ಯಾಹೂ! | ನನ್ನ ಯಾಹೂ! | ಮೇಲ್ | ಚಿತ್ರ
ಶೋಧ
 
   ಮುಖ ಪುಟ ಸಾಹಿತ್ಯ ಕಥೆ
ಸ್ವಾತಂತ್ರ್ಯದ ಹೆಸರಲ್ಲಿ-1
- ಹಂಝ ಮಲಾರ್
ಲೇಖಕರ ಪರಿಚಯ - ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹಂಝ ಮಲಾರ್ ತನ್ನದೇ ಸ್ಥಾನ ಸಂಪಾದಿಸಿಕೊಂಡಿದ್ದಾರೆ. ಅತ್ಯಂತ ಕಿರಿಯ ವಯಸ್ಸಿನಲ್ಲೇ ಬರೆಯಲಾರಂಭಿಸಿರುವ ಹಂಝ, ಮುಸ್ಲಿಂ ಬದುಕಿನ ಒಳಹೊರಗುಗಳ ಸುತ್ತ ಹಲವಾರು ಕಥೆಗಳನ್ನು ಹೆಣೆದಿದ್ದಾರೆ. ಇವರ ಅನೇಕ ಕಾದಂಬರಿಗಳೂ ಪ್ರಕಟವಾಗಿವೆ.

ಭಾಗ-1
ನಿಮಗೆ ಗೊತ್ತಿರಬಹುದು. ಆಗಸ್ಟ್ 15ರ ಬೆಳಿಗ್ಗೆ 7ರಿಂದ ಅಂದಾಜು 11 ಗಂಟೆಯೊಳಗೆ ಈ ಇಂಡಿಯಾ ಎಂಬ ದೇಶದ ಮೂಲೆ ಮೂಲೆಯಲ್ಲಿರುವ ಶಾಲಾ ಕಾಲೇಜು, ಸರಕಾರಿ ಮತ್ತು ಖಾಸಗಿ ಕಚೇರಿ, ಅಂಗಡಿ ಮುಂಗಟ್ಟುಗಳ ಎದುರು ಕೇಸರಿ, ಬಿಳಿ ಹಸಿರನ್ನು ಒಳಗೊಂಡ ತ್ರಿವರ್ಣದ ಬಾವುಟಗಳು ಹಾರಾಡುತ್ತವೆ. ಧ್ವಜವಂದನೆ ಅಧವಾ ಧ್ವಜಾರೋಹಣದ ವೇಳೆ ಹೂಗುಚ್ಚಗಳು ಗಾಳಿಯಲ್ಲಿ ಒಂದಿಷ್ಟು ಹೊತ್ತು ತೇಲಿ ನಂತರ ಚಲ್ಲಾ ಪಿಲ್ಲಿಯಾಗಿ ಕೆಳಗೆ ಬೀಳುತ್ತದೆ. ಕೆಲವೊಮ್ಮೆ ಸಂಘಟಕರ ಅಚಾತುರ್ಯದಿಂದ ಬಾವುಟವೇ ತಲೆಕೆಳಗಾಗಿ ಹಾರಾಡಿ, ಪ್ರಜ್ಞೆ ಬಂದ ಕೂಡಲೇ ಅದನ್ನು ಸರಿಪಡಿಸಲಾಗುತ್ತದೆ. ಪುಟಾಣಿಗಳಿಂದ ಸ್ವಾತಂತ್ರ ಸಂಗ್ರಾಮಕ್ಕಾಗಿ ಹೊರಾಡಿದ ವೀರಾಧಿವೀರರ ಬಗ್ಗೆ ಭಾಷಣ ಹೊಡೆಸಲಾಗುತ್ತದೆ. ಸಿಕ್ಕಿದ ಅವಕಾಶವೆಂದು ಬಗೆದು ವೇದಿಕೆಯ ಮೇಲೇರಿ ಬೊಬ್ಬಿಡುವ ರಾಜಕಾರಣಿಗಳು ಮತ್ತು ಅವಕಾಶವಾದಿಗಳ ಭಂಡತನವೆಲ್ಲಾ ಆ ದಿನ ಬಟ್ಟಂಬಯಲಾಗುತ್ತದೆ. ಹಾಗೆ ಪತ್ರಿಕೆಯ ಪುಟದ ಉದ್ದಗಲಕ್ಕೂ ಚಿತ್ರ ಸಹಿತ ಸುದ್ದಿ ಪ್ರಕಟವಾಗುತ್ತದೆ.

