ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವ್ಯವಹಾರ ಸಮಾಚಾರ
ಜಂಟಿ ಶೋಧನಾ ಒಪ್ಪಂದ: ಪೆರು, ರಿಲಯನ್ಸ್ ಸಂಸ್ಥೆ ಒಪ್ಪಿಗೆ
ಲಿಮಾ, ಮಂಗಳವಾರ, 8 ಜುಲೈ 2008   ( 12:16 IST )
ಪೆರುವಲ್ಲಿನ ಸಂಭಾವ್ಯ ತೈಲಕ್ಷೇತ್ರಗಳಲ್ಲಿ ತೈಲ ಮತ್ತು ಅನಿಲಗಳಿಗಾಗಿ ಕೊರೆತ ಕಾರ್ಯವನ್ನು ಮಾಡಲು ಪೆರುವಿನ ಪೆರುಪೆಟ್ರೋ ಮತ್ತು ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ಪಾಲುದಾರಿಕೆಯನ್ನು ರಚಿಸಿದೆ ಎಂದು ಪೆರುವಿನ ಸರಕಾರಿ ತೈಲ ಸಂಸ್ಥೆ ತಿಳಿಸಿದೆ.

ಕಳೆದ ವಾರಗಳಲ್ಲಿ ಬರಲಾದ ಒಪ್ಪಂದದ ಔಪಚಾರಿಕತೆಯನ್ನು ಪೂರೈಸುತ್ತಿದ್ದು, ಮುಂಬರುವ ದಿನಗಳಲ್ಲಿ ತೈಲ ಮತ್ತು ಅನಿಲ ಸಂಭಾವ್ಯತೆ ಹೊಂದಿರುವ ಪ್ರದೇಶಗಳಲ್ಲಿ ಕೈಗೊಳ್ಳಲಾದ ಜಂಟಿ ಶೋಧನಾ ಕಾರ್ಯದ ವಿವರಣೆಯನ್ನು ಒದಗಿಸಲಿದ್ದೇವೆ ಎಂದು ಸೆಸರ್ ಗುಟಿರೆಜ್ ಪೆರುವಿನ ಅಧಿಕೃತ ಅಂಡಿನ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಸೆಪ್ಟೆಂಬರಿನಲ್ಲಿ ವಿತರಿಸಲಾಗುವ 22 ಪ್ರದೇಶಗಳಲ್ಲಿನ ತೈಲಾನ್ವೇಷಣೆಯ ಡ್ರಿಲ್ಲಿಂಗ್ ಹಕ್ಕಿಗಾಗಿ ಪೆರುಪೆಟ್ರೊ-ರಿಲಯನ್ಸ್ ಪಾಲುದಾರಿಕೆ ಪೆರುಪೆಟ್ರೊದ ಹರಾಜಿನಲ್ಲಿ ಬಿಡ್ ಸಲ್ಲಿಸುವ ಸಂಭವವಿದೆ. ರಿಲಯನ್ಸ್ ಸಂಸ್ಥೆ ಪೆರುವಿನಲ್ಲಿ ಭಾರಿ ಪ್ರಮಾಣದ ವಿಸ್ತರಣಾ ಯೋಜನೆಯನ್ನು ಹೊಂದಿದ್ದು, ಇದು ಹೈಡ್ರೋಕಾರ್ಬನ್ ನಿಧಿಗಳಲ್ಲಿ ಅತಿ ಹೆಚ್ಚಿನ ಸಂಭಾವ್ಯತೆಯನ್ನು ಹೊಂದಿದೆ ಎಂಬುದು ತಮ್ಮ ಅನಿಸಿಕೆ ಎಂದು ಗುಟಿರೆಜ್ ತಿಳಿಸಿದ್ದಾರೆ.

