ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವ್ಯವಹಾರ ಸಮಾಚಾರ
ಏಷ್ಯಾದ ಮೊಬೈಲ್ ಮಾರುಕಟ್ಟೆಯಲ್ಲಿ ಗಣನೀಯ ಅಭಿವೃದ್ಧಿ
ಶುಕ್ರವಾರ, 5 ಸೆಪ್ಟೆಂಬರ್ 2008   ( 17:23 IST )
ಭಾರತ ಮತ್ತು ಚೀನಾದಲ್ಲಿನ ಅತಿ ಹೆಚ್ಚು ಬೇಡಿಕೆಯ ಪರಿಣಾಮವಾಗಿ, ಏಷ್ಯಾದ ಮೊಬೈಲ್ ಫೋನ್ ಮಾರುಕಟ್ಟೆಯಲ್ಲಿ ಗಣನೀಯ ಅಭಿವೃದ್ಧಿ ಸಾಧಿಸಿದೆ ಎಂದು ಉದ್ಯಮ ಅಧಿಕಾರಿಗಳು ತಿಳಿಸಿದ್ದಾರೆ.

ಭಾರತ ಮತ್ತು ಚೀನಾ ಒಟ್ಟಾಗಿ ಸುಮಾರು 900 ಶತಕೋಟಿ ಸೆಲ್‌ಫೋನ್ ಚಂದಾದಾರರನ್ನು ಹೊಂದಿದ್ದು, ಇದು ವಿಶ್ವದ ಒಟ್ಟು ಚಂದಾದಾರರ ಸಂಖ್ಯೆಯ ನಾಲ್ಕನೆಯ ಒಂದು ಭಾಗದಷ್ಟಿದೆ.

ಸಂಖ್ಯೆಯ ಆಧಾರದಲ್ಲಿ ಏಷ್ಯಾವು ಜಗತ್ತಿನ ಅತಿ ದೊಡ್ಡ ಬ್ರಾಡ್‌ಬ್ಯಾಂಡ್ ಮಾರುಕಟ್ಟೆಯೆಂದು ಪರಿಗಣಿಸಲ್ಪಟ್ಟರೂ, ಉನ್ನತ ವೇಗದ ಇಂಟರ್ನೆಟ್ ಬಳಕೆ ಮುಂತಾದ ಅಂಶಗಳನ್ನು ಗಮನಿಸಿದರೆ, ಏಶ್ಯಾ ಅಮೆರಿಕದಿಂದ ಹಿಂದಿದೆ ಎಂದು ಅಂತಾರಾಷ್ಟ್ರೀಯ ಟೆಲಿಕಮ್ಯುನಿಕೇಶನ್ ಒಕ್ಕೂಟ(ಐಟಿಯು) ವರದಿಗಳು ತಿಳಿಸಿವೆ.

ಏಶ್ಯಾ ಪೆಸಿಫಿಕ್ ಪ್ರದೇಶವು ಸುಮಾರು 1.4 ಶತಕೋಟಿ ಮೊಬೈಲ್ ಫೋನ್ ಚಂದಾದಾರರನ್ನು ಹೊಂದಿದ್ದು, ಇದು ಜಾಗತಿಕ ಮಾರುಕಟ್ಟೆಯ ಶೇ.42ರಷ್ಟಾಗಿದೆ. ಮತ್ತು ಮುಂದಿನ ಎರಡು ವರ್ಷಗಳಲ್ಲಿ ಇದು ಶೇ.50ಕ್ಕೆ ಏರುವ ನಿರೀಕ್ಷೆಯಿದೆ ಎಂದು ಐಟಿಯುನ ಪ್ರಧಾನ ಕಾರ್ಯದರ್ಶಿ ಸಮಾವೇಶದಲ್ಲಿ ತಿಳಿಸಿದ್ದಾರೆ.

ಪ್ರತಿ ತಿಂಗಳು ಭಾರತದಲ್ಲಿ ಒಂಭತ್ತು ದಶಲಕ್ಷ ನೂತನ ಚಂದಾದಾರರ ಸೇರ್ಪಡೆಯಾಗುತ್ತಿದೆ. ಆದರೆ, ವಿಶ್ವದಲ್ಲೇ ಕ್ಷಿಪ್ರಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಇಂಟರ್ನೆಟ್ ಮೊಬೈಲ್ ಸಂಪರ್ಕ ಹೊಂದಿರುವ ಚಂದಾದಾರರ ಸಂಖ್ಯೆಯು ಕೇವಲ 11 ದಶಲಕ್ಷದಷ್ಟಾಗಿದೆ ಎಂದು ಈ ಸಮಾವೇಶದ ವರದಿಗಳು ತಿಳಿಸಿವೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಟೊಯೋಟಾದ 'ಕೊರೋಲಾ ಆಲ್ಟಿಸ್' ಮಾರುಕಟ್ಟೆಗೆ
ನಿಗದಿಯಂತೆ ನ್ಯಾನೋ ಮಾರುಕಟ್ಟೆಗೆ: ರತನ್ ಟಾಟಾ
ಭಾರತೀಯ ಚರ್ಮೋದ್ಯಮದಲ್ಲಿ ಬೆಳವಣಿಗೆ
ಟೈರ್ ಉದ್ಯಮಕ್ಕೆ ಹೊಡೆತ ನೀಡುತ್ತಿರುವ ಆಮದು
ಕುಂಠಿತಗೊಂಡ ಪಾಕ್ ಆರ್ಥಿಕ ಬೆಳವಣಿಗೆ
ಫೋರ್ಬ್ಸ್ ಏಷ್ಯಾದ 50ರಲ್ಲಿ ಭಾರತಿ ಮತ್ತು ಆರ್ಐಎಲ್
ಗ್ರಹ ಗತಿ
ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
file
 
ಸೋನಿಯಾ ಇದ್ದ ವಿಮಾನ ತುರ್ತು ಭೂಸ್ಪರ್ಶ
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಕಂಡು ಬಂದ ತಾಂತ್ರಿಕ ...
ಸರ್ಕಾರಕ್ಕೀಗ ನೂರರ ಸಂಭ್ರಮ
ಸಿಎಂ ವಾಪಸ್: ಇಂದು ಸಚಿವ ಸಂಪುಟ ಸಭೆ
ಮನರಂಜನೆ
ಚಿತ್ರ ಸುದ್ದಿ - ಹಿಂದಿಯ ಫೂಂಕ್ ಚಿತ್ರದಲ್ಲಿ ಅಳವಡಿಸಲಾಗಿರುವ ಅದ್ಬುತ ಸೌಂಡ್ ಎಫೆಕ್ಟ್ ಸಿಸ್ಟಮ್ ಅನ್ನು ಇದೀಗ ಕನ್ನಡದಲ್ಲೂ ಬಳಸಿಕೊಳ್ಳಲು ನಿರ್ದೇಶಕ ಪದ್ಮನಾಭ ನಿರ್ಧರಿಸಿದ್ದಾರೆ. ತಮ್ಮ ಮುಂದಿನ ಚಿತ್ರ 'ನಿಷೇಧಾಜ್ಞೆ'ಗೆ ಇದೀಗ ಶಬ್ದಗ್ರಹಣ ಕಾರ್ಯ ನೆರವೇರಿಸುತ್ತಿದ್ದಾರೆ.
ಮುಂದೆ ಓದಿ|ಮತ್ತಷ್ಟು...