ಆದರೆ ಸ್ವಾತಂತ್ರ್ಯ ಸಿಕ್ಕಿ 50ವರ್ಷ ಕಳೆದು 51ನೇ ಉತ್ಸವ ಆಚರಿಸುವ ವೇಳೆ ಆ ಊರಲ್ಲಿ ನಡೆದ ಘಟನೆಯ ಕಹಿ ನೆನೆಪು ಮಾತ್ರ ಇನ್ನೂ ಪ್ರಜ್ಞಾವಂತ ನಾಗರಿಕರ ಮನದಿಂದ ಮಾಸಿಲ್ಲ. ಅಂದು ನಡೆದ ಕಹಿ ನೆನೆಪು, , ರಕ್ತದೋಕುಳಿ ಮತ್ತ ಮರುಕಳಿಸದಂತೆ 'ಆತ ' ಪ್ರಯತ್ನಿಸುತ್ತಾನೆ. ಆದರೆ ಆಗಸ್ಟ್ 14ರ ಮಧ್ಯ ರಾತ್ರಿಯವರೆಗೂ ಊರಿನ ಸರಕಾರಿ ಶಾಲೆಯ ಎದುರು ವೇದಿಕೆಯ ನಿರ್ಮಾಣ ಸಹಿತ ಮತ್ತಿತ್ಯಾದಿ ಕೆಲಸದ ಸಂಪೂರ್ಣ ವ್ಯವಸ್ಧೆಯಲ್ಲಿ ತೊಡಗಿ ನಿರಾಳ ನೆಮ್ಮದಿಯ ನಿಟ್ಟುಸಿರು ಬಿಟ್ಟು ತನ್ನೆಲ್ಲಾ ಆಸೆಗಳನ್ನು ಪೂರೈಸಲಾಗದೆ ಮುರುದಿನ ಬೆಳಗ್ಗೆ ಸುದ್ದಿಯಾದದ್ದು ಮಾತ್ರ ವಿಪರ್ಯಾಸ.

ಅದೊಂದು ಪುಟ್ಟ ಊರು. ಸರಕಾರಿ ದಾಖಲೆ ಪತ್ರಗಳಲ್ಲಿ ಆ ಊರಿನ ಹೆಸರನ್ನು ಅರಸ್ತಾನ ಎಂದು ಗುರುತಿಸಲಾಗಿದೆ. ಹಿಂದೂ, ಮುಸ್ಲಿಂ, ಕ್ರೈಸ್ತ ಕುಟುಂಬಗಳೇ ಇರುವ ಆ ಊರಲ್ಲಿ ಭಜನೆ ಮಂದಿರ, ಮಸೀದಿ, ಚರ್ಚ್ ಇದೆ. ಜೊತೆಗೆ ಇನ್ನಿತರ ಸರಕಾರಿ ವ್ಯವಸ್ಧೆಗಳೂ ಅಲ್ಲಿದ್ದವು. ಅಷ್ಟೇ ಅಲ್ಲ, ಕೇಸರಿ, ಬಿಳಿ, ಹಸಿರು ಬಣ್ಣಗಳಿಗೆ ದ್ಯೋತಕವಾಗಿರುವ ಮೂರೂ ಸಮುದಾಯಗಳ ಶ್ರೇಯೋಭಿವೃದ್ದಿಗಾಗಿ ಮೂರು ಸಂಘಟನೆಗಳಿವೆ. ಇವು ಮೂರೂ ಧಾರ್ಮಿಕ ಕಾರ್ಯಕ್ರಮಗಳಿಗೆ ಮಾತ್ರ ಒತ್ತು ನೀಡುವ ಕಾರಣ ಇತರ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿ ಮೂರೂ ಸಮುದಾಯದವರನ್ನು ಒಂದೇ ವೇದಿಕೆಯಲ್ಲಿ ತರುವಂತ ಸಂಘಟನೆಯೊಂದರ ಕೊರತೆ ಅಲ್ಲಿತ್ತು. ಹಾಗಾಗಿಯೇ ಅಲ್ಲಿ ಸ್ವಾತಂತ್ರ್ಯ ಉತ್ಸವ ಆಚರಣೆಗಿಂತಲೂ ಪೈಪೋಟಿಗಗೆ ಹೆಚ್ಚು ಒತ್ತು ಕೊಡುವಂತಹ ವಾತಾವರಣವೇ ಕಂಡು ಬರುತ್ತಿತ್ತು.
(ಮೂಲ - ವೆಬ್‌ದುನಿಯಾ)
1| 2
 
