ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವ್ಯವಹಾರ ಸಮಾಚಾರ
ಸೆನ್ಸೆಕ್ಸ್: ಆರಂಭಿಕ ವಹಿವಾಟು ಕುಸಿತ
ಮುಂಬೈ, ಮಂಗಳವಾರ, 19 ಮೇ 2009   ( 12:41 IST )
ಶೇರುಪೇಟೆ ನಿನ್ನೆಯ ದಾಖಲೆಯ ಏರಿಕೆಯ ನಂತರ ಇಂದಿನ ಆರಂಭಿಕ ವಹಿವಾಟಿನಲ್ಲಿ ಕುಸಿತ ಕಂಡಿದೆ. ಹೂಡಿಕೆದಾರರು ಲಾಭದ ಗಳಿಕೆ ಕಾಯ್ದಿರಿಸುವಿಕೆಯಿಂದ ಶೇರುಪೇಟೆಯಲ್ಲಿ ಕುಸಿತ ಕಂಡು ಬಂದಿರುವುದಾಗಿ ಮಾರುಕಟ್ಟೆ ಮ‌ೂಲಗಳು ತಿಳಿಸಿವೆ.

ಬಿಎಸ್‌ಇ-20 ಸೂಚ್ಯಂಕ ದಿನದ ಆರಂಭದ ವಹಿವಾಟಿನಲ್ಲಿ 475 ಪಾಯಿಂಟ್ ಏರಿಕೆ ಕಂಡರೂ ತಕ್ಷಣವೇ 373 ಪಾಯಿಂಟ್ ಅಥವಾ ಶೇಕಡಾ 2.62ರಷ್ಟು ಕುಸಿತ ಕಂಡು 14,757 ಅಂಕಗಳಿಗೆ ತಲುಪಿದೆ.

ಅದೇ ರೀತಿ ರಾಷ್ಟ್ರೀಯ ಶೇರುಪೇಟೆ ನಿಫ್ಟಿ ಸಹ ಶೇಕಡಾ 2.23ರಷ್ಟು ಕುಸಿತ ಕಂಡು 4,226.85 ಅಂಕಗಳಿಗೆ ತಲುಪಿದೆ.

ಶೇರುಪೇಟೆಯಲ್ಲಿ ಸೋಮವಾರದಂದು ಶೇರು ವಹಿವಾಟು 'ಗರಿಷ್ಠ ಮಿತಿ'ಯನ್ನು ದಾಟಿರುವ ಹಿನ್ನೆಲೆಯಲ್ಲಿ ಬಿಎಸ್ಇ ಮತ್ತು ನಿಫ್ಟಿ ವ್ಯವಹಾರವನ್ನು ದಿನದ ಮಟ್ಟಿಗೆ ಸ್ಥಗಿತಗೊಳಿಸಲಾಗಿತ್ತು. ಶೇರು ವಹಿವಾಟಿಗೆ ಹೇರಲಾಗಿರುವ ಗರಿಷ್ಠ ಮಿತಿಯನ್ನು ತಲುಪಿರುವುದು ಭಾರತೀಯ ಶೇರು ಮಾರುಕಟ್ಟೆ ಇತಿಹಾಸದಲ್ಲೇ ಮೊದಲಬಾರಿಯಾಗಿದೆ. ಚುನಾವಣಾ ಫಲಿತಾಂಶಗಳ ಪರಿಣಾಮದ ಹಿನ್ನೆಲೆಯಲ್ಲಿ ನಿನ್ನೆಯ ವಹಿವಾಟಿನಲ್ಲಿ ಶೇರುಪೇಟೆ ದಾಖಲೆಯ ಏರಿಕೆ ಕಂಡಿತ್ತು.

