ಯಾಹೂ! | ನನ್ನ ಯಾಹೂ! | ಮೇಲ್ | ಚಿತ್ರ
ಶೋಧ
 
   ಮುಖ ಪುಟ ಸಾಹಿತ್ಯ ಪ್ರೇಮಗಾಥೆ
ನಿನಗೆ ಕೊಡಲು ನನ್ನ ಬಳಿ ಇರುವುದು ಪ್ರೀತಿ ಮಾತ್ರ
Taj Mahal
AP
ಹುಡುಗಿ ನಾನು ನಿನಗೆ ಏನು ಗಿಪ್ಟ್ ಕೊಡಲಿ? ನಿನಗೆ ಏನು ಕೊಟ್ಟರೂ ಕಡಿಮೆಯೇ. ಹಾಗಂತ ಏನೂ ಕೊಡದೇ ಇರುವುದಕ್ಕೂ ನನ್ನ ಮನಸ್ಸು ಒಪ್ಪುತ್ತಿಲ್ಲ. ಏನು ಕೊಡಲಿ ಎಂದು ನಿನ್ನನ್ನು ಕೇಳಿದರೆ ಅದನ್ನು ನೀನು ಬಾಯಿ ಬಿಟ್ಟು ಏನೂ ಹೇಳುತ್ತಿಲ್ಲ. ದೀಪ ಹಚ್ಟಿದಂತಿರುವ ನಿನ್ನ ರೂಪಕ್ಕೆ ಹಾಲು ಬೆಳದಿಂಗಳನ್ನು ಹಿಡಿದು ಕೊಟ್ಟರೂ ಕಡಿಮೆಯೇ.

ಕನಸುಗಳನ್ನು ಪೋಣಿಸಿ ವಾಸ್ತವ ಮರೆಸುತ್ತಿಲ್ಲ. ಅಂದವೆಂದರೆ ನೀನೆ ಅಂದುಕೊಂಡಿರುವ ನಾನು ನಿನಗೆ ಅಪೂರ್ವವಾದದೊಂದು ಉಡುಗೊರೆಯನ್ನು ಕೊಡದಿದ್ದರೆ ಹೇಗೆ? ಆಯ್ಕೆಯಲ್ಲಿ ಸ್ಪಲ್ಪ ಹೆಚ್ಚು ಕಡಿಮೆಯಾದರೂ, ನೀನೆಲ್ಲಿ ಮುನಿಸಿಕೊಳ್ಳುತ್ತೀಯಾ ಎನ್ನುವ ಹುಚ್ಚು ಹಂಬಲ, ಹಪಹಪಿ. ಕಂಜೂಸು ಹುಡುಗಾ ಮಾತು ಸಾಕು. ಕಿಸೆ ಮಾತ್ರ ಖಾಲಿಯಿದ್ದರೂ ನಿನ್ನ ಕನಸು ಮಾತ್ರ ಭಾರಿ ದೊಡ್ಡದು ಎನ್ನುತ್ತೀಯಾ? ಕನಸು ಕಾಣುವುದಕ್ಕೆ ದುಡ್ಡು ಕೊಡಬೇಕಿಲ್ಲವಲ್ಲಾ?

ಆದರೆ ಇದು ಕನಸಲ್ಲ. ನಿನಗೆ ಗೊತ್ತಾ? ನೀನು ಬೆಚ್ಚಗೆ ಪುಸ್ತಕದೊಳಗಿಟ್ಟು ಕೊಟ್ಟಿದ್ದ ನವಿಲುಗರಿಯನ್ನು ಇಂದಿಗೂ ನನ್ನ ಪಾಲಿನ ನಿಧಿಯಂತೆ ಕಾದಿಟ್ಟುಕೊಂಡಿದ್ದೇನೆ. ಅದರೊಳಗೆ ನಿನ್ನ ಬೆರಳಿನ ಬೆವರ ಹನಿಯ ನವಿರು ವಾಸನೆ ಇಂದಿಗೂ ಜೀವಂತವಾಗಿದೆ. ನಿಷ್ಕಲ್ಮಶ ಪ್ರೀತಿಯ ಮುತ್ತು ಪೋಣಿಸಿ ನೀನು ತೋರಿದ ಪ್ರೀತಿಗೆ, ಅದರ ರೀತಿಗೆ ನನ್ನ ಕಣ್ಣ ಹನಿಗಳೇ ಕಾಣಿಕೆ.

ನೋಡು ಹುಡುಗಿ, ಮೊನ್ನೆ ನಾನು ಟಿವಿ ನೋಡುತ್ತಿದ್ದೆ. ವಿಶ್ವದ ಏಳು ಅದ್ಭುತಗಳ ಪಟ್ಟಿಗೆ ತಾಜ್ ಮಹಲ್ ಆಯ್ಕೆಯಾಗಿದೆ ಎನ್ನುವ ಸುದ್ದಿ ಬಂದದ್ದೇ ತಡ ನನಗೆ ನಿನ್ನ ನೆನಪಾಯಿತು. ಅಮರ ಪ್ರೇಮದ ದೃಶ್ಯಕಾವ್ಯ ತಾಜ್ ಮಹಲ್. ಮಂಜು ಸುರಿದ ಮುಂಜಾವಿನಲ್ಲಿ ನೊರೆ ಹಾಲಿನಂತೆ ಕಾಣುವ ತಾಜ್ ಮಹಲ್‌ನ್ನು ಕಣ್ತುಂಬಿಸಿಕೊಳ್ಳುವುದೇ ಒಂದು ಅಪೂರ್ವ ಅನುಭವ. ಅದು ಕೂಡ ನಿನ್ನ ಹಾಗೆ ಬೆಳದಿಂಗಳ ಬಾಲೆ. ನಿನ್ನನ್ನು ಹೊಗಳಿ ಅಟ್ಟಕ್ಕೇರಿಸುವ ಪ್ರಯತ್ನ ಮಾಡುತ್ತಿಲ್ಲ.

