ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವ್ಯವಹಾರ ಸಮಾಚಾರ
ರೈಲ್ವೇ ವ್ಯಾಪಾರಾದೇಶ ಎಲ್ಆಂಡ್‌ಟಿ ತೆಕ್ಕೆಗೆ
ಮುಂಬೈ, ಮಂಗಳವಾರ, 8 ಜುಲೈ 2008   ( 12:50 IST )
ಬಿಹಾರದಲ್ಲಿ ಉಕ್ಕಿನ ಗಾಲಿ ಉತ್ಪಾದನಾ ಸ್ಥಾವರವನ್ನು ನಿರ್ಮಿಸಲು ಇಂಜಿನಿಯರಿಂಗ್ ಮತ್ತು ನಿರ್ಮಾಣ ಸಂಸ್ಥೆ ಲಾರ್ಸೆನ್ ಆಂಡ್ ಟಾಬ್ರೋ ಭಾರತೀಯ ರೈಲ್ವೇಯಿಂದ 1,047.60 ಕೋಟಿ ರೂಪಾಯಿ ಮೌಲ್ಯದ ವ್ಯಾಪಾರಾದೇಶವನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ.

ಬಿಹಾರದ ಸರನ್‌ನಲ್ಲಿ ಅಚ್ಚು ಉಕ್ಕು ಉತ್ಪಾದನಾ ಸ್ಥಾವರವನ್ನು ಕಂಪೆನಿ ನಿರ್ಮಿಸಲಿದೆ ಎಂದು ಎಲ್ ಆಂಡ್ ಟಿ ಮುಂಬೈ ಶೇರು ಮಾರುಕಟ್ಟೆಗೆ ಸಲ್ಲಿಸಿದ ಹೇಳಿಕೆಯಲ್ಲಿ ತಿಳಿಸಿದೆ. ಸ್ಥಾವರ ಕಾರ್ಯರೂಪಕ್ಕೆ ಬಂದ ನಂತರ ವಾರ್ಷಿಕ ಒಂದು ಲಕ್ಷ ಅಚ್ಚು ಉಕ್ಕು ರೈಲುರಸ್ತೆ ಗಾಲಿಯನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುವುದು ಎಂದು ಇದರಲ್ಲಿ ತಿಳಿಸಿಲಾಗಿದೆ.

ಈ ಪ್ರಮುಖ ಯೋಜನೆ ಇಂಜಿನಿಯರಿಂಗ್, ಸಂಗ್ರಹ, ಮತ್ತು ಸ್ಥಾವರ ನಿರ್ಮಾಣ ಕಾರ್ಯ, ನಾಗರಿಕ ಕಾಮಗಾರಿ, ವಿದ್ಯುತ್ ಅಳವಡಿಕೆ ಮತ್ತು ಯಂತ್ರ ಮತ್ತು ಸ್ಥಿರಯಂತ್ರಗಳ ಅಳವಡಿಕೆಯನ್ನು ಒಳಗೊಂಡಿದೆ. ಎರಡು ವರ್ಷಗಳೊಳಗೆ ಈ ಯೋಜನೆ ಪೂರ್ಣಗೊಳ್ಳಲಿದೆ.

ಪ್ರಾಯಾಣಿಕ ಮತ್ತು ಸರಕು ದಟ್ಟಣೆ ವೇಗವಾಗಿ ವೃದ್ಧಿಸುತ್ತಿರುವ ಕಾರಣ ಉದ್ಬವವಾಗಿರುವ ರೈಲು ಬಂಡಿಗಳಿಗಾಗಿನ ಅಗಾಧ ಗಾಲಿಗಳ ಕೊರತೆಯನ್ನು ನೀಗಿಸುವಲ್ಲಿ ಈ ಹೊಸ ಸ್ಥಾವರ ರೈಲ್ವೇಗೆ ಸಹಕಾರಿಯಾಗಲಿದೆ ಮತ್ತು ಇದು ಆಮದು ಅವಲಂಬನೆಯನ್ನು ಕಡಮೆಗೊಳಿಸುವುದು ಎಂದು ಎಲ್ಆಂಡ್‌ಟಿ ತಿಳಿಸಿದೆ.

