ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವ್ಯವಹಾರ ಸಮಾಚಾರ
ಸೆನ್ಸೆಕ್ಸ್: ಗರಿಷ್ಠ ಮಿತಿ ದಾಟಿ ವಹಿವಾಟು ಸ್ಥಗಿತ
ಮುಂಬೈ, ಸೋಮವಾರ, 18 ಮೇ 2009   ( 18:41 IST )
ಶೇರುಪೇಟೆಯಲ್ಲಿ ಸೋಮವಾರ ಶೇರುವಹಿವಾಟು ಗರಿಷ್ಠ ಮಿತಿಯನ್ನು ದಾಟಿರುವ ಹಿನ್ನೆಲೆಯಲ್ಲಿ ಬಿಎಸ್ಇ ಮತ್ತು ಎನ್ಎಸ್ಇಯಲ್ಲಿ ವ್ಯವಹಾರವನ್ನು ದಿನದ ಮಟ್ಟಿಗೆ ಅಂತ್ಯಗೊಳಿಸಲಾಗಿದೆ. ನಿಫ್ಟಿಯು ಗರಿಷ್ಠ ಸರ್ಕ್ಯೂಟ್ ಶೇ. 20ರ ಮಿತಿಯನ್ನು ದಾಟಿದೆ.

ಮೊದಲು ವಹಿವಾಟನ್ನು 11.55 ಗಂಟೆಯ ತನಕ ಸ್ಥಗಿತಗೊಳಿಸಲಾಗಿತ್ತು. ಬಳಿಕ ಸೂಚ್ಯಂಕವು ಶೇ.20ರ ಮಿತಿಯನ್ನು ದಾಟಿದ ಕಾರಣ ದಿನದ ವಹಿವಾಟನ್ನು ಸಂಪೂರ್ಣ ಸ್ಥಗಿತಗೊಳಿಸಲಾಯಿತು.

ಶೇರು ವಹಿವಾಟಿಗೆ ಹೇರಲಾಗಿರುವ ಗರಿಷ್ಠ ಮಿತಿಯನ್ನು ತಲುಪಿರುವುದು ಭಾರತೀಯ ಶೇರು ಮಾರುಕಟ್ಟೆ ಇತಿಹಾಸದಲ್ಲೇ ಇದು ಮೊದಲಬಾರಿಯಾಗಿದೆ. ಚುನಾವಣಾ ಫಲಿತಾಂಶಗಳ ಪರಿಣಾಮದ ಹಿನ್ನೆಲೆ ಇದಕ್ಕೆ ಕಾರಣ ಎಂದು ದೆಹಲಿ ಮೂಲದ ಪ್ರಮುಖ ಶೇರು ದಲ್ಲಾಳಿ ಮನೋಜ್ ಚೋರಾರಿಯಾ ಹೇಳಿದ್ದಾರೆ.

30 ಶೇರುಗಳ ಮುಂಬೈ ಶೇರು ವಿನಿಮಯ ಕೇಂದ್ರದ ಸಂವೇದಿ ಸೂಚ್ಯಂಕವು 2099 ಅಂಕಗಳ ಏರಿಕೆ ಕಂಡಿದ್ದು 14,479ಕ್ಕೆ ತಲುಪಿದೆ. ಅಂತೆಯೇ ರಾಷ್ಟ್ರೀಯ ಶೇರು ವಿನಿಮಯ ಕೇಂದ್ರ 50 ಶೇರುಗಳ ನಿಫ್ಟಿಯು 636 ಅಂಕ ಅಥವಾ ಶೇ.17.33ರಷ್ಟು ಏರಿಕೆ ಕಂಡಿದೆ. ಎಲ್ಲಾ ಪ್ರಮುಖ ಶೇರುಗಳು ಲಾಭಗಳಿಸಿವೆ.

ಕಾಂಗ್ರೆಸ್ ನೇತೃತ್ವದ ಯುಪಿಎ 262 ಸ್ಥಾನಗಳನ್ನು ಗಳಿಸಿದ್ದು ಇದು ಶೇರು ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದೆ. ವಿಶೇಷವಾಗಿ ಕೇಂದ್ರದಲ್ಲಿ ಸ್ಥಿರ ಸರ್ಕಾರ ನೇಮಕಗೊಳ್ಳುವುದು ಮಾರುಕಟ್ಟೆ ವಲಯದಲ್ಲಿ ಹರ್ಷಕ್ಕೆ ಕಾರಣವಾಗಿದೆ.

ಶನಿವಾರ ಚುನಾವಣಾ ಫಲಿತಾಂಶಗಳು ಘೋಷಣೆಯಾಗಿದ್ದು, ಇದಾದ ಬಳಿಕ ಸೋಮವಾರ ಮೊದಲಬಾರಿಗೆ ಶೇರು ವಹಿವಾಟು ನಡೆದಿದೆ.

