ಯಾಹೂ! | ನನ್ನ ಯಾಹೂ! | ಮೇಲ್ | ಚಿತ್ರ
ಶೋಧ
 
   ಮುಖ ಪುಟ ಸಾಹಿತ್ಯ ಪುಸ್ತಕ ವಿಮರ್ಶೆ
ಕುತೂಹಲದ ಕರ್ನಾಟಕ
- ಡಾ| ವಿ. ಗೋಪಾಲಕೃಷ್ಣ
ಲೇಖಕರ ಪರಿಚಯ - ಡಾ| ವಿ. ಗೋಪಾಲಕೃಷ್ಣ ಅವರು ನಿವೃತ್ತ ಕನ್ನಡ ಪ್ರಾಧ್ಯಾಪಕರು. ಬಹುಭಾಷಾ ವಿದ್ವಾಂಸರಾದ ಇವರು ಭಾಷಾ ಶಾಸ್ತ್ರ, ಸ್ಥಳನಾಮ ಶಾಸ್ತ್ರ, ನಿಘಂಟು ಹಾಗೂ ಸಂಪಾದಕರಾಗಿ, ಅನುವಾದಕರಾಗಿ ಬಹುಮುಖ ಸೇವೆ ಸಲ್ಲಿಸಿದ್ದಾರೆ. ಇವರ ಅನೇಕ ಸಂಶೋಧನಾತ್ಮಕ ಗ್ರಂಥಗಳು, ಲೇಖನಗಳು ಪ್ರಕಟವಾಗಿವೆ. ಪ್ರಸ್ತುತ ಚೆನ್ನೈ ನಗರದ ಅಡಯಾರಿನ ಒಂದು ಸಂಶೋಧನಾತ್ಮಕ ಸಂಸ್ಥೆಯ ನಿರ್ದೇಶಕರಾಗಿದ್ದು, ಸಂಶೋಧನೆಯಲ್ಲಿ ಮತ್ತು ಮಾರ್ಗದರ್ಶನ ನೀಡುವುದರಲ್ಲಿ ತೊಡಗಿದ್ದಾರೆ.

ಅಖಂಡ ಕರ್ನಾಟಕದ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಪ್ರಕಟವಾಗುತ್ತಿರುವ ಈ ಕೃತಿ ಸಮಯೋಚಿತವಾಗಿದೆ. ಕನ್ನಡ ಭಾಷೆ, ಕನ್ನಡ ನಾಡು ಮತ್ತು ಸಂಸ್ಕೃತಿಯ ಪರಿಚಯವನ್ನು ಸಂಕ್ಷಿಪ್ತವಾಗಿ ನೀಡುವ ಈ ಕೃತಿಯಲ್ಲಿ ಮೊದಲಿಗೆ ಕನ್ನಡ ನಾಡು ನುಡಿಯ ಕುರಿತು ಪದ್ಯಗಳಿವೆ.

ಕವಿವರೇಣ್ಯರಾದ ಕುವಂಪು, ತೀನಂಶ್ರೀ, ಹುಯಿಲಗೊಳ ನಾರಾಯಣರಾವ್ ಮುಂತಾದ ಆಧುನಿಕ ಕವಿಗಳ ರಚನೆಯಲ್ಲದೆ ನಾಡು-ನುಡಿ ಪ್ರೇಮವನ್ನು ಎತ್ತಿ ಸಾರುವ ಪ್ರಾಚೀನ ಕವಿಗಳ ಪದ್ಯಗಳನ್ನು ಇಲ್ಲಿ ಕೊಡಲಾಗಿದೆ. ಇಂತಹ ಪ್ರಾತಿನಿಧಿಕ ಹಾಡುಗಳು ಒಂದೆಡೆಯಲ್ಲಿ ದೊರೆಯುವುದರಿಂದ ಇದರ ಉಪಯುಕ್ತತೆ ಬಗೆಗೆ ಓದುಗರ ಒಲವಿದೆ.

