ಯಾಹೂ! | ನನ್ನ ಯಾಹೂ! | ಮೇಲ್ | ಚಿತ್ರ
ಶೋಧ
 
   ಮುಖ ಪುಟ ಸಾಹಿತ್ಯ ಪ್ರೇಮಗಾಥೆ
ನೀ ಕೊಟ್ಟ ಆ ಪಿಂಕ್ ಕಲರ್ ಟಿ ಶರ್ಟ್..!
- -ಮಲ್ಲಿ
Sea Shore
AP
ಕಾಡುವ ಕನ್ನಿಕೆ,

ಲೇ ವಿನೂ.. ಇಂದು ಬಹಳ ನೆನಪಾಗುತ್ತಿದ್ದೀಯಾ ಕಣೆ. ನೀನು ನೆನಪಾದಗಲೆಲ್ಲಾ ನೀ ಕೊಟ್ಟಿದ್ದಿಯಲ್ಲಾ ಪಿಂಕ್ ಟಿ ಶರ್ಟ್ ಹಾಕ್ಕೊಂಡು ಸುಮ್ಮನೆ ನಿನ್ನ ನಿರ್ಭಾವುಕ ಕಣ್ಣುಗಳನ್ನು ನೆನಪಿಸಿಕೊಳ್ಳುತ್ತಾ ಸಮುದ್ರದ ದಂಡೆಯಲ್ಲಿ ಕುಳಿತುಕೊಳ್ಳುತ್ತಿದ್ದೆ.

ನಿಂಗೆ ಗೊತ್ತಾ.. ಇವೊತ್ತು ಹಾಗೇ ಮಾಡ್ದೆ ಕಣೆ. ಆದ್ರೆ ನೀನ್ ಮಾತ್ರ ನನ್ನ ನೆನಪಿನ ದೋಣಿಯಿಂದ ಇಳಿಯುತ್ತಿಲ್ಲ ಕಣೆ. ಯಾಕಲೇ ಹೀಗೆ ನನ್ನ ಕಾಡ್ತೀಯಾ ನೀನು...? ಈ ಹಾಳು ಸಮುದ್ರದ ಅಲೆಗಳು ನಿನ್ನ ಗುಂಗುರು ಕೊದಲನ್ನು ನೆನಪಿಸುತ್ತಿದೆ ಕಣೇ.. ಹಾಳಾದ್ದೂ ನನ್ನ ಹೃದಯ ಅಲೆಗಳಿಂತಿರುವ ಆ ನಿನ್ನ ಕೂದಲಿಗೆ ಬಿದ್ದು ಬಿಟ್ಟಿದೀಯಲ್ಲಾ.

ಅರೇ ನಾನು ನಿನಗೆ ಅಂದದ್ದಾರೂ ಏನು..? ಅಷ್ಟಕ್ಕೆ ಮುನಿಸಿಕೊಂಡು ರೌದ್ರಾವತಾರ ತಾಳಿದರೆ ಹೇಗೆ..? ನಿಜ ಹೇಳಲಾ ನೀನು ಕೋಪಿಸಿಕೊಂಡಾಗ್ಲೂ ಕೂಡಾ ಕೋತಿ ಮರಿ ತರಹ ಮುದ್ದು, ಮುದ್ದಾಗಿ ಕಾಣ್ತೀಯಾ. ಹೀಗೆ ರೇಗಸ್ತಿದ್ದೀನಿ ಅಂತ ಮತ್ತೆ ಮುನಿಸ್ಕೊ ಬೇಡಾ ಚಿನ್ನು. ನಿನ್ನನ್ನು ಬಿಟ್ಟು ನಾನು ಯಾರನ್ನು ರೇಗಸ್ಲೀ ಹೇಳು..? ಮತ್ತೆ ರೇಗಿಸ್ಲಿಕ್ಕೆ ನನಗೇನು ಇದೆ ಹೇಳು, ನೀ ಕೊಟ್ಟ ಪಿಂಕ್ ಕಲರ್ ಟಿ ಶರ್ಟ್ ಬಿಟ್ಟು.

