ಯಾಹೂ! | ನನ್ನ ಯಾಹೂ! | ಮೇಲ್ | ಚಿತ್ರ
ಶೋಧ
 
   ಮುಖ ಪುಟ ಸಾಹಿತ್ಯ ಪ್ರೇಮಗಾಥೆ
ಇರಲಿಬಿಡು....ಈ ಜನ್ಮಕ್ಕೆ ಸ್ನೇಹವೊಂದೇ ಸಾಕು..!
- ಮಂಜುನಾಥ ಬಂಡಿ
ಗುರುವಾರ, 13 ಸೆಪ್ಟೆಂಬರ್ 2007   ( 19:08 IST )
AP
"ನನ್ನ ನಿನ್ನ ಸ್ನೇಹ ಗಾಳಿಪಟದಂತೆ. ಗಾಳಿಪಟದ ಬಣ್ಣದ ಹಾಳೆ ನೀನಾದರೆ, ಪಟ ಮೇಲೆರಲು ಬೇಕಾಗುವ ದಾರ ನಾನು. ಜನರು ಬಣ್ಣದ ಗಾಳಿಪಟವನ್ನು ನೋಡಿ ಪ್ರಶಂಸೆ ವ್ಯಕ್ತಪಡಿಸುತ್ತಾರೆ, ನಾನಾರಿಗೂ ಕಾಣಿಸುವುದಿಲ್ಲ. ಆದರೆ, ನಿನ್ನ ಯಶಸ್ವಿ ಹಾರಾಟದ ಹಿಂದೆ ಸದಾ ನಾನಿರುತ್ತೇನೆ".

"ನಮಗೆ ಬೇಡವಾದವರ ಜೊತೆ ಜೀವನವನ್ನು ಕಳೆಯುವುದಕ್ಕಿಂತ, ನಮ್ಮನ್ನು ಪ್ರೀತಿಸುವವರ ಜೊತೆ ಕೆಲವು ಕ್ಷಣಗಳನ್ನು ಕಳೆಯುವುದರಲ್ಲಿ ಜೀವನದ ಸಾರ್ಥಕತೆ ಅಡಗಿದೆ" ಎನ್ನುವಂತಹ ಸುಂದರ ಸಂದೇಶವನ್ನು ಕಳಿಸಿದ ನಂತರವಷ್ಟೇ ಅಲ್ಲವೇನೇ ಹುಡುಗಿ ನಾನು, ನಿನ್ನನ್ನ ಆಯ್ಕೆ ಮಾಡಿಕೊಂಡಿದ್ದು.

ಇವುಗಳ ಅಸಲಿ ಅರ್ಥವೇನು ಗೊತ್ತಾ....!, ಈ ತರಹದ ಸಂದೇಶಗಳು ಹುಡುಗರ ಪ್ರೀತಿಯನ್ನು ಪ್ರಚೋದಿಸುತ್ತವೆ ಎನ್ನುವ ಪರಿಕಲ್ಪನೆಯೂ ನಿನಗಿರಲಿಲ್ಲವೇ.... ಇರಲಿ ಬಿಡು. ನೀನು ನನ್ನ ಪ್ರೀತಿಯನ್ನು ತಿರಸ್ಕರಿಸಿದರೇನಂತೆ....... ಶಾಶ್ವತವಾಗಿ ಉತ್ತಮ ಸ್ನೇಹಿತರಾಗಿರೋಣ ಎನ್ನುವ ಮೂಲಕ ನನ್ನಿಂದ ಸ್ನೇಹವನ್ನು ಬಯಸಿದೆಯಲ್ಲ. ಅಷ್ಟು ಸಾಕು. ಇರಲಿ ಬಿಡು...ಈ ಜನ್ಮದಲ್ಲಿ ಸ್ನೇಹವೊಂದೇ ಸಾಕು....!

