಕ ಸಂಕಷ್ಟ ನಿವಾರಣೆಗೊಂಡು ನೂತನ ಯೋಜನೆಗಳನ್ನು ಹಾಕಿಕೊಳ್ಳುವಿರಿ. ಕುಟುಂಬ ಮತ್ತು ಕಚೇರಿ ಎರಡನ್ನೂ ಚೆನ್ನಾಗಿಯೇ ನಿಭಾಯಿಸುತ್ತಿದ್ದೀರಿ. ಆದರೂ ಈಗ ಏನು ಬೇಕಾದರೂ ಮಾಡು ಎಂದು ಸ್ವತಂತ್ರವಾಗಿ ನಿಮ್ಮನ್ನು ಬಿಟ್ಟದ್ದು ನಿಮಗೆ ಖುಷಿಯಾಗುತ್ತದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಖೇಣಿ ಅವರಿಗೂ ಚಿತ್ರರಂಗಕ್ಕೂ ಒಂದು ಸಂಬಂಧ ಇದ್ದೇ ಇರುತ್ತದೆ. ಉದ್ಯಮಿಯಾದರೂ ಅವರಿಗೆ ಬಣ್ಣದ ಲೋಕದ ಬಗ್ಗೆ ಸ್ವಲ್ಪ ಕ್ರೇಜ್ ಹೆಚ್ಚೇ ಎನ್ನಬಹುದು. ಅವರು ಎರಡು ಮೂರು ಚಿತ್ರಗಳಲ್ಲಿ ಕೆಲವು ಪಾತ್ರಗಳನ್ನು |
| |
|
|
|
|
|
|