|
| ಅತ್ತು ಬಿಡು ಹಾಗೇ ಸುಮ್ಮನೆ... | | - ಮಲ್ಲಿ |
| ಸೋಮವಾರ, 22 ಅಕ್ಟೋಬರ್ 2007 ( 13:56 IST ) |
|
ಅತ್ತು ಬಿಡು, ಗೆಳೆಯ ಹಾಗೇ ಸುಮ್ಮನೇ ಹರಿದು ಹೋಗಲಿ ಕಣ್ಣೀರು ಕೋಡಿ ನದಿಯಾಗಿ. ಇಳಿದು ಹೋಗಲಿ ಎದೆಯ ಭಾರ ಹಗುರಾಗಿ.
ನನ್ನ-ನಿನ್ನ ನಡುವಿನ ಮಾತಿಲ್ಲದ ಮೌನಗಳು ನೂರು ಅರ್ಥ ಕಲ್ಪಿಸಿವೆ ನಮ್ಮ ನಡುವಿನ ಸಂಬಂಧಕ್ಕೆ
ಗೆಳೆಯಾ, ಸಂಬಂಧದ ನಂಟಿಗೆ ಹೆಸರಿನ ಅಂಟು ಬೇಡ ಹಾಗೇ ಇದ್ದು ಬಿಡೋಣ ಬಳ್ಳಿ, ಮರದ ಹಾಗೇ ಭೂಮಿ, ಚಂದಿರನ ಹಾಗೇ ಗಾಳಿ, ಗಂಧದ ಹಾಗೇ
ನಾನು ಬಳ್ಳಿಯಾ ? ನೀನು ಮರವಾ? ನೀನು ಚಂದಿರನಾ? ನಾನು ಭೂಮಿನಾ ? ಬೇಡ, ಮಿಗಿಲಾಟದ ತೊಳಲಾಟ ಹೀಗೆ ಇರಲಿ, ಸಂಬಂಧದ ಪರಿವೆ ಇಲ್ಲದ ಅನುಬಂಧ.
ಹಾಗೇ ಸುಮ್ಮನೇ ಅತ್ತು ಬಿಡು, ಇಳಿದು, ತೊಳೆದು ಹೊಗಲಿ ನೆನಪಿನ ಮೆರವಣಿಗೆ.
ಸೇರೊಣ ಭೂ-ಕಡಲಿನಂಚಿನಲಿ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ಚಿತ್ರ ಸುದ್ದಿ - ಸಾವರಿಯಾ ಚಿತ್ರದಲ್ಲಿ ಅಭೂತಪೂರ್ವ ಅಭಿನಯ ನೀಡಿರುವ ಸೋನಮ್ ಕಪೂರ್ ಹಾಗೂ ರಣಭೀರ್ ಕಫೂರ್ ಅವರನ್ನು... |
| |
|
|
|
|
 | | AP |
| | |
| |
|
|
|
|
|
| ವಾಣಿಜ್ಯ ಲೇಖನಗಳು - ಒಂದೊಮ್ಮೆ ಕೇವಲ ಆಧ್ಯಾತ್ಮಿಕ ತವರೂರಾಗಿದ್ದು, ವಿಜ್ಞಾನಿಗಳ ಸಂಗಮವಾಗಿದ್ದ ಭಾರತ, ಇಂದು ಸರ್ವರಂಗಗಳಲ್ಲಿಯೂ... |
| |
|
|
|
|
|
|
|