ಯಾಹೂ! | ನನ್ನ ಯಾಹೂ! | ಮೇಲ್ | ಚಿತ್ರ
ಶೋಧ
 
   ಮುಖ ಪುಟ ಸಾಹಿತ್ಯ ಆತ್ಮಚರಿತ್ರೆ
ಹಮೀದ್ ಅನ್ಸಾರಿಯವರ ಸಂಕ್ಷಿಪ್ತ ಜೀವನ ವಿವರ
ನವದೆಹಲಿ (ಏಜೆನ್ಸಿ), ಶನಿವಾರ, 11 ಆಗಸ್ಟ್ 2007   ( 15:20 IST )
Hamid Ansari
AP
ವೃತ್ತಿಪರ ರಾಜತಾಂತ್ರಿಕ ಹಾಗೂ ಶಿಕ್ಷಣ ತಜ್ಞ ಹಮೀದ್ ಅನ್ಸಾರಿಯವರು ಶನಿವಾರ ರಾಷ್ಟ್ರಪತಿ ಭವನದಲ್ಲಿ ದೇಶದ 12ನೇ ಉಪ ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ನುರಿತ ಶಿಕ್ಷಣ ತಜ್ಞರಾದ ಹಮೀದ್ ಅನ್ಸಾರಿಯವರು ತಮ್ಮ ರಾಜತಾಂತ್ರಿಕ ಕೌಶಲ್ಯಗಳಿಗಾಗಿ ಹೆಸರುವಾಸಿಯಾಗಿದ್ದಾರೆ.
ಅವರು ತಮ್ಮ ಇದುವರೆಗಿನ ಜೀವನದಲ್ಲಿ ನಡೆದುಬಂದ ಹಾದಿಯ ಸಂಕ್ಷಿಪ್ತ ವಿವರದತ್ತ ಕಣ್ಣು ಹಾಯಿಸೋಣ.

ಉತ್ತರ ಪ್ರದೇಶದ ಘಾಜಿಪುರ್‌‌ನ ಕುಟುಂಬಕ್ಕೆ ಸೇರಿದ ಹಮೀದ್ ಅನ್ಸಾರಿಯವರು ಹುಟ್ಟಿದ್ದು 1937ರ ಏಪ್ರಿಲ್ 1ರಂದು.

ಶಾಲಾ ಶಿಕ್ಷಣವನ್ನು ಸೇಂಟ್ ಎಡ್ವರ್ಡ್ಸ್ ಪ್ರೌಢಶಾಲೆಯಲ್ಲಿ ಪೂರೈಸಿದ ಹಮೀದ್, ಆನಂತರ ಕೋಲ್ಕತ್ತದ ಸೇಂಟ್ ಕ್ಸೇವಿಯರ್ ಕಾಲೇಜಿಗೆ ಸೇರಿದರು. ಉನ್ನತ ಅಧ್ಯಯನವನ್ನು ಪ್ರತಿಷ್ಟಿತ ಆಲಿಘಡ್ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಪೂರೈಸಿದರು.

1961ರಲ್ಲಿ ಭಾರತೀಯ ವಿದೇಶ ಸೇವೆಗೆ ಆಯ್ಕೆಯಾದ ಅವರು, ಯುನೈಟೆಡ್ ಅರಬ್ ಎಮಿರೇಟ್ಸ್, ಅಫ್ಘಾನಿಸ್ತಾನ, ಇರಾನ್ ಮತ್ತು ಸೌದಿ ಅರೇಬಿಯಕ್ಕೆ ಭಾರತೀಯ ರಾಯಭಾರಿಯಾಗಿ ಕಾರ್ಯನಿರ್ವಹಿಸಿದರು.

ಅಬ್ಸರ್ವರ್ ರಿಸರ್ಚ್ ಫೌಂಡೇಶನ್‌ನ ಗಣ್ಯ ಫೆಲೊ ಆದ ಹಮೀದ್, 'ಇರಾನ್ ಟುಡೇ- ಟ್ವೆಂಟಿ ಇಯರ್ಸ್ ಆಫ್ಟರ್ ದಿ ಇಸ್ಲಾಮಿಕ್ ರೆವಲ್ಯೂಶನ್' ಪುಸ್ತಕವನ್ನು ಸಂಪಾದಿಸಿದ್ದಾರೆ.

ಅನ್ಸಾರಿಯವರು ಆಸ್ಟ್ರೇಲಿಯದ ಭಾರತೀಯ ಹೈ ಕಮಿಷನರ್ ಕೂಡ ಆಗಿದ್ದರು.

ಹಾಗೆಯೇ, ಅವರು ನ್ಯೂಯಾರ್ಕ್‌ನ ವಿಶ್ವಸಂಸ್ಥೆಗೆ ನವದೆಹಲಿಯ ಶಾಶ್ವತ ಪ್ರತಿನಿಧಿಯಾಗಿದ್ದರು.

