ಯಾಹೂ! | ನನ್ನ ಯಾಹೂ! | ಮೇಲ್ | ಚಿತ್ರ
ಶೋಧ
 
   ಮುಖ ಪುಟ ಸಾಹಿತ್ಯ ಪ್ರೇಮಗಾಥೆ
ಹೇಳಿ ಹೋಗು ಕಾರಣ ಗೆಳೆಯಾ..
- ಮಲ್ಲಿ
ಗುರುವಾರ, 30 ಆಗಸ್ಟ್ 2007   ( 19:43 IST )
AP
ಮುನಿಸಿಕೊಂಡ ಮನ್ಮಥ,

ಅಗರ್ ತುಮ್ ಮಿಲ್ ಜಾವೊ
ಜಮಾನಾ ಚೋಡ್ ದೇಂಗೆ ಹಮ್..
ಇಂದು ಬೆಳಗ್ಗೆ ಮನೆಯಿಂದ ಆಫಿಸಿಗೆ ಹೋಗುವಾಗ ಎಫ್ಎಂನಲ್ಲಿ ಈ ಹಾಡು ಬರ್ತಾ ಇತ್ತು ಕಣೊ. ಇದೇ ಹಾಡನ್ನ್ ಎಷ್ಟು ಬಾರಿ ನನಗೆ ಹೇಳಿದ್ದೀಯಾ ನೀನು. ಅದನ್ನು ನೆನಪಿಸಿಕೊಂಡು ಒಬ್ಬಳೇ ನಗೋದಕ್ಕೆ ಶುರು ಮಾಡ್ದೆ, ಬಸ್‌ನಲ್ಲಿದ್ದ ಕೆಲವು ಹುಡುಗರು ನನ್ನನ್ನೇ ದುರುಗಟ್ಟಿ ನೋಡೊದಕ್ಕೆ ಪ್ರಾರಂಭಿಸಿದರು ಗೊತ್ತಾ..!?

ಅಲ್ಲಾ ದೊರೆ.. ನೀ ಮಾಡಿದ್ದು ಸರೀನಾ..? ನಾನು ನಿನಗೆ ಸಿಕ್ಕರೆ ಇಡೀ ಜಗತ್ತೆ ಬಿಟ್ಟು ಬರ್ತಿನಿ ಅಂತಾ ಹೇಳ್ತಾ ಇದ್ದೋನು, ಎಲ್ಲಿಗೆ ಹೋದೆ...? ಇಷ್ಟು ಬೇಗ ನಾನು ನಿನಗೆ ಬೇಡವಾದೇನಾ...? ನನ್ನಲ್ಲಿ ನೂರಾರು ಕನಸುಗಳನ್ನು ಬಿತ್ತಿ ಅವು ಫಲ ಕೊಡುವ ಮುಂಚೆಯೇ ಕೈ ಕೊಟ್ಟು ಹೋದಿಯಲ್ಲ.. ಒಂದು ಚೂರು ಕರುಣೆಯಾದರೂ ಬೇಡ್ವಾ ನಿನಗೆ... ಹೀಗೆ ಕೇಳು ಬೇಕು ಅನಿಸುತ್ತದೆ ನಿನಗೆ, ಆ ಕಾರ್ನರ್‌ನಲ್ಲಿ ಭೇಟಿಯಾದಾಗ.

ನಂಗೊತ್ತು.. ಈ ದಿನ ಸಂಜೆಯೂ ಅದೇ ಕಾರ್ನರ್‌ನಲ್ಲಿಯೇ ನೀನು ನನಗೆ ಸಿಗ್ತೀಯಾ.. ಆದರೆ ನೀನು ನನ್ನ ಮಾತನಾಡಿಸಲ್ಲ. ನೀ ಮಾತಾಡಸ್ತೀಯಾ, ನನ್ನ ಕಡೆ ಮುಗುಳ್ನಗೆಯನ್ನಾದ್ರೂ ಎಸಿತೀಯಾ ಅನ್ಕೊಂತೀನಿ. ಹ್ಞುಂ.. ನೀನು ಕಣ್ಣೆತ್ತಿಯೂ ನೋಡಲ್ಲ.

