|
| ಮಾರುತಿ ಕಾರು ಮಾರಾಟದಲ್ಲಿ ಇಳಿಕೆ |
| ನವದೆಹಲಿ, ಸೋಮವಾರ, 1 ಡಿಸೆಂಬರ್ 2008 ( 16:15 IST ) | |
ದೇಶದ ಪ್ರಮುಖ ಕಾರು ತಯಾರಿಕೆ ಕಂಪೆನಿಯಾದ ಮಾರುತಿ ಸುಝುಕಿ ,ಕಳೆದ ವರ್ಷದ ನವೆಂಬರ್ ತಿಂಗಳಿಗೆ ಹೋಲಿಸಿದಲ್ಲಿ ಪ್ರಸಕ್ತ ಸಾಲಿನ ನವೆಂಬರ್ ತಿಂಗಳ ವಹಿವಾಟಿನಲ್ಲಿ ಶೇ.27.4 ರಷ್ಟು ಇಳಿಕೆಯಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಕಳೆದ ವರ್ಷದ ನವೆಂಬರ್ ತಿಂಗಳಿನಲ್ಲಿ 69,699 ಕಾರುಗಳನ್ನು ಮಾರಾಟ ಮಾಡಲಾಗಿತ್ತು. ಪ್ರಸಕ್ತ ವರ್ಷದ ನವೆಂಬರ್ ತಿಂಗಳಲ್ಲಿ 52,711 ಕಾರುಗಳನ್ನು ಮಾರಾಟ ಮಾಡಲಾಗಿದ್ದು ಶೇ.27.4 ರಷ್ಟು ಮಾರಾಟದಲ್ಲಿ ಇಳಿಕೆಯಾಗಿದೆ ಎಂದು ಕಂಪೆನಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ಅಲ್ಟೋ, ಝೆನ್, ಎಸ್ಟಿಲೊ, ವಾಗನ್ ಆರ್,ಸ್ವಿಫ್ಟ್ ಮತ್ತು ಎ-ಸ್ಟಾರ್ ಕಾರುಗಳ ಮಾರಾಟದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಶೇ.26.6 ರಷ್ಟು ಇಳಿಕೆಯಾಗಿದೆ.ಕಳೆದ ವರ್ಷ 47,641 ಕಾರುಗಳನ್ನು ಮಾರಾಟ ಮಾಡಲಾಗಿದ್ದು, ಪ್ರಸಕ್ತ ಸಾಲಿನಲ್ಲಿ 34,976 ಕಾರುಗಳನ್ನು ಮಾತ್ರ ಮಾರಾಟ ಮಾಡಲಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಸೆಡಾನ್ ಎಸ್‌ಎಕ್ಸ್ ಮತ್ತು ಡಿಝೈರ್ ಕಾರುಗಳ ಮಾರಾಟದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಶೇ.40 ರಷ್ಟು ಏರಿಕೆಯಾಗಿದೆ.ಕಳೆದ ವರ್ಷದ ನವೆಂಬರ್ ತಿಂಗಳಿನಲ್ಲಿ 4,260 ಕಾರುಗಳನ್ನು ಮಾರಾಟ ಮಾಡಲಾಗಿದ್ದು, ಪ್ರಸಕ್ತ ಸಾಲಿನ ನವೆಂಬರ್ ತಿಂಗಳಿನಲ್ಲಿ 5,975 ಕಾರುಗಳನ್ನು ಮಾರಾಟ ಮಾಡಲಾಗಿದೆ ಎಂದು ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ. |
| |
|
|
|
|
 | | nrb |
| | |
| |
|
|
|
|
|
| ಹೊಸ ಚಿತ್ರ - ಜನುಮನದ ಗೆಳತಿ ಚಿತ್ರ ಹೆಸರಿಗೆ ತಕ್ಕಂತೆ ಇರುವ ಚಿತ್ರ. ಇದರಲ್ಲಿ ನನ್ನ ಪಾತ್ರ ಖಂಡಿತಾ ನಿಮಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ಪತ್ರಕರ್ತರಾರೂ ನನ್ನನ್ನು ಬಯ್ಯುವುದಿಲ್ಲ ಎಂದು ನಕ್ಕರು ಶ್ರೀನಗರ |
| |
|
|
|
|
|
|
|