|
| ಕಪ್ಪು ಹುಡುಗಿಯ ಕಥೆ | |
ಲೇಖಕರ ಪರಿಚಯ - ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹಂಝ ಮಲಾರ್ ತನ್ನದೇ ಸ್ಥಾನ ಸಂಪಾದಿಸಿಕೊಂಡಿದ್ದಾರೆ. ಅತ್ಯಂತ ಕಿರಿಯ ವಯಸ್ಸಿನಲ್ಲೇ ಬರೆಯಲಾರಂಭಿಸಿರುವ ಹಂಝ, ಮುಸ್ಲಿಂ ಬದುಕಿನ ಒಳಹೊರಗುಗಳ ಸುತ್ತ ಹಲವಾರು ಕಥೆಗಳನ್ನು ಹೆಣೆದಿದ್ದಾರೆ. ಇವರ ಅನೇಕ ಕಾದಂಬರಿಗಳೂ ಪ್ರಕಟವಾಗಿವೆ.
ನನ್ನನ್ನು ಮರೆತು ಬಿಟ್ಟಿರಾ? ನಾನು ಇನ್ನೂ ಬದುಕಿದ್ದೇನೆ ಸಾಯಲಿಲ್ಲ ಎಂಬ ಧ್ವನಿ ತೇಲಿ ಬಂದಾಗ ಒಮ್ಮೆ ನಾನು ಆಶ್ಚರ್ಯಗೊಂಡರೂ ಕೂಡಾ ಅದನ್ನು ತೋರಿಸಿಕೊಳ್ಳದೇ, ಅತ್ತ ಕಣ್ಣು ಹಾಯಿಸಿದಾಗ ನಾನು ನನ್ನ ಕಣ್ಣನ್ನೆ ನಂಬದಾದೆ.
ಅವಳು ಕಿಲಕಿಲನೇ ನಗುತ್ತಿದ್ದಳು. ಆ ನಗು ಉಯ್ಯಾಲೆಯಂತಿದ್ದರು ಕೂಡಾ ಅದರಲ್ಲೊಂದು ನೋವಿತ್ತು. ನಾನು ಮತ್ತೊಮ್ಮೆ ಅವಳನ್ನು ಓರೆ ನೋಟದಲ್ಲಿ ನೋಡುತ್ತಾ ಅದು ಅವಳಾ ಎಂದು ಪ್ರಶ್ನಿಸಿಕೊಂಡೆ. ಯಾಕಾಗಿ ಈ ಮನೆಗೆ ಬಂದನೋ ಎಂದು ಹಲುಬಿದೆ.
ಪುಣ್ಯಕ್ಕೆ ಅಲ್ಲಿ ಎರಡು ಜೀವಗಳಲ್ಲದೇ, ಅಲ್ಲಿ ಯಾರು ಇರಲಿಲ್ಲ. ನೀವೆಲ್ಲ ಯಾಕೆ ಹಾಗೆ ನೋಡುತ್ತಿರಿ. ನೀವೆಲ್ಲ ನಾನು ಸತ್ತಿದ್ದೆನೆಂದು ಭಾವಿಸಿರಬೇಕು ಅಲ್ವಾ? ಹೂ. ನಾನು ಸಾಯಲಿಲ್ಲ ಬದುಕಿದ್ದೆನೆ. ಆದರೆ ಸುಮ್ಮನೆ ಬದುಕೊಲ್ಲ ಎಂದು ಅವಳು ಉಸುರಿದಾಗಲು ನಾನು ಬಾಯ್ತೆರೆಯಲಿಲ್ಲ. ಒಂದು ಕ್ಷಣ ನಮ್ಮ ನಡುವೆ ಮಾತುಗಳು ಇರಲಿಲ್ಲ. ನಾನು ಮತ್ತೂ ಅವಳನ್ನು ಓರೆಕಣ್ಣಿನಲ್ಲಿ ನೋಡಿದೆ.