ಏನಾಯ್ತು ನಿನಗೆ..? ನಮ್ಮಿಬ್ಬರ ಪ್ರೀತಿಗೆ...? ಯಾಕೆ ಮುನಿಸಿಕೊಂಡೆ ಗೆಳೆಯಾ ನನ್ನ ಮೇಲೆ..? ನಾನು ಮಾಡಿದ ತಪ್ಪಾದರೂ ಏನು..? ನಿಂಗೊತ್ತಾ ಒಂದು ಹುಡುಗಿ ಒಬ್ಬನಿಗೆ ಹೃದಯ ಕೊಟ್ಟಳು ಅಂದ್ರೆ, ಸಾಯೋವರ್ಗೂ ಆ ಸ್ಥಾನನಾ ಯಾರಿಗೂ ಬಿಟ್ಟು ಕೊಡಲ್ಲ.

ನೂರೆಂದು ನೆನಪು ಎದೆಯಾಳದಿಂದ,
ಹಾಡಾಗಿ ಬಂತು ಆನಂದದಿಂದ....
ನೀನೇನೊ ನಿಮ್ಮ ತಂದೆ ತಾಯಿ ಒತ್ತಾಯಕ್ಕೆ ಮಣಿದು ನನ್ನ ಪ್ರೀತಿಗೆ,, ನಿನ್ನ ರೀತಿಗೆ ತಿಲಾಂಜಲಿ ಇಟ್ಟೆ. ಆದ್ರೆ ನಾನು ನಿನ್ನೊಂದಿಗೆ ಕಳೆದ ನಾಲ್ಕು ವರ್ಷಗಳ ಬೆಚ್ಚನೆಯ ನೆನಪಿನಲ್ಲಿಯೇ ಬದುಕುತ್ತಿದ್ದೇನೆ. ಬಹುಶಃ ಆ ನೆನಪುಗಳಿಲ್ಲದಿದ್ದರೆ ನಾನು ಯಾವೊತ್ತು ಸತ್ತು ಹೋಗುತ್ತಿದ್ದೆ. ಈಗ ಆ ನೆನಪಿನ ಆನಂದದಲ್ಲಿಯೇ ಬದುಕುತ್ತಿದ್ದೇನೆ. ನಿನಗೆ ಇದಕ್ಕಾದರೂ ಥ್ಯಾಂಕ್ಸ್ ಹೇಳಲೇ ಬೇಕು, ನನ್ನೆದೆಯ ದೊರೆ.

ನೀನು ತ್ಯಾಗವೀರನಾಗಿ ಒಳಗೊಳಗೆ ನರಳೀತ್ತಿದ್ದೀಯಾಂತ ಗೊತ್ತು. ಪ್ರೀತಿಗಾಗಿ ಸಂಬಂಧಗಳನ್ನು ಧಿಕ್ಕರಿಸುವ ಧೈರ್ಯ ಇಲ್ಲ ನಿನಗೆ ಅಂತ ಹೇಳಿದ್ರೆ ನಾನು ಸ್ವಾರ್ಥಿಯಾಗುತ್ತೇನೆ ಅಲ್ಲ...? ನೀನೇ ಹೇಳಿದ್ದೀಯಲ್ಲ ಕೆಲವು ವಿಷಯಗಳಲ್ಲಿ ಸ್ವಾರ್ಥಿಯಾಗಿರಬೇಕು ಅಂತ. ಈಗ ನಾನು ಸ್ವಾರ್ಥಿಯಾಗದಿದ್ದರೆ, ನನ್ನ ಜೀವನವೇ ಅಯೋಮಯವಾಗುತ್ತದೆ.

