ಯಾಹೂ! | ನನ್ನ ಯಾಹೂ! | ಮೇಲ್ | ಚಿತ್ರ
ಶೋಧ
 
   ಮುಖ ಪುಟ ಸಾಹಿತ್ಯ ಆತ್ಮಚರಿತ್ರೆ
ಪ್ರಾಚೀನ ವಿಜ್ಞಾನಿಗಳೆಡೆಗೆ ಒಂದು ನೋಟ
- -ಮಲ್ಲಿಕಾರ್ಜುನ ತಿಪ್ಪಾರ
ಸೋಮವಾರ, 6 ಆಗಸ್ಟ್ 2007   ( 18:22 IST )
ಭಾರತ 60ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ ಸಡಗರದಲ್ಲಿದೆ. ಈ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ಹಿನ್ನೆಲೆ ಮತ್ತು ಭಾರತೀಯ ಪ್ರಾಚೀನ ಸಂಸ್ಕೃತಿ, ವಿಜ್ಞಾನ ಮತ್ತು ಕಲೆ ನೋಡಿದಾಗ ನಿಜವಾಗಲೂ ಆಶ್ಚರ್ಯವೆನಿಸುತ್ತದೆ. ಎಲ್ಲ ಕ್ಷೇತ್ರಗಳಲ್ಲೂ ಭಾರತೀಯರು ಪ್ರಾಚೀನ ಕಾಲದಿಂದಲೂ ತಮ್ಮತನವನ್ನು ಪ್ರದರ್ಶಿಸುತ್ತಾ ಬಂದಿದ್ದಾರೆ.

ತಾಯಿ ಭಾರತಿ ಎಂಥ ಮಹಾತ್ಮರಿಗೆ ಜನ್ಮವಿತ್ತಿದ್ದಾಳೆಂದರೆ, ಇಡೀ ಜಗತ್ತೆ ಅವರನ್ನು ಕಂಡು ಬೆರಗಾಗಿದೆ, ಬೆಪ್ಪವಾಗಿದೆ. ವಿಜ್ಞಾನ ಕ್ಷೇತ್ರದಲ್ಲಿ ಭಾರತದ ಕೊಡುಗೆಯೇನು ಕಡಿಮೆ ಇಲ್ಲ. ಯುರೋಪಿಯನ್ ವಿಜ್ಞಾನಿಗಳ ಯಾವ ಸಂಶೋಧನೆಗಳನ್ನು ಮಾಡಿದ್ದಾರೋ.. ಆ ಎಲ್ಲ ಸಂಶೋಧನೆಗಳನ್ನು ಭಾರತೀಯರು ಸುಮಾರು ಸಾವಿರಾರು ವರ್ಷಗಳ ಹಿಂದೆಯೇ ಮಾಡಿದ್ದರು. ಅದು ಸತ್ಯವೂ ಹೌದು ಎಂಬುದನ್ನು ಇಡೀ ಜಗತ್ತೇ ಒಪ್ಪಿಕೊಂಡಿದ್ದಾಗಿದೆ.

ಓವರ್ ಟು... ಪ್ರಾಚೀನ ಭಾರತೀಯ ವಿಜ್ಞಾನಿಗಳತ್ತ:

ಆರ್ಯಭಟ
ಕ್ರಿ ಪೂ 476 ರಲ್ಲಿ ಬಿಹಾರದ ಕುಸುಮಪುರದಲ್ಲಿ ಆರ್ಯಭಟ ಜನಸಿದರು. ತುಂಬಾ ಬುದ್ಧಿವಂತರಾಗಿದ್ದ ಆರ್ಯಭಟ ಅವರು ಗಣಿತ ಶಾಸ್ತ್ರ ಮತ್ತು ಜ್ಯೋತಿಷ್ಯಶಾಸ್ತ್ರದಲ್ಲಿ ಅಪಾರ ಪ್ರಾವೀಣ್ಯ ಗಳಿಸಿದ್ದರು.

