ಯಾಹೂ! | ನನ್ನ ಯಾಹೂ! | ಮೇಲ್ | ಚಿತ್ರ
ಶೋಧ
 
   ಮುಖ ಪುಟ ಸಾಹಿತ್ಯ ಪ್ರೇಮಗಾಥೆ
ನಕ್ಷತ್ರ ನೋಡಬೇಕೆಂದರೆ ರಾತ್ರಿಯಾಗಿರಬೇಕಲ್ಲವೇ....?
- ಮಂಜುನಾಥ ಬಂಡಿ.
AP
ನನ್ನೊಲವಿನ ಹುಡುಗಿ ಹೇಗೆ ಸಹಿಸಿಕೊಳ್ಳಲಿ ನಿನ್ನ ಸಾವಿನ ಬರಸಿಡಿಲಿನ ಸಂದೇಶವನ್ನು...! ಅಸಲಿಗೆ ನಂಬಲಾ... ಅಥವಾ ಕನಸು ಅಂತ ಹಾಗೆ ಸುಮ್ಮನೆ ಎದೆಯ ಗೂಡಿನೊಳಗೆ ನೀನಗಿರುವ ಸ್ಥಾನದಲ್ಲಿ ಹಾಗೆ ಭದ್ರವಾಗಿ ಬಚ್ಚಿಡಲಾ... ಗೊತ್ತಾಗುತ್ತಿಲ್ಲ.

ನಮ್ಮ ಕಡೆ ಒಂದು ಮಾತು ಪ್ರಚಲಿತದಲ್ಲಿದೆ. ಯಾರಾದರೂ ಸತ್ತರೆ ಆಕಾಶದಲ್ಲಿ ನಕ್ಷತ್ರವಾಗಿ ಮಿಂಚುತ್ತಾರಂತೆ. ಅಪ್ಪನ ಸಾವಿನ ಸುದ್ದಿ ಬಂದಾಗ ರಾತ್ರಿ ಪಯಣದಲ್ಲಿದ್ದೆ. ನನ್ನಪ್ಪ ಯಾವ ನಕ್ಷತ್ರವಾಗಿದ್ದಾರೆ ಎಂದು ನಕ್ಷತ್ರಗಳೆಡೆಗೆ ರಾತ್ರಿಯೆಲ್ಲ ನನ್ನ ಅಗಲುಗಣ್ಣುಗಳನ್ನು ಬಿಟ್ಟುಕೊಂಡೆ ಊರಿಗೆ ಪಯಣಿಸಿದ್ದೆ.

ಆದರೆ, ಈಗ ನೀನು ಮತ್ತೊಮ್ಮೆ ಆಕಾಶವನ್ನು ನೋಡುವ ದುರ್ಭಾಗ್ಯವನ್ನು ನೀಡಿದ್ದಿಯ. ಆದರೆ, ಯಾವ ನಕ್ಷತ್ರವಾಗಿದ್ದೀಯಾ ಎಂದು ನಿನ್ನನ್ನು ಹುಡುಕಬೇಕೆಂದರೆ ರಾತ್ರಿಯಾಗಿರಬೇಕಲ್ಲವೇ...?

ಅಲ್ಲಿಯವರೆಗೆ ನಿನ್ನ ಅಂತ್ಯಕ್ರಿಯೆ ಮುಗಿದೇ ಹೋಗಿರುತ್ತದೆ. ಅಪ್ಪನ ಸಾವು ನನ್ನನ್ನು ಅರ್ಧ ಅಂಧಕಾರದತ್ತ ತಳ್ಳಿದರೆ...ಬಾಳ ಬೆಳದಿಂಗಳಂಗಳದ ಬಾನಾಡಿಯಾಗಬೇಕಿದ್ದ ನೀನು ಮತ್ತೆ ಬಾರದೆಡೆಗೆ ಹಾರಿಹೋಗಿದ್ದು ನ್ಯಾಯವೇ...?ನಿನ್ನ ಸಾವು ನನ್ನನ್ನು ಮತ್ತಷ್ಟು ಅಂಧಕಾರದತ್ತ....!

ಎತ್ತಣ ಮಾಮರ ಎತ್ತಣ ಕೋಗಿಲೆ... ಎನ್ನುತ್ತಲೆ ಎಲ್ಲೊ ಹುಟ್ಟಿದ ನಾವುಗಳು, ಎಲ್ಲೆ ಇಲ್ಲದೆ ಒಂದಾಗಿದ್ದು, ಬಾಳ ಪಯಣದುದ್ದಕ್ಕೂ ಒಂದಾಗಿಯೇ ಸಾಗುವ ನಿರ್ಧಾರ ಕೈಗೊಂಡಿದ್ದು, ಎಲ್ಲವನ್ನು ಮರೆತು ಏಕೆ ದೂರಹೋದೆ ಹೇಳು ಗೆಳತಿ?