ಹೇಳು, ಈಗ ನಾನು ಏನು ಮಾಡ್ಲೀ..? ನಂಗೊತ್ತು ನನ್ನ ಯಾವ ಪ್ರಶ್ನೆಗಳಿಗೂ ನೀನು ಅನ್ಸರ್ ಮಾಡಲ್ಲಂತ. ಆದ್ರೂ ನನ್ನ ಸಮಾಧಾನಕ್ಕೆ ಈ ಪ್ರಶ್ನೆಗಳನ್ನು ನೀನು ಆ ಕಾರ್ನರ್‌ನಲ್ಲಿ ಸಿಕ್ಕಾಗ ಕೇಳುಬೇಕು ಅನ್ಕೊಂಡಿದ್ದೀನಿ. ಕೇಳಿಸಿಳಿಕೊಳ್ತೀಯಾ..
ಕೇಳಿಸಿಕೊಳ್ಳದಿದ್ದರೂ ಪರ್ವಾಗಿಲ್ಲ. ಅಟ್‌ಲೀಸ್ಟ್ ಹೇಳಿ ಹೋಗು ಕಾರಣ ಗೆಳೆಯಾ...

ಉತ್ತರವಿಲ್ಲದ ಪ್ರಶ್ನೆಗಳೊಂದಿಗೆ ಬದುಕುತ್ತಿರುವ
ನಿನ್ನವಳು
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ನೀ ಕೊಟ್ಟ ಆ ಪಿಂಕ್ ಕಲರ್ ಟಿ ಶರ್ಟ್..!
ನಿನಗೆ ಕೊಡಲು ನನ್ನ ಬಳಿ ಇರುವುದು ಪ್ರೀತಿ ಮಾತ್ರ
ಎಸ್ಸೆಮ್ಮೆಸ್ಸೊಂದು ಕಳಿಸಿಬಿಟ್ಟರೆ ಸಾಕಾ
ಕಪ್ಪು ಹುಡುಗಿಯ ಕಥೆ
ನಿನ್ನ ಓರೆನೋಟದಲ್ಲಿ ನೂರು ಆಸೆ ಕಂಡೆನು...
ಮನದೊಳಗೆ ಜಂಬೂ ಸವಾರಿ...!
ಮನರಂಜನೆ
ಚಿತ್ರ ಸಮೀಕ್ಷೆ - ಆರ್.ಎಸ್.ಗೌಡ ನಿರ್ಮಾಣದ, ಎಸ್.ಮಹೇಂದರ್ ನಿರ್ದೇಶನದ, ಶಿವರಾಜ್ ಕುಮಾರ್ ನಿರ್ದೇಶನದ "ಗಂಡನ ಮನೆ" ರಾಜ್ಯಾದ್ಯಂತ ತೆರೆ ಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ.
ಮುಂದೆ ಓದಿ|ಮತ್ತಷ್ಟು...
ಆರೋಗ್ಯ
AP
 
ಬೊಜ್ಜು ತಾಯಂದಿರೇ ನಿಮ್ಮ ದೇಹದತ್ತ ಗಮನ ಹರಿಸಿ!
ಅಧಿಕ ತೂಕವಿರುವ ತಾಯಂದಿರೇ ಎಚ್ಚರ! ಬೊಜ್ಜು ಹೊಂದಿದ ತಾಯಂದಿರಿಗೆ ಹುಟ್ಟಿದ ಗಂಡು ಮಕ್ಕಳು ಕಡಿಮೆ ಸಂತಾನಶಕ್ತಿಯನ್ನು ಹೊಂದಿರುತ್ತಾರೆ ಎನ್ನುತ್ತದೆ ಹೊಸ ಸಂಶೋಧನೆ.
ಮಾದರಿ ವ್ಯಾಯಮ ದೇಹಕ್ಕೆ ಒಳ್ಳೆಯದು..
ಗಾಂಜಾ ಸೇವನೆಯಿಂದ ಸ್ಕಿಜೋಪ್ರೇನಿಯಾ!
ವಾಣಿಜ್ಯ
ವಾಣಿಜ್ಯ ಲೇಖನಗಳು - ಭಾರತ ದೇಶದ ಮಣ್ಣಿನ ಮಹಿಮೆಯೆ ಅಂತಹುದು, ಚಿನ್ನದ ನಾಡು ಹೊನ್ನಿನ ಬೀಡು ಎಂದೆಲ್ಲ ಪ್ರಸಿದ್ದವಾಗಿರುವ ಭಾರತ...
ಮುಂದೆ ಓದಿ|ಮತ್ತಷ್ಟು...
Marketplace