ಕ್ರಿ ಪೂ 499 ರಲ್ಲಿ ಸುಮಾರು ತಮ್ಮ 23ನೇ ವಯಸ್ಸಿನಲ್ಲಿ ಆರ್ಯಭಟ ಅವರು ಜ್ಯೋತಿಷ್ಯಶಾಸ್ತ್ರ ಮತ್ತು ಗಣಿತ ಶಾಸ್ತ್ರಕ್ಕೆ ಸಂಬಂಧಿಸಿದ ಒಡಂಬಡಿಕೆಗಳನ್ನು ರಚಿಸಿದರು. ಅದಕ್ಕೆ ಅವರು "ಆರ್ಯಭಟ್ಟಾಯಾನಂ" ಎಂದು ಹೆಸರಿಟ್ಟರು. ಅಲ್ಲದೇ ಗ್ರಹಗಳು ಮತ್ತು ಗ್ರಹಣಗಳ ಚಲನೆಯ ಸಮಯವನ್ನು ಕೂಡಾ ಅವರು ತರ್ಕಿಸಿದ್ದರು. ಭೂಮಿ ಗುಂಡಗಿದೆ ಎಂದು ಪ್ರಥಮ ಬಾರಿಗೆ ಸಾರಿ ಹೇಳಿದ್ದು ಆರ್ಯಭಟರು. ವಿಜ್ಞಾನಿ ಕೋಪರ್‌ನಿಕಸ್ ಸಂಶೋಧಿಸುವ ಮೊದಲು ಅಂದರೆ ಸುಮಾರು 1000 ವರ್ಷಗಳ ಮೊದಲೇ ಭೂಮಿಯ ಅಕ್ಷಾಂಶ ಮತ್ತು ರೇಖಾಂಶಗಳ ಮೂಲಕ ಸುತ್ತುತ್ತದೆ ಎಂಬುದನ್ನು ಆರ್ಯಭಟರು ತೋರಿಸಿಕೊಟ್ಟಿದ್ದರು.

ಎರಡನೆಯ ಭಾಸ್ಕಾರಾಚಾರ್ಯ

ಮಹಾರಾಷ್ಟ್ರದ ಜಲಗಾಂವದಲ್ಲಿ ಹುಟ್ಟಿದ ಭಾಸ್ಕರಾಚಾರ್ಯ ಅವರು ಬೀಜಗಣಿತ, ಅಂಕಗಣಿತ ಮತ್ತು ರೇಖಾಗಣಿತ ಶಾಸ್ತ್ರದಲ್ಲಿ ಅಪಾರ ಪಾಂಡಿತ್ಯಗಳಿಸಿದ್ದರು. ಇವರು ಬೀಜಗಣಿತ ಮತ್ತು ಲೀಲಾವತಿ ಅಧ್ಯಯನಕ್ಕೆ ತುಂಬಾ ಪ್ರಸಿದ್ಧಿಯಾಗಿದ್ದರು. ಬೀಜಗಣಿತ ಮತ್ತು ಲೀಲಾವತಿ ಸಿದ್ಧಾಂತವನ್ನು ಭಾರೀ ಬುದ್ಧಿಮತ್ತೆಯ ಸಂಕೇತಗಳೆಂದು ಪರಿಗಣಿಸಲಾಗುತ್ತದೆ. ಈ ಎರಡು ಸಿದ್ಧಾಂತಗಳ ಜಗತ್ತಿನ ಅನೇಕ ಭಾಷೆಗಳಿಗೆ ಭಾಷಾಂತರಗೊಂಡಿದೆ.

"ಸಿದ್ದಾಂತ ಶಿರೋಮಣಿ" ಒಡಂಬಡಿಕೆಯ್ಲಲಿ ಗೃಹಗಳ ಉಪಸ್ಥಿತಿ, ಗ್ರಹಗತಿ, ಕಾಸ್ಮೊಗ್ರಾಫಿ, ಗಣಿತಶಾಸ್ತ್ರದ ತಂತ್ರಗಳು ಮತ್ತು ಜ್ಯೋತಿಷ್ಯಶಾಸ್ತ್ರದ ಉಪಕರಣಗಳು ಕುರಿತು ಸವಿಸ್ತಾರವಾಗಿ ತಿಳಿಸಿದ್ದಾರೆ. ಸೂರ್ಯ ಸಿದ್ದಾಂತದಲ್ಲಿ ಅವರು ಗುರುತ್ವಾರ್ಕಷಣೆಯ ನಿಯಮ ಕುರಿತು ಸುಳಿವು ನೀಡಿದ್ದಾರೆ. ಭೂಮಿಯ ಒತ್ತಡ ಮತ್ತು ಆಕರ್ಷತ್ವದ ಗುಣದಿಂದಾಗಿ ವಸ್ತುಗಳು ಕೆಳೆಗ ಬೀಳುತ್ತವೆ ಎಂಬುದನ್ನು ಅವರು ಸೂಚ್ಯವಾಗಿ ಈ ಸಿದ್ಧಾಂತದಲ್ಲಿ ತಿಳಿಸಿದ್ದಾರೆ. ಆದ್ದರಿಂದಲೆ, ಭೂಮಿ, ಗ್ರಹಗಳು, ಚಂದ್ರ, ಸೂರ್ಯ ಎಲ್ಲ ಕಾಯಗಳು ಒಂದು ನಿರ್ದಿಷ್ಟ ಕಕ್ಷೆಯಲ್ಲಿ ಬಂಧಿಸಲ್ಪಟ್ಟಿವೆ ಎಂದು ಸ್ಪಷ್ಟವಾಗಿಸಿದ್ದಾರೆ.

