|
| ಜಿ-8 ಶೃಂಗಕ್ಕೆ ತೆರಳಿದ ಪ್ರಧಾನಿ |
| ನವದೆಹಲಿ, ಸೋಮವಾರ, 7 ಜುಲೈ 2008 ( 13:25 IST ) | |
ಜಿ-8 ಶೃಂಗದಲ್ಲಿ ಪಾಲ್ಗೊಳ್ಳಲು ಭಾರತರ ಪ್ರಧಾನಿ ಮನ್‌ಮೋಹನ್ ಸಿಂಗ್ ಜಪಾನ್‌ಗೆ ತೆರಳಿದ್ದು, ಅಲ್ಲಿ ಅವರು ಭಾರತ-ಅಮೆರಿಕ ಅಣು ಒಪ್ಪಂದ ವಿಷಯವಾಗಿ ಅಮೆರಿಕ ಅಧ್ಯಕ್ಷ ಜಾರ್ಜ್ ಬುಷ್‌ರನ್ನು ಭೇಟಿಯಾಗಲಿದ್ದಾರೆ.
ಇದೇ ವೇಳೆ ಪ್ರಧಾನಿ, ರಷ್ಯಾ, ಬ್ರಿಟನ್, ಜರ್ಮನಿ, ಪ್ರಾನ್ಸ್ ಮತ್ತು ಅತಿಥೇಯ ಜಪಾನ್ ಸೇರಿದಂತೆ ವಿವಿಧ ದೇಶಗಳ ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆಯನ್ನು ನಡೆಸಲಿದ್ದಾರೆ.
ಜಿ-8 ಮತ್ತು ಒ-5ರ ನಾಯಕರುಗಳ ಜತೆಗಿನ ಆತಿಥ್ಯ ಸಭೆಯಲ್ಲಿ ಸಿಂಗ್ ಪಾಲ್ಗೊಳ್ಳಲಿದ್ದು, ಜಾಗತಿಕ ಹವಾಮಾನ ಬದಲಾವಣೆ, ಆಹಾರ ಬಿಕ್ಕಟ್ಟು ಮತ್ತು ಗಗನಕ್ಕೇರುತ್ತಿರುವ ತೈಲ ಬೆಲೆಗಳು ಪರಾಮರ್ಶೆಗೆ ಬರಲಿದೆ.
ಜಪಾನ್‌ಗೆ ತೆರಳುವ ಮುನ್ನ ಹೊರಡಿಸಲಾದ ಹೇಳಿಕೆಯಲ್ಲಿ ಪ್ರಧಾನಿ, ಮುಂಬರುವ ಶೃಂಗದಲ್ಲಿ ತಾನು ವಿಸ್ತೃತ ವ್ಯಾಪ್ತಿಯ ಜಾಗತಿಕ ವಿಷಯಗಳ ಮೇಲಿನ ಭಾರತದ ದೃಷ್ಠಿಕೋನವನ್ನು ಮಂಡಿಸಲಿದ್ದೇನೆ ಎಂದು ತಿಳಿಸಿದ್ದಾರೆ. ಜಾಗತಿಕ ಅರ್ಥಿಕತೆ ಮೇಲೆ ಇಂಧನ ಬೆಲೆ ಏರಿಕೆಯ ಪರಿಣಾಮ ಮತ್ತು ಗ್ರಾಹಕ ರಾಷ್ಟ್ರ ಮತ್ತು ಉತ್ಪಾದನಾ ರಾಷ್ಟ್ರಗಳ ಜಂಟಿ ಕ್ರಿಯೆಗಾಗಿನ ಅಗತ್ಯದ ಬಗ್ಗೆ ಬೆಳಕು ಚೆಲ್ಲಲಿದ್ದೇನೆ ಎಂದು ತಿಳಿಸಿದ್ದಾರೆ.
ಇಂದು ಭಾರತದ ಧ್ವನಿಯನ್ನು ಗೌರವದಿಂದ ಆಲಿಸಲಾಗುತ್ತಿದೆ. ಜಾಗತಿಕ ಸಮಸ್ಯೆಗಳ ಪರಿಹಾರದಲ್ಲಿ ಭಾರತದ ಪಾಲ್ಗೊಳ್ಳುವಿಕೆಯ ಅಗತ್ಯತೆ ಇದಕ್ಕೆ ಕಾರಣಾಗಿದೆ ಎಂದು ಅವರು ತಿಳಿಸಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಧನ ಲಾಭದ ನಿರೀಕ್ಷೆ, ಬಂಧು ಬಳಗದವರ ಭೇಟಿಯಾಗಲಿದೆ, ಹಿರಿಯರ ಆಶಿರ್ವಾದದ ಮೂಲಕ ಹಿಡಿದ ಕಾರ್ಯಗಳಲ್ಲಿ ಯಶಸ್ಸು. ಹಿತ ಶತ್ರುಗಳ ಬಗ್ಗೆ ಎಚ್ಚರವಿರಿ. ಆರೋಗ್ಯದ ಕಡೆಗೆ ಗಮನವಿರಲಿ. ಹಣಕಾಸಿನ ವಿಷಯದಲ್ಲಿ ತುಂಬಾ ಜಾಗೃತೆ ವಹಿಸಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಚಿತ್ರರಂಗದಲ್ಲಿ ಒಂದಲ್ಲ ಒಂದು ಗೊಂದಲ ಸೃಷ್ಟಿಯಾಗುತ್ತಲೇ ಇರುತ್ತದೆ. ಆದರೆ ಈ ಬಾರಿ ಒಂದು ಗೊಂದಲ ಸೃಷ್ಟಿಯಾಗಿದೆ. ಅದು ಚಿತ್ರರಂಗದ ಮಂದಿಯದ್ದಲ್ಲ. ಬದಲಾಗಿ ಪ್ರೇಕ್ಷಕರ ನಡುವೆ. 'ನಿನ್ನ ಪೂಜೆಗೆ ಬಂದೆ ಮಾದೇಶ್ವರ' ಹಾಡು ಈಗ ಎಲ್ಲೆಡೆ ಜನಪ್ರಿಯವಾಗುತ್ತಿದೆ. ಆದರೆ ಇದು ಯಾವ ಚಿತ್ರದ ಹಾಡು? |
| |
|
|
|
|
|
|
|