|
| ಗಾತಾ ರಹೇ ಕಿಶೋರ್ ದಿಲ್... |
| ಮುಂಬಯಿ (ಏಜೆನ್ಸಿ), ಶನಿವಾರ, 4 ಆಗಸ್ಟ್ 2007 ( 19:45 IST ) | |
ಹಿಂದಿ ಚಿತ್ರರಂಗದ ಗಾನ ಕೋಗಿಲೆ ಹಾಗೂ ನಟ ಕಿಶೋರ್ ಕುಮಾರ್‌ರ 78ನೇ ಜನ್ಮದಿನವನ್ನು ಇಂದು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಕಿಶೋರ್ ಕುಮಾರ್‌ರ ವಿಶಾಲ ತುಂಬು ಜೀವನದ ಸಂಕ್ಷಿಪ್ತ ಯಾತ್ರೆಯನ್ನು ಮಾಡಿಬರೋಣ!
ಮಧ್ಯ ಪ್ರದೇಶದ ಖಾಂಡ್ವದಲ್ಲಿ 1929ರ ಆಗಸ್ಟ್ 4ರಂದು ಜನಿಸಿದ ಬಂಗಾಳಿ ಕುಟುಂಬದಲ್ಲಿ ಜನಿಸಿದ ಕಿಶೋರ್ ಕುಮಾರ್, ಪ್ರತಿಭಾನ್ವಿತ ಗಾಯಕ, ಅದ್ಭುತ ಸಂಗೀತ ಸಂಯೋಜಕ ಹಾಗೂ ಅನನುಕರಣೀಯ ನಟನಾಗಿ ಹಿಂದಿ ಚಿತ್ರರಂಗದಲ್ಲಿ ಬೆಳೆದರು.
ಅಭಸ್ ಕುಮಾರ್ ಗಂಗೂಲಿ ಅಥವಾ ನಾವೆಲ್ಲರೂ ಪ್ರೀತಿಯಿಂದ ಕಿಶೋರ್ ದಾ ಎಂದು ಕರೆಯುವ ಕಿಶೋರ್ ಕುಮಾರ್, ತಮ್ಮ 18ನೇ ವಯಸ್ಸಿನಲ್ಲಿ ಬಾಂಬೆ ಟಾಕೀಸ್‌ನಲ್ಲಿ ಕೋರಸ್ ಗಾಯಕನಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು.
ಹಿಂದಿ ಚಿತ್ರರಂಗದ ದಂತಕತೆಯಾಗಿರುವ ಅಶೋಕ್ ಕುಮಾರ್‌ರ ಕಿರಿಯ ತಮ್ಮನಾಗಿರುವ ಕಿಶೋರ್, ಮೊತ್ತ ಮೊದಲ ಬಾರಿಗೆ 1948ರಲ್ಲಿ ಜಿದ್ದಿ ಚಿತ್ರಕ್ಕಾಗಿ ತಮ್ಮ ಧ್ವನಿ ನೀಡಿ ಬಾಂಬೆ ಟಾಕೀಸ್‌ನಲ್ಲಿ ದೇವ್ ಆನಂದ್‌ಗಾಗಿ 'ಮರ್ನೆ ಕಿ ದುವಾಯೇಂ ಕ್ಯೂಂ ಮಾಂಗೂ' ಹಾಡಿದರು.
ಅಂದಿನ ಕಾಲದ ಬಹುಪಾಲು ಗಾಯಕರಂತೆ ಶಾಸ್ತ್ರೀಯ ಸಂಗೀತ ಅಭ್ಯಾಸವನ್ನು ಪಡೆಯದ ಕಿಶೋರ್‌ಗೆ ಅದು ವರವಾಗಿ ಪರಿಣಮಿಸಿತು. ಅವರು ಯಾವುದೇ ಶಾಸ್ತ್ರಗಳಲ್ಲಿದ ತಮ್ಮದೇ ಆದ ಹೊಸ ಶೈಲಿಯನ್ನು ಕಂಡುಕೊಂಡು, ಅನನುಕರಣೀಯ ಗಾಯಕರಾಗಿ ಹೊರಹೊಮ್ಮಿದ್ದಕ್ಕೆ 'ಈನಾ ಮೀನಾ ಡೀಕಾ' ಹಾಗೂ 'ಹಾಲ್ ಕೈಸಾ ಹೈ ಜನಾಬ್ ಕಾ' ಅವಿಸ್ಮರಣೀಯ ಸಾಕ್ಷಿಯಾಗಿವೆ.
