ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಾಹಿತ್ಯ ಆತ್ಮಚರಿತ್ರೆ
ಶಿವರಾಮ ಕಾರಂತ - ದಶಕದ ನೆನಪು
- ನಾಗೇಂದ್ರ ತ್ರಾಸಿ
ಕಡಲ ತಡಿಯ ಭಾರ್ಗವ, ಜ್ಞಾನಪೀಠ ಪ್ರಶಸ್ತಿ ವಿಜೇತ ಕಾದಂಬರಿಕಾರ ಕೋಟ ಶಿವರಾಮ ಕಾರಂತರು ಇಹಲೋಕ ತ್ಯಜಿಸಿ ಇಂದಿಗೆ (ಡಿ.9) ಒಂದು ದಶಕ ಕಳೆದಿದೆ. ಯಾವುದೇ ಮುಲಾಜಿಗೆ, ವಸೂಲಿಬಾಜಿಗಳಿಂದ ದೂರವಿದ್ದ ಕಾರಂತರು ನೇರ, ನಿಷ್ಠುರವಾದಿತನಕ್ಕೆ ಹೆಸರುವಾಸಿಯಾಗಿದ್ದರು. ನಿರೀಶ್ವರವಾದಿಯಾಗಿದ್ದ ಕೋಟ ಶಿವರಾಮ ಕಾರಂತರು ಸಾಹಿತ್ಯ ಕ್ಷೇತ್ರದಲ್ಲಿ ಮೇರುಸದೃಶ ವ್ಯಕ್ತಿತ್ವ ಹೊಂದಿದವರಾಗಿದ್ದು, ತಮ್ಮ 93 ನೇ ವಯಸ್ಸಿನಲ್ಲಿ ಅವರು (1997, ಡಿಸೆಂಬರ್ 9) ಇಹಲೋಕ ತ್ಯಜಿಸಿದ್ದರು.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕು ಸಮೀಪದ ಕೋಟದಲ್ಲಿ 1902 ಅಕ್ಟೋಬರ್ 10 ರಂದು ಜನಿಸಿದ್ದ ಶಿವರಾಮ ಕಾರಂತರು, ಪ್ರೌಢಶಿಕ್ಷಣವನ್ನಷ್ಟೇ ಪಡೆದಿದ್ದರು. ಆದರೆ ಗಾಂಧಿ ತತ್ವಕ್ಕೆ ಮಾರುಹೋಗಿ ಹೋರಾಟಕ್ಕೆ ಧುಮುಕಿದ ಅವರು ನಂತರ ಶ್ರೇಷ್ಠ ಕಾದಂಬರಿಕಾರ, ಕಲಾವಿದ, ಅಲೆಮಾರಿ, ಪತ್ರಕರ್ತ, ಪರಿಸರವಾದಿ, ಸಿನಿಮಾ ನಿರ್ಮಾಪಕರಾಗಿ, ನೃತ್ಯಪಟುವಾಗಿ, ಛಾಯಾಗ್ರಾಹಕರಾಗಿ ಹೀಗೆ ಸಾಹಿತ್ಯದ ಹತ್ತು ಹಲವು ಪ್ರಕಾರಗಳಲ್ಲಿ ಕೈಯಾಡಿಸಿದ ಶಿವರಾಮ ಕಾರಂತರು ನಡೆದಾಡುವ ವಿಶ್ವಕೋಶ ಎಂದೇ ಖ್ಯಾತಿಗಳಿಸಿದ್ದರು. ಇವೆಲ್ಲವುಗಳೊಂದಿಗೆ ಅವರು ಚುನಾವಣೆಗೂ ಒಮ್ಮೆ ಸ್ಫರ್ಧಿಸಿದ್ದರು.