1984ರಲ್ಲಿ ಪದ್ಮಶ್ರೀ ಗೌರವಕ್ಕೆ ಪಾತ್ರರಾದ ಹಮೀದ್, ಈ ವರ್ಷ ಮಾರ್ಚ್‌ನಲ್ಲಿ ಅಲ್ಪಸಂಖ್ಯಾತರ ರಾಷ್ಟ್ರೀಯ ಆಯೋಗದ ಮುಖ್ಯಸ್ಥರಾಗಿ ನೇಮಕಗೊಳ್ಳುವ ಮುನ್ನ, ಆಲಿಘಡ್ ಮುಸ್ಲಿಂ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಕಾರ್ಯನಿರ್ವಹಿಸಿದ್ದರು.

ಅನ್ಸಾರಿಯವರು 'ಬಾಪು ಸದ್ಭಾವನ' ಹಾಗೂ 'ಶಿಕ್ಷಾ ಟ್ರಸ್ಟ್'ನ ಧರ್ಮದರ್ಶಿಗಳೂ ಕೂಡ ಆಗಿದ್ದಾರೆ.

ಹಮೀದ್ ಅನ್ಸಾರಿಯವರು ಪಶ್ಚಿಮ ಏಷ್ಯಾ ರಾಜಕೀಯದ ಬಗ್ಗೆ ಅಸಂಖ್ಯಾತ ಶೈಕ್ಷಣಿಕ ಬರಹಗಳು ಮತ್ತು ಸುದ್ದಿಪತ್ರಿಕೆ ಲೇಖನಗಳನ್ನು ಬರೆದಿದ್ದಾರೆ.

ಹಾಗೆಯೇ, ಭಾರತ ವಿದೇಶದಲ್ಲಿ ಅನಿಲ ಮತ್ತು ತೈಲ ನಿಕ್ಷೇಪಗಳನ್ನು ಅನ್ವೇಷಿಸುತ್ತ ಇಂಧನ ಭದ್ರತೆಗಾಗಿ ಶೋಧ ಆರಂಭಿಸಿದಾಗ ಅವರು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದಲ್ಲಿ ತೈಲ ರಾಜತಾಂತ್ರಿಕತೆಗೆ ಸಲಹಾ ಸಮಿತಿಯ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಪ್ರಾಚೀನ ವಿಜ್ಞಾನಿಗಳೆಡೆಗೆ ಒಂದು ನೋಟ
ಗಾತಾ ರಹೇ ಕಿಶೋರ್ ದಿಲ್...
'ರಾಜಕುಮಾರ'ನ ಸ್ವರ್ಗಯಾತ್ರೆಗೆ ಒಂದು ವರ್ಷ
ಗುರುಗಳ ಭಕ್ತಿ
ಊಟವೇ ಉಪದೇಶ
ಮಹಾನ್ ಧರ್ಮ
ಸಾಹಿತ್ಯ
ಪ್ರೇಮಗಾಥೆ - ಹುಡುಗಿ ನಾನು ನಿನಗೆ ಏನು ಗಿಪ್ಟ್ ಕೊಡಲಿ? ನಿನಗೆ ಏನು ಕೊಟ್ಟರೂ ಕಡಿಮೆಯೇ. ಹಾಗಂತ ಏನೂ ಕೊಡದೇ ಇರುವುದಕ್ಕೂ ನನ್ನ ಮನಸ್ಸು ಒಪ್ಪುತ್ತಿಲ್ಲ. ಏನು ಕೊಡಲಿ ಎಂದು ನಿನ್ನನ್ನು ಕೇಳಿದರೆ ಅದನ್ನು ನೀನು ಬಾಯಿ ಬಿಟ್ಟು ಏನೂ ಹೇಳುತ್ತಿಲ್ಲ.
ಮುಂದೆ ಓದಿ|ಮತ್ತಷ್ಟು...
ಆರೋಗ್ಯ
AP
 
ಕಡಿಮೆ ತೂಕದಿಂದ ಸುಖ ಪ್ರಸವ!
ಗರ್ಭಧಾರಣೆಯ ಪೂರ್ವದಲ್ಲಿ ಹೆಚ್ಚು ತೂಕ ಹೊಂದಿರುವ ಹಾಗೂ ಸ್ಥೂಲಕಾಯದ ಮಹಿಳೆಯರು ಹೆರಿಗೆ ಸಂದರ್ಭದಲ್ಲಿ...
ಮೂಳೆ ಮುರಿತಕ್ಕೆ ಲಿಥಿಯಂ ಚಿಕಿತ್ಸೆ
ಕ್ಯಾನ್ಸರ್ ಚಿಕಿತ್ಸೆಗೆ ತಂಬಾಕು ಲಸಿಕೆ!
ಸಮಾಚಾರ
ದೇಶ - 1950ರ ಜನವರಿ 26ರಂದು ಭಾರತ ಬ್ರಿಟನ್‌ನೊಂದಿಗಿನ ತನ್ನ ಸಂಬಂಧವನ್ನು ಕಡಿದುಕೊಂಡು ಗಣರಾಜ್ಯವಾಯಿತು. ಡಾ.ರಾಜೇಂದ್ರ ಪ್ರಸಾದ್, ಸ್ವತಂತ್ರ ಭಾರತದ ಮೊತ್ತ ಮೊದಲ ರಾಷ್ಟ್ರಪತಿಯಾದರು.
ಮುಂದೆ ಓದಿ|ಮತ್ತಷ್ಟು...
Marketplace