ಯಾಹೂ! | ನನ್ನ ಯಾಹೂ! | ಮೇಲ್ | ಚಿತ್ರ
ಶೋಧ
 
   ಮುಖ ಪುಟ ಸಾಹಿತ್ಯ ಕವನ
ಮಾನವತೆ
- ಡಾ| ಶ್ರೀಕೃಷ್ಣ ಭಟ್ ಅರ್ತಿಕಜೆ
ಲೇಖಕರ ಪರಿಚಯ - ಮದರಾಸು ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾಗಿರುವ ಡಾ. ಶ್ರೀಕೃಷ್ಣ ಭಟ್ ಅರ್ತಿಕಜೆ ಅವರು, ಬಹುಭಾಷಾ ವಿದ್ವಾಂಸರು. ಕನ್ನಡ ಶತಕ ಸಾಹಿತ್ಯ, ಜಾನಪದ ಹಾಗೂ ತೌಲನಿಕ ಸಾಹಿತ್ಯದ ಬಗೆಗೆ ಅನೇಕ ಪುಸ್ತಕಗಳನ್ನು ಮತ್ತು ಸಂಶೋಧನಾತ್ಮಕ ಲೇಖನಗಳನ್ನೂ ಪ್ರಕಟಿಸಿದ್ದಾರೆ. ತಮಿಳು ಹಾಗೂ ಮಲಯಾಳಂ ಭಾಷೆಗಳಿಂದ ಇವರು ಕನ್ನಡಕ್ಕೆ ಕೆಲವು ಕೃತಿಗಳನ್ನು ಅನುವಾದ ಮಾಡಿದ್ದಾರೆ. ಕರ್ನಾಟಕ ಜಾನಪದ ಅಕಾಡೆಮಿ ಮುಂತಾದ ಸಂಸ್ಥೆಗಳಿಂದ ಪುರಸ್ಕೃತರಾಗಿದ್ದಾರೆ.

ಮಾನವ ಕುಲವೆಂಬುದು ಒಂದೆ. ಅದರಲ್ಲಿ ಮೇಲು ಕೀಳು ಭೇದ ಭಾವ ಸಲ್ಲದು. ಸದ್ಭಾವನೆ ನಮ್ಮಲ್ಲಿ ಬೆಳೆಯಬೇಕು.
ದುಷ್ಟತನ ನಮ್ಮಿಂದ ದೂರವಾಗಬೇಕು. ನಾವು ವಿಶ್ವಮಾನವರಾಗಬೇಕು ಅನಿಕೇತನವಾಗಬೇಕು ಎಂಬುದು ಈ ಕವನದ ಸಾರ.

ಬೆಳೆಸೋಣ ಎಂದೆಂದು ಸದ್ಭಾವನೆ
ಅಳಿಸೋಣ ನಮ್ಮೆಲ್ಲ ದುರ್ಭಾವನೆ
ಉಳಿಸೋಣ ಮನದಲ್ಲಿ ಸತ್‌ಚಿಂತನೆ
ಕಳೆಯೋಣ ಒಳಗಿರುವ ದುಶ್ಚಿಂತನೆ

ಬಾಳೋಣ ಒಮ್ಮತದ ಸಹಜೀವನ
ಪಡೆಯೋಣ ಬಾಳಿನಲಿ ನವಚೇತನ
ನಲಿಯೋಣ ಒಂದಾಗಿ ನಾವನುದಿನ
ತೊರೆಯೋಣ ಮನದಲ್ಲಿ ತುಂಬಿರುವ ಕೀಳ್ತನ

ಮಾನವತೆ ನಮ್ಮಲ್ಲಿ ನೆಲೆ ನಿಲ್ಲಲಿ
ದಾನವತೆ ನಮ್ಮಿಂದ ಹೊರಸಾಗಲಿ
ಸತ್ಯ ಶಾಂತಿಯು ಬಾಳ ಬೆಳಕಾಗಲಿ
ನಿತ್ಯ ನೆಮ್ಮದಿ ನೆಲಸಿ ಸುಖವಾಗಲಿ

ಮೇಲು ಕೀಳೆಂಬ ಭಾವವನ್ನು ತೊರೆಯುವ
ಜಾತಿ ಧರ್ಮದ ಭೇದವನ್ನು ನೀಗುವ
ಅಸೂಯೆ ಹಗೆತನ ದ್ವೇಷವನ್ನು ಮರೆಯುವ
ವಿಶ್ವಮಾನವರಾಗಿ ನಾವು ಬಾಳುವ
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಜಾತಿ
ಏಕತೆ
ಶ್ರೀಬಸವೇಶ್ವರರ ವಚನಗಳು
ಬೇವು ಬೆಲ್ಲ - ಭಾಗ 2
ಬೇವು ಬೆಲ್ಲ - ಭಾಗ 1
ಒಂದೆ ಕುಲ ಒಂದೆ ನೆಲ
ಮನರಂಜನೆ
ಚಿತ್ರ ಸುದ್ದಿ - ಯೋಗರಾಜ ಭಟ್ಟರು ಸುರಿಸಿರುವ ಮುಂಗಾರು ಮಳೆ ಜಯಭೇರಿ ಭಾರಿಸಿದೆ. ಈ ಚಿತ್ರ ನಿರ್ಮಾಪಕ ಕೃಷ್ಣಪ್ಪ ಅವರಿಗೆ ಕಾಂಚಾಣದ ಮಳೆಯನ್ನು ತಂದುಕೊಟ್ಟಿದೆ. ಕಾಮಿಡಿ ಟೈಂ ಗಣೇಶ್ ಅದೃಷ್ಟ ಖುಲಾಯಿಸಿದೆ. ಒಟ್ಟಾರೆ ರಾಜ್ಯದೆಲ್ಲೆಡೆ ಈಗ ಮಳೆಗೆ ಸೆಂಚುರಿ ರಂಗು. ಚಿತ್ರಪ್ರೇಮಿಗಳಿಗೆ ಮುಂಗಾರು ಮಳೆಯ ಹಾಡಿನದೇ ಗುಂಗು!
ಮುಂದೆ ಓದಿ|ಮತ್ತಷ್ಟು...
ಆರೋಗ್ಯ
AP
 
ಲಿವರ್ ಕ್ಯಾನ್ಸರ್‌ ತಗ್ಗಿಸುವ ಕಾಫಿ
ಹೆಚ್ಚು ಕಾಫಿ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಮಾತನ್ನು ನಾವು ಕೇಳುತ್ತಲೇ ಬಂದಿದ್ದೇವೆ. ಆದರೆ ಕಾಫಿ...
ಗರ್ಭಧಾರಣಾ ತೂಕ ಕಳೆಯಲು ವಾಕಿಂಗ್ ಸಹಕಾರಿ
ವಯಸ್ಸು, ಒತ್ತಡ ಗರ್ಭಪಾತಕ್ಕೆ ಕಾರಣ
ಧರ್ಮ
ಧಾರ್ಮಿಕ ಲೇಖನ - ಒಮ್ಮೆ ದಶರಥನು ಬೆಳದಿಂಗಳಿನಲ್ಲಿ ತನ್ನ ಬೇಟೆಯೂಡುವ ತುಡಿತವನ್ನು ತಣಿಸುವ ಸಲುವಾಗಿ ಕಾಡಿಗೆ...
ಮುಂದೆ ಓದಿ|ಮತ್ತಷ್ಟು...
Marketplace