ಯಾಹೂ! | ನನ್ನ ಯಾಹೂ! | ಮೇಲ್ | ಚಿತ್ರ
ಶೋಧ
 
   ಮುಖ ಪುಟ ಸಾಹಿತ್ಯ ಆತ್ಮಚರಿತ್ರೆ
'ರಾಜಕುಮಾರ'ನ ಸ್ವರ್ಗಯಾತ್ರೆಗೆ ಒಂದು ವರ್ಷ
- ರಾಧೇಯ
Rajkumar
AP
ಕನ್ನಡದ ಮುತ್ತುರಾಜ, ರಾಜಕುಮಾರ, ರಸಿಕರ ರಾಜ, ಬಂಗಾರದ ಮನುಷ್ಯ ಹೀಗೆ ಎಲ್ಲವೂ ಆಗಿದ್ದ, ಅಭಿಮಾನಿಗಳಿಂದ ಪ್ರೀತಿಯಿಂದ 'ಅಣ್ಣಾವ್ರು' ಎಂದೇ ಕರೆಸಿಕೊಳ್ಳುತ್ತಿದ್ದ, ಕನ್ನಡ ಮಾತ್ರವಲ್ಲ, ಭಾರತೀಯ ಚಿತ್ರರಂಗದ ಆಗಸದಲ್ಲಿ ಸದಾ ಧ್ರುವತಾರೆಯಾಗಿಯೇ ಕಂಗೊಳಿಸುವ ಪದ್ಮಭೂಷ‌ಣ ಡಾ.ರಾಜಕುಮಾರ್, ತನ್ನ ಅಭಿಮಾನಿ ಕೋಟಿಯನ್ನು ಬಿಟ್ಟು ದೇವರ ಭೇಟಿಗೆಂದು ಹೋಗಿ ಏಪ್ರಿಲ್ 12ಕ್ಕೆ ಒಂದು ವರ್ಷ. ಇಂದಿಗೆ, ಮತ್ತೆ ಕೇವಲ ಹನ್ನೆರಡು ದಿನ ಕಳೆದರೆ ಅವರ ಹುಟ್ಟುಹಬ್ಬ. ಒಂದೇ ತಿಂಗಳಲ್ಲಿ ಬದುಕಿನ ಆದಿ-ಅಂತ್ಯದ ದಿನಗಳು.

ದೇವಲೋಕದ ತ್ರಿಮೂರ್ತಿಗಳು ತಾವೇ ಸೃಷ್ಟಿಸಿದ ನರಮಾನವ ತಮ್ಮ ವೇಷಭೂಷಣ ಧರಿಸಿ, ಪರಕಾಯ ಪ್ರವೇಶ ಮಾಡಿ ದೈವವೇ ತಾನಾಗುವ ವಿಸ್ಮಯವನ್ನು ಕಣ್ಣಾರೆ ಕಂಡು ಆನಂದಿಸಲೆಂದೊ ಏನೊ ಅವರನ್ನು ತಮ್ಮಲ್ಲಿಗೆ ಕರೆಸಿಕೊಂಡಿರಬಹುದೆನಿಸುತ್ತದೆ. ಮನುಷ್ಯರು ಹುಟ್ಟು ಸ್ವಾರ್ಥಿಗಳಾದರೂ, ತಾವು ಕಂಡು, ಅನುಭವಿಸಿದ ಸೌಂದರ್ಯವನ್ನು, ಧನ್ಯತೆಯ ಭಾಗ್ಯವನ್ನು ತಾವು ಪೂಜಿಸುವ ದೈವವೂ ಕೂಡ ಅನುಭವಿಸಲೆಂದು ಯಾಕೆ ಬಿಡಬಾರದು? ಹಾಗೆ ಮಾಡಿದಲ್ಲಿ, ಅದು ರಾಜ್‌ರಂತಹ ಸೃಷ್ಟಿಯ ವಿಸ್ಮಯ ಕಲಾಕೃತಿಯ ಕರ್ತೃವಿಗೆ ನಮ್ಮಿಂದಾಗಬೇಕಾದ ಋಣಸಂದಾಯ ಎಂದರೆ ತಪ್ಪಾಗಲಾರದೇನೊ!

