ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವ್ಯವಹಾರ ಸಮಾಚಾರ
ಕಾಂಗ್ರೆಸ್ ಅಧಿಕಾರಕ್ಕೆ: ಸೂಚ್ಯಂಕ ಶೇ.10.73ರಷ್ಟು ಏರಿಕೆ
ಮುಂಬೈ, ಸೋಮವಾರ, 18 ಮೇ 2009   ( 18:39 IST )
ಲೋಕಸಭಾ ಚುನಾವಣೆಯಲ್ಲಿ ಅಸಾಧಾರಣ ಸಾಧನೆಯಿಂದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ಮರಳಿ ಅಧಿಕಾರಕ್ಕೇರಲಿದ್ದು, ಇದರ ಹಿನ್ನಲೆಯಲ್ಲಿ ಶೇರುಪೇಟೆ ದಿನದ ಆರಂಭಿಕ ವಹಿವಾಟಿನಲ್ಲಿ ಶೇ.10.73ರಷ್ಟು ದಾಖಲೆಯ ಏರಿಕೆ ಕಂಡಿದೆ. ಹೂಡಿಕೆದಾರರು ಶೇರುಗಳ ಖರೀದಿ ಭರಾಟೆಯಲ್ಲಿ ತೊಡಗಿದ್ದರ ಹಿನ್ನಲೆಯಲ್ಲಿ ಶೇರುಪೇಟೆ ಭರ್ಜರಿ ಮುನ್ನಡೆ ಕಾಯ್ದುಕೊಂಡಿದೆ.

ಶೇರು ಸಂವೇದಿ ಸೂಚ್ಯಂಕವು 1,305 ಅಂಶಗಳ ಏರಿಕೆ ಕಂಡಿರುವ ಹಿನ್ನೆಲೆಯಲ್ಲಿ ಶೇರು ಪೇಟೆ ವ್ಯವಹಾರವನ್ನು ಎರಡೆರಡು ಬಾರಿ ಸ್ಥಗಿತಗೊಳಿಸಲಾಯಿತು.

ಬಿಎಸ್‌ಇ-30 ಶೇರು ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ ಶೇಕಡಾ 10.73 ಅಥವಾ 1305.97 ಪಾಯಿಂಟ್ ಏರಿಕೆ ಕಂಡು 13,479.39 ಅಂಕಗಳಿಗೆ ತಲುಪಿದೆ.

ಅದೇ ರೀತಿ ರಾಷ್ಟೀಯ ಶೇರುಪೇಟೆ ನಿಫ್ಟಿ ಸಹ ಆರಂಭಿಕ ವಹಿವಾಟಿನಲ್ಲಿ ಶೇಕಡಾ 14.48 ಅಥವಾ 531.65 ಪಾಯಿಂಟ್ ಏರಿಕೆ ಕಂಡು 4203.30 ಅಂಕಗಳಿಗೆ ತಲುಪಿದೆ.

ಚುನಾವಣೆ ಫಲಿತಾಂಶವು ಶೇರುಪೇಟೆಗೆ ಶುಭವಾಗಿ ಪರಿಣಮಿಸಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಬ್ಯಾಂಕಿಂಗ್ ಕ್ಷೇತ್ರದ ಶೇರುಗಳು ಸಹ ಬೃಹತ್ ಏರಿಕೆಯನ್ನು ದಾಖಲಿಸಿದೆ.

ವಿದೇಶ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರಿಗೆ ರೂಪಾಯಿ ಕೂಡಾ 90 ಪೈಸೆ ಏರಿಕೆ ಕಂಡಿದ್ದು, 48.50ಕ್ಕೆ ತಲುಪಿದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಆರ್ಥಿಕ ಹಿಂಜರಿತ, ಬಡ್ಡಿದರ ಮತ್ತಷ್ಟು ಕುಸಿತ ಸಾಧ್ಯತೆ
ಬಜೆಟ್‌ನಲ್ಲಿ ನೌಕರಿ, ಹೂಡಿಕೆಗೆ ಆದ್ಯತೆ ನೀಡಿ: ದೇಸಾಯ್
ಮೊಂಟೆಕ್ ವಿತ್ತ ಸಚಿವರಾಗಬೇಕು: ಆರ್ಥಿಕ ತಜ್ಞರು
ಭಾರ್ತಿ ಏರ್‌ಟೆಲ್: 10ಕೋಟಿ ಗ್ರಾಹಕರು!
ಆರ್ಥಿಕ ಚೇತರಿಕೆ ಸವಾಲು: ಗೋಸ್ವಾಮಿ
ಯುಪಿಎ ಭರ್ಜರಿ ಗೆಲುವಿಗೆ ಉದ್ಯಮಿಗಳ ಹರ್ಷ
ಗ್ರಹ ಗತಿ
ದೈನಿಕ - ವಿವಾದಗಳಿಗೆ ಚಾಲನೆ, ಪಿತೃ ನೆರವಿನಿಂದ ಆರ್ಥಿಕ ಸಂಕಷ್ಟ ನಿವಾರಣೆಗೊಂಡು ನೂತನ ಯೋಜನೆಗಳನ್ನು ಹಾಕಿಕೊಳ್ಳುವಿರಿ. ಕುಟುಂಬ ಮತ್ತು ಕಚೇರಿ ಎರಡನ್ನೂ ಚೆನ್ನಾಗಿಯೇ ನಿಭಾಯಿಸುತ್ತಿದ್ದೀರಿ. ಆದರೂ ಈಗ ಏನು ಬೇಕಾದರೂ ಮಾಡು ಎಂದು ಸ್ವತಂತ್ರವಾಗಿ ನಿಮ್ಮನ್ನು ಬಿಟ್ಟದ್ದು ನಿಮಗೆ ಖುಷಿಯಾಗುತ್ತದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಹಣ ಬಲದಿಂದ ಬಿಜೆಪಿಗೆ ಜಯ : ಮಲ್ಲಿಕಾರ್ಜುನ ಖರ್ಗೆ
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ...
ಕೇಂದ್ರ ಸಚಿವ ಸ್ಥಾನದ ನಿರೀಕ್ಷೆಯಲ್ಲಿ ಕೆ.ಎಚ್.ಮುನಿಯಪ್ಪ
ದಾಖಲೆ ಪ್ರಮಾಣದಲ್ಲಿ ಮರು ಮೌಲ್ಯಮಾಪನ ಅರ್ಜಿ
ಮನರಂಜನೆ
ಚಿತ್ರ ಸುದ್ದಿ - ಪ್ರತಿ ಬಾರಿ ದೆಹಲಿಯಲ್ಲಿ ನಡೆಯುವ ಹ್ಯಾಬಿಟ್ಯಾಟ್ ಚಲನಚಿತ್ರೋತ್ಸವದಲ್ಲಿ ಬಿ ಸುರೇಶ್ ಹಾಗೂ ಶೈಲಜ ನಿರ್ಮಿಸಿ, ಅಭಯಸಿಂಹ ನಿರ್ದೇಶನ ಮಾಡಿರುವ 'ಗುಬ್ಬಚ್ಚಿಗಳು' ಚಿತ್ರ ಪ್ರದರ್ಶಗೊಳ್ಳಲಿದೆ. ಚಿತ್ರ ಬೆಂಗಳೂರಿನಲ್ಲಿ
ಮುಂದೆ ಓದಿ|ಮತ್ತಷ್ಟು...