|
| ನೆನಪಾಗಿದೆ... ಆ ದಿನಗಳು, ಆ ಕ್ಷಣಗಳು... | |
ನೀನಂದು ನನ್ನ ಮೊಬೈಲ‌್‌ಗೆ ಕರೆ ಮಾಡಿದಾಗ ಕೇಳಲಿಲ್ಲವಾ ಯಾಕೆ ಈ ಹಾಡನ್ನು ಕಾಲರ್ ಟ್ಯೂನ್ ಆಗಿ ಸೆಟ್ ಮಾಡಿದ್ದೀಯಾ ಅಂತ? ನಿನಗೆ ಈ ಹಾಡು ನೆನಪಿದೆಯಾ ಅನು?..ಅಂದು ನಮ್ಮ ಕಾಲೇಜ್ ಡೇಗೆ ನೀನು ನನಗೆ ಡೆಡಿಕೇಟ್ ಮಾಡಿದ್ದು ಈ ಹಾಡನ್ನೇ ಅಲ್ವಾ..
"ಮೇರೆ ಹಾಥ್ ಮೆ ತೇರಾ ಹಾಥ್ ಹೋ ಸಾರಿ ಜನ್ನತೆ ಮೇರೆ ಸಾತ್ ಹೋ" ಎಷ್ಟು ಸುಂದರವಾದ ಸಾಲುಗಳು.. ನಮ್ಮ ಕಾಲೇಜ್ ಡೇ ಸೆಲೆಬ್ರೇಶನ್ ಹಾಗೇ ಅಲ್ವಾ. ಐದು ರುಪಾಯಿ ಕೊಟ್ಟು ಡೆಡಿಕೇಶನ್ ಕೌಂಟರ್‌ಗೆ ಹೋಗಿ ಕಂಪ್ಯೂಟರ್‌ನಲ್ಲಿ ನಮ್ಮವರಿಗೊಂದು ಹಾಡು ಡೆಡಿಕೇಟ್ ಮಾಡುವುದೇ ಒಂದು ಥ್ರಿಲ್!
ಅನು, ಅಂದು ಮೊದಲ ಬಾರಿಗೆ ಮೈಕ್‌ನಲ್ಲಿ "ದ ನೆಕ್ಸ್ಟ್ ಸೋಂಗ್ ಈಸ್ ಡೆಡಿಕೇಟೆಡ್ ಫ್ರಮ್ ಅನು, ಟು..." ಎಂದು ನನ್ನ ಹೆಸರು ಕರೆದು ಹೇಳಿದಾಗ ನಂಗೆ ಒಮ್ಮೆಲೆ ಶಾಕ್! ಆ ಹಾಡು ಕೇಳಿದಾಗೆಲ್ಲ ನಂಗೆ ನೀನು ನೆನಪಾಗುತ್ತೀಯ. ಅಂದು ನಂಗೆ ಎಷ್ಟು ಖುಷಿಯಾಗಿತ್ತು ಗೊತ್ತಾ? ಅದಕ್ಕಾಗೇ ನಾನದನ್ನು ಕಾಲರ್ ಟ್ಯೂನ್ ಆಗಿ ಸೆಲೆಕ್ಟ್ ಮಾಡಿದ್ದು.
ಖಂಡಿತವಾಗಿಯೂ ನಾವು ಕಾಲೇಜ್‌ನಲ್ಲಿ ಕಳೆದ ಅದೆಷ್ಟೋ ಸುಮಧುರ ಗಳಿಗೆಗಳು ಇಂದಿಗೂ ನನ್ನಲ್ಲಿ ಹಸುರಾಗಿಯೇ ಇವೆ. ನೀನು ನನ್ನ ಗೆಳೆಯನಾಗಿ ದೊರೆತದ್ದೇ ನನ್ನ ಲಕ್. ನಮ್ಮಿಬ್ಬರ ಗೆಳೆತನ ನಂತರ ಅದು ಪ್ರೇಮವಾಗಿ ಬದಲಾದದ್ದು...ಎಲ್ಲವೂ ಕಾಲದ ಲೀಲೆಯಲ್ಲದೆ ಮತ್ತೇನು?
ಅನು, ನೀನು ನನ್ನನ್ನು ಪ್ರೊಪೋಸ್ ಮಾಡುವುದಕ್ಕಿಂತ ಮೊದಲೇ ನಾನು ನಿನ್ನನ್ನು ಎಷ್ಟು ಮೆಚ್ಚಿಕೊಂಡಿದ್ದೆ ಗೊತ್ತಾ? ನಾನು ಮಂಕಾಗಿ ಕುಳಿತಿರುವಾಗೆಲ್ಲ ನಿನ್ನ ಹಾಸ್ಯಭರಿತ ಚೂಟಿ ಮಾತುಗಳಿಂದ ನನ್ನನ್ನು ನಗಿಸುತ್ತಿದ್ದವನು ನೀನಲ್ಲವೇ? ನಾನು ಪರೀಕ್ಷೆ ಅಂತ ಟೆನ್ಶನ್ ಮಾಡ್ತಿರುವಾಗ ನೀನು ಅದೆಷ್ಟು ಬಾರಿ ನನಗೆ ನೋಟ್ಸ್ ರೆಫರ್ ಮಾಡಲು ಸಹಾಯ ಮಾಡಿದ್ದೆ. ಕಾಲೇಜಿನ ಬ್ರಿಲ್ಲಿಯಂಟ್ ಸ್ಟೂಡೆಂಟ್ ಎಂದೆನಿಸಿದ್ದ ನಿನ್ನನ್ನು ಕಾಣಬೇಕಾದರೆ ಲೈಬ್ರರಿಗೇ ಬರಬೇಕಾಗಿತ್ತು. ನಿನ್ನ ಗೆಳೆತನವಾದಂದಿನಿಂದ ನಾನು ಲೈಬ್ರರಿಯನನ್ನು ಮೆಚ್ಚಿಕೊಂಡೆ.
