ಯಾಹೂ! | ನನ್ನ ಯಾಹೂ! | ಮೇಲ್ | ಚಿತ್ರ
ಶೋಧ
 
   ಮುಖ ಪುಟ ಸಾಹಿತ್ಯ ಕಥೆ
ಬಾರೋ ಬಾರೋ ಮಳೆರಾಯ.....
- ಜೋಮನ್ ವರ್ಗೀಸ್
Rainfall
AP
ಹಾಸಿಗೆಯ ಮೇಲೆ ಅಂಗಾತವಾಗಿ ಉರುಳಿ ನಿದ್ರೆ ಮಾಡಲು ಪ್ರಯತ್ನಿಸಿದವನಿಗೆ ಮೊಬೈಲ್‌ ಕೂಗು ಕರೆದು ಎಬ್ಬಿಸಿತು. ಮಧ್ಯರಾತ್ರಿ ಹನ್ನೆರಡಾಗಿರಬೇಕು. "ನಮ್ಮೂರಲ್ಲೂ ಮಳೆಯಾಗಿದೆ. ನಿಮ್ಮೂರಲ್ಲೂ ಮಳೆಯಾಗಿದೆ. ಕೆರೆ, ಬಾವಿ, ನದಿ, ನಾಲೆ, ಡ್ಯಾಮ್‌ಗಳೆಲ್ಲಾ ತುಂಬಿದೆ. ಇನ್ನೂ ಹಠ ಮಾಡಬೇಡ. ಇನ್ಮೇಲಾದರೂ ಸ್ನಾನ ಮಾಡು". ಗೆಳೆಯನೊಬ್ಬ ಆಸ್ಥೆಯಿಂದ ಕಳುಹಿಸಿದ ಮಿಂಚಂಚೆಯ ಸಂದೇಶವನ್ನು ಒದಿ ರಮೇಶ ನಸುನಕ್ಕ. ಮಧ್ಯರಾತ್ರಿ ತುಂಟ ಮೆಸೇಜು ಕಳುಹಿಸಿದ ಗೆಳೆಯನ ಮೇಲೆ ಸಿಟ್ಟು ಬರಲಿಲ್ಲ.

ಇನ್ನು ನಿದ್ರೆ ಹತ್ತುವುದಿಲ್ಲ ಎಂದವನೇ, ಬಾಟಲಿಯಲ್ಲಿದ್ದ ನೀರನ್ನೆತ್ತಿ ಗಟಗಟನೆ ಕುಡಿದು, ಕಿಟಕಿಯ ಹತ್ತಿರ ಬಂದು ನಿಂತ. ಆಗಸದಲ್ಲಿ ತಾರೆಗಳ ಓಟ ಪ್ರಾರಂಭವಾಗಿತ್ತು. ಅವನಿರುವುದು ಲೈನ್ ಬಜಾರಿನ ಗುರುದತ್ತ ಅಪಾರ್ಟ್‌ಮೆಂಟಿನಲ್ಲಿ. ಬಹಳ ಹಳೆಯ ಬಂಗಲೆ. ಸುಣ್ಣ ಬಣ್ಣ ಬಳಿದು ವರ್ಷಗಳೇ ಕಳೆದು ಹೋಗಿದ್ದವು. ಬಾಡಿಗೆ ಕಡಿಮೆಯೆಂದು ಅಲ್ಲಿಯೇ ಒಂದು ಕೋಣೆ ಹಿಡಿದು, ಮೂಲೆಯಲ್ಲಿ ಸ್ಟೌವ್ ಜೋಡಿಸಿ ಅನ್ನ ಬೇಯಿಸಿಕೊಂಡು ಜೀವನ ನಡೆಸಿದ್ದ ರಮೇಶ. ಪದವಿ ಮುಗಿಸಿ ಉರಲ್ಲಿ ಕುಳಿತವನನ್ನು ಉದ್ಯೋಗ ಹುಡುಕು ಎಂದು, ವಿಧಿ ಅನಾಮತ್ತಾಗಿ ಬೆಂಗಳೂರಿಗೆ ಎತ್ತಿ ಎಸೆದಿತ್ತು. ನಾನು ದುಡಿದು ಬದುಕುತ್ತೇನೆ ಎಂದವನಿಗೆ ಸ್ವಾಭಿಮಾನ ಅಡ್ಡಿಬಂದಿತ್ತು. ಮನೆಯಿಂದ ಪುಡಿಗಾಸು ಪಡೆಯದೆ ಬೆಂಗಳೂರಿನ ರೈಲು ಹತ್ತಿದ್ದ.