ನನ್ನ ನಿನ್ನ ಸ್ನೇಹ ಪ್ರೇಮವಾಗಿ ಪರಿವರ್ತನೆ ಗೊಂಡಿದ್ದು, ಅಂದಿನಿಂದ ಇಂದಿನವರೆಗೂ ನೀನು 'ಲವ್'ಲವಿಕೆಯಿಂದ ಇದ್ದಿದ್ದು, ಎಲ್ಲವನ್ನೂ ಕೇವಲ ನನ್ನ ನೆನಪಿನಂಗಳದಲ್ಲಿ ಬಿಟ್ಟು ಹೋಗಿಬಿಟ್ಟಿಯಲ್ಲ ಹುಡುಗಿ. ಈ ಸಾವು ನಿನಗೆ ನ್ಯಾಯವೇ?

ನನ್ನ ಬಾಳ ಭವಿಷ್ಯದ ಕನಸಿಗೆ ಇಂಬು ಕೊಡುವ ನಿಟ್ಟಿನಲ್ಲಿ ನಿನ್ನನ್ನು ನೀನು ತಿದ್ದಿಕೊಳ್ಳುತ್ತಿದ್ದುದು, ಹಂತಹಂತವಾಗಿ ನನ್ನ ಆಸೆ, ಕನಸುಗಳಿಗೆ ಸ್ಪಂದಿಸುತ್ತಾ ಪುಟ್ಟ ಪುಟ್ಟ ಹೆಜ್ಜೆಯನ್ನಿಡುತ್ತಿದ್ದುದು ಹೇಗೆ ತಾನೇ ಮರೆಯಲಿ ಗೆಳತಿ. ಸಾವು ಇಷ್ಟೊಂದು ಕ್ರೂರವೇ...ಓ ಸಾವೇ ನಿನಗೆ ಒಂದಿನಿತು ಕರುಣೆ ಇಲ್ಲವೇ?

ಅಪ್ಪನ ಸಾವಿನಿಂದ ಇದೀಗ ತಾನೆ ಹೊರಬರುತ್ತಿದ್ದ ಪ್ರಮುಖ ಘಟ್ಟದಲ್ಲಿ ಮತ್ತೊಂದು ಸಾವು ನನ್ನ ಚೇತರಿಕೆಯನ್ನು ಮತ್ತೇ ಕಸಿದುಕೊಳ್ಳಲಿದೆಯೇ? ಗೊತ್ತಿಲ್ಲ ಗೆಳತಿ.

ಕಳೆದ ಎರಡು ತಿಂಗಳ ಹಿಂದೆಯಷ್ಟೆ ಅಪ್ಪನ ಸಾವಿನ ಸುದ್ದಿಯನ್ನು ಏಕೆ ಹೇಳಲಿಲ್ಲ ಎಂದು ಗದರಿಸಿದ್ದ ನೀನೇ ಸಾವಿನ ದವಡೆಗೆ ತುತ್ತಾದೆಯಲ್ಲ ಗೆಳತಿ, ಹೇಗೆ ನಂಬಲಿ ನಾನಿದನ್ನ..ಹೇಗೆ ಸಹಿಸಿಕೊಳ್ಳಲಿ.

ಆಕಾಶದಲ್ಲಿ ಸ್ವಚ್ಚಂದವಾಗಿ ಹಾರಾಡುವ ಗಾಳಿಪಟ ನೀನಾಗು. ನಿನ್ನನ್ನು ಮೇಲೆಕ್ಕೊಯ್ಯುವ ದಾರ ನಾನಾಗುತ್ತೇನೆ.. ಜನ ನಿನ್ನ ಯಶಸ್ಸನ್ನು ನೋಡಿ ಸಂತಸಪಡುತ್ತಾರೆ. ಆ ಯಶಸ್ಸಿನ ಬೆನ್ನ ಹಿಂದೆ ಅದೃಶ್ಯವಾಗಿ ನಾನು ಇದ್ದೇ ಇರುತ್ತೇನೆ ಎನ್ನುವ ಭರವಸೆಯ ಕಿರು ಸಂದೇಶಗಳನ್ನು ನನ್ನ ಮೊಬೈಲ್ ಇನ್‌ಬಾಕ್ಸ್ ತುಂಬಾ ಹಾಕಿಹೋಗಿದ್ದಿಯಲ್ಲ... ನನ್ನ ಬಾಳ ಇನ್‌ಬಾಕ್ಸ್ ಖಾಲಿ ಮಾಡಿ... ಇದು ನ್ಯಾಯವೇ?