ಮತ್ತಷ್ಟು...
ಎರಡು ಮುಖಗಳು-1
ಎರಡು ಮುಖಗಳು (ಭಾಗ 1)
ಮುಖವಾಡ
ತಂಗಿ
ಸ್ವಾತಂತ್ರ್ಯದ ಹೆಸರಲ್ಲಿ-4
ಸ್ವಾತಂತ್ರ್ಯದ ಹೆಸರಲ್ಲಿ-3
ಮನರಂಜನೆ
ಚಿತ್ರ ಸುದ್ದಿ - ಯೋಗರಾಜ ಭಟ್ಟರು ಸುರಿಸಿರುವ ಮುಂಗಾರು ಮಳೆ ಜಯಭೇರಿ ಭಾರಿಸಿದೆ. ಈ ಚಿತ್ರ ನಿರ್ಮಾಪಕ ಕೃಷ್ಣಪ್ಪ ಅವರಿಗೆ ಕಾಂಚಾಣದ ಮಳೆಯನ್ನು ತಂದುಕೊಟ್ಟಿದೆ. ಕಾಮಿಡಿ ಟೈಂ ಗಣೇಶ್ ಅದೃಷ್ಟ ಖುಲಾಯಿಸಿದೆ. ಒಟ್ಟಾರೆ ರಾಜ್ಯದೆಲ್ಲೆಡೆ ಈಗ ಮಳೆಗೆ ಸೆಂಚುರಿ ರಂಗು. ಚಿತ್ರಪ್ರೇಮಿಗಳಿಗೆ ಮುಂಗಾರು ಮಳೆಯ ಹಾಡಿನದೇ ಗುಂಗು!
ಮುಂದೆ ಓದಿ|ಮತ್ತಷ್ಟು...
ಆರೋಗ್ಯ
AP
 
ಲಿವರ್ ಕ್ಯಾನ್ಸರ್‌ ತಗ್ಗಿಸುವ ಕಾಫಿ
ಹೆಚ್ಚು ಕಾಫಿ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಮಾತನ್ನು ನಾವು ಕೇಳುತ್ತಲೇ ಬಂದಿದ್ದೇವೆ. ಆದರೆ ಕಾಫಿ...
ಗರ್ಭಧಾರಣಾ ತೂಕ ಕಳೆಯಲು ವಾಕಿಂಗ್ ಸಹಕಾರಿ
ವಯಸ್ಸು, ಒತ್ತಡ ಗರ್ಭಪಾತಕ್ಕೆ ಕಾರಣ
ಧರ್ಮ
ಧಾರ್ಮಿಕ ಲೇಖನ - ಒಮ್ಮೆ ದಶರಥನು ಬೆಳದಿಂಗಳಿನಲ್ಲಿ ತನ್ನ ಬೇಟೆಯೂಡುವ ತುಡಿತವನ್ನು ತಣಿಸುವ ಸಲುವಾಗಿ ಕಾಡಿಗೆ...
ಮುಂದೆ ಓದಿ|ಮತ್ತಷ್ಟು...
Marketplace