ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವ್ಯವಹಾರ ಸಮಾಚಾರ
ವಿಶ್ವ ಹಣಕಾಸು ಸಂಸ್ಥೆಗಳ ವಿರುದ್ಧ ಪಿಎಂ ತರಾಟೆ
ಮಂಗಳವಾರ, 8 ಜುಲೈ 2008   ( 11:01 IST )
ತೈಲ ಮತ್ತು ಆಹಾರ ಮೇಲಿನ ಪ್ರಸಕ್ತ ಜಾಗತಿಕ ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ಆಲಸ್ಯ ತೋರುತ್ತಿರುವ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಮತ್ತು ಇತರರನ್ನು ತರಾಟೆಗೆ ತೆಗೆದುಕೊಂಡಿರುವ ಪ್ರಧಾನಿ ಮನ್‌ಮೋಹನ್ ಸಿಂಗ್, ಸ್ಥಿರತೆಯ ಅಂಶವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕಾರ್ಯವಿಧಾಗಳನ್ನು ಚರ್ಚಿಸಲು ಉತ್ಪಾದಕರ ಮತ್ತು ಗ್ರಾಹಕರ ವೇದಿಕೆಯೊಂದನ್ನು ರಚಿಸುವಂತೆ ವಾದಿಸಿದ್ದಾರೆ.

ಜಿ-8 ಶೃಂಗದಲ್ಲಿ ಪಾಲ್ಗೊಳ್ಳಲು ಜಪಾನ್‌ಗೆ ತೆರಳಿರುವ ಸಿಂಗ್ ಪತ್ರಕರ್ತರಲ್ಲಿ ಮಾತನಾಡುತ್ತಾ, 1973ರ ಮೊದಲ ಬಿಕ್ಕಟ್ಟು ಮತ್ತು 1978ರ ಎರಡನೇ ಬಿಕ್ಕಟ್ಟಿಗೆ ಹೋಲಿಸಿದರೆ, ಈ ಭಾರಿ ತೈಲ ಬಿಕ್ಕಟ್ಟು ಸಮಸ್ಯೆಯನ್ನು ನಿಭಾಯಿಸುವಲ್ಲಿ ಹೆಚ್ಚಿನ ನಿಷ್ಟ್ರೀಯತೆ ತೋರುತ್ತಿರುವ ಅಂತಾರಾಷ್ಟ್ರೀಯ ಸಮುದಾಯದ ಬಗ್ಗೆ ವಿಷಾದ ವ್ಯಕ್ತಪಡಿಸಿದರು.

ತನ್ನ ಪ್ರಕಾರ ಈ ಬಾರಿ ವಿಶ್ವ ಸಮುದಾಯ ಹೆಚ್ಚು ಆಲಸ್ಯ ತೋರುತ್ತಿದೆ. ತೈಲ ಬೆಲೆಗಳ ಪರಿಣಾಮಗಳನ್ನು ನಿರ್ವಹಿಸುವಲ್ಲಿ ಹೆಚ್ಚಿನ ಶ್ರಮವಹಿಸುವಂತೆ ಮಾಡುವಲ್ಲಿ ಅಂತಾರಾಷ್ಟ್ರೀಯ ಸಮುದಾಯ ಮತ್ತು ಸಂಸ್ಥೆಗಳನ್ನು ಉತ್ತೇಜಿಸುವುದು ತಮ್ಮ ಪ್ರಯತ್ನವಾಗಿದೆ ಎಂದು ತಿಳಿಸಿದರು.