ಎಸ್‌ಎಂಎಸ್ ಆದ್ರೂ ಮಾಡೋಣ ಅಂದ್ರೆ, ನೀನು ತರ್ಲೆ ಮಾಡಿ ಮೊಬೈಲ್‌ನ್ನು ಕಳ್ಕೊಂಡಿದಿಯಾ. ಅಲ್ಲಾ ನೆಟ್ಟಗೆ ಒಂದು ಮೊಬೈಲ್ನಾ ಕಾಪಾಡುಕೊಳ್ಳದವಳು ನನ್ನ ಪ್ರೀತೀನಾ ಕಾಪಾಡ್ತೀಯಾ ನೀನು..? ಹೀಗೆ ಏನೇನೊ ಹಾಳು ವಿಚಾರಗಳು ನನ್ನ ತಲೆಯಲಿ ಕಚ್ಚಾಡ್ತೀವೆ. ಅವುಗಳಿಗೆ ಈ ಸಮುದ್ರದ ಸಿಡಿದೇಳೊ ಅಲೆಗಳು ಸಾಥ್ ಕೊಡುತ್ತಿವೆ ಕಣೆ..

ಸಮುದ್ರ ನೋಡ್ತಾ ನೋಡ್ತಾ ನೀನು ಅವೊತ್ತು ಹೇಳಿದ ಮಾತು ನೆನಪಾಯ್ತು.. ನಿನಗೆ ನೆನಪಿದೆಯಾ..? ನಿನಗೆಲ್ಲಿ ನೆನಪಿರುತ್ತೆ ಹೇಳು.

ಒಂದು ಬೋಟ್‌ನಲ್ಲಿ ನಾವಿಬ್ಬರೇ ಕುಳಿತುಕೊಂಡು ಆಶೆ ಇಂಗೊವರೆಗೆನೂ ಸಮುದ್ರದಲ್ಲಿ ಹೋಗೋಣಾ ಅಂತಾ ಹೇಳ್ತಿದ್ದೆ ನೆನಪಿದೆಯಾ.. ಆ ಮಾತು ಇಂದು ತುಂಬಾ ಕಾಡ್ತೀದೆ ನನ್ನ. ನಾನು ಯಾವಾತ್ತಾದರೂ ನಿನ್ನ ಹಾಗೇ ಕರೆದುಕೊಂಡು ಹೋಗಬಲ್ಲೇನಾ.. ಅಂತಾ ಅನಿಸ್ತಿದೆ. ಯಾಕೆಂದ್ರೆ ನನಗೆ ಈಜು ಬರೋಲ್ಲ ಕಣೆ..! (ನಿಜ ಅಂದ್ರೆ ಅದು ಈ ಜನ್ಮದಲ್ಲೂ ಸಾಧ್ಯ ಇಲ್ಲ ಅಲ್ಲಾ)

ತಾಳು.. ಹೀಗೆ ಹೇಳ್ದೆ ಅಂತ ಕೋಪ ಮಾಡ್ಕೊಬೇಡಾ ಚಿನ್ನಾ. ನಾವು ಕಾಣೊ ಕನಸುಗಳಿಗೆ ಮತ್ತು ಜೀವನದ ವಾಸ್ತವಿಕತೆಗೆ ತುಂಬಾ ವ್ಯತ್ಯಾಸ ಇದೆ ಅಂತ ಹೇಳಿದ್ದು ನೀನೇ ತಾನೆ. ಅದ್ಕೆ ಹಾಗೇ ಹೇಳ್ದೆ ಕಣೆ..!