ಕೇವಲ 5 ದಿನಗಳಲ್ಲಿ ಬರೆದಿರುವ ಚೋಮನ ದುಡಿ, 30 ದಿನಗಳಲ್ಲಿ ಬರೆದು ಮುಗಿಸಿರುವ ಮರಳಿ ಮಣ್ಣಿಗೆ, ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಮೂಕಜ್ಜಿ ಕನಸುಗಳು, ಸ್ವಾತಂತ್ರ್ಯ ಹೋರಾಟಗಾರ ಕಾರ್ನಾಡ್ ಸದಾಶಿವ್ ರಾವ್ ಬದುಕಿನ ಚಿತ್ರಣದ ಔದಾರ್ಯದ ಉರುಳಲ್ಲಿ, ಹುಚ್ಚು ಮನಸ್ಸಿನ ಹತ್ತುಮುಖಗಳು, ಸನ್ಯಾಸಿಯ ಬದುಕು ಹೀಗೆ 44 ಕಾದಂಬರಿ, 16 ನಾಟಕ, 3 ಕಥಾ ಸಂಕಲನ, ನಾಲ್ಕು ಸಂಪುಟಗಳ ವಿಜ್ಞಾನ ಪ್ರಪಂಚ, ಸಿರಿಗನ್ನಡ ಅರ್ಥಕೋಶ, 6 ಪ್ರಬಂಧ, 5 ಆತ್ಮಕಥೆ, 240 ಮಕ್ಕಳ ಪುಸ್ತಕ, ಪ್ರವಾಸ ಕಥನ, ಕಿರಿಯರ ವಿಶ್ವಕೋಶ, ಗೀತರೂಪಕ ಸೇರಿದಂತೆ ಹಲವಾರು ಸಾಹಿತ್ಯಗಳಲ್ಲಿ ಕೈಯಾಡಿಸಿರುವ ಅವರು ಸಾರಸ್ವತ ಲೋಕದ ಅಗ್ರಗಣ್ಯ ಬರಹಗಾರರಾಗಿದ್ದವುರು.

ಜನಸಾಮಾನ್ಯರಿಗಾಗಿ ಸಾಹಿತ್ಯ ರಚಿಸಿದ್ದ ಕಾರಂತರ ಕಾದಂಬರಿಗಳಲ್ಲಿ ಚೋಮ, ಮೂಕಜ್ಜಿ, ನಾಗವೇಣಿಯಂತಹ ಪಾತ್ರಗಳು ನೈಜ ಬದುಕಿನ ಚಿತ್ರಣವನ್ನು ತೆರದಿಡುತ್ತಿದ್ದವು. ಮೂಗಿನ ತುದಿಯಲ್ಲೇ ಕೋಪ ಇರಿಸಿಕೊಂಡಿದ್ದ ಕಾರಂತರು ಅಷ್ಟೇ ಮಾನವತಾವಾದಿಯಾಗಿದ್ದರು. ಅವರು ಅದೆಷ್ಟೋ ಜನರಿಗೆ ಪ್ರತಿ ತಿಂಗಳು ಅಂಚೆ ಮೂಲಕ ಹಣ ಕಳುಹಿಸುತ್ತಿದ್ದರು ಎಂಬ ಸತ್ಯ ಅವರ ಮರಣದ ನಂತರ ಆಪ್ತರು ಬಹಿರಂಗಪಡಿಸಿದ್ದರು.