ಸಾಲು ಸಾಲು ಸೋಲುಗಳು, ಆಗಾಗ ಬರಸಿಡಿಲಿನಂತೆ ಬಂದೆರಗುವ ಆತ್ಮೀಯರ ಸಾವುಗಳ ಸುದ್ದಿ ಮಧ್ಯೆ ಬದುಕುತ್ತಿರುವ ನನಗೆ ಇದೇನು ಹೊಸತಲ್ಲ ಬಿಡು ಗೆಳತಿ. ಆದರೆ, ನಿನ್ನ ಸಾವು ಮತ್ತೇ ನನ್ನನ್ನು ಎಷ್ಟು ದಿನ ಚಿಂತೆಯ ಕೂಪಕ್ಕೆ ತಳ್ಳುತ್ತದೆಯೋ ಗೊತ್ತಿಲ್ಲ. ಇರಲಿ ಬೀಡು...ಅಲ್ಲಾದರು ಚೆನ್ನಾಗಿರು...!
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಹೇಳಿ ಹೋಗು ಕಾರಣ ಗೆಳೆಯಾ..
ನೀ ಕೊಟ್ಟ ಆ ಪಿಂಕ್ ಕಲರ್ ಟಿ ಶರ್ಟ್..!
ನಿನಗೆ ಕೊಡಲು ನನ್ನ ಬಳಿ ಇರುವುದು ಪ್ರೀತಿ ಮಾತ್ರ
ಎಸ್ಸೆಮ್ಮೆಸ್ಸೊಂದು ಕಳಿಸಿಬಿಟ್ಟರೆ ಸಾಕಾ
ಕಪ್ಪು ಹುಡುಗಿಯ ಕಥೆ
ನಿನ್ನ ಓರೆನೋಟದಲ್ಲಿ ನೂರು ಆಸೆ ಕಂಡೆನು...
ಮನರಂಜನೆ
ಚಿತ್ರ ಸಮೀಕ್ಷೆ - ಆರ್.ಎಸ್.ಗೌಡ ನಿರ್ಮಾಣದ, ಎಸ್.ಮಹೇಂದರ್ ನಿರ್ದೇಶನದ, ಶಿವರಾಜ್ ಕುಮಾರ್ ನಿರ್ದೇಶನದ "ಗಂಡನ ಮನೆ" ರಾಜ್ಯಾದ್ಯಂತ ತೆರೆ ಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ.
ಮುಂದೆ ಓದಿ|ಮತ್ತಷ್ಟು...
ಆರೋಗ್ಯ
ಹುಷಾರು! ಮಗುವಿಗೆ ಎಲ್ಲ ತಿಳಿಯುತ್ತೆ
ಅಯ್ಯೋ ಮಗುವಿಗೇನು ತಿಳಿಯುತ್ತೆ? ಎನ್ನುವುದನ್ನು ನಾವು ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಕೇಳಿದ್ದೇವೆ. ಚಿಕ್ಕ ಮಕ್ಕಳಿಗೆ ಏನೂ ತಿಳಿಯುವುದಿಲ್ಲ ಎನ್ನುವುದು ದೊಡ್ಡವರ ವಿಚಾರ
ಮೊಬೈಲ್ ಬಳಕೆಯಿಂದ ಕ್ಯಾನ್ಸರ್
ಪಾರ್ಶ್ವವಾಯು: ಎಚ್ಚರಿಕೆ ಅಗತ್ಯ
ವಾಣಿಜ್ಯ
ವಾಣಿಜ್ಯ ಲೇಖನಗಳು - ಭಾರತ ದೇಶದ ಮಣ್ಣಿನ ಮಹಿಮೆಯೆ ಅಂತಹುದು, ಚಿನ್ನದ ನಾಡು ಹೊನ್ನಿನ ಬೀಡು ಎಂದೆಲ್ಲ ಪ್ರಸಿದ್ದವಾಗಿರುವ ಭಾರತ...
ಮುಂದೆ ಓದಿ|ಮತ್ತಷ್ಟು...
Marketplace