|
| ಎಸ್ಸಾರ್, ಜೆಎಸ್‌ಪಿಎಲ್, ಇಸ್ಪಾತ್‌ಗೆ 23 ಕಲ್ಲಿದ್ದಲು ಬ್ಲಾಕ್ |
| ನವದೆಹಲಿ , ಸೋಮವಾರ, 7 ಜುಲೈ 2008 ( 15:16 IST ) | |
ಎಸ್ಸಾರ್, ಜೆಎಸ್‌ಪಿಎಲ್, ಗ್ರಾಸಿಂ, ಮೊನ್ನೆಟ್ ಮತ್ತು ಇಸ್ಪಾತ್ ಸೇರಿದಂತೆ ಮುಂಚೂಣಿಯ ಉಕ್ಕು, ಸಿಮೆಂಟ್ ಮತ್ತು ವಿದ್ಯುತ್ ಉತ್ಪಾದಕರಿಗೆ 23 ಕರಿಕು ಕಲ್ಲಿದ್ದಲು ಮತ್ತು ಕರಿಕೇತರ ಕಲ್ಲಿದ್ದಲು ಬ್ಲಾಕುಗಳ ವಿತರಣೆಗೆ ಸರಕಾರ ಅನುಮೋದನೆ ನೀಡಿದೆ ಎಂದು ತಿಳಿದು ಬಂದಿದೆ.
4 ಕರಿಕು ಕಲ್ಲಿದ್ದಲು ಬ್ಲಾಕುಗಳನ್ನು ಮಧ್ಯ ಪ್ರದೇಶಕ್ಕೆ ವಿತರಿಸಲಾಗಿದ್ದರೆ, ಉಳಿದ 19 ಕರಿಕೇತರ ಕಲ್ಲಿದ್ದಲು ಬ್ಲಾಕುಗಳನ್ನು ಪ.ಬಂಗಾಳ, ಮಧ್ಯಪ್ರದೇಶ, ಚತ್ತಿಸ್‌ಗಢ, ಜಾರ್ಖಂಡ್, ಮಹರಾಷ್ಟ್ರ ಮತ್ತು ಆಂಧ್ರ ಪ್ರದೇಶಕ್ಕೆ ವಿತರಿಸಲಾಗಿದೆ ಎಂದು ಹಿರಿಯ ಸರಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ವಾರ ನಡೆಸಿದ ಸಭೆಯಲ್ಲಿ ಕಲ್ಲಿದ್ದಲು ಕಾರ್ಯದರ್ಶಿ ಎಚ್ ಸಿ ಗುಪ್ತಾ ನೇತೃತ್ವದ ಕಲ್ಲಿದ್ದಲು ಸಚಿವಾಲಯದ ಪರಿಶೀಲನಾ ಸಮಿತಿ ಬೆಹ್ರಾಬಂಧ್ ಕರಿಕು ಕಲ್ಲಿದ್ದಲು ಬ್ಲಾಕ್‌ನ್ನು ಎಸ್ಸಾರ್, ಮುಕುಂದ್ ಸ್ಟೀಲ್ ಮತ್ತು ಇಂಡ್ ಸಿನರ್ಜಿ ಜತೆಗಿನ ಸಹಪಾಲು ಆಧಾರದಲ್ಲಿ ವಿನೋದ್ ಮಿತ್ತಲ್ ನೇತೃತ್ವದ ಇಸ್ಪಾತ್ ಇಂಡಸ್ಟ್ರೀಸ್‌ಗೆ ವಿತರಿಸಲು ನಿರ್ಧರಿಸಲಾಗಿದೆ.
ಒಟ್ಟು 170 ದಶಲಕ್ಷ ಟನ್ ಮೀಸಲಿನಲ್ಲಿ ಇಸ್ಪಾತ್ ಇಂಡಸ್ಟ್ರೀಸ್‌ಗೆ 70 ದಶಲಕ್ಷ ಟನ್ ವಿತರಿಸಲಾಗಿದ್ದರೆ, ಎಸ್ಸಾರ್ ಮತ್ತು ಮುಕುಂದ್‌ಗೆ ಕ್ರಮವಾಗಿ 53 ಮತ್ತು 25 ದಶಲಕ್ಷ ಟನ್‌ನ್ನು ವಿತರಿಸಲಾಗಿದೆ. ಉಳಿದವು ಒರಿಸ್ಸಾದ ಇಂಡ್ ಸಿನರ್ಜಿಗೆ ಹೋಗಲಿದೆ. ಕರಿಕು ಕಲ್ಲಿದ್ದಲು ಉಕ್ಕು ತಯಾರಿಕಾ ಸಂಸ್ಥೆಗಳಿಗಾಗಿನ ಪ್ರಮುಖ ಕಚ್ಛಾ ಸಾಮಾಗ್ರಿಯಾಗಿದೆ.
