|
| ನಿರೀಕ್ಷೆ.... | |
ಕಾದು ಕುಳಿತಿರುವೆ ಕವಿತೆಗಾಗಿ ಮುಂಜಾನೆಯ ಇಬ್ಬನಿಯಲಿ ಮೈನೆನೆವ ಹಸಿರು ಹುಲ್ಲುಗಳ ನೋಡಿ... ಕವಿತೆ ಬರೆಯ ಬೇಕೆಂದೆನಿಸಿತು ಆದರೆ ಅವು, ನನಗೆ ಕಂಬನಿಗಳಂತೆ ಕಂಡವು ಮನಸ್ಸಿನಲ್ಲಿ ದುಗುಡ, ಕೈ ನಡುಗಿತು ಬರೆಯಲಾಗದು ನನ್ನಿಂದ ಕವಿತೆ....
ಎಳ ಬಿಸಿಲ ಹೊಂಗಿರಣದಿ ನಗುವ ಸೂರ್ಯಕಾಂತಿಯ ನೋಡಿ ಬರೆಯ ಬೇಕೆನಿಸಿತು ಕವಿತೆ.. ಮತ್ತೊಮ್ಮೆ, ಅದೇ ಯೋಚನೆ ಮುಸ್ಸಂಜೆಗೆ ಮುದುಡಿ ಹೋಗುವ ಈ ಸುಮದ ಬದುಕು, ಅದೇ ನಡುಕ ಎಂದೆನಿತು ಕವಿತೆ ಬರೆಯಲೇನು?
ಉರಿಯುವ ಮಧ್ಯಾಹ್ನದ ಬೇಗೆಯಂತೆ ಮನದಾಳದ ಯಾತನೆ... ಮುಸ್ಸಂಜೆಯಲಿ ಬಿರಿಯುವ ಬಯ್ಯ ಮಲ್ಲಿಗೆ, ಗೂಡು ಸೇರುವ ಹಕ್ಕಿ ಚುಕ್ಕಿಯಂತೆ ನಭದಲ್ಲಿ ತೋರುತಿರಲು ಕವಿತೆಗಾಗಿ ಹುಡುಕಿದರೆ ಪದ ಪುಂಜಗಳು ಸಿಗಲೇ ಇಲ್ಲ....ಏನ ಬರೆಯಲಿ ನಾ?
ಬಿರಿದ ಬಾನಂಗಳದಿ ನಸುನಗುವ ಚಂದಿರ, ಇಕ್ಕೆಲಗಳಲ್ಲಿ ಕಣ್ಣು ಮಿಟುಕಿಸುವ ತಾರೆಗಳತ್ತ ದೃಷ್ಟಿ ಹಾಯಿಸಿರೆ... ಆಗೊಮ್ಮೆ ಈಗೊಮ್ಮೆ ಬೀಳುವ ಉಲ್ಕೆಗಳಂತೆ ಜೀವನದಿ ಕಷ್ಟ ಸುಖಗಳ ದ್ವಂದ್ವ.. ಒಂದೆರಡು ಸಾಲು ಬರೆಯಲು ತಡಕಾಡಿದರೆ ಮುನಿಸೇತಕೆ ನಿಮಗೆ? ಕವಿತೆಗಳೇ ನೀವು ಬರುವಿರೆಂದು?
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ವಾಸ್ತು - ಮನೆಯಲ್ಲಿ ಓದುವ ಕೋಣೆಗೆ ಪೂಜಾ ಕೋಣೆಯಂತೆ ಹೆಚ್ಚು ಪ್ರಾಶಸ್ತ್ಯವಿರುತ್ತದೆ. ಕಾರಣ ಅಲ್ಲಿ ಸರಸ್ವತಿ ನೆಲೆಯೂರಿದರೆ ಮಾತ್ರ ವಿದ್ಯೆಯು ಪ್ರಧಾನವಾಗುವುದು ಎಂಬ ನಂಬಿಕೆ ಭಾರತೀಯರಲ್ಲಿ ಗಾಡವಾಗಿದೆ. |
| |
|
|
|
|
 | | NRB |
| | |
| |
|
|
|
|
|
| ವಾಣಿಜ್ಯ ಲೇಖನಗಳು - ಯಾವುದೇ ಒಂದು ದೇಶದಲ್ಲಿ ವಕೀಲರ ಸಂಖ್ಯೆ ಹೆಚ್ಚಾಗಿದೆ ಎಂದರೆ ಅಲ್ಲಿ ವಾದ-ವಿವಾದಗಳ ಸಂಖ್ಯೆ ಹೆಚ್ಚುತ್ತಲಿದೆ ಎಂದರ್ಥ. ಯಾವುದೇ ಒಂದು ದೇಶದಲ್ಲಿ ಪೊಲೀಸ್ ಸಂಖ್ಯೆ |
| |
|
|
|
|
|
|
|