|
| ಡಾ.ಸರ್ವೇಪಲ್ಲಿ ರಾಧಾಕೃಷ್ಣ(1888-1975) |
ಸರ್ವೇಪಲ್ಲಿ ರಾಧಾಕೃಷ್ಣರವರು 1888ರ ಸೆಪ್ಟಂಬರ್ 5ರಂದು ತಿರುತನಿಯಲ್ಲಿ ಬಡಬ್ರಾಹ್ಮಣ ಕುಟುಂಬದಲ್ಲಿ ಸರ್ವೇಪಲ್ಲಿ ವೀರಸ್ವಾಮಿ ಹಾಗೂ ಸೀತಮ್ಮ ದಂಪತಿಗಳಿಗೆ ಜನಿಸಿದರು.
ತಂದೆ ಸರ್ವೇಪಲ್ಲಿ ವೀರಸ್ವಾಮಿ ಜಮೀನ್ದಾರಿಯಲ್ಲಿ ಕಡಿಮೆ ವೇತನ ಗಳಿಸುತ್ತಿದ್ದುದರಿಂದಾಗಿ, ತಮ್ಮ ಅತ್ಯಲ್ಪ ಆದಾಯದಿಂದಾಗಿ ಮಗನಿಗೆ ಶಿಕ್ಷಣ ಕೊಡಿಸುವುದಕ್ಕೆ ಹಾಗೂ ತನ್ನ ದೊಡ್ಡ ಕುಟುಂಬದ ಪೋಷಣೆಗೆ ಭಾರೀ ಕಷ್ಟವಾಗುತ್ತಿತ್ತು.
ತನ್ನ ಬಹುಪಾಲು ಶಿಕ್ಷಣವನ್ನೆಲ್ಲ ವಿದ್ಯಾರ್ಥಿ ವೇತನದಲ್ಲೇ ಮುಗಿಸಿದ ರಾಧಾಕೃಷ್ಣನ್, ಪ್ರಾಥಮಿಕವಾಗಿ ತಿರುತನಿಯಲ್ಲಿನ ಶಾಲೆಯೊಂದಕ್ಕೆ ಸೇರಿದರು. ಆನಂತರ, ತಿರುಪತಿಯ ಲುಥೆರಾನ್ ಮಿಶನ್ ಶಾಲೆಯಲ್ಲಿ ಪ್ರೌಢಶಿಕ್ಷಣ ಪಡೆದರು. ವೆಲ್ಲೂರಿನಲ್ಲಿ ವೂರ್ಹೀಸ್ ಕಾಲೇಜು ಸೇರಿದರಾದರೂ, ತಮ್ಮ 17ನೇ ವಯಸ್ಸಿನಲ್ಲಿ ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿಗೆ ವರ್ಗಾವಣೆಗೊಂಡರು, ತತ್ವಶಾಸ್ತ್ರವನ್ನು ತಮ್ಮ ಪ್ರಮುಖ ವಿಷಯವನ್ನಾಗಿಸಿಕೊಂಡ ಅವರು, ಅದೇ ಕ್ಷೇತ್ರದಲ್ಲಿ ಬಿ.ಎ ಮತ್ತು ಎಂ.ಎ ಪದವಿಯನ್ನು ಪಡೆದರು. ಇಪ್ಪತ್ತನೆಯ ವಯಸ್ಸಿನಲ್ಲೇ ತಮ್ಮ ಎಂ.ಎ. ಮಹಾಪ್ರಬಂಧ, "ದಿ ಎಥಿಕ್ಸ್ ಆಫ್ ದಿ ವೇದಾಂತ" ರಚಿಸಿ ತಮ್ಮ ತತ್ವಶಾಸ್ತ್ರ ಪ್ರಾಧ್ಯಾಪಕ ಡಾ.ಎ.ಜಿ.ಹಾಗ್ ಬೇಸರಗೊಳ್ಳಬಹದೆಂದು ಭಾವಿಸಿದ್ದ ರಾಧಾಕೃಷ್ಣನ್‌ರಿಗೆ ಅಚ್ಚರಿ ಕಾದಿತ್ತು. ಡಾ.ಹಾಗ್, ರಾಧಾಕೃಷ್ಣನ್‌ರ ಕೃತಿಯನ್ನು ಬಹುವಾಗಿ ಪ್ರಶಂಸಿಸಿದರು.
