ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವ್ಯವಹಾರ ಸಮಾಚಾರ
ಸಮತೋಲನದ ದೋಹಾ ಒಪ್ಪಂದಕ್ಕೆ ಭಾರತ, ಇಯು ಒತ್ತು
ನವದೆಹಲಿ, ಬುಧವಾರ, 9 ಜುಲೈ 2008   ( 10:53 IST )
ಈ ತಿಂಗಳ ಅಂತ್ಯದಲ್ಲಿ ಆಯ್ದ ಎಡ್ಲ್ಯುಟಿಒ ಸದಸ್ಯ ರಾಷ್ಟ್ರಗಳ ವಾಣಿಜ್ಯ ಸಚಿವರುಗಳ ಸಭೆಯ ಹಿನ್ನೆಲೆಯಲ್ಲಿ ಭಾರತ ಮತ್ತು ಯುರೋಪ್ ಒಕ್ಕೂಟ, ಕೃಷಿ, ಕೈಗಾರಿಕೆ ಸರಕು ಜತೆಗೂಡಿ ಸೇವೆಗಳ ಕುರಿತು ಮಾತುಕತೆ ನಡೆಸುವ ಮತ್ತು ದೋಹಾ ಸುತ್ತಿನಡಿ ಸಮತೋಲನದ ಮಾರುಕಟ್ಟೆ ಮುಕ್ತ ಒಪ್ಪಂದಕ್ಕಾಗಿ ಮುನ್ನುಗ್ಗುವ ಶಪಥ ಮಾಡಿವೆ.

ದೋಹಾ ಸುತ್ತಿನ ಯಶಸ್ವೀ ಫಲಿತಾಂಶ, ಕೃಷಿ, ಕೈಗಾರಿಕೆ ಸರಕು ಮತ್ತು ಸೇವೆಗಳಲ್ಲಿನ ಮಾರುಕಟ್ಟೆ ಪ್ರವೇಶದ ಪೂರ್ಣ ವ್ಯಾಪ್ತಿಯ ಸಮತೋಲನ ವ್ಯಾಪಾರ ಬೆಳವಣಿಗೆ ಮತ್ತು ಜಾಗತಿಕ ಆರ್ಥಿಕತೆಯನ್ನು ಉತ್ತೇಜಿಸಲು ಅವಶ್ಯಕವಾಗಿದೆ ಎಂದು ಭಾರತ ಮತ್ತು ಯುರೋಪ್ ಒಕ್ಕೂಟದ ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.

ದೋಹಾ ಮಾತುಕತೆಯಲ್ಲಿನ ಪ್ರಸಕ್ತ ಸ್ಥಿತಿಗತಿಗಳನ್ನು ಚರ್ಚಿಸಲು ನಿನ್ನೆ ಸಂಜೆ ಲಂಡನಿನಲ್ಲಿ ಭಾರತದ ಕೈಗಾರಿಕಾ ಮತ್ತು ವಾಣಿಜ್ಯ ಸಚಿವ ಕಮಲ್ ನಾಥ್ ಮತ್ತು ಯುರೋಪ್ ಒಕ್ಕೂಟದ ವ್ಯಾಪಾರ ಆಯುಕ್ತ ಪೀಟರ್ ಮೆಡೆಲ್ಸನ್ ಭೇಟಿಯಾದ ಬಳಿಕ, ಈ ಹೇಳಿಕೆಯನ್ನು ಹೊರಡಿಸಲಾಗಿದೆ.