ಕಿಟಕಿಯಿಂದ ಕಣ್ಣಾಯಿಸಿದನಿಗೆ ಕೆಳಗೆ ನಿರ್ಜನ ರಸ್ತೆ ಕಾಣಿಸಿತು. ತನ್ನ ಬದುಕೂ ಈ ರಸ್ತೆಯಂತೆಯೇ ಎಲ್ಲಿ ಅಂತ್ಯಗೊಳ್ಳುವುದೋ ಎಂದು ನಿಟ್ಟುಸಿರುಬಿಟ್ಟ. ಗೆಳೆಯ ಕಳುಹಿಸಿದ ಸಂದೇಶವನ್ನು ಮತ್ತೊಮ್ಮೆ ಓದಿಕೊಂಡ. ಮಳೆ.. ಮಳೆ ಆತನನ್ನು ತನ್ನ ಗತಕಾಲದ ನೆನಪುಗಳತ್ತ ಕೊಂಡೊಯ್ಯತೊಡಗಿತು. ಮಳೆಯೆಂದರೆ ಅದೆಂತಹ ಅನುಭೂತಿ. ರಮೇಶನಿಗೆ ಚಾರ್ಲಿ ಚಾಪ್ಲಿನ್ ಹೇಳಿದ ಮಾತು ನೆನಪಾಯಿತು."ಮಳೆ ಅಂದರೆ ನನಗೆ ತುಂಬಾ ಇಷ್ಟ. ಯಾಕೆಂದರೆ ಮಳೆಯಲ್ಲಿ ಅಳುವುದು, ಕಣ್ಣೀರುಗೆರೆಯುವುದು ಯಾರಿಗೂ ಗೊತ್ತಾಗುವುದಿಲ್ಲ. ತುಂಬಾ ದುಃಖವಾದಾಗ ನಾನು ಮಳೆಯಲ್ಲಿ ಅಳುತ್ತಾ ನಡೆಯುತ್ತೇನೆ. ಚಾಪ್ಲಿನ್ ಕುರಿತು ಯಾವುದೋ ದಿನಪತ್ರಿಕೆಯಲ್ಲಿ ಪ್ರಕಟವಾದ ಲೇಖನ ನೆನಪಿಗೆ ಬಂದಿತ್ತು.

ರಮೇಶನ ಕಣ್ಣುಗಳೂ ತೇವಗೊಂಡವು. ಸುರಿಯುವ ಜಟಿ ಜಟಿ ಮಳೆಯಲ್ಲಿ ಒತ್ತರಿಸಿ ಬರುವ ಭಾವನೆಗಳನ್ನು ಬಿಗಿದಪ್ಪಿ ಮಳೆಗೆ ಮುಖವೊಡ್ಡಬೇಕೆನಿಸಿತು. ಇಂತಹ ಎಷ್ಟೋ ಮಳೆಯಲ್ಲಿ ನೆನೆದು ನಾನಿಷ್ಟು ದೊಡ್ಡವನಾಗಿದ್ದೇನೆ. ಕೊಚ್ಚೆಯಲ್ಲಿ ಕಾಲಿರಿಸಿ ಶಾಲೆಗೆ ನಡೆದು ಹೋಗಿದ್ದು, ಗದ್ದೆಯ ಏರಿಯಿಂದ ಜಾರಿಬಿದ್ದು ಚಡ್ಡಿಯ ಹಿಂದೆ ಕೆಸರು ಮೆತ್ತಿಕೊಂಡದ್ದು, ಸುರಿಯುವ ಜಡಿಮಳೆಯಲ್ಲಿ ಕಾಗದದ ದೋಣಿ ಹರಿಬಿಟ್ಟು ಟೈಟಾನಿಕ್ ಗಾತ್ರದ ಕನಸು ಕಂಡದ್ದು, ಉದ್ದನೆಯ ಕೊಕ್ಕೆಯಲ್ಲಿ ಗಾಳ ಸಿಕ್ಕಿಸಿ ಮೀನು ಹಿಡಿಯಲು ಕಾದು ಕೂತದ್ದು, ಹೀಗೆ ಒಂದೇ ಎರಡೇ ಮಳೆಗಾಲದ ಮರೆಯಲಾಗದ ಮಧುರ ನೆನಪುಗಳು ಒಂದೊಂದೇ ನೆನಪಿಗೆ ಬರತೊಡಗಿದವು.

