|
| ಆತುರ-ಕಾತುರ | | - ಡಾ| ಶ್ರೀಕೃಷ್ಣ ಭಟ್ ಅರ್ತಿಕಜೆ |
|
ಲೇಖಕರ ಪರಿಚಯ - ಮದರಾಸು ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾಗಿರುವ ಡಾ. ಶ್ರೀಕೃಷ್ಣ ಭಟ್ ಅರ್ತಿಕಜೆ ಅವರು, ಬಹುಭಾಷಾ ವಿದ್ವಾಂಸರು. ಕನ್ನಡ ಶತಕ ಸಾಹಿತ್ಯ, ಜಾನಪದ ಹಾಗೂ ತೌಲನಿಕ ಸಾಹಿತ್ಯದ ಬಗೆಗೆ ಅನೇಕ ಪುಸ್ತಕಗಳನ್ನು ಮತ್ತು ಸಂಶೋಧನಾತ್ಮಕ ಲೇಖನಗಳನ್ನೂ ಪ್ರಕಟಿಸಿದ್ದಾರೆ. ತಮಿಳು ಹಾಗೂ ಮಲಯಾಳಂ ಭಾಷೆಗಳಿಂದ ಇವರು ಕನ್ನಡಕ್ಕೆ ಕೆಲವು ಕೃತಿಗಳನ್ನು ಅನುವಾದ ಮಾಡಿದ್ದಾರೆ. ಕರ್ನಾಟಕ ಜಾನಪದ ಅಕಾಡೆಮಿ ಮುಂತಾದ ಸಂಸ್ಥೆಗಳಿಂದ ಪುರಸ್ಕೃತರಾಗಿದ್ದಾರೆ.
ಈಜು ಕಲಿಯುವ ಮೊದಲೆ ನಮಗೆ ಕಡಲ ದಾಟುವ ಆತುರ ಅಂಗಳದಿ ಸರಿ ನಡೆವ ಮೊದಲೆ ಗಗನ ಹಾರುವ ಕಾತುರ
ಸೂರ್ಯನುದಯಿಸಿ ಬೆಳಕು ಹರಿದರೆ ರಾತ್ರಿ ಕಾಣುವ ಆತುರ ರವಿಯು ಮುಳಗಿ ನಿಶೆಯ ಹರಡಲು ಬೆಳಗು ಕಾಣುವ ಕಾತುರ
ಪರೀಕ್ಷೆಯೆಂಬುದು ಮುಗಿವ ಮೊದಲೆ ಫಲಿತಾಂಶ ತಿಳಿಯುವ ಆತುರ ಪದವಿ ಅರ್ಹತೆ ಪಡೆವ ಮೊದಲೆ ಉದ್ಯೋಗ ಹಿಡಿಯುವ ಕಾತುರ
ಬಸ್ಸನೇರುವ ಮೊದಲೆ ನಮಗೆ ಊರು ಸೇರುವ ಅವಸರ ಮೋಡ ಮುಸುಕುವ ಮೊದಲೆ ನಮಗೆ ಮಳೆಯ ಪಡೆಯುವ ಆತುರ
ಬೇಡ ಆತುರ ಬೇಡ ಕಾತುರ ಇರಲಿ ತಾಳ್ಮೆಯ ನಮ್ಮಲಿ ಅಧಿಕ ವೇಗವಪಾಯವೆನ್ನುವ ಅರಿವು ಮನದಲಿ ಮೂಡಲಿ
ತಾಳ್ಮೆಯಿಂದಲಿ ಮೇಲ್ಮೆ ದೊರೆಯುವುದು ಎಂದ ತತ್ವವ ತಿಳಿಯುವ ಶಾಂತಿ ನೆಮ್ಮದಿ ಸಹನೆಯಿಂದ ಬಾಳು ನಡೆಸಲು ಕಲಿಯುವ
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ಚಿತ್ರ ಸುದ್ದಿ - ಯೋಗರಾಜ ಭಟ್ಟರು ಸುರಿಸಿರುವ ಮುಂಗಾರು ಮಳೆ ಜಯಭೇರಿ ಭಾರಿಸಿದೆ. ಈ ಚಿತ್ರ ನಿರ್ಮಾಪಕ ಕೃಷ್ಣಪ್ಪ ಅವರಿಗೆ ಕಾಂಚಾಣದ ಮಳೆಯನ್ನು ತಂದುಕೊಟ್ಟಿದೆ. ಕಾಮಿಡಿ ಟೈಂ ಗಣೇಶ್ ಅದೃಷ್ಟ ಖುಲಾಯಿಸಿದೆ. ಒಟ್ಟಾರೆ ರಾಜ್ಯದೆಲ್ಲೆಡೆ ಈಗ ಮಳೆಗೆ ಸೆಂಚುರಿ ರಂಗು. ಚಿತ್ರಪ್ರೇಮಿಗಳಿಗೆ ಮುಂಗಾರು ಮಳೆಯ ಹಾಡಿನದೇ ಗುಂಗು! |
| |
|
|
|
|
 | | AP |
| | |
| |
|
|
|
|
|
| ಧಾರ್ಮಿಕ ಲೇಖನ - ಒಮ್ಮೆ ದಶರಥನು ಬೆಳದಿಂಗಳಿನಲ್ಲಿ ತನ್ನ ಬೇಟೆಯೂಡುವ ತುಡಿತವನ್ನು ತಣಿಸುವ ಸಲುವಾಗಿ ಕಾಡಿಗೆ... |
| |
|
|
|
|
|
|
|