ಎರಡನೇಯ ಭಾಗದಲ್ಲಿ ಕನ್ನಡ ನಾಡಿಗೆ ಹಾಗೂ ಭಾಷಗೆ ಸಂಬಂಧಿಸಿದಂತೆ ಸಾಕಷ್ಟು ಮುಖ್ಯ ಮಾಹಿತಿಗಳನ್ನು ಲೇಖಕರು ಒದಗಿಸಿದ್ದಾರೆ.ಸಂಕ್ಷಿಪ್ತವಾಗಿ ವಿವರಿಸಲಾಗಿರುವ ಈ ವಿವರಗಳಲ್ಲಿ ಕನ್ನಡದ ಪ್ರಾಚೀನ ಶಾಸನಗಳು, ದ್ರಾವಿಡ ಭಾಷೆಗೆಳು, ಕನ್ನಡ ಲಿಪಿಯ ವಿಕಾಸ, ಕನ್ನಡ ನಾಡಿನ ಭೂಪ್ರಕೃತಿ, ಹವಾಮಾನ, ಪಶುಪಕ್ಷಿಗಳು, ಮುಂತಾದ ವಿವರಗಳಿವೆ. ಕರ್ನಾಟಕದ ರಾಜಕೀಯ, ಕಲೆ, ಧರ್ಮಗಳು, ಶಿಕ್ಷಣ, ಪತ್ರಿಕೋದ್ಯಮ ಹಾಗೂ ಏಕೀಕರಣ ಬಗೆಗೆ ಉಪಯುಕ್ತ ವಿವರಗಳು ದೊರೆಯುತ್ತವೆ.

ಕನ್ನಡದ ಹೆಸರಾಂತ ಲೇಖಕರು ಪಡೆದಿರುವ ಪ್ರಶಸ್ತಿಗಳ ವಿವರ ಹಾಗೂ ಅವರ ಬಗೆಗೆ ಕಿರು ಪರಿಚಯವನ್ನು ನೀಡಲಾಗಿದೆ. ಇದೇ ನಾಲ್ಕನೇಯ ಭಾಗದಲ್ಲಿ ಸರೋಜಿನಿ ಮಹಿಷಿ ವರದಿ, ಕನ್ನಡ ನಾಡಿನ ಗಡಿನಾಡಿನ ಸಮಸ್ಯೆ ಹಾಗೂ ಕನ್ನಡ ಅಭಿವೃದ್ಧಿಗಾಗಿ ಕೈಗೊಂಡಿರುವ ಕಾರ್ಯಕ್ರಮಗಳ ಬಗೆಗೆ ಸಂಕ್ಷಿಪ್ತ ಮಾಹಿತಿಯನ್ನು ಲೇಖಕರು ಕೊಟ್ಟಿದ್ದಾರೆ.

ಮರೆಯಲಾಗದ ಮಹಾಂತರು ಎಂಬ ಶೀರ್ಷಿಕೆಯಡಿಯಲ್ಲಿ ಕನ್ನಡ ನಾಡಿನ ಪ್ರಸಿದ್ಧ ವ್ಯಕ್ತಿಗಳ ಕಿರು ಪರಿಚಯ ನೀಡಲಾಗಿದೆ. ಸುಮಾರು 34ಮಂದಿಯ ವ್ಯಕ್ತಿ ಚಿತ್ರಗಳು ಇಲ್ಲಿ ದೊರೆಯುತ್ತವೆ. ಇದರಲ್ಲಿ ವಿಜ್ಞಾನಿ ಸರ್ ಸಿ.ವಿ. ರಾಮನ್, ಕೆ.ಎಂ. ಕಾರ್ಯಪ್ಪ, ಚಾವುಂಡರಾಯ, ಬಸವಣ್ಣನವರು, ಪುರಂದರದಾಸರು ಮುಂತಾಗಿ ಕನ್ನಡ ನಾಡಿನಲ್ಲಿ ಜನಿಸಿದ ಹೆಮ್ಮೆಯ ಮಹಾನ್ ವ್ಯಕ್ತಿಗಳ ಪರಿಚಯವನ್ನು ನೀಡಿ ಲೇಖಕರು ಉತ್ತಮ ಮಾಹಿತಿಯನ್ನು ನೀಡಿದ್ದಾರೆ.