ಸೇವೆಗಳ ಕುರಿತಾಗಿನ ಸಚಿವರ ಒಡಂಬಡಿಕೆ ಗಣನೀಯವಾಗಿರವುದನ್ನು ಮತ್ತು ಸದೃಢ ಭವಿಷ್ಯತ್ ಪ್ರಸ್ತಾಪಗಳತ್ತ ಮುನ್ನಡೆಸಲು ತಾವು ದೃಢನಿಶ್ಚಯಿಗಳಾಗಿದ್ದೇವೆ. ಪ್ರಾದೇಶಿಕ ಭೂ ಗೋಳ ಸಂಕೇತಗಳು ಮತ್ತು ಜೈವಿಕ ವ್ಯವಿಧ್ಯತೆಗೆ ಸಂಬಂಧಿಸಿದ ಅಂಶಗಳನ್ನು ಮುಂದೆ ಕೊಂಡೊಯ್ಯಲು ತಾವು ಬದ್ಧರಾಗುಳಿಯಲಿದ್ದೇವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ದೋಹಾ ಸುತ್ತನ್ನು ಸಮಾಪ್ತಿಗೊಳಿಸುವ ಕೊನೆಯ ಪ್ರಯತ್ನ ಎಂದು ಕಾಣಲಾಗುತ್ತಿರುವ ಡಬ್ಲ್ಯುಟಿಒ ಸಚಿವರುಗಳ ಸಭೆಗಾಗಿ ಜುಲೈ 21 ರಂದು 30 ರಾಷ್ಟ್ರಗಳ ವ್ಯಾಪಾರ ಸಚಿವರುಗಳು ಜಿನೇವಾದಲ್ಲಿ ಒಂದುಗೂಡಲಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಶ್ರೀಮಂತ ರಾಷ್ಟ್ರಗಳ ವಿರುದ್ಧ ಜಿ-5 ರಾಷ್ಟ್ರ ತರಾಟೆ
ಅನಿರೀಕ್ಷಿತ ತೆರಿಗೆ ಹೇರುವ ಅಧಿಕಾರ ತಮಗಿಲ್ಲ: ದೇವೊರಾ
ರಿಟೈಲ್ ಗ್ರಾಹಕರಿಗೆ ವಿದ್ಯುತ್: ಟಾಟಾಗೆ ಸು.ಕೋ. ಅಸ್ತು
ರೈಲ್ವೇ ವ್ಯಾಪಾರಾದೇಶ ಎಲ್ಆಂಡ್‌ಟಿ ತೆಕ್ಕೆಗೆ
ಆರಂಭಿಕ ಕುಸಿತ ಕಂಡ ಸೆನ್ಸೆಕ್ಸ್
ಜಂಟಿ ಶೋಧನಾ ಒಪ್ಪಂದ: ಪೆರು, ರಿಲಯನ್ಸ್ ಸಂಸ್ಥೆ ಒಪ್ಪಿಗೆ
ಗ್ರಹ ಗತಿ
ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಗಣಿಗಾರಿಗೆ ರಾಷ್ಟ್ರೀಕರಣವಾಗಲಿ: ಯಡಿಯ‌ೂರಪ್ಪ
ಗಣಿಗಾರಿಕೆ ರಾಷ್ಟ್ರೀಕರಣ ನಿರ್ಧಾರವನ್ನು ಆದಷ್ಟು ಬೇಗ ತೆಗೆದುಕೊಳ್ಳಬೇಕೆಂದು ಮುಖ್ಯಮಂತ್ರಿ ಯಡಿಯ‌ೂರಪ್ಪ ...
ಪೈರಸಿ ತಡೆಗೆ ಕಠಿಣ ಕ್ರಮಕ್ಕೆ ಮನವಿ
ಬಿಜೆಪಿಯಿಂದ ಪ್ರಜಾಪ್ರಭುತ್ವಕ್ಕೆ ದ್ರೋಹ: ಸಿಂಧ್ಯಾ
ಮನರಂಜನೆ
ಚಿತ್ರ ಸುದ್ದಿ - 'ಚಂಡ'ನ ರಾಣಿಯಾಗಿ ಮೆರೆದ ಕರಾವಳಿಯ ಬೆಡಗಿ ಶುಭಾ ಪೂಂಜಾಗೆ ನಂತರ 'ಮೊಗ್ಗಿನ ಮನಸ್ಸು' ಚಿತ್ರದಲ್ಲಿ ಅವಕಾಶ ಸಿಕ್ಕಿತ್ತು. ಚೆಲ್ಲು ಚೆಲ್ಲು ನಗುವಿನ ಈ ಬೆಡಗಿ ಎಲ್ಲವನ್ನು ಮುಕ್ತವಾಗಿ, ನಿರ್ಭಯವಾಗಿ ಹೇಳುವ ಜಾಯಮಾನದವಳು.
ಮುಂದೆ ಓದಿ|ಮತ್ತಷ್ಟು...