|
| ಸಚಿನ್‌ರನ್ನು ಕೈಬಿಟ್ಟ ಪೆಪ್ಸಿ |
| ನವದೆಹಲಿ, ಮಂಗಳವಾರ, 8 ಜುಲೈ 2008 ( 10:20 IST ) | |
ತನ್ನ ವಯಸ್ಸಾಗುತ್ತಿರುವ ಹಿರಿಯ ಕ್ರಿಕೆಟ್ ಬ್ರಾಂಡ್ ರಾಯಭಾರಿಗಳನ್ನು ಹಂತ ಹಂತವಾಗಿ ತ್ಯಜಿಸುತ್ತಿರುವ ಲಘು ಪಾನೀಯ ಕಂಪೆನಿ ಪೆಪ್ಸಿ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್‌ರನ್ನು ಕೈಬಿಟ್ಟಿದೆ. ಸಚಿನ್‌ರ ಕಂಪೆನಿ ಜತೆಗಿನ ದೀರ್ಘ-ಕಾಲೀನ ಒಪ್ಪಂದ ಮೇಯಲ್ಲಿ ಅಂತ್ಯಗೊಂಡಿತ್ತು.
ಈ ವರ್ಷದ ಆದಿಯಲ್ಲಿ ಪೆಪ್ಸಿ ಕಂಪೆನಿ ಭಾರತದ ಇತರ ಹಿರಿಯ ಆಟಗಾರರಾದ ರಾಹುಲ್ ದ್ರಾವಿಡ್ ಮತ್ತು ಸೌರವ್ ಗಂಗೂಲಿಯವರನ್ನು ಗುತ್ತಿಗೆಯಿಂದ ಕೈಬಿಟ್ಟಿತ್ತು.
ಪೆಪ್ಸಿ ತೆಂಡುಲ್ಕರ್ ಜತೆಗಿನ ಒಪ್ಪಂದವನ್ನು ನವೀಕರಿಸುತ್ತಿಲ್ಲ ಎಂದು ಕೆಪಂನಿಯ ಮೂಲಗಳು ತಿಳಿಸಿವೆ. ಸಚಿನ್ 1990ರಿಂದೀಚೆಗೆ ಆ ಕಂಪೆನಿಯ ಉತ್ಪನ್ನ ರಾಯಭಾರಿಯಾಗಿದ್ದರು. ಈ ಬಾರಿ ಸಂಸ್ಥೆ ಭಾರತದ ಯುವ ಕ್ರಿಕೆಟಿಗರತ್ತ ಗಮನ ಕೇಂದ್ರೀಕರಿಸಿದೆ.
ಭಾರತದ ಬ್ಯಾಟಿಂಗ್ ದಿಗ್ಗಜ ಉತ್ತೇಜಕ ಸಂಭಾವನೆಯ ಬೇಡಿಕೆ ಇರಿಸಿದ್ದು, ಈ ನಿರ್ಧಾರಕ್ಕೆ ಪ್ರಮುಖ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ. ಮಾರುಕಟ್ಟೆಯ ಅಂದಾಜಿನಂತೆ, ತೆಂಡುಲ್ಕರ್ ಪ್ರತಿ ಉತ್ಪನ್ನದ ಜಾಹಿರಾತಿಗಾಗಿ ವಾರ್ಷಿಕ 3-4 ಕೋಟಿ ರೂಪಾಯಿ ವ್ಯಾಪ್ತಿಯಲ್ಲಿ ಶುಲ್ಕ ವಿಧಿಸುತ್ತಿದ್ದರು. ಇದು ಸಚಿನ್‌ರನ್ನು ತಮ್ಮ ತಲೆಮಾರಿನಲ್ಲಿ ಅತ್ಯಂತ ಅಧಿಕ ಪಾವತಿಸಲ್ಪಡುವ ಕ್ರಿಕೆಟಿಗರನ್ನಾಗಿ ಮಾಡಿದೆ.
ಕಂಪೆನಿ ಗುತ್ತಿಗೆಯನ್ನು ನವೀಕರಿಸಿಲ್ಲವೋ ಎಂಬುದರ ಬಗ್ಗೆ ಯಾವುದೇ ಸ್ಪಷ್ಟನೆ ಅಥವಾ ಪ್ರತಿಕ್ರಿಯೆ ನೀಡಲು ಪೆಪ್ಸಿ ಅಧಿಕಾರಿಗಳು ನಿರಾಕರಿಸಿದ್ದಾರೆ. ತೆಂಡುಲ್ಕರ್ ವ್ಯವಸ್ಥಾಪಕ ವಲ್ಡ್ ಸ್ಪೋರ್ಟ್ಸ್ ಗ್ರೂಪ್, ಈ ಬಗ್ಗೆ ಪ್ರತಿಕ್ರಿಯೆ ನೀಡಲು ಲಭ್ಯರಾಗಲಿಲ್ಲ.
'ಯಹ್ ಹೇ ಯಂಗಿಸ್ತಾನ್ ಮೆರಿ ಜಾನ್' ಎಂಬ ಹೊಸ ಅಭಿಯಾನದ ಭಾಗವಾಗಿ ಯುವ ಕ್ರಿಕೆಟಿಗರಿಗೆ ಮಣೆ ಹಾಕುವ ತನ್ನ ಉದ್ದೇಶವನ್ನು ಪೆಪ್ಸಿ ಈಗಾಗಲೇ ಸ್ಪಷ್ಟ ಪಡಿಸಿದೆ ಮತ್ತು ಇದಕ್ಕಾಗಿ ದ್ರಾವಿಡ್ ಮತ್ತು ಗಂಗೂಲಿಯನ್ನು ಕೈಬಿಟ್ಟು, ಇಶಾಂತ್ ಶರ್ಮಾ ಮತ್ತು ರೋಹಿತ್ ಶರ್ಮಾರನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - 'ಚಂಡ'ನ ರಾಣಿಯಾಗಿ ಮೆರೆದ ಕರಾವಳಿಯ ಬೆಡಗಿ ಶುಭಾ ಪೂಂಜಾಗೆ ನಂತರ 'ಮೊಗ್ಗಿನ ಮನಸ್ಸು' ಚಿತ್ರದಲ್ಲಿ ಅವಕಾಶ ಸಿಕ್ಕಿತ್ತು. ಚೆಲ್ಲು ಚೆಲ್ಲು ನಗುವಿನ ಈ ಬೆಡಗಿ ಎಲ್ಲವನ್ನು ಮುಕ್ತವಾಗಿ, ನಿರ್ಭಯವಾಗಿ ಹೇಳುವ ಜಾಯಮಾನದವಳು. |
| |
|
|
|
|
|
|
|