ಯಾಹೂ! | ನನ್ನ ಯಾಹೂ! | ಮೇಲ್ | ಚಿತ್ರ
ಶೋಧ
 
   ಮುಖ ಪುಟ ಸಾಹಿತ್ಯ ಕವನ
ಏಕತೆ
- ಡಾ| ಶ್ರೀಕೃಷ್ಣ ಭಟ್ ಅರ್ತಿಕಜೆ
ಲೇಖಕರ ಪರಿಚಯ - ಮದರಾಸು ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾಗಿರುವ ಡಾ. ಶ್ರೀಕೃಷ್ಣ ಭಟ್ ಅರ್ತಿಕಜೆ ಅವರು, ಬಹುಭಾಷಾ ವಿದ್ವಾಂಸರು. ಕನ್ನಡ ಶತಕ ಸಾಹಿತ್ಯ, ಜಾನಪದ ಹಾಗೂ ತೌಲನಿಕ ಸಾಹಿತ್ಯದ ಬಗೆಗೆ ಅನೇಕ ಪುಸ್ತಕಗಳನ್ನು ಮತ್ತು ಸಂಶೋಧನಾತ್ಮಕ ಲೇಖನಗಳನ್ನೂ ಪ್ರಕಟಿಸಿದ್ದಾರೆ. ತಮಿಳು ಹಾಗೂ ಮಲಯಾಳಂ ಭಾಷೆಗಳಿಂದ ಇವರು ಕನ್ನಡಕ್ಕೆ ಕೆಲವು ಕೃತಿಗಳನ್ನು ಅನುವಾದ ಮಾಡಿದ್ದಾರೆ. ಕರ್ನಾಟಕ ಜಾನಪದ ಅಕಾಡೆಮಿ ಮುಂತಾದ ಸಂಸ್ಥೆಗಳಿಂದ ಪುರಸ್ಕೃತರಾಗಿದ್ದಾರೆ.

ಆಗೋಣ ನಾವೆಲ್ಲ ಒಂದು
ಐಕ್ಯದಿಂದಲಿ ಸಾಗೋಣ ಮುಂದು
ಮುಂದು ಮುಂದಕ್ಕೆ ಸಾಗೋಣ ಎಂದೆಂದು
ಭಾಷೆ ಬಣ್ಣ ಬೇರೆ ಬೇರೆ ಆದರೇನು

ನಮ್ಮ ಚಿಂತನೆ ಒಂದೆ ಅಲ್ಲವೇನು?
ಜಾತಿ ಮತ ಬೇರೆ ಬೇರೆ ಇದ್ದರೇನು
ನಮ್ಮ ಸಂಸ್ಕೃತಿ ಒಂದೆ ಅಲ್ಲವೇನು
ರಾಜ್ಯಗಳು ಹಲವು ಇದ್ದರೇನು

ಭರತ ಭೂಮಿ ಅಖಂಡವಲ್ಲವೇನು
ಹಲವು ಪಕ್ಷ ಪಂಗಡವಿದ್ದರೇನು
ನಮ್ಮ ಧ್ಯೇಯ ಒಂದೆ ಆಗಬೇಡವೇನು
ನಮ್ಮ ಹೃದಯವು ಅದುವೇ ಭಾರತ

ನಮ್ಮ ಎಲುಬು ಮಾಂಸಗಳೆಲ್ಲ ಭಾರತ
ನಮ್ಮ ರಕ್ತದ ಹನಿಹನಿಯು ಭಾರತ
ನಮ್ಮ ಜೀವದ ಉಸಿರದು ಭಾರತ
ಹಿಂದು ಮುಸ್ಲಿಂ ಕ್ರೈಸ್ತ ಸಿಕ್ಖ

ಎಂಬ ಜಾತಿ ಧರ್ಮದ ಭೇದ ಭಾವ ಬೇಡ
ಮಾನವ ಕುಲವು ಒಂದೆ ಎಂಬ
ಭಾವನೆ ಇರಲಿ ಹೃದಯ ತುಂಬ
ಅನೇಕತೆಯಲಿ ಇಹುದು ನೋಡಿ ಐಕ್ಯ

ಶಾಂತಿ ನೆಮ್ಮದಿ ಪಡೆವುದೆ ಮುಖ್ಯ
ನಾವು ಒಂದಾಗಿ ಬಾಳಬೇಕು ನಿತ್ಯ
ನಮ್ಮ ನಡತೆಯಲಿ ಇರಲಿ ಧರ್ಮ ಸತ್ಯ
ಆಸೇತು ಹಿಮಾಚಲವೊಂದು