ಮಳೆಗಾಲದ ರಾತ್ರಿಗಳೇ ಅದ್ಬುತ. ಚುಮು ಚುಮು ಚಳಿಯಲ್ಲಿ ಕುತ್ತಿಗೆಯವರೆಗೆ ಬೆಡ್‌ಶೀಟ್ ಎಳೆದುಕೂಂಡು ಮಲಗಿದರೆ, ಬೆಳಗ್ಗೆ ಏಳಲು ಮನಸ್ಸೇ ಆಗುತ್ತಿರಲಿಲ್ಲ. ರಾತ್ರಿ ಕೂಗುವ ವಂಡರ ಕಪ್ಪೆಗಳ ಶಬ್ದದೊಂದಿಗೆ ಅವುಗಳ ಗೋಲಿಯಾಕಾರದ ಕಣ್ಣುಗಳೂ ನೆನಪಾಗಿ ತಲೆಯ ತುಂಬಾ ಚಾದರ ಹೊದ್ದು ಮಲಗಿದ್ದು ಇನ್ನೂ ನೆನಪಿದೆ. ಬೆಳಗ್ಗೆ ಎದ್ದರೆ ಮನೆಯಂಗಳದ ತುಂಬ ನೀರು. ಗೋಡೆಯ ಪಕ್ಕದಲ್ಲಿದ್ದ ಬಾಳೆ ಗಿಡ ನೆಲಕ್ಕೆ ಬಾಗಿರುತ್ತದೆ. ಪಕ್ಕ ನಿಂತಿದ್ದ ನುಗ್ಗೆ ಗಿಡದ ಒಂದು ದೊಡ್ಡ ಕೊಂಬೆ ಮುರಿದಿರುತ್ತದೆ. ಮನೆಯ ಹಿತ್ತಲಿನ ಮಾವಿನ ಮರದಿಂದ ಕಾಯಿಗಳು ಉದುರಿ ಅಂಗಳದ ತುಂಬ ಚೆಲ್ಲಾಪಿಲ್ಲಿಯಾಗಿ ಬಿದ್ದಿರುತ್ತವೆ, ರಮೇಶ ಮಳೆಗಾಲದ ರಾತ್ರಿಗಳನ್ನು ಕಲ್ಲಿಸಿಕೊಂಡ.

ಮಳೆಗಾಲದಲ್ಲಿ ಅಮ್ಮ ಸಾಕಷ್ಟು ಕಷ್ಟಪಡುತ್ತಿದ್ದಳು. ಮಳೆಯಲ್ಲಿ ನೆನೆದ ಸೌದೆ ಬೆಂಕಿ ಹೊತ್ತಿಕೊಳ್ಳದೆ, ಹೆಂಚಿನ ಮನೆಯ ತುಂಬ ಹೊಗೆಯಾಗಿ ಆಕೆಯ ಮೂಗಿನಿಂದ ಹಾಗೂ ಕಣ್ಣಿನಿಂದ ನೀರು ಬರುತ್ತಿತ್ತು. ಕುಡಿಯುವ ನೀರು ತುಂಬಿಡಲು ಹರಸಾಹಸ ಪಡುತ್ತಿದ್ದಳು. ನಾವು ತಾಸಿಗೊಮ್ಮೆ ತೋಯಿಸುತ್ತಿದ್ದ ಬಟ್ಟೆಯನ್ನ ತೊಳೆದು ಒಣಗಿಸುವುದೇ ಆಕೆಯ ಬಹುದೊಡ್ಡ ಕೆಲಸವಾಗಿತ್ತು. ಅಂತೂ ಇಂತೂ ಮಳೆಗಾಲ ಮುಗಿಯುವುದರೊಳಗೆ ಶೀತ, ಕೆಮ್ಮು ನೆಗಡಿಯಾದಿಯಾಗಿ ಎಲ್ಲರೂ ಒಮ್ಮೊಮ್ಮೆ ಮನೆಗೆ ಭೇಟಿಯಿತ್ತು ಹೋಗುತ್ತಿದ್ದವು. ಅಮ್ಮನಿಂದ ನಿತ್ಯ ಅತಿಥಿ ಸತ್ಕಾರ ನಡೆಯುತ್ತಿತ್ತು. ಮನಸ್ಸು ನೆನಪುಗಳ ಲಹರಿಯಲ್ಲಿ ತೇಲಿತ್ತು.