ಈ ಸಮುದ್ರದ ದಂಡೆಯಿದೆಯಲ್ಲಾ ಇಲ್ಲೀ ಬರೀ ಪ್ರೇಮಿಗಳೇ ಇರೋದು ಕಣೆ. ನಿನ್ನ ಬೆಂಗಳೂರನಲ್ಲಿರೊ ತರಹ ಪಾರ್ಕ್ ಇಲ್ಲಾ ನೋಡು. ಅದ್ಕೆ ಎಲ್ಲರೂ ಸಮುದ್ರದ ಪದತಲಕ್ಕೆ ಬಂದ ಪದಾ ಹಾಡ್ತೀರ್ತಾರೆ. ಎಲ್ಲರೂ ಜೋಡಿಯಾಗಿ ಇರ್ತಾರಂತಾ ಅನ್ನೋಬೇಡಾ. ನನ್ನ ತರಹ ಒಂಟಿಗಾರರು/ಗಾರ್ತಿಯರು ಬೇಕಾದಷ್ಟು ಜನ ಇರ್ತಾರೆ. ಅವರು ಕೂಡಾ ನಾನು ನಿನ್ನ ನೆಪಿಸಿಕೊಂಡ ಕುಳಿತ ಹಾಗೇ.. ಕುಳ್ತೀರ್ತಾರೆ, ನಗ್ತಿರ್ತಾರೆ ಮತ್ತು ಅಳ್ತೀರ್ತಾರೆ ಕಣೆ.. ರೀಲ್ ಬೀಡ್ತಿದ್ದೀನಿ ಅಂತಾ ಅನ್ಕೊಬೇಡಾ ನಾನ್ ಹೇಳ್ತೀರೊದು ನಿಜ ಕಣೇ ಮೃದಾಂಗಿನಿ.

ನಾನು ಮುಠ್ಠಾಳ, ನಾನು ಬರೆದ ಈ ಪತ್ರನಾ ನೀನು ಒದ್ತೀಯಾ ಅಂತಾ ಏನೇನೊ ಹೇಳ್ತಾ ಇದ್ದೀನಿ.. ಹುಚ್ಚಾ ಅಲ್ಲಾ ನಾನು.

ಅದು ಹೋಗ್ಲಿ, ನೀನು ಮಾಡಿದ್ದು ಸರೀನಾ.. ನನ್ನ ಮಾತ್ರ ಇಲ್ಲಿ ಒಬ್ಬಂಟಿಯಾಗಿ ಬಿಟ್ಟು, ತಿರುಗಿ ಬಾರದ ಊರಿಗೆ ಹೋಗಿದ್ದೀಯಲ್ಲಾ ಇದು ನ್ಯಾಯನಾ ನಯನಾಂಗಿನಿ...?

ನಾನು ನಿನ್ನ ಜೊತೆ ಬರ್ಬೇಕು ಅಂತಾ ಒಮ್ಮೊಮ್ಮೆ ಧುಮುಕತ್ತೇನೆ ಈ ಸಮುದ್ರದೊಳಗೆ.. ಆದ್ರ ಆ ಹಾಳು ಸಮುದ್ರ ನನ್ನ ಮತ್ತೆ ದಂಡೆಗೆ ತಂದು ಎಸಿತಾನೆ.. ನಿನ್ನ ನೆನಪಿನಲ್ಲಿಯೇ ಸಾಯಲೀಂತ.

ನಿನಗೆ ಒಂದು ಮಾತು ಹೇಳಲಾ ಮಾಟಗಾತಿ. ನೀ ಕೊಟ್ಟೆಯಲ್ಲ ಆ ಪಿಂಕ್ ಕಲರ್ ಟಿ ಶರ್ಟ್ ಇದೆಯಲ್ಲಾ ಅದು ನನ್ನ ಹತ್ರಾ ಇರೋವರೆಗೆ ನಾನ್ ಬದರ್ಕಿತೀನಿ ಕಣೇ. ಯಾಕೆಂದರೆ ನೀ ನನಗೆ ಬಿಟ್ಟು ಹೋಗಿರುವುದು ಆ ಟಿ ಶರ್ಟು ಮತ್ತು ನೀ ತೋರಿದ ಹಿಡಿ ಪ್ರೀತಿಯ ನೆನಪು ಮಾತ್ರ.