1951ರಲ್ಲಿ ಆಂದೋಲನ್ ಚಿತ್ರದ ಮೂಲಕ ಮೊತ್ತ ಮೊದಲ ಬಾರಿಗೆ ನಟನಾಗಿ ಚಿತ್ರರಂಗ ಪ್ರವೇಶಿಸಿದರು. ಚಿತ್ರ ಗೆಲ್ಲುವಲ್ಲಿ ವಿಫಲವಾದರೂ, ಕಿಶೋರ್ ನಟನಾಗಿ ಯಶಸ್ವಿಯಾದರು.
ನವದೆಹಲಿ (1956), ಚಲ್ತೀ ಕಾ ನಾಮ್ ಗಾಡಿ(1958), ಜುಮ್ರು(1961), ಹಾಫ್ ಟಿಕೆಟ್(1962), ದೂರ್ ಗಗನ್ ಕಿ ಚಾವೊನ್ ಮೆ(1964), ಮಿ.ಎಕ್ಸ್ ಇನ್ ಬಾಂಬೆ(1964) ಹಾಗೂ ಪಡೋಸನ್(1968) ಇತ್ಯಾದಿ. ಕಿಶೋರ್‌ರ ಇತರ ಪ್ರಮುಖ ಚಿತ್ರಗಳು. ಅದ್ಭುತವಾದ ಹಾಸ್ಯ ಪ್ರಜ್ಞೆಯನ್ನು ಹೊಂದಿದ್ದ ಕಿಶೋರ್, ಚಲ್ತೀ ಕಾ ನಾಮ್ ಗಾಡಿ ಹಾಗೂ ಪಡೋಸನ್ ಮೂಲಕ ಜನರ ಮನರಂಜಿಸಿದರು.
ಯಶಸ್ವಿ ಪ್ರೇಮಚಿತ್ರಗಳ ನಾಯಕನಾಗಿ ಅಂದಿನ ಚಿತ್ರ ರಸಿಕರ ಆರಾಧ್ಯ ದೈವವಾಗಿದ್ದ, ಹಿಂದಿ ಚಿತ್ರರಂಗದ ಮೊತ್ತ ಮೊದಲ ಸೂಪರ್ ಸ್ಟಾರ್ ರಾಜೇಶ್ ಖನ್ನಾರ 'ಆರಾಧನಾ' ಪೂರ್ವದಲ್ಲಿ, ರಾಜೇಶ್ ಖನ್ನಾ ಶರೀರ ಕಿಶೋರ್ ಶಾರೀರ ಎನ್ನುವಂತಾಯಿತು.
| | (ಮೂಲ - ವೆಬ್‌ದುನಿಯಾ) |
|
| |
| | | |
|
|
|
|
|
| ಪ್ರೇಮಗಾಥೆ - ಹುಡುಗಿ ನಾನು ನಿನಗೆ ಏನು ಗಿಪ್ಟ್ ಕೊಡಲಿ? ನಿನಗೆ ಏನು ಕೊಟ್ಟರೂ ಕಡಿಮೆಯೇ. ಹಾಗಂತ ಏನೂ ಕೊಡದೇ ಇರುವುದಕ್ಕೂ ನನ್ನ ಮನಸ್ಸು ಒಪ್ಪುತ್ತಿಲ್ಲ. ಏನು ಕೊಡಲಿ ಎಂದು ನಿನ್ನನ್ನು ಕೇಳಿದರೆ ಅದನ್ನು ನೀನು ಬಾಯಿ ಬಿಟ್ಟು ಏನೂ ಹೇಳುತ್ತಿಲ್ಲ. |
| |
|
|
|
|
 | | AP |
| | |
| |
|
|
|
|
|
| ದೇಶ - 1950ರ ಜನವರಿ 26ರಂದು ಭಾರತ ಬ್ರಿಟನ್‌ನೊಂದಿಗಿನ ತನ್ನ ಸಂಬಂಧವನ್ನು ಕಡಿದುಕೊಂಡು ಗಣರಾಜ್ಯವಾಯಿತು. ಡಾ.ರಾಜೇಂದ್ರ ಪ್ರಸಾದ್, ಸ್ವತಂತ್ರ ಭಾರತದ ಮೊತ್ತ ಮೊದಲ ರಾಷ್ಟ್ರಪತಿಯಾದರು. |
| |
|
|
|
|
|
|
|