ಹೀಗೆ ನೆನಪು ಮಾಡಿಕೊಂಡು ರೂಮಿನೊಳಗೆ ಬಂದು ಹಾಸಿಗೆಯಲ್ಲಿ ಒರಗಿದವನಿಗೆ ಅದೆಷ್ಟೊತ್ತಿಗೆ ನಿದ್ರೆ ಹತ್ತಿತೋ ಏನೋ. ಬೆಳಗಿನ ಜಾವ ಕಾಲಿನ ಬುಡದಲ್ಲಿ ಹಸಿ ಹಸಿ ಸೋಕಿದಂತಾಗಿ ತಟ್ಟನೆ ಎದ್ದು ಕುಳಿತ. ರೂಮಿನಲೆಲ್ಲಾ ನೀರು. ಬೆಳಗಿನ ಜಾವದಲ್ಲಿ ಸುರಿದ ಗಾಳಿ ಮಳೆ, ಮುರಿದ ಕಿಟಕಿಯೊಳಗಿಂದ ನೀರನ್ನು ಒಳಹಾಕಿತ್ತು. ಹಾಸಿಗೆ ಸುತ್ತಿಟ್ಟು, ಹೊರಗೋಡಿದೆ. ಟೆರೇಸ್‍‌ನಲ್ಲಿ ಒಣಗಲು ಹಾಕಿದ ಎರಡು ಶರ್ಟ್‌ಗಳಲ್ಲಿ ಒಂದು ಶರ್ಟ್ ಕೆಳಗೆ ಬಿದ್ದು ಗಟಾರು ಸೇರಿತ್ತು. ಓಣಿಯ ಮಕ್ಕಳು ಕಟ್ಟಿಗೆಯಲ್ಲಿ ಅದನ್ನು ಸುತ್ತಿಕೊಂಡು ಹಾಡುತ್ತಿದ್ದರು. ಬಾರೋ ಬಾರೋ ಮಳೆರಾಯ ಬಾಳೆಯ ತೋಟಕ್ಕೆ ನೀರಿಲ್ಲ...
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ತಪ್ಪು ನನ್ನದಾ....
ಮಸುಕು ಮನಸ್ಸಿನ ಮೋಟುಗೋಡೆಯಾಚೆ...
ಎರಡು ಮುಖಗಳು-2
ಎರಡು ಮುಖಗಳು-1
ಎರಡು ಮುಖಗಳು (ಭಾಗ 1)
ಮುಖವಾಡ
ಸಾಹಿತ್ಯ
ಕಥೆ - ಭೈರಪ್ಪನವರ ದಾಟು ಕಾದಂಬರಿಯಲ್ಲಿ ಬರುವ ಕಥಾನಾಯಕಿ ಸತ್ಯಳ ಪಾತ್ರ ವಿಭಿನ್ನ ಅದೇ ಅವಳ ತಿರಸ್ಕೃತ ಪ್ರೇಮವೇ ಕಥಾ ವಸ್ತು ಎಂದು ಮನಸ್ಸು ಪದೇ ಪದೇ ಹೇಳುವ ಪ್ರಯತ್ನ ಮಾಡುತ್ತಿದ್ದರೂ ಅಲ್ಲ ಅದಲ್ಲ ನಿಜ ಬದುಕಿನಲ್ಲಿ ಇದು ಸಾಧ್ಯವಾ...
ಮುಂದೆ ಓದಿ|ಮತ್ತಷ್ಟು...
ಆರೋಗ್ಯ
AP
 
ಕುಟುಂಬ ಯೋಜನೆ ಮಹಿಳೆಯ ಜವಾಬ್ದಾರಿಯೇ?
ಕುಟುಂಬ ಯೋಜನೆಯೇನಿದ್ದರು ಮಹಿಳೆಯರ ಜವಾಬ್ದಾರಿಯೇ? ಹಾಗಂತ ಭಾರತದ ಪುರುಷ ಪುಂಗವರು ತಿಳಿದುಕೊಂಡಿದ್ದಾರೆ ಎಂದು ಸಮೀಕ್ಷೆಯೊಂದು ಹೇಳಿದೆ.
ಮೊಗ್ಲಿ ಉತ್ಸವ: ಶಾಲೆ ಮಕ್ಕಳು ಅಸ್ವಸ್ಥ
ಪ್ರಥಮ ಚಿಕಿತ್ಸೆ ಪೆಟ್ಟಿಗೆ: ನಿರ್ಲಕ್ಷ್ಯ ಸಲ್ಲ
ಮನರಂಜನೆ
ಚಿತ್ರ ಸಮೀಕ್ಷೆ - ಆರ್.ಎಸ್.ಗೌಡ ನಿರ್ಮಾಣದ, ಎಸ್.ಮಹೇಂದರ್ ನಿರ್ದೇಶನದ, ಶಿವರಾಜ್ ಕುಮಾರ್ ನಿರ್ದೇಶನದ "ಗಂಡನ ಮನೆ" ರಾಜ್ಯಾದ್ಯಂತ ತೆರೆ ಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ.
ಮುಂದೆ ಓದಿ|ಮತ್ತಷ್ಟು...
Marketplace