|
|
ದ.ಏಷಿಯಾದ ಡೆಟ್ರಾಯ್ಟಾಗಿ ಹೊರಹೊಮ್ಮುತ್ತಿರುವ ಚೆನ್ನೈ |
| ಚೆನ್ನೈ, ಸೋಮವಾರ, 7 ಜುಲೈ 2008 ( 14:03 IST ) | |
ಏರುತ್ತಿರುವ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ತಮ್ಮ ಸಾಮರ್ಥ್ಯ ವಿಸ್ತರಣೆಗಾಗಿ ಪ್ರಮುಖ ವಹಾನ ತಯಾರಕ ಸಂಸ್ಥೆಗಳು ಚೆನ್ನೈ ನಗರದಲ್ಲಿ ಭಾರಿ ಹೂಡಿಕೆ ನಡೆಸುತ್ತಿದ್ದು, ಈ ನಗರ ವೇಗದಲ್ಲಿ ದಕ್ಷಿಣ ಏಷಿಯಾದ ಡೆಟ್ರಾಯ್ಟ್ ಆಗಿ ಹೊರ ಹೊಮ್ಮುತ್ತಿದೆ.
ಅಗ್ರ ವಾಹನ ತಯಾರಕ ಸಂಸ್ಥೆಗಳಾದ ಹುಂಡಾಯ್, ಪಾರ್ಡ್, ರೆನಾಲ್ಟ್-ನಾಸಿನ್, ಬಿಎಂಡಬ್ಲ್ಯು ಮತ್ತು ಅಶೋಕ್ ಲೈಲ್ಯಾಂಡ್ ತಮ್ಮ ಸಾಮರ್ಥ್ಯವನ್ನು ವಿಸ್ತರಿಸುತ್ತಿರುವುದರೊಂದಿಗೆ ಚೆನ್ನೈ, ಭಾರತದದಲ್ಲಿನ ಇತರ ಅಟೋ ಜಾಲವಾದ ಪುಣೆ, ಗುಡೇಗಾವ್‌ನ್ನು ಹಿಂದಿಕ್ಕುವ ಸಾಧ್ಯತೆ ಇದೆ.
ತಮಿಳು ನಾಡು ಸರಕಾರ ಸಿದ್ದಪಡಿಸಿದ 11ನೇ ಪಂಚವಾರ್ಷಿಕ ಯೋಜನೆ ವರದಿ ಪ್ರಕಾರ, ಚೆನ್ನೈಯಲ್ಲಿನ ವಾಹನ ಕ್ಷೇತ್ರದಲ್ಲಿನ ಹೂಡಿಕೆ ಗಾತ್ರ 15 ರಿಂದ 20 ಬಿಲಿಯ ಡಾಲರ್‌ಗೆ ಮುಟ್ಟುವ ನಿರೀಕ್ಷೆ ಇದೆ.
ಯೋಜನಾ ವರದಿಯ ಪ್ರಕಾರ, ತಮಿಳು ನಾಡು ದೇಶದಲ್ಲಿ ಉತ್ಪಾದಿಸಲಾಗುವ ಎಲ್ಲಾ ಪ್ರಯಾಣಿಕ ಕಾರಿನ 21ಶೇ., ವಾಣಿಜ್ಯ ವಾಹನಗಳ 33ಶೇ. ಮತ್ತು ವಾಹನ ಸಲಕರಣೆಗಳ 35ಶೇ. ಪಾಲನ್ನು ಹೊಂದಿದೆ.
ಈ ಉದ್ದಿಮೆಯಲ್ಲಿ ಸುಮಾರು 100 ಕೆಪೆನಿಗಳು ತೊಡಗಿಸಿಕೊಂಡಿದ್ದು, 2.2 ಲಕ್ಷ ನೇರ ಉದ್ಯೋಗ ಅವಕಾಶವನ್ನು ಒದಗಿಸುತ್ತಿದೆ ಮತ್ತು ದೇಶದ ಜಿಡಿಪಿಗೆ 8ಶೇ. ಕೊಡುಗೆಯನ್ನು ನೀಡುತ್ತಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಧನ ಲಾಭದ ನಿರೀಕ್ಷೆ, ಬಂಧು ಬಳಗದವರ ಭೇಟಿಯಾಗಲಿದೆ, ಹಿರಿಯರ ಆಶಿರ್ವಾದದ ಮೂಲಕ ಹಿಡಿದ ಕಾರ್ಯಗಳಲ್ಲಿ ಯಶಸ್ಸು. ಹಿತ ಶತ್ರುಗಳ ಬಗ್ಗೆ ಎಚ್ಚರವಿರಿ. ಆರೋಗ್ಯದ ಕಡೆಗೆ ಗಮನವಿರಲಿ. ಹಣಕಾಸಿನ ವಿಷಯದಲ್ಲಿ ತುಂಬಾ ಜಾಗೃತೆ ವಹಿಸಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಚಿತ್ರರಂಗದಲ್ಲಿ ಒಂದಲ್ಲ ಒಂದು ಗೊಂದಲ ಸೃಷ್ಟಿಯಾಗುತ್ತಲೇ ಇರುತ್ತದೆ. ಆದರೆ ಈ ಬಾರಿ ಒಂದು ಗೊಂದಲ ಸೃಷ್ಟಿಯಾಗಿದೆ. ಅದು ಚಿತ್ರರಂಗದ ಮಂದಿಯದ್ದಲ್ಲ. ಬದಲಾಗಿ ಪ್ರೇಕ್ಷಕರ ನಡುವೆ. 'ನಿನ್ನ ಪೂಜೆಗೆ ಬಂದೆ ಮಾದೇಶ್ವರ' ಹಾಡು ಈಗ ಎಲ್ಲೆಡೆ ಜನಪ್ರಿಯವಾಗುತ್ತಿದೆ. ಆದರೆ ಇದು ಯಾವ ಚಿತ್ರದ ಹಾಡು? |
| |
|
|
|
|
|
|
|