ಮಾರ್ಚ್ ಮತ್ತು ಜೂನ್ ಅವಧಿಯಲ್ಲಿ ರಿಲಯನ್ಸ್ ಪೆರುವಿಯನ್ ಅರಣ್ಯ ಪ್ರದೇಶದಲ್ಲಿ 3 ಸಂಭಾವ್ಯ ತೈಲ ಕ್ಷೇತ್ರದಲ್ಲಿ ಕೊರೆತ ಕಾರ್ಯ ನಿರ್ವಹಿಸಿತ್ತು ಮತ್ತು ಏಪ್ರಿಲ್‌ನಲ್ಲಿ ಟಿಟಿಕಕ ಸರೋವರ ಸನಿಹದ 141 ಪ್ರದೇಶದಲ್ಲಿ ಡ್ರಿಲಿಂಗ್ ಹಕ್ಕನ್ನು ಖರೀದಿಸಿತ್ತು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ವಿದರ್ಭದಲ್ಲಿ ಹತ್ತಿಗೆ ದಾಖಲೆ ಗರಿಷ್ಠ ಬೆಲೆ
ವಿಶ್ವ ಹಣಕಾಸು ಸಂಸ್ಥೆಗಳ ವಿರುದ್ಧ ಪಿಎಂ ತರಾಟೆ
ಸಚಿನ್‌ರನ್ನು ಕೈಬಿಟ್ಟ ಪೆಪ್ಸಿ
ಎಸ್ಸಾರ್, ಜೆಎಸ್‌ಪಿಎಲ್, ಇಸ್ಪಾತ್‌ಗೆ 23 ಕಲ್ಲಿದ್ದಲು ಬ್ಲಾಕ್
ದ.ಏಷಿಯಾದ ಡೆಟ್ರಾಯ್ಟಾಗಿ ಹೊರಹೊಮ್ಮುತ್ತಿರುವ ಚೆನ್ನೈ
ಜಿ-8 ಶೃಂಗಕ್ಕೆ ತೆರಳಿದ ಪ್ರಧಾನಿ
ಗ್ರಹ ಗತಿ
ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಗಣಿಗಾರಿಗೆ ರಾಷ್ಟ್ರೀಕರಣವಾಗಲಿ: ಯಡಿಯ‌ೂರಪ್ಪ
ಗಣಿಗಾರಿಕೆ ರಾಷ್ಟ್ರೀಕರಣ ನಿರ್ಧಾರವನ್ನು ಆದಷ್ಟು ಬೇಗ ತೆಗೆದುಕೊಳ್ಳಬೇಕೆಂದು ಮುಖ್ಯಮಂತ್ರಿ ಯಡಿಯ‌ೂರಪ್ಪ ...
ಪೈರಸಿ ತಡೆಗೆ ಕಠಿಣ ಕ್ರಮಕ್ಕೆ ಮನವಿ
ಬಿಜೆಪಿಯಿಂದ ಪ್ರಜಾಪ್ರಭುತ್ವಕ್ಕೆ ದ್ರೋಹ: ಸಿಂಧ್ಯಾ
ಮನರಂಜನೆ
ಚಿತ್ರ ಸುದ್ದಿ - 'ಚಂಡ'ನ ರಾಣಿಯಾಗಿ ಮೆರೆದ ಕರಾವಳಿಯ ಬೆಡಗಿ ಶುಭಾ ಪೂಂಜಾಗೆ ನಂತರ 'ಮೊಗ್ಗಿನ ಮನಸ್ಸು' ಚಿತ್ರದಲ್ಲಿ ಅವಕಾಶ ಸಿಕ್ಕಿತ್ತು. ಚೆಲ್ಲು ಚೆಲ್ಲು ನಗುವಿನ ಈ ಬೆಡಗಿ ಎಲ್ಲವನ್ನು ಮುಕ್ತವಾಗಿ, ನಿರ್ಭಯವಾಗಿ ಹೇಳುವ ಜಾಯಮಾನದವಳು.
ಮುಂದೆ ಓದಿ|ಮತ್ತಷ್ಟು...