ಇದರ ನಂತರದ ಭಾಗದಲ್ಲಿ ಕನ್ನಡ ಭಾಷೆಗೆ, ನಾಡಿಗೆ, ಹಾಗೂ ರಾಜಕೀಯವಾಗಿ ಸೇವೆಸಲ್ಲಿಸಿದ ಪಾಶ್ಚಿಮಾತ್ಯ ಸಾಹಿತಿಗಳ, ಇತಿಹಾಸಕಾರರ ವ್ಯಕ್ತಿ ಚಿತ್ರಗಳಿವೆ. ಕರ್ನಲ್, ಮೆಕೆಂಝಿ, ವಾಲ್ಟರ್, ಎಲಿಯಟ್, ಹೆರ್ಮನ್‌ ಮೊಗ್ಲಿಂಗ್, ಎಫ್ ಕಿಟೆಲ್, ಬಿ.ಎಲ್.ರೈಸ್ ಮುಂತಾದವರ ಕೊಡುಗೆಯನ್ನು ವಿವರಿಸಿದ್ದಾರೆ.
(ಮೂಲ - ವೆಬ್‌ದುನಿಯಾ)
1| 2
 
ಮತ್ತಷ್ಟು...
ಅತ್ತಿಮಬ್ಬೆ
ಉಡುತಡಿಯ ಮಹಾದೇವಿಯಕ್ಕ
ಗ್ರಂಥ ಪರಿಚಯ
ಅಶ್ವತ್ಥರ ಕಾದಂಬರಿ ಹಂಬಲ
ಶ್ರೀ ಕೃಷ್ಣಾಕರ್ಣಾಮೃತವೆಂಬ ಸ್ತೋತ್ರ ಕಾವ್ಯದ
ವ್ಯಾಸರಾಯ ಬಲ್ಲಾಳರ 'ಹೆಜ್ಜೆ ಗುರುತು
ಮನರಂಜನೆ
ಚಿತ್ರ ಸುದ್ದಿ - ಯೋಗರಾಜ ಭಟ್ಟರು ಸುರಿಸಿರುವ ಮುಂಗಾರು ಮಳೆ ಜಯಭೇರಿ ಭಾರಿಸಿದೆ. ಈ ಚಿತ್ರ ನಿರ್ಮಾಪಕ ಕೃಷ್ಣಪ್ಪ ಅವರಿಗೆ ಕಾಂಚಾಣದ ಮಳೆಯನ್ನು ತಂದುಕೊಟ್ಟಿದೆ. ಕಾಮಿಡಿ ಟೈಂ ಗಣೇಶ್ ಅದೃಷ್ಟ ಖುಲಾಯಿಸಿದೆ. ಒಟ್ಟಾರೆ ರಾಜ್ಯದೆಲ್ಲೆಡೆ ಈಗ ಮಳೆಗೆ ಸೆಂಚುರಿ ರಂಗು. ಚಿತ್ರಪ್ರೇಮಿಗಳಿಗೆ ಮುಂಗಾರು ಮಳೆಯ ಹಾಡಿನದೇ ಗುಂಗು!
ಮುಂದೆ ಓದಿ|ಮತ್ತಷ್ಟು...
ಆರೋಗ್ಯ
AP
 
ಲಿವರ್ ಕ್ಯಾನ್ಸರ್‌ ತಗ್ಗಿಸುವ ಕಾಫಿ
ಹೆಚ್ಚು ಕಾಫಿ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಮಾತನ್ನು ನಾವು ಕೇಳುತ್ತಲೇ ಬಂದಿದ್ದೇವೆ. ಆದರೆ ಕಾಫಿ...
ಗರ್ಭಧಾರಣಾ ತೂಕ ಕಳೆಯಲು ವಾಕಿಂಗ್ ಸಹಕಾರಿ
ವಯಸ್ಸು, ಒತ್ತಡ ಗರ್ಭಪಾತಕ್ಕೆ ಕಾರಣ
ಧರ್ಮ
ಧಾರ್ಮಿಕ ಲೇಖನ - ಒಮ್ಮೆ ದಶರಥನು ಬೆಳದಿಂಗಳಿನಲ್ಲಿ ತನ್ನ ಬೇಟೆಯೂಡುವ ತುಡಿತವನ್ನು ತಣಿಸುವ ಸಲುವಾಗಿ ಕಾಡಿಗೆ...
ಮುಂದೆ ಓದಿ|ಮತ್ತಷ್ಟು...
Marketplace