|
| ಜಾತಿ | | - ಡಾ| ಶ್ರೀಕೃಷ್ಣ ಭಟ್ ಅರ್ತಿಕಜೆ |
|
ಲೇಖಕರ ಪರಿಚಯ - ಮದರಾಸು ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾಗಿರುವ ಡಾ. ಶ್ರೀಕೃಷ್ಣ ಭಟ್ ಅರ್ತಿಕಜೆ ಅವರು, ಬಹುಭಾಷಾ ವಿದ್ವಾಂಸರು. ಕನ್ನಡ ಶತಕ ಸಾಹಿತ್ಯ, ಜಾನಪದ ಹಾಗೂ ತೌಲನಿಕ ಸಾಹಿತ್ಯದ ಬಗೆಗೆ ಅನೇಕ ಪುಸ್ತಕಗಳನ್ನು ಮತ್ತು ಸಂಶೋಧನಾತ್ಮಕ ಲೇಖನಗಳನ್ನೂ ಪ್ರಕಟಿಸಿದ್ದಾರೆ. ತಮಿಳು ಹಾಗೂ ಮಲಯಾಳಂ ಭಾಷೆಗಳಿಂದ ಇವರು ಕನ್ನಡಕ್ಕೆ ಕೆಲವು ಕೃತಿಗಳನ್ನು ಅನುವಾದ ಮಾಡಿದ್ದಾರೆ. ಕರ್ನಾಟಕ ಜಾನಪದ ಅಕಾಡೆಮಿ ಮುಂತಾದ ಸಂಸ್ಥೆಗಳಿಂದ ಪುರಸ್ಕೃತರಾಗಿದ್ದಾರೆ.
ಅಂದಿನಿಂದ ಇಂದಿನವರೆಗೂ ಮುಂದೆ ಎಂದೆಂದಿಗೂ ಇದು ಒಂದು
ಬಿಡಿಸಲಾರದ ಒಗಟು ಒಂದು ಎರಡು ನಾಲ್ಕು ನೂರು ಸಾವಿರ ಕೋಟಿ ಒಂದೊಂದೂ ಬೇರೆ ಬೇರೆ
ಆದರೂ ಎಲ್ಲಾ ಒಂದೇ ಒಂದೊಂದಕ್ಕೂ ಉತ್ತರ ದಕ್ಷಿಣ ಧ್ರುವಗಳ ಅಂತರ ಪರಸ್ಪರ ದ್ವೇಷ- ರೋಷ ನಿರಂತರ ಏಕೆ ಈ ವೈಪರೀತ್ಯ ಈ ಭೇದ
ಎಂದು ಇದಕ್ಕೆ ಕೊನೆ ಎಂತು ಇದಕ್ಕೆ ಮುಕ್ತಿ?ಬಹುದು ವಿರಕ್ತಿ? ಇದೊಂದು ಜಾಡ್ಯ ಔಷಧಿ ಮಾಡಿದಷ್ಟೂ ಉಲ್ಬಣ ಗೊಳ್ಳುವ ಅಂಟುಜಾಡ್ಯ
ಭೀಕರ ಸಾಂಕ್ರಾಮಿಕ ರೋಗ ಎಲ್ಲೆಲ್ಲು ಹರಡುವುದು ಸರಾಗ ಇದು ದಿನದಿಂದ ದಿನಕ್ಕೆ ಕಾಲದಿಂದ ಕಾಲಕ್ಕೆ ಬಣ್ಣ ಬದಲಾಯಿಸುವ ಓತಿ
ರೆಂಬೆಯಿಂದ ರೆಂಬೆಗೆ ಮರದಿಂದ ಮರಕ್ಕೆ ಮೇಲಿಂದ ಕೆಳಕ್ಕೆ ಕೆಳಗಿಂದ ಮೇಲಕ್ಕೆ ಹಾರುವ ಕೋತಿ ಎಂದಿಗೂ ಇದು ತನ್ನ ಹುಟ್ಟುಗುಣ ಬಿಡದು
ಬೀಜ ಒಂದೆ ಹೂವು ಹಣ್ಣು ಹಲವು ಪರಿಮಳ ದುರ್ವಾಸನೆ ಸಿಹಿ- ಕಹಿ ಕೆಲವೊಮ್ಮೆ ಪ್ರೀತಿ ಭಯ ಭೀತಿ ಕೆಲವರ ಬಾಳಿಗೆ ಪೂರಕ ಕ್ರಾಂತಿಕಾರಕ
ಸ್ನೇಹಕ್ಕೆ ಮಾರಕ ಗಲಭೆಗೆ ಪ್ರೇರಕ ನಾಯಿ ನಾಯನ್ನು ಕಂಡಂತೆ ಕವಿ ಕವಿಯನ್ನು ಕಂಡಂತೆ ಒಂದಕೆ ಇನ್ನೊಂದು ಎಣ್ಣೆ ಸೀಗೆ ಕಪ್ಪು ಬಿಳಿ ಬೂದು ಕೆಂಪು
ಎಷ್ಟೊಂದು ವರ್ಣ ವೈವಿಧ್ಯ ಆದರೂ ಎಲ್ಲರ ಮೈಯ ರಕ್ತದ ಬಣ್ಣ ಒಂದೆ ಕೆಂಪು ಒಂದು ಎರಡು ನಾಲ್ಕು ನೂರಾರು ಮತ್ತೆ ಸಾವಿರಾರು ಏಕತ್ವದಿಂದ ಬಹುತ್ವ ಎಲ್ಲ ಕಲಸು ಮೇಲೋಗರ
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ಚಿತ್ರ ಸುದ್ದಿ - ಯೋಗರಾಜ ಭಟ್ಟರು ಸುರಿಸಿರುವ ಮುಂಗಾರು ಮಳೆ ಜಯಭೇರಿ ಭಾರಿಸಿದೆ. ಈ ಚಿತ್ರ ನಿರ್ಮಾಪಕ ಕೃಷ್ಣಪ್ಪ ಅವರಿಗೆ ಕಾಂಚಾಣದ ಮಳೆಯನ್ನು ತಂದುಕೊಟ್ಟಿದೆ. ಕಾಮಿಡಿ ಟೈಂ ಗಣೇಶ್ ಅದೃಷ್ಟ ಖುಲಾಯಿಸಿದೆ. ಒಟ್ಟಾರೆ ರಾಜ್ಯದೆಲ್ಲೆಡೆ ಈಗ ಮಳೆಗೆ ಸೆಂಚುರಿ ರಂಗು. ಚಿತ್ರಪ್ರೇಮಿಗಳಿಗೆ ಮುಂಗಾರು ಮಳೆಯ ಹಾಡಿನದೇ ಗುಂಗು! |
| |
|
|
|
|
 | | AP |
| | |
| |
|
|
|
|
|
| ಧಾರ್ಮಿಕ ಲೇಖನ - ಒಮ್ಮೆ ದಶರಥನು ಬೆಳದಿಂಗಳಿನಲ್ಲಿ ತನ್ನ ಬೇಟೆಯೂಡುವ ತುಡಿತವನ್ನು ತಣಿಸುವ ಸಲುವಾಗಿ ಕಾಡಿಗೆ... |
| |
|
|
|
|
|
|
|