ಬಿಎಸ್‌ಇ ಮಿಡ್‌ಕ್ಯಾಪ್ ಇಂದಿನ ಆರಂಭಿಕ ವಹಿವಾಟಿನಲ್ಲಿ ಶೇಕಡಾ 3.98 ಹಾಗೂ ಬಿಎಸ್‌ಇ ಸ್ಮಾಲ್‌ಕ್ಯಾಪ್ ಸೂಚ್ಯಂಕ ಕೂಡಾ ಶೇಕಡಾ 3.04ರಷ್ಟು ಕುಸಿತ ಕಂಡಿದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ರಾಜೀನಾಮೆ
ಡಚ್ ಟಯರ್ ಕಂಪೆನಿ ಅಪೋಲೊ ತೆಕ್ಕೆಗೆ
ಮುಂಬೈಯಲ್ಲಿ 600ಕೋಟಿ ವೆಚ್ಚದ 'ಏರೋಪಾರ್ಕ್'
ಶೇರು ಇತಿಹಾಸದಲ್ಲೇ ಮೊದಲನೇ ಬಾರಿ 'ಗರಿಷ್ಠ ಮಿತಿ'
ಸೆನ್ಸೆಕ್ಸ್: ಗರಿಷ್ಠ ಮಿತಿ ದಾಟಿ ವಹಿವಾಟು ಸ್ಥಗಿತ
ಕಾಂಗ್ರೆಸ್ ಅಧಿಕಾರಕ್ಕೆ: ಸೂಚ್ಯಂಕ ಶೇ.10.73ರಷ್ಟು ಏರಿಕೆ
ಗ್ರಹ ಗತಿ
ದೈನಿಕ - ವಿವಾದಗಳಿಗೆ ಚಾಲನೆ, ಪಿತೃ ನೆರವಿನಿಂದ ಆರ್ಥಿಕ ಸಂಕಷ್ಟ ನಿವಾರಣೆಗೊಂಡು ನೂತನ ಯೋಜನೆಗಳನ್ನು ಹಾಕಿಕೊಳ್ಳುವಿರಿ. ಕುಟುಂಬ ಮತ್ತು ಕಚೇರಿ ಎರಡನ್ನೂ ಚೆನ್ನಾಗಿಯೇ ನಿಭಾಯಿಸುತ್ತಿದ್ದೀರಿ. ಆದರೂ ಈಗ ಏನು ಬೇಕಾದರೂ ಮಾಡು ಎಂದು ಸ್ವತಂತ್ರವಾಗಿ ನಿಮ್ಮನ್ನು ಬಿಟ್ಟದ್ದು ನಿಮಗೆ ಖುಷಿಯಾಗುತ್ತದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಹಣ ಬಲದಿಂದ ಬಿಜೆಪಿಗೆ ಜಯ : ಮಲ್ಲಿಕಾರ್ಜುನ ಖರ್ಗೆ
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ...
ಕೇಂದ್ರ ಸಚಿವ ಸ್ಥಾನದ ನಿರೀಕ್ಷೆಯಲ್ಲಿ ಕೆ.ಎಚ್.ಮುನಿಯಪ್ಪ
ದಾಖಲೆ ಪ್ರಮಾಣದಲ್ಲಿ ಮರು ಮೌಲ್ಯಮಾಪನ ಅರ್ಜಿ
ಮನರಂಜನೆ
ಚಿತ್ರ ಸುದ್ದಿ - ಪ್ರತಿ ಬಾರಿ ದೆಹಲಿಯಲ್ಲಿ ನಡೆಯುವ ಹ್ಯಾಬಿಟ್ಯಾಟ್ ಚಲನಚಿತ್ರೋತ್ಸವದಲ್ಲಿ ಬಿ ಸುರೇಶ್ ಹಾಗೂ ಶೈಲಜ ನಿರ್ಮಿಸಿ, ಅಭಯಸಿಂಹ ನಿರ್ದೇಶನ ಮಾಡಿರುವ 'ಗುಬ್ಬಚ್ಚಿಗಳು' ಚಿತ್ರ ಪ್ರದರ್ಶಗೊಳ್ಳಲಿದೆ. ಚಿತ್ರ ಬೆಂಗಳೂರಿನಲ್ಲಿ
ಮುಂದೆ ಓದಿ|ಮತ್ತಷ್ಟು...