ನಿನ್ನ ಗೆಳೆತನದಿಂದಲೇ ನನಗೆ ಉತ್ತಮ ಅಂಕಗಳು ಬರತೊಡಗಿದ್ದವು ಅದೇ ರೀತಿ ನಿನ್ನತ್ತ ನನ್ನ ಸ್ನೇಹವು ಚಿಗುರೊಡೆಯುತ್ತಾ ಬಂದಿತ್ತು. ಅದೇ ಕ್ಷಣ ನಿನ್ನಲ್ಲಿ ನನ್ನ ಮನಸ್ಸನ್ನು ಬಿಚ್ಚಿಡಬೇಕೆಂದಿದ್ದೆ, ಆದರೆ ನೀನದನ್ನ ನಿರಾಕರಿಸಿದರೆ ಅಂತ ನನಗೇನೋ ಭಯ ಆಗ್ತಾ ಇತ್ತು. ಹಾಗಾಗಿ ಪ್ರಿಯತಮನಲ್ಲದಿದ್ದರೂ ನೀನು ನನ್ನ ಉತ್ತಮ ಗೆಳೆಯನಾಗಿದ್ದರೆ ಸಾಕು ಎಂದು ನಾನೇ ನಿರ್ಧರಿಸಿಕೊಂಡಿದ್ದೆ.
ಅದೊಂದು ದಿನ ನೀನಾಗೆ ನಿನ್ನ ಮನಸ್ಸನ್ನು ನನ್ನ ಮುಂದೆ ತೆರೆದಿಟ್ಟಾಗ ನನ್ನ ಪ್ರಾರ್ಥನೆಗೆ ಫಲ ಸಿಕ್ಕಿದಂತಾಯಿತು. ಆದರೆ ಕಾಲೇಜಿನಲ್ಲಿ ಇದು ಯಾರಿಗೂ ಗೊತ್ತಾಗ ಬಾರದೆಂದು ನಾವೆಂದೂ ಸಾದಾ ಗೆಳೆಯರಂತೆಯೇ ನಡೆದುಕೊಂಡಿದ್ದೆವು. ಗೆಳೆಯರೆಲ್ಲರೂ ಸೇರಿ ಚುಡಾಯಿಸುವಾಗ "ವಿ ಆರ್ ಜಸ್ಟ್ ಫ್ರೆಂಡ್ಸ್, ಈ (ಮಂದ ಬುದ್ದಿ) ಹುಡುಗಿಯನ್ನು ನಾನು ಪ್ರೀತಿಸುವುದೇ?" ಎಂದು ನಿನ್ನ ಗೆಳೆಯರಲ್ಲಿ ನೀನು ಹೇಳುತ್ತಿದ್ದಿಯಲ್ಲವೇ? ಆದರೆ ಅದೇ ಮಂದ ಬುದ್ದಿಯ ನನ್ನನ್ನು ನೀನು ಪ್ರೀತಿಸುತ್ತಾ ತಮಾಷೆಯಾಡುತ್ತಿದ್ದೆ. ಕಾಲೇಜಿನ ಲೈಬ್ರರಿಯಲ್ಲಿ ಕುಳಿತು ಕಂಬೈನ್ಡ್ ಸ್ಟಡಿ ಎಂಬ ನೆಪವೊಡ್ಡಿ ನಾವೆಷ್ಟು ಕಾಲ ಕಳೆದಿದ್ದೀವಿ!
| | (ಮೂಲ - ವೆಬ್‌ದುನಿಯಾ) |
|
| |
| | | |
|
|
|
|
|
| ಚಿತ್ರ ಸಮೀಕ್ಷೆ - ನಾಟಕವನ್ನು ಷೂಟ್ ಮಾಡಬೇಕೆಂದರೆ ಏನು ಮಾಡಬೇಕು? ಸ್ಟೇಜ್ ಎದುರಿಗೆ ಒಂದು ಕೆಮೆರಾ ಫಿಕ್ಸ್ ಮಾಡಿ ಆನ್ ಮಾಡಿದರೆ ಆಯಿತು ಎನ್ನುವುದು ಉತ್ತರ. ಅದೇ ಟೆಕ್ನಿಕ್ ಬಳಸಿರುವುದು "ಆಪರೇಷನ್ ಅಂಕುಶ" ಚಿತ್ರದ ವಿಶೇಷ. |
| |
|
|
|
|
 | | PTI |
| | | ಅನಿಲ್ ಕುಂಬ್ಳೆ | | ಇತ್ತೀಚೆಗೆ ನಡೆದ ಕ್ರಿಕೆಟ್ ಟೆಸ್ಟ್ ಸರಣಿಯಲ್ಲಿ, ಇಪ್ಪತ್ತೇಳು ವರ್ಷಗಳ ಬಳಿಕ ಸಾಂಪ್ರದಾಯಿಕ ವೈರಿ ಪಾಕಿಸ್ತಾನದ... |
|
| |
|
|
|
|
|
| ಆತ್ಮಚರಿತ್ರೆ - ಈ ಮಣ್ಣಿನ ಸೊಗಡಿನ ಸಾಹಿತ್ಯ ರಚಿಸಿದ ನಮ್ಮೆಲ್ಲರ ಅಚ್ಚುಮೆಚ್ಚಿನ ಕು.ವೀರಭದ್ರಪ್ಪನರ 'ಅರಮನೆ' ಕಾದಂಬರಿಗೆ ಈಗ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗರಿ. |
| |
|
|
|
|
|
|
|