|
| 128 ಡಾಲರ್‌ಗಿಂತಲೂ ಕೆಳಕ್ಕಿಳಿದ ತೈಲ ಬೆಲೆ |
| ಸಿಂಗಪುರ, ಬುಧವಾರ, 23 ಜುಲೈ 2008 ( 12:48 IST ) | |
ಕಚ್ಚಾತೈಲದ ಬೆಲೆಯಲ್ಲಿ ಬುಧವಾರ ಮತ್ತಷ್ಟು ಕೆಳಕ್ಕಿಳಿದಿದ್ದು, ಅದು ಒಂದು ಬ್ಯಾರೆಲ್‌ಗೆ 3 ಡಾಲರ್‌ಗಿಂತಲೂ ಕೆಳಕ್ಕಿಳಿದಿದೆ. ಅಮೆರಿಕದ ಗಲ್ಫ್ ಆಫ್ ಆಫ್ ಮೆಕ್ಸಿಕೋದಲ್ಲಿ ಸಂಭವಿಸಲಿದ್ದ ಚಂಡಮಾರುತದ ಶಕ್ತಿ ಕಡಿಮೆಯಾಗಿದೆ.
ಏಷ್ಯಾದ ವರ್ತಕರು ದಿನದ ಅಂತ್ಯಕ್ಕೆ ಬಿಡುಗಡೆಗೊಳ್ಳಲಿರುವ ಅಮೆರಿಕ ತೈಲ ಪೂರೈಕೆ ಮಾಹಿತಿಯನ್ನು ನಿರೀಕ್ಷಿಸುತ್ತಿದ್ದು, ಅತಿ ಹೆಚ್ಚಿನ ಇಂಧನ ಬಳಕೆಯ ರಾಷ್ಟ್ರದಲ್ಲಿ ಇಂಧನದ ಬೇಡಿಕೆಯು ಕಡಿಮೆಯಾಗಿದೆ ಎನ್ನಲಾಗಿದೆ.
ಆಗಸ್ಟ್ ತಿಂಗಳಿನ ತೈಲ ಪೂರೈಕೆಗಾಗಿ ನಡೆಸಲಾದ ವಹಿವಾಟಿನಲ್ಲಿ ಒಂದು ಬ್ಯಾರೆಲ್ ತೈಲದ ಬೆಲೆಯಲ್ಲಿ 3.09ಡಾಲರ್‌ನಷ್ಟು ಕಡಿಮೆಯಾಗಿ ಅದು 127.95 ಡಾಲರ್‌ಗೆ ಕೊನೆಗೊಂಡಿತು. ಜೂನ್ ಆರಂಭದಲ್ಲಿದ್ದ ಬೆಲೆ ಏರಿಕೆಯಲ್ಲಿ ಸಾಕಷ್ಟು ಇಳಿಕೆಯು ಈಗ ಕಂಡು ಬಂದಿದೆ.
ಕಳೆದ ಆರು ದಿನಗಳ ವಹಿವಾಟಿನಲ್ಲಿ ಐದು ದಿನ ಬೆಲೆಗಳು ಇಳಿಕೆಗೊಂಡಿವೆ. ಚಂಡಮಾರುತವು ಅಮೆರಿಕ-ಮೆಕ್ಸಿಕೋ ದಡದ ಮೂಲಕ ಸಾಗಿದ್ದು, ಅದರ ಬಲ ಕ್ಷೀಣಗೊಂಡಿದೆ ಮತ್ತು ಡಾಲರ್ ಮೌಲ್ಯದಲ್ಲಿ ವೃದ್ಧಿಯಾಗುತ್ತಿರುವುದು ಸಹ ವಹಿವಾಟುದಾರರು ಸ್ವಲ್ಪ ಎಚ್ಚರಿಕೆಯಿಂದ ಇರುವಂತೆ ಮಾಡಿದೆ.
ಬೆಲೆ ಬೆಂಬಲಿತವಾದಂತಹ ಯಾವುದೇ ಸುದ್ಧಿಯೂ ಮಾರುಕಟ್ಟೆಯಲ್ಲಿ ಪ್ರಚಲಿತದಲ್ಲಿಲ್ಲ. ಡಾಲಿ ಹೆಸರಿನ ಚಂಡಮಾರುತದ ಪ್ರತಾಪವೂ ಕಡಿಮೆಯಾಗಿದೆ ಎಂದು ತಿಳಿಸಿದ ಎಎನ್‌ಜಡ್ ಬ್ಯಾಂಕ್‌ನ ಮಾರ್ಕ್ ಪೆರ್ವೆನ್, ಮಾರುಕಟ್ಟೆ ಮೂಲತಃ ಬಲಿಷ್ಟವಾಗಿಯೇ ಇದೆ. ಆದರೆ ಹೆಚ್ಚಳಗೊಂಡಿದ್ದ ಬೆಲೆಗಳು ಇಳಿದಿವೆ ಅಷ್ಟೇ ಎಂದು ತಿಳಿಸಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಹಣಕಾಸಿನ ವೆಚ್ಚ ಮತ್ತು ಸಾಲ ಸಂಬಂಧಿತ ಸಮಸ್ಯೆಗಳಿಗೆ ಕುಟುಂಬದ ಸದಸ್ಯರ ಸಲಹೆ ಅಗತ್ಯ. ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು |
| |
|
|
|
|
|
|
|