|
| ಡಚ್ ಟಯರ್ ಕಂಪೆನಿ ಅಪೋಲೊ ತೆಕ್ಕೆಗೆ |
| ನವದೆಹಲಿ, ಸೋಮವಾರ, 18 ಮೇ 2009 ( 18:47 IST ) | |
ಡಚ್ ಟಯರ್ ಕಂಪೆನಿಯಾದ ವ್ರೆಡೆಸ್ಟೈನ್ ಬಾಂಡೇನ್ ಬಿವಿಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿರುವುದಾಗಿ ದೆಹಲಿ ಮೂಲದ ಪ್ರತಿಷ್ಠಿತ ಟಯರ್ ತಯಾರಿಕಾ ಕಂಪೆನಿಯಾದ ಅಪೋಲೋ ಟಯರ್ಸ್ ಲಿಮಿಟೆಡ್ ಘೋಷಿಸಿದೆ. ಆದರೆ ಡಚ್ ಕಂಪೆನಿಯನ್ನು ಎಷ್ಟು ಮೊತ್ತಕ್ಕೆ ಖರೀದಿಸಲಾಯಿತು ಎಂದು ಅಪೋಲೋ ಕಂಪೆನಿ ಖಚಿತಪಡಿಸಿಲ್ಲ.
ವ್ರೆಡೆಸ್ಟೈನ್ ಬಾಂಡೇನ್ ಕಂಪೆನಿಯ ವಾರ್ಷಿಕ ಆದಾಯ 300ಮಿಲಿಯನ್ ಯುರೋ ಆಗಿದ್ದು, ರಷ್ಯಾದ ಬೃಹತ್ ಟಯರ್ ತಯಾರಿಕೆ ಕಂಪೆನಿಯಾದ ಇದು ಜಾಗತಿಕ ಆರ್ಥಿಕ ಹಿಂಜರಿತ ಮತ್ತು ನಷ್ಟದಿಂದಾಗಿ ಕಳೆದ ತಿಂಗಳು ದಿವಾಳಿಯಾಗಿತ್ತು.
ಆ ನಿಟ್ಟಿನಲ್ಲಿ ವ್ರೆಡೆಸ್ಟೈನ್ ಬಾಂಡೇನ್ ಕಂಪೆನಿಯನ್ನು ಭಾರತದ ಕಂಪೆನಿ ಖರೀದಿಸಿದ್ದು, ಇನ್ನು ಮುಂದೆ ಅಪೋಲೋ ವ್ರೆಡೆಸ್ಟೈನ್ ಬಿವಿ ಪ್ರೈವೇಟ್ ಲಿಮಿಟೆಡ್ ಎಂದು ಹೆಸರಿನಿಂದ ವ್ಯವಹಾರ ನಡೆಸಲಿದೆ ಎಂದು ಸಂಸ್ಥೆ ತಿಳಿಸಿದೆ.
ವ್ರೆಡೆಸ್ಟೈನ್ ವಾರ್ಷಿಕವಾಗಿ 5.5ಮಿಲಿಯನ್ ಟಯರ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ಇದೀಗ ವ್ರೆಡೆಸ್ಟೈನ್ ಮತ್ತು ಅಪೋಲೋ ಜಂಟಿಯಾಗಿ ವಾರ್ಷಿಕವಾಗಿ 16.8ಮಿಲಿಯನ್ ಟಯರ್ ಉತ್ಪಾದಿಸಲಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ವಿವಾದಗಳಿಗೆ ಚಾಲನೆ, ಪಿತೃ ನೆರವಿನಿಂದ ಆರ್ಥಿಕ ಸಂಕಷ್ಟ ನಿವಾರಣೆಗೊಂಡು ನೂತನ ಯೋಜನೆಗಳನ್ನು ಹಾಕಿಕೊಳ್ಳುವಿರಿ. ಕುಟುಂಬ ಮತ್ತು ಕಚೇರಿ ಎರಡನ್ನೂ ಚೆನ್ನಾಗಿಯೇ ನಿಭಾಯಿಸುತ್ತಿದ್ದೀರಿ. ಆದರೂ ಈಗ ಏನು ಬೇಕಾದರೂ ಮಾಡು ಎಂದು ಸ್ವತಂತ್ರವಾಗಿ ನಿಮ್ಮನ್ನು ಬಿಟ್ಟದ್ದು ನಿಮಗೆ ಖುಷಿಯಾಗುತ್ತದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಪ್ರತಿ ಬಾರಿ ದೆಹಲಿಯಲ್ಲಿ ನಡೆಯುವ ಹ್ಯಾಬಿಟ್ಯಾಟ್ ಚಲನಚಿತ್ರೋತ್ಸವದಲ್ಲಿ ಬಿ ಸುರೇಶ್ ಹಾಗೂ ಶೈಲಜ ನಿರ್ಮಿಸಿ, ಅಭಯಸಿಂಹ ನಿರ್ದೇಶನ ಮಾಡಿರುವ 'ಗುಬ್ಬಚ್ಚಿಗಳು' ಚಿತ್ರ ಪ್ರದರ್ಶಗೊಳ್ಳಲಿದೆ. ಚಿತ್ರ ಬೆಂಗಳೂರಿನಲ್ಲಿ |
| |
|
|
|
|
|
|