ನಿನ್ನ ನೆನಪಿನಲ್ಲಿ ದಿನಾ ಸಾಯುವ,
ಸಾವುಪ್ರಿಯ
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ನಿನಗೆ ಕೊಡಲು ನನ್ನ ಬಳಿ ಇರುವುದು ಪ್ರೀತಿ ಮಾತ್ರ
ಎಸ್ಸೆಮ್ಮೆಸ್ಸೊಂದು ಕಳಿಸಿಬಿಟ್ಟರೆ ಸಾಕಾ
ಕಪ್ಪು ಹುಡುಗಿಯ ಕಥೆ
ನಿನ್ನ ಓರೆನೋಟದಲ್ಲಿ ನೂರು ಆಸೆ ಕಂಡೆನು...
ಮನದೊಳಗೆ ಜಂಬೂ ಸವಾರಿ...!
ಚಾಟಿಂಗ್‌ ಬಿಡಬ್ಯಾಡ... ನಾನಿಲ್ಲಿ ಸತ್ತೇ... ಹೋಗ್ತೀನಿ
ಸಾಹಿತ್ಯ
ಪ್ರೇಮಗಾಥೆ - ಹುಡುಗಿ ನಾನು ನಿನಗೆ ಏನು ಗಿಪ್ಟ್ ಕೊಡಲಿ? ನಿನಗೆ ಏನು ಕೊಟ್ಟರೂ ಕಡಿಮೆಯೇ. ಹಾಗಂತ ಏನೂ ಕೊಡದೇ ಇರುವುದಕ್ಕೂ ನನ್ನ ಮನಸ್ಸು ಒಪ್ಪುತ್ತಿಲ್ಲ. ಏನು ಕೊಡಲಿ ಎಂದು ನಿನ್ನನ್ನು ಕೇಳಿದರೆ ಅದನ್ನು ನೀನು ಬಾಯಿ ಬಿಟ್ಟು ಏನೂ ಹೇಳುತ್ತಿಲ್ಲ.
ಮುಂದೆ ಓದಿ|ಮತ್ತಷ್ಟು...
ಆರೋಗ್ಯ
AP
 
ಕಡಿಮೆ ತೂಕದಿಂದ ಸುಖ ಪ್ರಸವ!
ಗರ್ಭಧಾರಣೆಯ ಪೂರ್ವದಲ್ಲಿ ಹೆಚ್ಚು ತೂಕ ಹೊಂದಿರುವ ಹಾಗೂ ಸ್ಥೂಲಕಾಯದ ಮಹಿಳೆಯರು ಹೆರಿಗೆ ಸಂದರ್ಭದಲ್ಲಿ...
ಮೂಳೆ ಮುರಿತಕ್ಕೆ ಲಿಥಿಯಂ ಚಿಕಿತ್ಸೆ
ಕ್ಯಾನ್ಸರ್ ಚಿಕಿತ್ಸೆಗೆ ತಂಬಾಕು ಲಸಿಕೆ!
ಸಮಾಚಾರ
ದೇಶ - 1950ರ ಜನವರಿ 26ರಂದು ಭಾರತ ಬ್ರಿಟನ್‌ನೊಂದಿಗಿನ ತನ್ನ ಸಂಬಂಧವನ್ನು ಕಡಿದುಕೊಂಡು ಗಣರಾಜ್ಯವಾಯಿತು. ಡಾ.ರಾಜೇಂದ್ರ ಪ್ರಸಾದ್, ಸ್ವತಂತ್ರ ಭಾರತದ ಮೊತ್ತ ಮೊದಲ ರಾಷ್ಟ್ರಪತಿಯಾದರು.
ಮುಂದೆ ಓದಿ|ಮತ್ತಷ್ಟು...
Marketplace