ಸರ್ ಐಸಾಕ್ ನ್ಯೂಟನ್‌ಗಿಂತ ಭೂ ಗುರುತ್ಪಾವಕರ್ಷಣೆಯನ್ನು ಪ್ರಥಮ ಬಾರಿಗೆ ಪತ್ತೆ ಹಚ್ಚಿದ್ದು ಭಾಸ್ಕರಾಚಾರ್ಯ. ಪ್ರಾಚೀನ ಮತ್ತು ಮಧ್ಯ ಕಾಲಿನ ಭಾರತ ಗಣಿತ ಶಾಸ್ತ್ರಜ್ಞರಲ್ಲಿ ಭಾಸ್ಕರಾಚಾರ್ಯ ತುಂಬಾ ಅಗ್ರಗಣ್ಯನಾಗಿದ್ದನು ಎಂದು ಇತಿಹಾಸ ಹೇಳುತ್ತದೆ.

ಆಚಾರ್ಯ ಕನದ

ಭಾರತದ ತತ್ವಶಾಸ್ತ್ರದಲ್ಲಿ ಅಗ್ರಗಣ್ಯ ಈ ಆಚಾರ್ಯ ಕನದ. ಇವರು "ವೈಶೇಷಿಕ ದರ್ಶನ"ದ ಪಿತಾಮಹರು. ಇದು ಭಾರತದ ಆರು ತತ್ವಶಾಸ್ತ್ರಗಳಲ್ಲಿ ಒಂದು ಎಂದು ಪರಿಗಣಿಸಲ್ಪಟ್ಟಿದೆ.

ಇವರು ಗುಜರಾತದ ದ್ವಾರಿಕಾ ಸಮೀಪದ ಪ್ರಭಾಸ ಕ್ಷೇತ್ರದಲ್ಲಿ ಜನಸಿರಬಹುದೆಂದು ನಂಬಲಾಗಿದೆ. ವಾಸ್ತವಾದದ ಪರಿಕಲ್ಪನೆಯನ್ನು ಮಂಡಿಸಿದವರಲ್ಲಿ ಇವರು ಮೊದಲಿಗರಾಗಿದ್ದಾರೆ. ಅಲ್ಲದೇ ಅಣು ಸಿದ್ದಾಂತ ಕುರಿತು ಆಗಲೆ ತಮ್ಮ ವಿಚಾರವನ್ನು ಮಂಡಿಸಿದ್ದರು. ಎಲ್ಲ ವಸ್ತುಗಳನ್ನು ಮೂಲಧಾರದ ಮೇಲೆ ಒಂಬತ್ತು ವಿಭಾಗಗಳಾಗಿ ಅವರು ವರ್ಗಿಕರಿಸಿದ್ದರು. ಭೂಮಿ, ನೀರು, ಬೆಳಕು, ಗಾಳಿ, ಸಮಯ, ಸೌರಮಂಡಲ, ಮನಸ್ಸು ಮತ್ತು ಆತ್ಮಗಳನ್ನಾಗಿ ಅವರು ವಿಂಗಡಿಸಿದ್ದರು.