ಪ್ರೀತಿಸುವವರ ಎದೆಯಲ್ಲಿ ತಾಜ್ ಮಹಲ್‌ಗೊಂದು ವಿಶಿಷ್ಠ ಸ್ಥಾನವಿದೆ. ಅವರ ಎದೆ ಬಡಿತ ಕೂಡ ಯಮುನಾ ನದಿಯ ನೀರ ಅಲೆಗಳಂತೆ ಮಧುರವಾಗಿರುತ್ತದೆ. ನೀನು ಒಮ್ಮೊಮ್ಮೆ ಗೆಜ್ಜೆ ಸದ್ದಿನೊಂದಿಗೆ ಬರುತ್ತೀಯಲ್ಲ ಹಾಗೆ. ನಿನ್ನ ಕಣ್ಣುಗಳಲ್ಲಿ ಮೂಡುವ ತಾಜ್‌ಮಹಲಿನ ಬಿಂಬ ನನ್ನ ಕಲ್ಪನೆಯ ಮಹಲಿನೊಳಗೆ ಮಮ್ತಾಜ್ ಆಗಬಯಸುವ ನಿನ್ನ ಹಪಹಪಿ ನನಗರ್ಥವಾಗದೇ ಇರುತ್ತದೆಯಾ?


(ಮೂಲ - ವೆಬ್‌ದುನಿಯಾ)
1| 2
 
ಮತ್ತಷ್ಟು...
ಎಸ್ಸೆಮ್ಮೆಸ್ಸೊಂದು ಕಳಿಸಿಬಿಟ್ಟರೆ ಸಾಕಾ
ಕಪ್ಪು ಹುಡುಗಿಯ ಕಥೆ
ನಿನ್ನ ಓರೆನೋಟದಲ್ಲಿ ನೂರು ಆಸೆ ಕಂಡೆನು...
ಮನದೊಳಗೆ ಜಂಬೂ ಸವಾರಿ...!
ಚಾಟಿಂಗ್‌ ಬಿಡಬ್ಯಾಡ... ನಾನಿಲ್ಲಿ ಸತ್ತೇ... ಹೋಗ್ತೀನಿ
ನಡುಗುವ ತುಟಿಯ ಹುಡುಗಿ ಸ್ವೀಟ್‌ ಕೊಟ್ಟಳು
ಮನರಂಜನೆ
ಚಿತ್ರ ಸುದ್ದಿ - ಗೊತ್ತಲ್ಲ.. ಅದೇ ಪ್ರಿಯಾಂಕ್ ಚೊಪ್ರಾ. "ಡಾನ್" ರಿಮೆಕ್ ಚಿತ್ರದಲ್ಲಿ ಶಾರೂಖ್‍ನೊಂದಿಗೆ ಹೆಜ್ಜೆ ಹಾಕಿದ ಬೆಡಗಿ.
ಮುಂದೆ ಓದಿ|ಮತ್ತಷ್ಟು...
ಆರೋಗ್ಯ
AP
 
ಕಡಿಮೆ ತೂಕದಿಂದ ಸುಖ ಪ್ರಸವ!
ಗರ್ಭಧಾರಣೆಯ ಪೂರ್ವದಲ್ಲಿ ಹೆಚ್ಚು ತೂಕ ಹೊಂದಿರುವ ಹಾಗೂ ಸ್ಥೂಲಕಾಯದ ಮಹಿಳೆಯರು ಹೆರಿಗೆ ಸಂದರ್ಭದಲ್ಲಿ...
ಮೂಳೆ ಮುರಿತಕ್ಕೆ ಲಿಥಿಯಂ ಚಿಕಿತ್ಸೆ
ಕ್ಯಾನ್ಸರ್ ಚಿಕಿತ್ಸೆಗೆ ತಂಬಾಕು ಲಸಿಕೆ!
ವಾಣಿಜ್ಯ
ವಾಣಿಜ್ಯ ಲೇಖನಗಳು - ಸುಮಾರು ಶೇ.10ಕ್ಕೆ ಏರಿರುವ ಒಂದು ವರ್ಷದ ಬ್ಯಾಂಕ್ ಠೇವಣಿಗಳಲ್ಲಿನ ಬಡ್ಡಿ ದರಗಳು ಶೇ.0.5ರಷ್ಟು ಇಳಿಯಲಿವೆ ಎಂಬ ನಿರೀಕ್ಷೆಯನ್ನು ಹಣಕಾಸು ಸಚಿವ ಪಿ ಚಿದಂಬರಂ ಹೊಂದಿದ್ದಾರೆ.
ಮುಂದೆ ಓದಿ|ಮತ್ತಷ್ಟು...
Marketplace