ವೇಲೂರಿನಲ್ಲಿದ್ದಾಗಲೆ ತಮ್ಮ 16ನೆಯ ವಯಸ್ಸಿನಲ್ಲೇ ಶಿವಕಮುವಮ್ಮರ ಕೈ ಹಿಡಿದ ರಾಧಾಕೃಷ್ಣನ್, 1909ರಲ್ಲಿ ಮದ್ರಾಸ್ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸಹಾಯಕ ಉಪನ್ಯಾಸಕತ್ವವನ್ನು ಸ್ವೀಕರಿಸಿದರು. ಕಾಲೇಜಿನಲ್ಲಿದ್ದಾಗಲೆ, ಹಿಂದು ತತ್ವಶಾಸ್ತ್ರ, ಉಪನಿಶತ್ತುಗಳು, ಭಗವದ್ಗೀತ, ಬ್ರಹ್ಮಸೂತ್ರ ಮತ್ತು ಶಂಕರ, ರಾಮಾನುಜ ಮತ್ತು ಮಧ್ವರ ವ್ಯಾಖ್ಯಾನಗಳನ್ನು ಕರತಲಾಮಲಕ ಮಾಡಿಕೊಂಡಿದ್ದ ಅವರು, ಬೌದ್ಧ ಮತ್ತು ಜೈನ ತತ್ವಶಾಸ್ತ್ರಗಳನ್ನು ಕೂಡ ಆಳವಾಗಿ ಅಭ್ಯಸಿಸಿದ್ದರು. ಅದೇ ವೇಳೆಗೆ, ಪ್ಲೇಟೊ, ಪ್ಲುಟೊನಿಯಸ್, ಕಾಂಟ್, ಬ್ರಾಡ್ಲೆ ಮತ್ತು ಬರ್ಗ್‌ಸನ್‌ರ ತತ್ವಶಾಸ್ತ್ರೀಯ ವ್ಯಾಖ್ಯಾನಗಳನ್ನು ಅಧ್ಯಯನ ಮಾಡಿದ್ದರು. ಆನಂತರ, ಮಾರ್ಕ್ಸ್‌ವಾದ ಮತ್ತು ಅಸ್ತಿತ್ವವಾದಗಳನ್ನು ಅಧ್ಯಯನ ಮಾಡಿದರು.
| | (ಮೂಲ - ವೆಬ್‌ದುನಿಯಾ) |
|
| |
| | | |
|
|
|
|
|
| ಚಿತ್ರ ಸಮೀಕ್ಷೆ - ಆರ್.ಎಸ್.ಗೌಡ ನಿರ್ಮಾಣದ, ಎಸ್.ಮಹೇಂದರ್ ನಿರ್ದೇಶನದ, ಶಿವರಾಜ್ ಕುಮಾರ್ ನಿರ್ದೇಶನದ "ಗಂಡನ ಮನೆ" ರಾಜ್ಯಾದ್ಯಂತ ತೆರೆ ಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ. |
| |
|
|
|
|
| ಹುಷಾರು! ಮಗುವಿಗೆ ಎಲ್ಲ ತಿಳಿಯುತ್ತೆ | | ಅಯ್ಯೋ ಮಗುವಿಗೇನು ತಿಳಿಯುತ್ತೆ? ಎನ್ನುವುದನ್ನು ನಾವು ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಕೇಳಿದ್ದೇವೆ. ಚಿಕ್ಕ ಮಕ್ಕಳಿಗೆ ಏನೂ ತಿಳಿಯುವುದಿಲ್ಲ ಎನ್ನುವುದು ದೊಡ್ಡವರ ವಿಚಾರ |
|
| |
|
|
|
|
|
| ವಾಣಿಜ್ಯ ಲೇಖನಗಳು - ಭಾರತ ದೇಶದ ಮಣ್ಣಿನ ಮಹಿಮೆಯೆ ಅಂತಹುದು, ಚಿನ್ನದ ನಾಡು ಹೊನ್ನಿನ ಬೀಡು ಎಂದೆಲ್ಲ ಪ್ರಸಿದ್ದವಾಗಿರುವ ಭಾರತ... |
| |
|
|
|
|
|
|
|