ಪರಿಸರದ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಕಾರಂತರು, ಪ್ರಸಕ್ತ ಶೈಕ್ಷಣಿಕ ಕ್ಷೇತ್ರದಲ್ಲಿನ ನೀತಿಗಳನ್ನು ಕಟುವಾಗಿ ಟೀಕಿಸಿದ್ದರು. ಅಲ್ಲದೇ ಶಿಕ್ಷಣಕ್ಷೇತ್ರಕ್ಕೆ ಹೊಸ ಆಯಾಮವನ್ನು ಕಲ್ಪಿಸಿಕೊಡಬೇಕು ಎನ್ನುವ ನಿಟ್ಟಿನಲ್ಲಿ ಸುಲಭ ಪಠ್ಯಕ್ರಮ, ವೈಜ್ಞಾನಿಕ ದೃಷ್ಟಿಕೋನದ ಕುರಿತು ಹೀಗೆ ಹಲವಾರು ವಿಭಿನ್ನ ಕನಸುಗಳನ್ನು ಹೊಂದಿದ್ದರು. ಆ ನಿಟ್ಟಿನಲ್ಲಿಯೇ ಪುತ್ತೂರಿನಲ್ಲಿನ ಕಾರಂತರ ಬಾಲವನ ತುಂಬಾ ಪ್ರಸಿದ್ಧಿ ಪಡೆದಿತ್ತು. ಅದೇ ರೀತಿಯಲ್ಲಿ ಕರಾವಳಿಯ ಗಂಡು ಮೆಟ್ಟಿನ ಕಲೆ ಯಕ್ಷಗಾನಕ್ಕೊಂದು ಹೊಸ ರೂಪು ನೀಡಿದ ಶಿವರಾಮ ಕಾರಂತರು ಯಕ್ಷಗಾನವನ್ನು ವಿದೇಶಗಳಿಗೂ ಕೊಂಡೊಯ್ದಿದ್ದರು. ನೂರು ಕೋಶ ಓದುವುದಕ್ಕಿಂತ, ಒಮ್ಮೆ ದೇಶ ಸುತ್ತಿ ನೋಡು ಎಂಬ ಗಾದೆ ಮಾತಿನಂತೆ ಕಾರಂತರು ಸಿಂಹಳ, ನೇಪಾಳ, ಭೀರುತ್ , ಇರಾನ್, ಅಫ್ಘಾನಿಸ್ತಾನ್, ಹಾಂಕಾಂಗ್, ಜಪಾನ್‌‌ ದೇಶಗಳಿಗೆಲ್ಲ ಭೇಟಿ ನೀಡಿದ್ದರು.

ಆಡು ಮುಟ್ಟದ ಸೊಪ್ಪಿಲ್ಲ, ಕಾರಂತರು ಕೈಯಾಡಿಸದ ಕ್ಷೇತ್ರವಿಲ್ಲ ಎಂಬ ಮಾತು ಅವರಿಗೆ ಅನ್ವರ್ಥವಾಗಿತ್ತು. ಕಾರಂತರು ಮಾಡಿದ ಸಾಹಿತ್ಯ ಕೃಷಿಗೆ ಹಲವಾರು ವಿಶ್ವವಿದ್ಯಾಲಯಗಳು ಪಿ.ಎಚ್.ಡಿ ನೀಡಿವೆ, ಎರಡು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್, ಪದ್ಮಭೂಷಣ (ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಇಂದಿರಾಗಾಂಧಿಯವರ ಕ್ರಮವನ್ನು ಖಂಡಿಸಿ ಪ್ರಶಸ್ತಿಯನ್ನು ಹಿಂತಿರುಗಿಸಿದ್ದರು), ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಸ್ವೀಡಿಸ್ ಅಕಾಡೆಮಿ ಪಾರಿತೋಷಕ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಕಾರಂತರ ಮುಡಿಗೇರಿದ್ದವು.

ಕಾರಂತರ ಎಲ್ಲ ಕಾರ್ಯದ ಹಿಂದೆ ಇದ್ದವರು ಅವರ ಪತ್ನಿ ಲೀಲಾ ಕಾರಂತ್ , ಮನೆಯ ಕೆಲಸವನ್ನು ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದ ಲೀಲಾ ಅವರು, ಕಾರಂತರ ಪ್ರತಿಯೊಂದು ಕಾರ್ಯಕ್ಕೆ ಪ್ರೇರಣಾ ಶಕ್ತಿಯಾಗಿದ್ದವರು. ತಮ್ಮ ಇಳಿವಯಸ್ಸಿನಲ್ಲಿಯೂ ಅದೇ ಸಿಟ್ಟು, ಸಮಯಪಾಲನೆ ಪಾಲಿಸಿಕೊಂಡು ಬಂದಿದ್ದ ಶಿಸ್ತಿನ ಸಿಪಾಯಿ ಕಾರಂತರು ಸಾಹಿತ್ಯ ಕ್ಷೇತ್ರವನ್ನು ಅಗಲಿ ಇಂದಿಗೆ ಹತ್ತು ವರ್ಷಗಳು ಸಂದಿವೆ. ಕಾಕತಾಳೀಯ ಎಂಬಂತೆ ಮಂಗಳೂರಿನಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದ ವೇಳೆಗೆಯೆ ಅವರು ನಮ್ಮನ್ನಗಲಿದ್ದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಶಿವರಾಮ ಕಾರಂತ - ದಶಕದ ನೆನಪು
ಡಾ.ಸರ್ವೇಪಲ್ಲಿ ರಾಧಾಕೃಷ್ಣ(1888-1975)
ಹಮೀದ್ ಅನ್ಸಾರಿಯವರ ಸಂಕ್ಷಿಪ್ತ ಜೀವನ ವಿವರ
ಪ್ರಾಚೀನ ವಿಜ್ಞಾನಿಗಳೆಡೆಗೆ ಒಂದು ನೋಟ
ಗಾತಾ ರಹೇ ಕಿಶೋರ್ ದಿಲ್...