ತೈಲ ಬೆಲೆಗೆ ಸಂಬಂಧಿಸಿದಂತೆ, ತಾವು ಇದರ ಏರಿಕೆಗೆ ಯಾವ ಅಂಶ ಕೊಡುಗೆ ನೀಡುತ್ತಿದೆ ಎಂಬುದನ್ನು ತಿಳಿಯಬೇಕು ಮತ್ತು ತನ್ನ ಪ್ರಕಾರ ಇದಕ್ಕೆ ಕಾರಣ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳು ತನ್ನ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸದಿದ್ದುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ತೈಲ ಬೆಲೆಯಲ್ಲಿನ ಈ ಅಸ್ಥಿರತೆ ಮತ್ತು ಏರುಪೇರು ಉತ್ಪಾದಕರ ಹಾಗೂ ಗ್ರಾಹಕರ ಪರವಾಗಿಲ್ಲ. ಆದ್ದರಿಂದ ತಾವು ಉತ್ಪಾದಕರ ಮತ್ತು ಗ್ರಾಹಕರ ವೇದಿಕೆಯೊಂದನ್ನು ಸೃಷ್ಠಿಸಿ, ಒಟ್ಟಾಗಿ ಕುಳಿತು, ಸ್ಥಿರತೆಗಾಗಿನ ಕಾರ್ಯವಿಧಾನಗಳನ್ನು ಕಂಡು ಹುಡುಕಬೇಕು ಎಂದು ತಿಳಿಸಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಸಚಿನ್‌ರನ್ನು ಕೈಬಿಟ್ಟ ಪೆಪ್ಸಿ
ಎಸ್ಸಾರ್, ಜೆಎಸ್‌ಪಿಎಲ್, ಇಸ್ಪಾತ್‌ಗೆ 23 ಕಲ್ಲಿದ್ದಲು ಬ್ಲಾಕ್
ದ.ಏಷಿಯಾದ ಡೆಟ್ರಾಯ್ಟಾಗಿ ಹೊರಹೊಮ್ಮುತ್ತಿರುವ ಚೆನ್ನೈ
ಜಿ-8 ಶೃಂಗಕ್ಕೆ ತೆರಳಿದ ಪ್ರಧಾನಿ
260 ಅಂಕದ ಶುಭಾರಂಭ ಕಂಡ ಸೆನ್ಸೆಕ್ಸ್
ಸೌದಿ ವೈದ್ಯ, ಐಟಿಯಲ್ಲಿ ಭಾರತೀಯರಿಗೆ ಭಾರಿ ಬೇಡಿಕೆ
ಗ್ರಹ ಗತಿ
ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಗಣಿಗಾರಿಗೆ ರಾಷ್ಟ್ರೀಕರಣವಾಗಲಿ: ಯಡಿಯ‌ೂರಪ್ಪ
ಗಣಿಗಾರಿಕೆ ರಾಷ್ಟ್ರೀಕರಣ ನಿರ್ಧಾರವನ್ನು ಆದಷ್ಟು ಬೇಗ ತೆಗೆದುಕೊಳ್ಳಬೇಕೆಂದು ಮುಖ್ಯಮಂತ್ರಿ ಯಡಿಯ‌ೂರಪ್ಪ ...
ಪೈರಸಿ ತಡೆಗೆ ಕಠಿಣ ಕ್ರಮಕ್ಕೆ ಮನವಿ
ಬಿಜೆಪಿಯಿಂದ ಪ್ರಜಾಪ್ರಭುತ್ವಕ್ಕೆ ದ್ರೋಹ: ಸಿಂಧ್ಯಾ
ಮನರಂಜನೆ
ಚಿತ್ರ ಸುದ್ದಿ - 'ಚಂಡ'ನ ರಾಣಿಯಾಗಿ ಮೆರೆದ ಕರಾವಳಿಯ ಬೆಡಗಿ ಶುಭಾ ಪೂಂಜಾಗೆ ನಂತರ 'ಮೊಗ್ಗಿನ ಮನಸ್ಸು' ಚಿತ್ರದಲ್ಲಿ ಅವಕಾಶ ಸಿಕ್ಕಿತ್ತು. ಚೆಲ್ಲು ಚೆಲ್ಲು ನಗುವಿನ ಈ ಬೆಡಗಿ ಎಲ್ಲವನ್ನು ಮುಕ್ತವಾಗಿ, ನಿರ್ಭಯವಾಗಿ ಹೇಳುವ ಜಾಯಮಾನದವಳು.
ಮುಂದೆ ಓದಿ|ಮತ್ತಷ್ಟು...