ರೈಲು ಬಂಡಿ ಉತ್ಪಾದನೆ, ನಿಲ್ದಾಣಗಳ ಮರುನವೀಕರಣ, ನಗರ ಸಮೂಹ ಸಾಗಣೆ ವ್ಯವಸ್ಥೆಗಳನ್ನು ಒಳಗೊಂಡಂತೆ ರೈಲು ಕ್ಷೇತ್ರದಲ್ಲಿನ ಮುಂಬರುವ ಹಲವು ಯೋಜನೆಗಳಲ್ಲಿ ಪಾಲ್ಗೊಳ್ಳಲು ಕಂಪೆನಿ ಚಿಂತಿಸುತ್ತಿದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಆರಂಭಿಕ ಕುಸಿತ ಕಂಡ ಸೆನ್ಸೆಕ್ಸ್
ಜಂಟಿ ಶೋಧನಾ ಒಪ್ಪಂದ: ಪೆರು, ರಿಲಯನ್ಸ್ ಸಂಸ್ಥೆ ಒಪ್ಪಿಗೆ
ವಿದರ್ಭದಲ್ಲಿ ಹತ್ತಿಗೆ ದಾಖಲೆ ಗರಿಷ್ಠ ಬೆಲೆ
ವಿಶ್ವ ಹಣಕಾಸು ಸಂಸ್ಥೆಗಳ ವಿರುದ್ಧ ಪಿಎಂ ತರಾಟೆ
ಸಚಿನ್‌ರನ್ನು ಕೈಬಿಟ್ಟ ಪೆಪ್ಸಿ
ಎಸ್ಸಾರ್, ಜೆಎಸ್‌ಪಿಎಲ್, ಇಸ್ಪಾತ್‌ಗೆ 23 ಕಲ್ಲಿದ್ದಲು ಬ್ಲಾಕ್
ಗ್ರಹ ಗತಿ
ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಗಣಿಗಾರಿಗೆ ರಾಷ್ಟ್ರೀಕರಣವಾಗಲಿ: ಯಡಿಯ‌ೂರಪ್ಪ
ಗಣಿಗಾರಿಕೆ ರಾಷ್ಟ್ರೀಕರಣ ನಿರ್ಧಾರವನ್ನು ಆದಷ್ಟು ಬೇಗ ತೆಗೆದುಕೊಳ್ಳಬೇಕೆಂದು ಮುಖ್ಯಮಂತ್ರಿ ಯಡಿಯ‌ೂರಪ್ಪ ...
ಪೈರಸಿ ತಡೆಗೆ ಕಠಿಣ ಕ್ರಮಕ್ಕೆ ಮನವಿ
ಬಿಜೆಪಿಯಿಂದ ಪ್ರಜಾಪ್ರಭುತ್ವಕ್ಕೆ ದ್ರೋಹ: ಸಿಂಧ್ಯಾ
ಮನರಂಜನೆ
ಚಿತ್ರ ಸುದ್ದಿ - 'ಚಂಡ'ನ ರಾಣಿಯಾಗಿ ಮೆರೆದ ಕರಾವಳಿಯ ಬೆಡಗಿ ಶುಭಾ ಪೂಂಜಾಗೆ ನಂತರ 'ಮೊಗ್ಗಿನ ಮನಸ್ಸು' ಚಿತ್ರದಲ್ಲಿ ಅವಕಾಶ ಸಿಕ್ಕಿತ್ತು. ಚೆಲ್ಲು ಚೆಲ್ಲು ನಗುವಿನ ಈ ಬೆಡಗಿ ಎಲ್ಲವನ್ನು ಮುಕ್ತವಾಗಿ, ನಿರ್ಭಯವಾಗಿ ಹೇಳುವ ಜಾಯಮಾನದವಳು.
ಮುಂದೆ ಓದಿ|ಮತ್ತಷ್ಟು...