|
| ಅನಿರೀಕ್ಷಿತ ತೆರಿಗೆ ಹೇರುವ ಅಧಿಕಾರ ತಮಗಿಲ್ಲ: ದೇವೊರಾ |
| ನವದೆಹಲಿ, ಮಂಗಳವಾರ, 8 ಜುಲೈ 2008 ( 17:28 IST ) | |
ಖಾಸಗಿ ತೈಲ ಸಂಸ್ಕರಣಾ ಸಂಸ್ಥೆಗಳ ಮೇಲೆ ಅನಿರೀಕ್ಷಿತ ತೆರಿಗೆ ಹೇರುವ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಘಟಕಗಳ ರಪ್ತು ಆಧಾರಿತ ಸ್ಥಾನಮಾನವನ್ನು ಪುನಪರಿಶೀಲಿಸುವಾಗಿನ ಬೇಡಿಕೆಗಳಿಂದ ಜಾರಿಕೊಂಡಿರುವ ಪೆಟ್ರೋಲಿಯಂ ಸಚಿವ ಮುರ್ಳಿ ದೇವೊರಾ, ಈ ವಿಷಯಗಳು ತಮ್ಮ ಪರಿಮಿತಿಗೆ ಬರುವುದಿಲ್ಲ ಎಂದು ತಿಳಿಸಿದ್ದಾರೆ.
ತೈಲ ಸಂಸ್ಕರಣಾ ಘಟಗಳಿಗಾಗಿನ ರಪ್ತು ಆಧಾರಿತ ಸ್ಥಾನಮಾನವನ್ನು ತೆರವುಗೊಳಿಸುವ ಮತ್ತು ಅನಿರೀಕ್ಷಿತ ತೆರಿಗೆ ವಿಧಿಸುವ ಅಧಿಕಾರ ತನ್ನ ಸಚಿವಾಲಯದ ವ್ಯಾಪ್ತಿಯಲ್ಲಿಲ್ಲದಿರುವುದರಿಂದ, ಈ ವಿಷಯದ ಬಗ್ಗೆ ತಾನು ಪ್ರತಿಕ್ರಿಯೆ ನೀಡುವುದು ಸೂಕ್ತವಲ್ಲ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಮೊದಲಿಗೆ ಎಡಪಕ್ಷಗಳು ನಂತರ ಸಮಾಜವಾದಿ ಪಕ್ಷ ಬೇಡಿಕೆ ಸಲ್ಲಿಸಿತ್ತು. ತೈಲ ಮತ್ತು ಅನಿಲ ಕ್ಷೇತ್ರದ ಅಭಿವೃದ್ಧಿಗಾಗಿನ ಯಾವುದೇ ಸಲಹೆಯನ್ನು ಚರ್ಚಿಸಲು ತಾವು ಮುಕ್ತರಾಗಿದ್ದೇವೆ ಎಂದು ಸಚಿವರು ತಿಳಿಸಿದರು.
ಈ ಎರಡೂ ವಿಷಯಗಳು ತಮ್ಮ ಪರಿಮಿತಿಯಲ್ಲಿಲ್ಲ. ತೆರಿಗೆ ಹೇರಿಕೆ ಅಥವಾ ತೆರವುಗೊಳಿಸುವ ಯಾವ ಅಧಿಕಾರವೂ ತಮ್ಮಲ್ಲಿಲ್ಲ ಹಾಗೂ ಒಂದು ಘಟಕದ ರಪ್ತು ಆಧಾರಿತ ಸ್ಥಾನಮಾನವನ್ನು ವಿಸ್ತರಿಸುವ ಅಥವಾ ಪುನಪರಿಶೀಲಿಸುವ ಅಧಿಕಾರವನ್ನು ತಾವು ಹೊಂದಿಲ್ಲ ಎಂದು ಸ್ಪಷ್ಟಪಡಿಸಿದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - 'ಚಂಡ'ನ ರಾಣಿಯಾಗಿ ಮೆರೆದ ಕರಾವಳಿಯ ಬೆಡಗಿ ಶುಭಾ ಪೂಂಜಾಗೆ ನಂತರ 'ಮೊಗ್ಗಿನ ಮನಸ್ಸು' ಚಿತ್ರದಲ್ಲಿ ಅವಕಾಶ ಸಿಕ್ಕಿತ್ತು. ಚೆಲ್ಲು ಚೆಲ್ಲು ನಗುವಿನ ಈ ಬೆಡಗಿ ಎಲ್ಲವನ್ನು ಮುಕ್ತವಾಗಿ, ನಿರ್ಭಯವಾಗಿ ಹೇಳುವ ಜಾಯಮಾನದವಳು. |
| |
|
|
|
|
|
|
|