ಇದೇ ವೇಳೆ ಸಮಿತಿ, ಅಂದಾಜು 42 ದಶಲಕ್ಷ ಟನ್ ಸಾಮರ್ಥ್ಯದ ಉರ್ಟನ್ ಕರಿಕು ಕಲ್ಲಿದ್ದಲು ಬ್ಲಾಕ್‌ನ್ನು ಸಹಪಾಲು ಆಧಾರದಲ್ಲಿ ಜಿಂದಾಲ್ ಸ್ಟೀಲ್ ಮತ್ತು ಪವರ್ ಲಿ. ಮತ್ತು ಮೊನ್ನೆಟ್ ಇಸ್ಪಾತ್‌ಗೆ ವಿತರಿಸಿದೆ. ಅಂದಾಜು 45 ದಶಲಕ್ಷ ಟನ್‌ನ ಉರ್ಟನ್ ಉತ್ತರ ಕರಿಕು ಕಲ್ಲಿದ್ದಲು ಬ್ಲಾಕನ್ನು ಬೂಷಣ್ ಸ್ಟೀಲ್ ಮತ್ತು ಪ್ರಕಾಶ್ ಇಂಡಸ್ಟ್ರೀಸ್‌ಗೆ ನೀಡಲಾಗಿದೆ.
ಪ್ರಮುಖ ಕರಿಕೇತರ ಕಲ್ಲಿದ್ದಲು ಬ್ಲಾಕ್‌ಗಳಲ್ಲಿ ಪ.ಬಂಗಳಾದ ಮೊಯ್‌ರಾ ಮತ್ತು ಮಧುಜೋರ್ (ಉತ್ತರ ಮತ್ತು ದಕ್ಷಿಣ)ನ್ನು ಸಹಪಾಲು ಆಧಾರದಲ್ಲಿ ಅಧುನಿಕ್ ಗ್ರೂಪ್, ಉತ್ತಮ್ ಗಲ್ವಾ, ಎಸಿಸಿ, ವಿಕಾಸ್ ಮೆಟಲ್ ಮತ್ತು ಪವರ್ ಲಿ., ಮಿಡ್‌ಈಸ್ಟ್ ಇಂಟಗ್ರೇಟೆಡ್ ಮತ್ತು ರಾಂಸರೂಪ್ ಲೋಹಾ ಉದ್ಯೋಗ್‌ಗೆ ವಿತರಿಸಲಾಗಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಧನ ಲಾಭದ ನಿರೀಕ್ಷೆ, ಬಂಧು ಬಳಗದವರ ಭೇಟಿಯಾಗಲಿದೆ, ಹಿರಿಯರ ಆಶಿರ್ವಾದದ ಮೂಲಕ ಹಿಡಿದ ಕಾರ್ಯಗಳಲ್ಲಿ ಯಶಸ್ಸು. ಹಿತ ಶತ್ರುಗಳ ಬಗ್ಗೆ ಎಚ್ಚರವಿರಿ. ಆರೋಗ್ಯದ ಕಡೆಗೆ ಗಮನವಿರಲಿ. ಹಣಕಾಸಿನ ವಿಷಯದಲ್ಲಿ ತುಂಬಾ ಜಾಗೃತೆ ವಹಿಸಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಚಿತ್ರರಂಗದಲ್ಲಿ ಒಂದಲ್ಲ ಒಂದು ಗೊಂದಲ ಸೃಷ್ಟಿಯಾಗುತ್ತಲೇ ಇರುತ್ತದೆ. ಆದರೆ ಈ ಬಾರಿ ಒಂದು ಗೊಂದಲ ಸೃಷ್ಟಿಯಾಗಿದೆ. ಅದು ಚಿತ್ರರಂಗದ ಮಂದಿಯದ್ದಲ್ಲ. ಬದಲಾಗಿ ಪ್ರೇಕ್ಷಕರ ನಡುವೆ. 'ನಿನ್ನ ಪೂಜೆಗೆ ಬಂದೆ ಮಾದೇಶ್ವರ' ಹಾಡು ಈಗ ಎಲ್ಲೆಡೆ ಜನಪ್ರಿಯವಾಗುತ್ತಿದೆ. ಆದರೆ ಇದು ಯಾವ ಚಿತ್ರದ ಹಾಡು? |
| |
|
|
|
|
|
|
|