ಯಾಕೆ ಸಲ್ಮಾನ್ ಹಾಗೇ ನೋಡುತ್ತಿರುವಿ. ನಾನು ಅಮೀನಾ ಹೌದೋ ಅಲ್ಲವೋ ಅಂತ ಸಂಶಯವಾ?ನಾನು ಅಮೀನಾ ಅನುಮಾನ ಬೇಡ, ನನಗೆ ಈ ಮನೆಗೆ ಏನು ಸಂಬಂಧ ಎನ್ನುವ ಪ್ರಶ್ನೆ ಕಾಡುತ್ತಿದೆ ಅಲ್ವಾ?ಎಂದು ಹೇಳಿ ಕಿಲಕಿಲ ನಕ್ಕಳು. ಆವಾಗಲು ಆ ನಗುವಿನಲ್ಲಿ ನೋವಿವಿತ್ತು.
ಅಷ್ಟರಲ್ಲಿ ಅಂಗಳಕ್ಕೊಂದು ಸುತ್ತುಹಾಕಿ ಬಂದ ಅಬ್ಬಾಸ್ ಹಾಜಿ ಸಲ್ಮಾನ್ ತುಂಬಾ ಸುಸ್ತಾಗಿರಬೇಕು ಅಲ್ವಾ ...ಸ್ನಾನ ಮಾಡುತ್ತಿಯಾ ಎಂದು ಬಲವಂತಪಡಿಸಿದಾಗ ಅವಸರವಾಗಿ ಬಾತರೂಂಗೆ ಹೋಗಿ ಸಾಬೂನು ಕೂಡಾ ಹಚ್ಚದೆ ಮೈ ತೊಳೆದುಕೊಂಡು, ಉಟ್ಟ ಬಟ್ಟೆಯನ್ನೇ ಮತ್ತೆ ಧರಿಸಿಕೊಂಡ.
ಹಾಜಿಯಾರರೇ ಈ ಮನೆಯಲ್ಲಿ ಯಾರು ಇಲ್ಲವಾ? ನನಗೆ ಮಕ್ಕಳೂ ಅಂತ ಯಾರು ಇಲ್ಲಾ, ಯಾಕೆಂದರೆ ನಾನು ಮದುವೆಯಾಗಿಲ್ಲ ಈವರೆಗೆ ಒಂಟಿಯಾಗಿ ಕಾಲ ಕಳೆದೆ ಇತ್ತಿಚೆಗೆ ಒಬ್ಬ ಅನಾಥೆ ಈ ಮನೆಗೆ ಕಾಲಿಟ್ಟಿದ್ದಾಳೆ. ಅವಳು ಈ ಮನೆಗೆ ಬಂದುದು ಅಕಸ್ಮಿಕವೇ.
| | (ಮೂಲ - ವೆಬ್‌ದುನಿಯಾ) |
|
| |
| | | |
|
|
|
|
|
| ಚಿತ್ರ ಸುದ್ದಿ - ಯೋಗರಾಜ ಭಟ್ಟರು ಸುರಿಸಿರುವ ಮುಂಗಾರು ಮಳೆ ಜಯಭೇರಿ ಭಾರಿಸಿದೆ. ಈ ಚಿತ್ರ ನಿರ್ಮಾಪಕ ಕೃಷ್ಣಪ್ಪ ಅವರಿಗೆ ಕಾಂಚಾಣದ ಮಳೆಯನ್ನು ತಂದುಕೊಟ್ಟಿದೆ. ಕಾಮಿಡಿ ಟೈಂ ಗಣೇಶ್ ಅದೃಷ್ಟ ಖುಲಾಯಿಸಿದೆ. ಒಟ್ಟಾರೆ ರಾಜ್ಯದೆಲ್ಲೆಡೆ ಈಗ ಮಳೆಗೆ ಸೆಂಚುರಿ ರಂಗು. ಚಿತ್ರಪ್ರೇಮಿಗಳಿಗೆ ಮುಂಗಾರು ಮಳೆಯ ಹಾಡಿನದೇ ಗುಂಗು! |
| |
|
|
|
|
 | | AP |
| | |
| |
|
|
|
|
|
| ಧಾರ್ಮಿಕ ಲೇಖನ - ಒಮ್ಮೆ ದಶರಥನು ಬೆಳದಿಂಗಳಿನಲ್ಲಿ ತನ್ನ ಬೇಟೆಯೂಡುವ ತುಡಿತವನ್ನು ತಣಿಸುವ ಸಲುವಾಗಿ ಕಾಡಿಗೆ... |
| |
|
|
|
|
|
|
|