ಬ್ಯಾಂಕಿಂಗ್ ಶೇರುಗಳು, ಇನ್ಫ್ರಾಸ್ಟ್ರಕ್ಚರ್, ರಿಟೈಲ್ ಸೇರಿದಂತೆ ಎಲ್ಲಾ ವಿಭಾಗದ ಶೇರುಗಳು ವಹಿವಾಟಿನಲ್ಲಿ ಭರ್ಜರಿ ಮುನ್ನಡೆ ದಾಖಲಿಸಿದೆ.

ವಿದೇಶ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರಿಗೆ ರೂಪಾಯಿ ಕೂಡಾ 90 ಪೈಸೆ ಏರಿಕೆ ಕಂಡಿದ್ದು, 48.50ಕ್ಕೆ ತಲುಪಿದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಕಾಂಗ್ರೆಸ್ ಅಧಿಕಾರಕ್ಕೆ: ಸೂಚ್ಯಂಕ ಶೇ.10.73ರಷ್ಟು ಏರಿಕೆ
ಆರ್ಥಿಕ ಹಿಂಜರಿತ, ಬಡ್ಡಿದರ ಮತ್ತಷ್ಟು ಕುಸಿತ ಸಾಧ್ಯತೆ
ಬಜೆಟ್‌ನಲ್ಲಿ ನೌಕರಿ, ಹೂಡಿಕೆಗೆ ಆದ್ಯತೆ ನೀಡಿ: ದೇಸಾಯ್
ಮೊಂಟೆಕ್ ವಿತ್ತ ಸಚಿವರಾಗಬೇಕು: ಆರ್ಥಿಕ ತಜ್ಞರು
ಭಾರ್ತಿ ಏರ್‌ಟೆಲ್: 10ಕೋಟಿ ಗ್ರಾಹಕರು!
ಆರ್ಥಿಕ ಚೇತರಿಕೆ ಸವಾಲು: ಗೋಸ್ವಾಮಿ
ಗ್ರಹ ಗತಿ
ದೈನಿಕ - ವಿವಾದಗಳಿಗೆ ಚಾಲನೆ, ಪಿತೃ ನೆರವಿನಿಂದ ಆರ್ಥಿಕ ಸಂಕಷ್ಟ ನಿವಾರಣೆಗೊಂಡು ನೂತನ ಯೋಜನೆಗಳನ್ನು ಹಾಕಿಕೊಳ್ಳುವಿರಿ. ಕುಟುಂಬ ಮತ್ತು ಕಚೇರಿ ಎರಡನ್ನೂ ಚೆನ್ನಾಗಿಯೇ ನಿಭಾಯಿಸುತ್ತಿದ್ದೀರಿ. ಆದರೂ ಈಗ ಏನು ಬೇಕಾದರೂ ಮಾಡು ಎಂದು ಸ್ವತಂತ್ರವಾಗಿ ನಿಮ್ಮನ್ನು ಬಿಟ್ಟದ್ದು ನಿಮಗೆ ಖುಷಿಯಾಗುತ್ತದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಹಣ ಬಲದಿಂದ ಬಿಜೆಪಿಗೆ ಜಯ : ಮಲ್ಲಿಕಾರ್ಜುನ ಖರ್ಗೆ
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ...
ಕೇಂದ್ರ ಸಚಿವ ಸ್ಥಾನದ ನಿರೀಕ್ಷೆಯಲ್ಲಿ ಕೆ.ಎಚ್.ಮುನಿಯಪ್ಪ
ದಾಖಲೆ ಪ್ರಮಾಣದಲ್ಲಿ ಮರು ಮೌಲ್ಯಮಾಪನ ಅರ್ಜಿ
ಮನರಂಜನೆ
ಚಿತ್ರ ಸುದ್ದಿ - ಪ್ರತಿ ಬಾರಿ ದೆಹಲಿಯಲ್ಲಿ ನಡೆಯುವ ಹ್ಯಾಬಿಟ್ಯಾಟ್ ಚಲನಚಿತ್ರೋತ್ಸವದಲ್ಲಿ ಬಿ ಸುರೇಶ್ ಹಾಗೂ ಶೈಲಜ ನಿರ್ಮಿಸಿ, ಅಭಯಸಿಂಹ ನಿರ್ದೇಶನ ಮಾಡಿರುವ 'ಗುಬ್ಬಚ್ಚಿಗಳು' ಚಿತ್ರ ಪ್ರದರ್ಶಗೊಳ್ಳಲಿದೆ. ಚಿತ್ರ ಬೆಂಗಳೂರಿನಲ್ಲಿ
ಮುಂದೆ ಓದಿ|ಮತ್ತಷ್ಟು...