ಜಾನ್ ಡಾಲ್ಟನ್ ಅವರಿಗಂತ ಮುಂಚೆಯೇ ಅಂದರೆ ಸುಮಾರು 2500 ವರ್ಷಗಳ ಹಿಂದೆಯೇ ಆಚಾರ ಕನದ ಅವರು ಅಣುವಿನ ಕುರಿತು ಎಲ್ಲವನ್ನು ತಿಳಿಸಿದ್ದರು. ಇತಿಹಾಸಕಾರ ಟಿ ಎನ್ ಕೊಲೆಬ್ರೊಕ್ ಅವರು ಹೇಳುವಂತೆ, ಯೂರೋಪಿಯನ್ ವಿಜ್ಞಾನಿಗಳಿಗೆ ಹೋಲಿಸದರೆ ಭಾರತೀಯ ವಿಜ್ಞಾನಿಗಳು ಈ ಕ್ಷೇತ್ರದಲ್ಲಿ ಜಾಗತಿಕ ಪ್ರಾವೀಣ್ಯತೆಯನ್ನು ಸಾಧಿಸಿದ್ದಾರೆ. ಈ ಮಾತು ಎಷ್ಟು ಸೂಕ್ತ ಅಲ್ಲ.


(ಮೂಲ - ವೆಬ್‌ದುನಿಯಾ)
1| 2
 
ಮತ್ತಷ್ಟು...
ಗಾತಾ ರಹೇ ಕಿಶೋರ್ ದಿಲ್...
'ರಾಜಕುಮಾರ'ನ ಸ್ವರ್ಗಯಾತ್ರೆಗೆ ಒಂದು ವರ್ಷ
ಗುರುಗಳ ಭಕ್ತಿ
ಊಟವೇ ಉಪದೇಶ
ಮಹಾನ್ ಧರ್ಮ
ದುಡಿದರೆ ಮಾತ್ರ ಊಟ
ಸಾಹಿತ್ಯ
ಪ್ರೇಮಗಾಥೆ - ಹುಡುಗಿ ನಾನು ನಿನಗೆ ಏನು ಗಿಪ್ಟ್ ಕೊಡಲಿ? ನಿನಗೆ ಏನು ಕೊಟ್ಟರೂ ಕಡಿಮೆಯೇ. ಹಾಗಂತ ಏನೂ ಕೊಡದೇ ಇರುವುದಕ್ಕೂ ನನ್ನ ಮನಸ್ಸು ಒಪ್ಪುತ್ತಿಲ್ಲ. ಏನು ಕೊಡಲಿ ಎಂದು ನಿನ್ನನ್ನು ಕೇಳಿದರೆ ಅದನ್ನು ನೀನು ಬಾಯಿ ಬಿಟ್ಟು ಏನೂ ಹೇಳುತ್ತಿಲ್ಲ.
ಮುಂದೆ ಓದಿ|ಮತ್ತಷ್ಟು...
ಆರೋಗ್ಯ
AP
 
ಕಡಿಮೆ ತೂಕದಿಂದ ಸುಖ ಪ್ರಸವ!
ಗರ್ಭಧಾರಣೆಯ ಪೂರ್ವದಲ್ಲಿ ಹೆಚ್ಚು ತೂಕ ಹೊಂದಿರುವ ಹಾಗೂ ಸ್ಥೂಲಕಾಯದ ಮಹಿಳೆಯರು ಹೆರಿಗೆ ಸಂದರ್ಭದಲ್ಲಿ...
ಮೂಳೆ ಮುರಿತಕ್ಕೆ ಲಿಥಿಯಂ ಚಿಕಿತ್ಸೆ
ಕ್ಯಾನ್ಸರ್ ಚಿಕಿತ್ಸೆಗೆ ತಂಬಾಕು ಲಸಿಕೆ!
ಸಮಾಚಾರ
ದೇಶ - 1950ರ ಜನವರಿ 26ರಂದು ಭಾರತ ಬ್ರಿಟನ್‌ನೊಂದಿಗಿನ ತನ್ನ ಸಂಬಂಧವನ್ನು ಕಡಿದುಕೊಂಡು ಗಣರಾಜ್ಯವಾಯಿತು. ಡಾ.ರಾಜೇಂದ್ರ ಪ್ರಸಾದ್, ಸ್ವತಂತ್ರ ಭಾರತದ ಮೊತ್ತ ಮೊದಲ ರಾಷ್ಟ್ರಪತಿಯಾದರು.
ಮುಂದೆ ಓದಿ|ಮತ್ತಷ್ಟು...
Marketplace