ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವ್ಯವಹಾರ ಸಮಾಚಾರ
ಬಿಗ್‌ಬಜಾರ್‌ನಿಂದ 15 ಮಳಿಗೆ ಆರಂಭ
ಮುಂಬಯಿ, ಶುಕ್ರವಾರ, 5 ಸೆಪ್ಟೆಂಬರ್ 2008   ( 18:50 IST )
ದೇಶದ ಪ್ರಮುಖ ರಖಂ ಮಾರಾಟ ಸಂಸ್ಥೆ ಬಿಗ್ ಬಜಾರ್, ನವೆಂಬರ್ ಅಂತ್ಯದೊಳಗೆ ದೇಶದ ವಿವಿಧೆಡೆ ಸುಮಾರು 1,500-1,600 ಕೋಟಿ ರೂಪಾಯಿ ಬಂಡವಾಳದಲ್ಲಿ 15 ನೂತನ ಮಳಿಗೆಗಳನ್ನು ಪ್ರಾರಂಭಿಸುವುದಾಗಿ ತಿಳಿಸಿದೆ.

ಇದರಿಂದಾಗಿ, ಬಿಗ್‌ಬಜಾರ್ ಮಳಿಗೆಗಳ ಸಂಖ್ಯೆಯು ಒಟ್ಟು 112ಕ್ಕೆ ಏರಲಿದೆ. ಜೂನ್ 2009ರೊಳಗೆ ದೇಶದಲ್ಲಿ ಒಟ್ಟು 145 ಮಳಿಗೆಗಳನ್ನು ಹೊಂದುವ ಗುರಿಯನ್ನು ಬಿಗ್‌ಬಜಾರ್ ಹೊಂದಿರುವುದಾಗಿ ಕಂಪನಿ ಅಧಿಕಾರಿಗಳು ತಿಳಿಸಿದ್ದಾರೆ.

ಮೈಸೂರು, ಕತಕ್, ಪೂನಾ, ಚಂಡೀಗಢ, ಆಗ್ರಾ, ಫರಿದಾಬಾದ್, ಸೂರತ್, ನಾಸಿಕ್, ಮುಂಬಯಿ, ದೆಹಲಿ ಮತ್ತು ಶೋಲಾಪುರ್‌ಗಳಲ್ಲಿ ನೂತನ ಮಳಿಗೆಗಳನ್ನು ಬಿಗ್‌ಬಜಾರ್ ಪ್ರಾರಂಭಿಸಲಿದ್ದು, ಇದರಲ್ಲಿ ಕೆಲವು ಪ್ರದೇಶಗಳಲ್ಲಿ ಇದು ಎರಡನೇ ಮಳಿಗೆಯಾಗಿದೆ ಎಂದು ಬಿಗ್‌ಬಜಾರ್‌ನ ಸಿಇಒ ರಾಜನ್ ಮಲ್ಹೋತ್ರಾ ತಿಳಿಸಿದ್ದಾರೆ.

ಮೈಸೂರು, ಕಟಕ್, ಕೋಲ್ಕತ್ತಾ, ಪೂನಾ, ಆಗ್ರಾ, ಫರಿದಾಬಾದ್, ಸೋಲಾಪುರ್ ಬಿಗ್‌ಬಜಾರ್‌ನ ನೂತನ ಮಾರುಕಟ್ಟೆ ಪ್ರದೇಶಗಳಾಗಿದ್ದು, ಉತ್ತಮ ಫಲಿತಾಂಶ ತರುವ ಭರವಸೆಯನ್ನು ಕಂಪನಿಯು ಹೊಂದಿದೆ ಎಂದು ಮಲ್ಹೋತ್ರಾ ಹೇಳಿದ್ದಾರೆ.

ಪ್ರಸಕ್ತ ದೇಶದಲ್ಲಿ ಬಿಗ್‌ಬಜಾರ್ 97 ಮಳಿಗೆಗಳನ್ನು ಹೊಂದಿದ್ದು, ನವೆಂಬರ್ ಅಂತ್ಯದೊಳಗೆ 15 ಮಳಿಗೆಗಳನ್ನು ಸ್ಥಾಪಿಸುವ ಮೂಲಕ ಈ ಸಂಖ್ಯೆಯನ್ನು ಬಿಗ್‌ಬಜಾರ್ ಇನ್ನಷ್ಟು ಹೆಚ್ಚಿಸಲಿದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಏಷ್ಯಾದ ಮೊಬೈಲ್ ಮಾರುಕಟ್ಟೆಯಲ್ಲಿ ಗಣನೀಯ ಅಭಿವೃದ್ಧಿ
ಟೊಯೋಟಾದ 'ಕೊರೋಲಾ ಆಲ್ಟಿಸ್' ಮಾರುಕಟ್ಟೆಗೆ
ನಿಗದಿಯಂತೆ ನ್ಯಾನೋ ಮಾರುಕಟ್ಟೆಗೆ: ರತನ್ ಟಾಟಾ
ಭಾರತೀಯ ಚರ್ಮೋದ್ಯಮದಲ್ಲಿ ಬೆಳವಣಿಗೆ
ಟೈರ್ ಉದ್ಯಮಕ್ಕೆ ಹೊಡೆತ ನೀಡುತ್ತಿರುವ ಆಮದು
ಕುಂಠಿತಗೊಂಡ ಪಾಕ್ ಆರ್ಥಿಕ ಬೆಳವಣಿಗೆ
ಗ್ರಹ ಗತಿ
ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
file
 
ಸೋನಿಯಾ ಇದ್ದ ವಿಮಾನ ತುರ್ತು ಭೂಸ್ಪರ್ಶ
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಕಂಡು ಬಂದ ತಾಂತ್ರಿಕ ...
ಸರ್ಕಾರಕ್ಕೀಗ ನೂರರ ಸಂಭ್ರಮ
ಸಿಎಂ ವಾಪಸ್: ಇಂದು ಸಚಿವ ಸಂಪುಟ ಸಭೆ
ಮನರಂಜನೆ
ಚಿತ್ರ ಸುದ್ದಿ - ಹಿಂದಿಯ ಫೂಂಕ್ ಚಿತ್ರದಲ್ಲಿ ಅಳವಡಿಸಲಾಗಿರುವ ಅದ್ಬುತ ಸೌಂಡ್ ಎಫೆಕ್ಟ್ ಸಿಸ್ಟಮ್ ಅನ್ನು ಇದೀಗ ಕನ್ನಡದಲ್ಲೂ ಬಳಸಿಕೊಳ್ಳಲು ನಿರ್ದೇಶಕ ಪದ್ಮನಾಭ ನಿರ್ಧರಿಸಿದ್ದಾರೆ. ತಮ್ಮ ಮುಂದಿನ ಚಿತ್ರ 'ನಿಷೇಧಾಜ್ಞೆ'ಗೆ ಇದೀಗ ಶಬ್ದಗ್ರಹಣ ಕಾರ್ಯ ನೆರವೇರಿಸುತ್ತಿದ್ದಾರೆ.
ಮುಂದೆ ಓದಿ|ಮತ್ತಷ್ಟು...