'ರಾಜಕುಮಾರ'ನ ಸ್ವರ್ಗಯಾತ್ರೆಗೆ ಒಂದು ವರ್ಷ
ಆರೋಗ್ಯ
ಚಿಕಿತ್ಸೆ - ನಿಮ್ಮ ಕೂದಲನ್ನು ವಾರಕ್ಕೆರಡು ಬಾರಿ ಮಾತ್ರ ತೊಳೆಯಿರಿ. ತೊಳೆಯಲು ಬಿಸಿನೀರನ್ನು ಬಳಸುವುದು ಬೇಡ. ಕೂದಲು ತೊಳೆಯಲು ಶ್ಯಾಂಪು ಬಳಸುತ್ತಿದ್ದರೆ, ಸೌಮ್ಯವಾದ ಶ್ಯಾಂಪೂಗಳನ್ನು ಬಳಸುವುದು ಉತ್ತಮ.
ಮುಂದೆ ಓದಿ|ಮತ್ತಷ್ಟು...
ಮನರಂಜನೆ
NRB
 
ಈ 'ಚಂಡ' ಪ್ರಚಂಡ; ಆಕ್ಷನ್ ಪ್ರಿಯರಿಗೆ ಹುಗ್ಗಿಯೂಟ
ನಟ "ದುನಿಯಾ" ವಿಜಯ್ ಮತ್ತು ನಿರ್ದೇಶಕ, ನಿರ್ಮಾಪಕ ಎಸ್ ನಾರಾಯಣ ನಡುವೆ ಇನ್ನೂ ವಿವಾದ ...
ಮನಕುಣಿಸದ 'ಆ ಜಾ ನಾಚ್ ಲೇ'
ರೈಟ್...ಆದ್ರೆ
ಗ್ರಹ ಗತಿ
ವಾಸ್ತು - ಮನೆಯಲ್ಲಿ ಭೋಜನ ಕೋಣೆ ಬಹು ಪ್ರಮುಖವಾದುದು, ಹಾಗಾಗಿ ಇದರ ಬಗ್ಗೆಯೂ ಗಮನ ಹರಿಸಬೇಕಾದುದು ಅತಿ ಮುಖ್ಯ. ಯಾಕೆಂದರೆ ನಾವು ಆಹಾರ ಸೇವಿಸುವ ಸ್ಥಳ ಅಥವಾ ಪರಿಸರ ಉತ್ತಮ ಮತ್ತು ಆರಾಮದಾಯಕವಾಗಿದ್ದರೆ ಮಾತ್ರ ಆಹಾರವು ಸರಿಯಾಗಿ ಪಚನಗೊಳ್ಳುವುದು. ಸೂಕ್ತ ಸ್ಥಳದಲ್ಲಿ ಆಹಾರ ಸೇವಿಸುವುದರಿಂದ ದೇಹಕ್ಕೆ ಆರೋಗ್ಯವೂ, ಮನಸ್ಸಿಗೆ ಹಿತವೂ ಲಭಿಸುತ್ತದೆ.
ಮುಂದೆ ಓದಿ|ಮತ್ತಷ್ಟು...
Marketplace