ಅತಿಪಾವನ ವೀ ನಮ್ಮ ನಾಡು
ಸತ್ಯ ಸದ್ಧರ್ಮದಾ ನೆಲೆವೀಡು
ವಿಶ್ವಶಾಂತಿಯ ಸಾರುವ ನಾಡು
ಲೋಕನಾಯಕರುದಿಸಿದ ನಾಡು

ಅಧ್ಯಾತ್ಮ ತತ್ವದ ಬೀಡು
ಧರ್ಮ ಪುರುಷರು ಬಾಳಿದಾ ನಾಡು
ಕವಿ ಪುಂಗವರುದಿಸಿದ ಬೀಡು
ಕಷ್ಟನಷ್ಟವು ದುಃಖವು ಬಂದರೆ

ಐಕ್ಯವಿರಲು ನಮಗಿಲ್ಲವು ತೊಂದರೆ
ನಾವೆಲ್ಲರೊಂದುಗೂಡಿ ಬಾಳುವಾ
ತಾಯ್ನಾಡ ಹಿರಿಮೆಯನ್ನು ಸಾರುವಾ
ದೇಶದುನ್ನತಿಯ ನಾಂದಿಯನ್ನು ಹಾಡುವಾ

ಐಕ್ಯದ ಕಹಳೆಯನ್ನು ಮೊಳಗುವಾ
ಬಾಳೋಣ ಒಂದಾಗಿ ಮುಂದು
ಭಾರತಾಂಬೆಯ ಮಕ್ಕಳು ಎಂದು
ಆಗೋಣ ನಾವೆಲ್ಲ ಒಂದು

ಒಂದಾಗಿ ಸಾಗೋಣ ಮುಂದು
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಜಾತಿ
ಶ್ರೀಬಸವೇಶ್ವರರ ವಚನಗಳು
ಬೇವು ಬೆಲ್ಲ - ಭಾಗ 2
ಬೇವು ಬೆಲ್ಲ - ಭಾಗ 1
ಒಂದೆ ಕುಲ ಒಂದೆ ನೆಲ
ಶೋಧ
ಮನರಂಜನೆ
ಚಿತ್ರ ಸುದ್ದಿ - ಯೋಗರಾಜ ಭಟ್ಟರು ಸುರಿಸಿರುವ ಮುಂಗಾರು ಮಳೆ ಜಯಭೇರಿ ಭಾರಿಸಿದೆ. ಈ ಚಿತ್ರ ನಿರ್ಮಾಪಕ ಕೃಷ್ಣಪ್ಪ ಅವರಿಗೆ ಕಾಂಚಾಣದ ಮಳೆಯನ್ನು ತಂದುಕೊಟ್ಟಿದೆ. ಕಾಮಿಡಿ ಟೈಂ ಗಣೇಶ್ ಅದೃಷ್ಟ ಖುಲಾಯಿಸಿದೆ. ಒಟ್ಟಾರೆ ರಾಜ್ಯದೆಲ್ಲೆಡೆ ಈಗ ಮಳೆಗೆ ಸೆಂಚುರಿ ರಂಗು. ಚಿತ್ರಪ್ರೇಮಿಗಳಿಗೆ ಮುಂಗಾರು ಮಳೆಯ ಹಾಡಿನದೇ ಗುಂಗು!
ಮುಂದೆ ಓದಿ|ಮತ್ತಷ್ಟು...
ಆರೋಗ್ಯ
AP
 
ಲಿವರ್ ಕ್ಯಾನ್ಸರ್‌ ತಗ್ಗಿಸುವ ಕಾಫಿ
ಹೆಚ್ಚು ಕಾಫಿ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಮಾತನ್ನು ನಾವು ಕೇಳುತ್ತಲೇ ಬಂದಿದ್ದೇವೆ. ಆದರೆ ಕಾಫಿ...
ಗರ್ಭಧಾರಣಾ ತೂಕ ಕಳೆಯಲು ವಾಕಿಂಗ್ ಸಹಕಾರಿ
ವಯಸ್ಸು, ಒತ್ತಡ ಗರ್ಭಪಾತಕ್ಕೆ ಕಾರಣ
ಧರ್ಮ
ಧಾರ್ಮಿಕ ಲೇಖನ - ಒಮ್ಮೆ ದಶರಥನು ಬೆಳದಿಂಗಳಿನಲ್ಲಿ ತನ್ನ ಬೇಟೆಯೂಡುವ ತುಡಿತವನ್ನು ತಣಿಸುವ ಸಲುವಾಗಿ ಕಾಡಿಗೆ...
ಮುಂದೆ ಓದಿ|ಮತ್ತಷ್ಟು...
Marketplace