ಯಾವುದೇ ಒಂದು ವಸ್ತುವನ್ನಾಗಲಿ, ಒಬ್ಬ ವ್ಯಕ್ತಿಯನ್ನಾಗಲಿ ಅರ್ಥೈಸಿಕೊಳ್ಳಲು ತನ್ನದೇ ಆದ ಸಮಯ ಬೇಕಾಗುತ್ತದೆ.
ಅಸಲಿಗೆ ನಾವಾದರೂ ಎಷ್ಟು ದಿನದ ಗೆಳೆಯರು...? ಕೇವಲ ಒಂದು ವಾರದಿಂದ ತುಂಬಾ ಪರಿಚಿತರಾಗಿದ್ದು, ಅಷ್ಟರಲ್ಲಿಯೇ, ನಮ್ಮಿಬ್ಬರ ಮಧ್ಯೆ ಪ್ರೀತಿ ಬೆರೆತು, ಬೆಳೆದು ಅದು ಫಲಕೊಡು ಎಂದರೆ ಹೇಗೆ ತಾನೆ ಕೊಟ್ಟಿತು?. ಆದರೆ, ನೆನಪಿರಲಿ ಗೆಳತಿ... ಇದು ವೇಗದ ಯುಗ. ಕ್ರಿಕೆಟ್‌ನಂತಹ ಮಂದಗತಿಯ ಐದು ದಿನಗಳ ಆಟವೇ ಇಂದು ಕೇವಲ ಮೂರು ತಾಸಿನಲ್ಲಿ ಮುಗಿಯುವಷ್ಟು ಚುಟುಕುಗೊಂಡಿದೆ ಎಂದರೆ, ನನ್ನ-ನಿನ್ನ ಸ್ನೇಹ, ಪ್ರೀತಿಗೆ ಪರಿವರ್ತನೆಗೊಳ್ಳಲು ತಿಂಗಳುಗಟ್ಟಲೆ ಕಾಯಬೇಕಾ ಹೇಳು ಗೆಳತಿ? ನೆನಪಿರಲಿ, ನಾವಿರುವುದು ಮೆಟ್ರೋ ಸಿಟಿಯಲ್ಲಿ. ಇಲ್ಲಿ ಏನೇ ಆದರೂ ವೇಗಕ್ಕೆ ಹೆಚ್ಚು ಪ್ರಾಧಾನ್ಯ.

ನಿನ್ನ ಪ್ರೀತಿ ನನಗೆ ಸಿಗಲಿಲ್ಲ ಎಂದು ಗೊಣಗಿಕೊಳ್ಳುತ್ತಾ, ದೇವದಾಸ್ ಆಗುವಷ್ಟು ಸಮಯ ನನ್ನಲ್ಲಿಲ್ಲ, ನನಗೆ ನನ್ನದೇ ಆದ ಗುರಿಗಳಿವೆ, ಅವುಗಳನ್ನು ಸಾಧಿಸಿ ಸಮಾಜದಲ್ಲಿ ಒಬ್ಬ ಒಳ್ಳೆಯ ವ್ಯಕ್ತಿ ಎನ್ನಿಸಿಕೊಳ್ಳುವ ಹಂಬಲ ತುಡಿತ ಮಿಡಿತಗಳಿವೆ. ಕನಸುಗಳಿವೆ. ಆ ಕನಸುಗಳಿಗೆ ಒಂದು ಸ್ಪಷ್ಟರೂಪ ಕೊಡುವ ಚೈತನ್ಯವಿದೆ. ಬೆಳಕಿಲ್ಲದ ಹಾದಿಯಲ್ಲಿ ನಡೆಯಬಹುದು. ಆದರೆ, ಕನಸುಗಳಿಲ್ಲದ ಹಾದಿಯಲ್ಲಿ ನಡೆಯಲಾಗದು ಎನ್ನುವ ತತ್ವವನ್ನು ಪಾಲಿಸಿಕೊಂಡು ಬಂದವನು ನಾನು. ಅವುಗಳನ್ನು ನನಸು ಮಾಡಿಕೊಂಡು, ಸಮಾಜದಲ್ಲಿ ಒಬ್ಬ ಒಳ್ಳೆಯ ವ್ಯಕ್ತಿ ಎನ್ನಿಸಿಕೊಂಡು, ಆಧುನಿಕ ವೇಗದ ಜಗತ್ತಿನಲ್ಲಿ ದಫದಫನೇ ಮುನ್ನುಗ್ಗುವುದೊಂದೆ ಕೆಲಸ ನನಗೆ. ನನ್ನ ಈ ಕಾರ್ಯದಲ್ಲಿ ಸಾಥ್ ನೀಡುವ ಮನಸಿದ್ದರೆ.... ಎಷ್ಟುಬೇಗವೊ ಸಾಧ್ಯವೊ ಅಷ್ಟು ಬೇಗ ನನ್ನ ಕನಸಿನ ಸಾಮ್ರಾಜ್ಯವನ್ನು ಸೇರಿಕೊ. ಇಬ್ಬರೂ ಸೇರಿ ಮುನ್ನುಗ್ಗೋಣ.

ಅಸಲಿಗೆ ಈ ಪ್ರೀತಿ ಎನ್ನುವುದೇ ಒಂದು ವಿಚಿತ್ರ ಕಣೇ.. ಹುಡುಗರಿಗೆ ಮೇಲೆ ಒಲವು ವ್ಯಕ್ತವಾದಾಗ ಹುಡುಗಿಯರು ತಿರಸ್ಕರಿಸುವುದು. ಹುಡುಗರು ಪ್ರೀತಿ ಬಗ್ಗೆ ತಲೆ ಕೆಡಿಸಿಕೊಂಡು ಇನ್ನೇನು ಹುಡುಗಿಯ ಗುಂಗಿನಿಂದ ಹೊರಬರಬೇಕು ಎನ್ನುವಷ್ಟರಲ್ಲಿ ನಂತರ ವಿಚಾರ ಮಾಡಿ ಮಾಡಿ ಇಲ್ಲ ಕಣೋ ನೀನು ತಂಬಾ ಇಷ್ಟವಾಗಿದ್ದೀಯ ಕಣೋ.. ಅಂತ ಹೇಳುವುದು ಪ್ರೀತಿಯ ವೈಚಿತ್ರ್ಯ!