ಇಪ್ಪತ್ತನೇ ಶತಮಾನದ ಜಗತ್ತಿನ ಭಾಷೆಯೆಂದೇ ಪರಿಗಣಿಸಲಾಗುವ 'ಸಿನಿಮಾ ಭಾಷೆ'ಯನ್ನು ಸಾಕ್ಷಾತ್ಕರಿಸಿಕೊಂಡ ಜಗತ್ತಿನ ಅಭಿಜಾತ ಕಲಾವಿದ ಭಕ್ತರಲ್ಲಿ ರಾಜ್ ಮೊದಲನೆ ಸಾಲಿನಲ್ಲಿ ನಿಲ್ಲುತ್ತಾರೆ. ಬೇಡರ ಕಣ್ಣಪ್ಪದ ಮುಗ್ಧ ಭಕ್ತನಾಗಿ, ಭಕ್ತ ಕುಂಬಾರ, ಭಕ್ತ ಕನಕದಾಸ, ಸಂತ ತುಕಾರಾಂ, ಭಕ್ತ ಕಬೀರ್ ಮುಂತಾದ ಭಕ್ತಿ ಚಿತ್ರಗಳ ಭಕ್ತಿಯ ಪರಾಕಾಷ್ಠೆಯನ್ನು ಮುಟ್ಟಿದ ಭಕ್ತನಾಗಿ, ಮಹಿಷಾಸುರ ಮರ್ಧಿನಿ, ಭಕ್ತ ಪ್ರಹ್ಲಾದದ ರಾಕ್ಷಸ ಸ್ವರೂಪಿಯಾಗಿ, ಕೃಷ್ಣ ರಾಮ ಶ್ರೀನಿವಾಸ ಅರ್ಜುನ ಬಬ್ರುವಾಹನ ಸತ್ಯ ಹರಿಶ್ಚಂದ್ರನಾಗಿ, ಶ್ರೀಕೃಷ್ಣದೇವರಾಯ ಇಮ್ಮಡಿ ಪುಲಿಕೇಶಿ ಮಯೂರನಾಗಿ, ಬಂಗಾರದ ಮನುಷ್ಯ, ಸಾಮಾಜಿಕ ಚಿತ್ರಗಳ ಮಹಾಕಾವ್ಯ ಎನಿಸಿಕೊಂಡಿರುವ ಕಸ್ತೂರಿ ನಿವಾಸ, ಚಿರನೂತನವಾಗಿರುವ 70ರ ದಶಕದ ಪ್ರೇಮ ಕಾವ್ಯ ನಾ ನಿನ್ನ ಮರೆಯಲಾರೆ, ಭಾರತದ ಪ್ರಾತಿನಿಧಿಕ ಬಾಂಡ್ ಪಾತ್ರಧಾರಿಯಾಗಿ ಹೀಗೆ ಅಗಣಿತ ತಾರಾಗಣದಂತೆ, ರಾಜ್ ಚಿತ್ರ ಜೀವನದ ವ್ಯಾಪ್ತಿಯನ್ನು ಅಳೆಯಲುಬಾರದು. ಬಹುಶಃ ಜಗತ್ತಿನ ಯಾವ ಕಲಾವಿದನೂ ಇಷ್ಟು ವೈವಿಧ್ಯಮಯ ಪಾತ್ರಗಳನ್ನು ಇಷ್ಟು ಯಶಸ್ವಿಯಾಗಿ ನಿರ್ವಹಿಸಿಲ್ಲವೆಂದೇ ಕಾಣುತ್ತದೆ.
(ಮೂಲ - ವೆಬ್‌ದುನಿಯಾ)
1| 2
 
ಮತ್ತಷ್ಟು...
ತ್ಯಾಗಜ್ಯೋತಿ
ಮನರಂಜನೆ
ಚಿತ್ರ ಸುದ್ದಿ - ಯೋಗರಾಜ ಭಟ್ಟರು ಸುರಿಸಿರುವ ಮುಂಗಾರು ಮಳೆ ಜಯಭೇರಿ ಭಾರಿಸಿದೆ. ಈ ಚಿತ್ರ ನಿರ್ಮಾಪಕ ಕೃಷ್ಣಪ್ಪ ಅವರಿಗೆ ಕಾಂಚಾಣದ ಮಳೆಯನ್ನು ತಂದುಕೊಟ್ಟಿದೆ. ಕಾಮಿಡಿ ಟೈಂ ಗಣೇಶ್ ಅದೃಷ್ಟ ಖುಲಾಯಿಸಿದೆ. ಒಟ್ಟಾರೆ ರಾಜ್ಯದೆಲ್ಲೆಡೆ ಈಗ ಮಳೆಗೆ ಸೆಂಚುರಿ ರಂಗು. ಚಿತ್ರಪ್ರೇಮಿಗಳಿಗೆ ಮುಂಗಾರು ಮಳೆಯ ಹಾಡಿನದೇ ಗುಂಗು!
ಮುಂದೆ ಓದಿ|ಮತ್ತಷ್ಟು...
ಆರೋಗ್ಯ
AP
 
ಲಿವರ್ ಕ್ಯಾನ್ಸರ್‌ ತಗ್ಗಿಸುವ ಕಾಫಿ
ಹೆಚ್ಚು ಕಾಫಿ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಮಾತನ್ನು ನಾವು ಕೇಳುತ್ತಲೇ ಬಂದಿದ್ದೇವೆ. ಆದರೆ ಕಾಫಿ...
ಗರ್ಭಧಾರಣಾ ತೂಕ ಕಳೆಯಲು ವಾಕಿಂಗ್ ಸಹಕಾರಿ
ವಯಸ್ಸು, ಒತ್ತಡ ಗರ್ಭಪಾತಕ್ಕೆ ಕಾರಣ
ಧರ್ಮ
ಧಾರ್ಮಿಕ ಲೇಖನ - ಒಮ್ಮೆ ದಶರಥನು ಬೆಳದಿಂಗಳಿನಲ್ಲಿ ತನ್ನ ಬೇಟೆಯೂಡುವ ತುಡಿತವನ್ನು ತಣಿಸುವ ಸಲುವಾಗಿ ಕಾಡಿಗೆ...
ಮುಂದೆ ಓದಿ|ಮತ್ತಷ್ಟು...
Marketplace