|
| ಆರಂಭಿಕ ಕುಸಿತ ಕಂಡ ಸೆನ್ಸೆಕ್ಸ್ |
| ಮುಂಬೈ, ಮಂಗಳವಾರ, 8 ಜುಲೈ 2008 ( 12:30 IST ) | |
ರಿಲಯನ್ಸ್ ಇಂಡಸ್ಟ್ರೀಸ್, ಇನ್ಪಸಿಸ್ ಟೆಕ್ನಾಲಜಿಯನ್ನು ಮೊದಲ್ಗೊಂಡ ಪ್ರಮುಖ ಶೇರುಗಳಲ್ಲಿ ಫಂಡುಗಳು ಭಾರಿ ಮಾರಾಟ ಮಾಡಿದ ಪರಿಣಾಮವಾಗಿ ಮುಂಬೈ ಶೇರು ಮಾರುಕಟ್ಟೆ ಸೂಚ್ಯಂಕ ಆರಂಭಿಕ ವಹಿವಾಟಿನಲ್ಲಿ 444 ಅಂಕಗಳ ಕುಸಿತ ದಾಖಲಿಸಿತು.
ಕಳೆದ ಎರಡು ಸೆಷನುಗಳಲ್ಲಿ 430 ಅಂಕಗಳನ್ನು ಗಳಿಸಿದ್ದ, 30-ಶೇರು ಸೂಚ್ಯಂಕ ಬೆಳಗಿನ ಮೊದಲ 5 ನಿಮಿಷಗಳ ವಹಿವಾಟಿನಲ್ಲಿ 443.95 ಅಂಕಗಳ ಕುಸಿತ ಕಂಡು, 13,082.04ಕ್ಕೆ ಮುಟ್ಟಿತು.
ಇದೇ ರೀತಿ ವಿಶಾಲ ವ್ಯಾಪ್ತಿಯ ರಾಷ್ಟ್ರೀಯ ಶೇರು ಮಾರುಕಟ್ಟೆ ನಿಪ್ಟಿ ಕೂಡ, 133.95 ಅಂಕಗಳ ಇಳಿಕೆ ಕಂಡು, 3,896.05ರಲ್ಲಿ ವಹಿವಾಟು ನಡೆಸಿತು ಮತ್ತು 3,900 ರೇಖೆಯ ಕೆಳಕ್ಕೆ ಇಳಿಯಿತು.
ಆಡಳಿತಾರೂಢ ಸರಕಾರಕ್ಕಾಗಿನ ಬೆಂಬಲ ಹಿಂಪಡೆಯುವ ನಿರ್ಧಾರ ಕೈಗೊಳ್ಳುವಾಗಿನ ಎಡಪಕ್ಷಗಳ ಪ್ರಮುಖ ಸಭೆಯ ಹಿನ್ನೆಲೆಯಲ್ಲಿ ವ್ಯಾಪಾರ ಮನೋಭಾವ ಕುಂಠಿತಗೊಂಡಿತು ಎಂದು ವಹಿವಾಟುದಾರರು ತಿಳಿಸಿದ್ದಾರೆ. ಮುಂಚೂಣಿಯ ಏಷಿಯಾ ಮಾರುಕಟ್ಟೆಯಲ್ಲಿನ ಭಾರಿ ಕುಸಿತವೂ ದೇಶೀಯ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿತು ಎಂದು ಹೇಳಿದ್ದಾರೆ.
ರಿಲಯನ್ಸ್ ಇಂಡಸ್ಟ್ರೀಸ್, ಆರ್‌ಕಾಂ, ರಿಲಯನ್ಸ್ ಇನ್ಪ್ರಾ, ಇನ್ಪಸಿಸ್, ಎಸ್‌ಬಿಐ, ಐಸಿಐಸಿಐ ಲಿ., ಎಚ್‌ಡಿಎಫ್‌ಸಿ ಬ್ಯಾಂಕ್, ಗ್ರಾಸಿಂ ಇಂಡಸ್ಟ್ರೀಸ್, ಭಾರ್ತಿ ಏರ್‌ಟೆಲ್, ಲಾರ್ಸೆನ್ ಆಂಡ್ ಟಾಬ್ರೋ, ಮಾರುತಿ, ಒಎನ್‌ಜಿಸಿ ಮತ್ತು ಟಾಟಾ ಸ್ಟೀಲ್ ಸೆನ್ಸೆಕ್ಸ್ ಇಳಿಕೆಗೆ ಕಾರಣವಾಯಿತು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - 'ಚಂಡ'ನ ರಾಣಿಯಾಗಿ ಮೆರೆದ ಕರಾವಳಿಯ ಬೆಡಗಿ ಶುಭಾ ಪೂಂಜಾಗೆ ನಂತರ 'ಮೊಗ್ಗಿನ ಮನಸ್ಸು' ಚಿತ್ರದಲ್ಲಿ ಅವಕಾಶ ಸಿಕ್ಕಿತ್ತು. ಚೆಲ್ಲು ಚೆಲ್ಲು ನಗುವಿನ ಈ ಬೆಡಗಿ ಎಲ್ಲವನ್ನು ಮುಕ್ತವಾಗಿ, ನಿರ್ಭಯವಾಗಿ ಹೇಳುವ ಜಾಯಮಾನದವಳು. |
| |
|
|
|
|
|
|
|