ಆದರೆ, ನಮ್ಮಿಬ್ಬರ ಪ್ರೀತಿ ಹಾಗಲ್ಲ ಗೆಳತಿ. ನಾವೇನು ಪಾರ್ಕ್, ಸಿನಿಮಾ ಮಂದಿರ ಅಂತ ಸುತ್ತಲಿಕ್ಕೆ 18ರ ಆಸುಪಾಸಿನ ಹುಡುಗ-ಹುಡುಗಿಯಲ್ಲ. 24ನ್ನು ದಾಟಿದ ಪ್ರಬುದ್ಧ ವಯೋಮಾನದವರು. ಏನಿದ್ದರು ಬದುಕನ್ನು ಕಟ್ಟಿಕೊಳ್ಳುವ, ನೆಮ್ಮದಿಯ ನಾಳೆಗಳನ್ನು ಹುಡುಕುವ, ಅನ್ವೇಷಿಸುವ ಪ್ರಬುದ್ಧ ವಯೋಮಾನದವರು. ಯೋಚಿಸು ಗೆಳತಿ, ಇನ್ನು ಕಾಲ ಮಿಂಚಿಲ್ಲ, ನಿನಗಾಗಿ ಇನ್ನು ಕೆಲವೇ ದಿನ ಕಾಯುವ ನನ್ನ ತಾಳ್ಮೆಯನ್ನು ಇನ್ನು ಕಳೆದುಕೊಂಡಿಲ್ಲ. ಅಷ್ಟರಲ್ಲಿ ಬಂದು ನನ್ನ ಸಾಮ್ರಾಜ್ಯವನ್ನು ಸೇರಿಕೊ. ಏನಾದರೊಂದು ವಿಶಿಷ್ಟ ಸಾಧನೆ ಮಾಡಿತೋರಿಸೋಣ ಈ ಜಗತ್ತಿಗೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ನಕ್ಷತ್ರ ನೋಡಬೇಕೆಂದರೆ ರಾತ್ರಿಯಾಗಿರಬೇಕಲ್ಲವೇ....?
ಹೇಳಿ ಹೋಗು ಕಾರಣ ಗೆಳೆಯಾ..
ನೀ ಕೊಟ್ಟ ಆ ಪಿಂಕ್ ಕಲರ್ ಟಿ ಶರ್ಟ್..!
ನಿನಗೆ ಕೊಡಲು ನನ್ನ ಬಳಿ ಇರುವುದು ಪ್ರೀತಿ ಮಾತ್ರ
ಎಸ್ಸೆಮ್ಮೆಸ್ಸೊಂದು ಕಳಿಸಿಬಿಟ್ಟರೆ ಸಾಕಾ
ಕಪ್ಪು ಹುಡುಗಿಯ ಕಥೆ
ಮನರಂಜನೆ
ಚಿತ್ರ ಸುದ್ದಿ - ಆಕೆ ಚಿತ್ರದಲ್ಲಿ ಆತನ ತಾಯಿಯ ಪಾತ್ರ ನಿರ್ವಹಿಸಿದ್ದರು. ಆದರೆ, 'ಮದರ್ ಇಂಡಿಯ' ಚಿತ್ರದ ಚಿತ್ರೀಕರಣದಲ್ಲಿ ನರ್ಗೀಸ್...
ಮುಂದೆ ಓದಿ|ಮತ್ತಷ್ಟು...
ಆರೋಗ್ಯ
AP
 
ನೇತ್ರದಾನ: ಅಂಧರ ಬದುಕಿಗೆ ದೃಷ್ಠಿ ದಾನ
ದೇಶದಲ್ಲಿ ದೃಷ್ಠಿಹೀನತೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಿನ ಸಂಖ್ಯೆಯಲ್ಲಿದ್ದು, ನೇತ್ರದಾನ ಮಾಡಲು...
ದಕ್ಷಿಣ ಕಾಶ್ಮೀರದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಸರಕಾರ ಅನುಮೋದನೆ
ಕೊಚ್ಚಿಯಲ್ಲಿ ರಾಷ್ಟ್ರೀಯ ಮಧುಮೇಹ-ನೇತ್ರ ತಪಾಸಣೆ ಶಿಬಿರ
ವಾಣಿಜ್ಯ
ವಾಣಿಜ್ಯ ಲೇಖನಗಳು - ಭಾರತೀಯ ತೈಲ ನಿಗಮ(ಇಂಡಿಯನ್ ಆಯಿಲ್ ಕಾರ್ಪೊರೇಶನ್-ಐಒಸಿ)ವು ಹೊಸ 15 ದಶಲಕ್ಷ ಟನ್ ತೈಲ...
ಮುಂದೆ ಓದಿ|ಮತ್ತಷ್ಟು...
Marketplace